ಸಾವಿರ ರೂಪಾಯಿಗೆ ಟಾಪ್‌ 20 ಬೆಸ್ಟ್‌ ಹೆಡ್‌ಫೋನ್ಸ್‌..!

By GizBot Bureau
|

ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೆಡ್ ಫೋನ್ ಗಳು ಒಂದು ಪ್ರಮುಖ ವಸ್ತುಗಳಾಗಿ ಪರಿಣಮಿಸಿ ಬಿಟ್ಟಿದೆ. ಕೆಲವು ಆಡಿಯೋ ಫೈಲ್ ಗಳು ಅತ್ಯದ್ಭುತ ಅನ್ನಿಸುವುದು ದುಬಾರಿ ಹೆಡ್ ಫೋನ್ ಗಳಲ್ಲಿ ಕೇಳಿಸಿಕೊಂಡಾಗಲೇ.ಮಾಮೂಲಿ ಕೇಳುಗರು ಕಡಿಮೆ ಬಜೆಟ್ಟಿನ ಹೆಡ್ ಫೋನ್ ಗಳಲ್ಲಿ ಉತ್ತಮ ಗುಣಮಟ್ಟ ಹೊಂದಿರುವುದು ಯಾವುದು ಎಂಬುದನ್ನು ಪರೀಕ್ಷಿಸುತ್ತಾರೆ.

ಸಾವಿರ ರೂಪಾಯಿಗೆ ಟಾಪ್‌ 20 ಬೆಸ್ಟ್‌ ಹೆಡ್‌ಫೋನ್ಸ್‌..!

ಇದುದ್ದರಲ್ಲೇ ಉತ್ತಮ ಕ್ವಾಲಿಟಿಯಲ್ಲಿ ಧ್ವನಿಯನ್ನು ಕೇಳಿಸುವಂತೆ ಮಾಡುವ ಹೆಡ್ ಫೋನ್ ಗಳ ಮೊರೆ ಹೋಗುತ್ತಾರೆ. ಹಾಗಾಗಿ ಅಂತಹ ಸಾಮಾನ್ಯ ಕೇಳುಗರಿಗಾಗಿ ನಾವು ಇಲ್ಲಿ 1000 ರುಪಾಯಿಗೆ ಇದನ್ನು ಖರೀದಿಸಿದರೆ ಲಾಭವೇ ಆಗುತ್ತದೆ ಎಂದು ಅನ್ನಿಸುವಂತಹ ಕೆಲವು ಹೆಡ್ ಫೋನ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಗಮನಿಸಿ.

1. ಮೈಕ್ ಜೊತೆ ಐಬಾಲ್ ರಾಕಿ ಓವರ್-ಕಿವಿ ಹೆಡ್ ಫೋನ್ ಗಳು

1. ಮೈಕ್ ಜೊತೆ ಐಬಾಲ್ ರಾಕಿ ಓವರ್-ಕಿವಿ ಹೆಡ್ ಫೋನ್ ಗಳು

ಐಬಾಲ್ ರಾಕಿ ಡ್ರೈವರ್ ಯುನಿಟ್ 40mm ಮತ್ತು ಮೈಕ್ರೋಫೋನ್ ಡ್ರೈವರ್ ಯುನಿಟ್ 9.0 x 7.0mm ಇದೆ. ಇದರ ಆವರ್ತನ ಪ್ರತಿಕ್ರಿಯೆ 20Hz - 20kHz ಮತ್ತು 110db ಸೂಕ್ಷ್ಮತೆಯ ಮಟ್ಟವನ್ನು ಹೊಂದಿದೆ.. ಈ ವಯರ್ಡ್ ಹೆಡ್ ಫೋನ್ Mic ಅನ್ನು ಹೊಂದಿದೆ .

2. ಫಿಲಿಪ್ಸ್ SHL5000/00

2. ಫಿಲಿಪ್ಸ್ SHL5000/00

ಫಿಲಿಪ್ಸ್ SHL5000/00 32mm ಸ್ಪೀಕರ್ ಡ್ರೈವರ್ ಗಳು ಮತ್ತು ಧ್ವನಿ ಪ್ರತ್ಯೇಕತೆಯನ್ನು ಹೊಂದಿದೆ. ಇದರಲ್ಲಿ 1.2m ಉದ್ದನೆಯ ಕೇಬಲ್ ಮತ್ತು ಮಡಚಲು ಸಾಧ್ಯವಿರುವಂತಹ ಇಯರ್ ಕಪ್ಸ್ ಇದೆ. ಅಗಲವಾದ ಆವರ್ತನ ಪ್ರತಿಕ್ರಿಯೆಯನ್ನು ಅಂದರೆ 9Hz-22Khz ನ್ನು ಹೊಂದಿದೆ., ಇದರ ಔಟ್ ಫುಟ್ ನ ಗರಿಷ್ಟ ಮಟ್ಟ 40mW.

3. ಕಾಸ್ಮಿಕ್ ಬೈಟ್ - G4000 ಎಡಿಷನ್

3. ಕಾಸ್ಮಿಕ್ ಬೈಟ್ - G4000 ಎಡಿಷನ್

ಕಾಸ್ಮಿಕ್ ಬೈಟ್ ಹೆಡ್ ಫೋನ್ ಗಳ ಲೋಕದಲ್ಲಿ ಇದು ಗೇಮ್ ಗಳಿಗೆ ಹೆಸರು ವಾಸಿಯಾಗಿರು ಮೈಕ್ರೋಫೋನ್ ಆಗಿದೆ. ಇದರಲ್ಲಿ ಇನ್ ಬಿಲ್ಟ್ LED ಲೈಟ್ಸ್ ಇದೆ ಮತ್ತು ತುಂಬಾ ಫ್ಲೆಕ್ಸಿಬಲ್ ಆಗಿದೆ. ಈ ಹೆಡ್ ಫೋನ್ PS4, PS3 ಮತ್ತು Xbox 360 ಗಳ ಜೊತೆ ಕಂಪಾಟೆಬಲ್ ಆಗಿದೆ.

4. ಝೀಬ್ರಾನಿಕ್ಸ್ ZEB-11HMV/15HMV

4. ಝೀಬ್ರಾನಿಕ್ಸ್ ZEB-11HMV/15HMV

ಝೀಬ್ರಾನಿಕ್ಸ್ ZEB-11HMV/15HMV ಸುಮಾರು 200 ಗ್ರಾಂನಷ್ಟು ತೂಕವಿದೆ ಮತ್ತು ಮಡಚಲು ಸಾಧ್ಯವಾಗುವ ಮೈಕ್ರೋಫೋನ್ ಆಗಿದೆ.ಇದು ಕೂಡ ಫ್ಲೆಕ್ಸಿಬಲ್ ಆಗಿರುವ, ಮತ್ತು ಬಳಕೆದಾರರಿಗೆ ಬಹಳ ಸಹಕಾರಿಯಾಗಿರುವ ಹೆಡ್ ಫೋನ್ ಆಗಿದೆ.

5. ಝಿಬ್ರಾನಿಕ್ಸ್ ZEB-2100HMV

5. ಝಿಬ್ರಾನಿಕ್ಸ್ ZEB-2100HMV

ಝಿಬ್ರಾನಿಕ್ಸ್ ZEB-2100HMV ನಲ್ಲಿ 40mm ಡ್ರೈವರ್ ಯುನಿಟ್ ಇದೆ ಮತ್ತು ಪ್ರೀಕ್ವೆನ್ಸಿ ಪ್ರತಿಕ್ರಿಯೆಯ ರೇಂಜ್ 20Hz ನಿಂದ 20Khz ಆಗಿದೆ. ಇದರ ಸೆನ್ಸಿಟಿವಿಟಿ ಮಟ್ಟವು 105db ಮತ್ತು ಡಿಪೆಂಡೆಂನ್ಸ್ 32Ohms. ವಯರ್ ಇರುವ ಈ ಕಿವಿಯನ್ನು ಮುಚ್ಚುವಂತಿರುವ ಹೆಡ್ ಫೋನ್ ನ ತೂಕ 168 grams.

6. ಜೆಬಿಎಲ್ T250SI ಹೆಡ್ ಫೋನ್

6. ಜೆಬಿಎಲ್ T250SI ಹೆಡ್ ಫೋನ್

ಜೆಬಿಎಲ್ T250SI ಹೆಡ್ ಫೋನ್ ಹೊಂದಾಣಿಕೆ ಮಾಡಬಹುದಾದ ಪ್ಯಾಡ್ ಗಳಿರುವ ಹೆಡ್ ಫೋನ್ ಆಗಿದೆ ಮತ್ತು ಇಯರ್ ಕಪ್ಸ್ ಗಳನ್ನು ಮಡಚಲು ಸಾಧ್ಯವಾಗುತ್ತದೆ ಯಾಕೆಂದರೆ ಇದರಲ್ಲಿ ಕುಷನ್ ಗಳಲ್ಲಿ ಬಳಸುವಂತ ಫೋಮ್ ನ್ನು ಬಳಕೆ ಮಾಡಲಾಗಿರುತ್ತದೆ. ಇದು ಹೆಚ್ಚಿನ ಪವರ್ ಇರುವ ಡ್ರೈವರ್ ಗಳಿದ್ದು, ಕಡಿಮೆ ತೂಕವನ್ನು ಹೊಂದಿರುತ್ತದೆ. ಮತ್ತು ವಯರ್ ಇರುವ ಈ ಹೆಡ್ ಫೋನ್ ನ ಜಾಕ್ ಸೈಜ್ 3.5mm ಆಗಿರುತ್ತದೆ.

7. ಸೋನಿ MDR-ZX310AP

7. ಸೋನಿ MDR-ZX310AP

ಸೋನಿ MDR-ZX310AP ವಯರ್ ಇರುವ ಒಂದು ಮೈಕ್ರೋಫೋನ್ ಇದರಲ್ಲಿ 30mm ನ ಡೈನಾಮಿಕ್ ಡ್ರೈವರ್ ಇದೆ ಮತ್ತು 4-ಕಂಡಕ್ಟರ್ ಗೋಲ್ಡ್ ಪ್ಲೇಟೆಡ್ ಎಲ್ ಶೇಪಿನ ಸ್ಟಿರಿಯೋ ಮಿನಿ ಪ್ಲಗ್ ನ್ನು ಹೊಂದಿದೆ.ಸೆನ್ಸಿಟಿವಿಟಿ ಸಾಮರ್ಥ್ಯ 98db ಮತ್ತು ಅತ್ಯಂತ ಹೆಚ್ಚಿನ ಪ್ರೀಕ್ವೆನ್ಸಿ ಸಾಮರ್ಥ್ಯ 24000Hz ಆಗಿದೆ.

8. ಸೌಂಡ್ ಲಾಜಿಕ್ BTHP001PX_BK

8. ಸೌಂಡ್ ಲಾಜಿಕ್ BTHP001PX_BK

ಸೌಂಡ್ ಲಾಜಿಕ್ BTHP001PX_BK ಬ್ಲೂಟೂತ್ ಹೆಡ್ ಫೋನ್ ಆಗಿದ್ದು ಬಿಲ್ಟ್ ಇನ್ SD ಕಾರ್ಡ್ ಸ್ಲಾಟ್ ಮತ್ತು FM ಟ್ಯೂನರ್ ಇದರಲ್ಲಿರುತ್ತದೆ . ಇದು ಕೂಡ ಕಡಿಮೆ ತೂಗವನ್ನು ಹೊಂದಿದೆ ಮತ್ತು ನೀವು ಇದರಲ್ಲಿ ಕರೆಗಳನ್ನು ಸ್ವೀಕರಿಸಲು ಮತ್ತು ನಿರಾಕರಿಸಲು ಅವಕಾಶವಿರುತ್ತದೆ.

09. ಇಂಟೆಕ್ಸ್ ಜಾಕರ್ ಬಿ ಬ್ಲೂಟೂತ್ ಹೆಡ್ ಫೋನ್

09. ಇಂಟೆಕ್ಸ್ ಜಾಕರ್ ಬಿ ಬ್ಲೂಟೂತ್ ಹೆಡ್ ಫೋನ್

ಇಂಟೆಕ್ಸ್ ಜಾಕರ್ ಬಿ ಬ್ಲೂಟೂತ್ ಹೆಡ್ ಫೋನ್ ನ್ನು ಸ್ಮಾರ್ಟ್ ಫೋನ್ ಗಳಿಗಾಗಿಯೇ ಡಿಸೈನ್ ಮಾಡಲಾಗಿದೆ ಮತ್ತು ಇದು 145mm ಡ್ರೈವರ್ ಯುನಿಟ್ ನ ಜೊತೆಗೆ FM ಮಾಡ್ಯುಲೇಷನ್ ಮತ್ತು ಕಡಿಮೆ ಫ್ರೀಕ್ವೆನ್ಸಿ ರೆಸ್ಪಾನ್ಸ್ 20Hz ಹೊಂದಿದೆ. ಇದರ ತೂಕ 306 ಗ್ರಾಂನಷ್ಟಿದೆ ಮತ್ತು ಇದು ಬ್ಲೂಟೂತ್ ನ್ನು ಬೆಂಬಲಿಸುತ್ತದೆ.

10. ಐಬಾಲ್ ಪ್ಲಸ್ ಬಿಟಿ4

10. ಐಬಾಲ್ ಪ್ಲಸ್ ಬಿಟಿ4

ಐಬಾಲ್ ಪ್ಲಸ್ ಬಿಟಿ4 ಒಂದು ಬ್ಲೂಟೂತ್ ನ್ನು ಬೆಂಬಲಿಸುವ ಹೆಡ್ ಫೋನ್ ಆಗಿದ್ದು ಫ್ರೀಕ್ವೆನ್ಸಿ ಮಟ್ಟವು 20hz-20khz ಆಗಿದೆ. ಇದನ್ನು 3 ರಿಂದ 4 ಗಂಟೆ ಚಾರ್ಜ್ ಮಾಡಿದರೆ ಸುಮರು 200 ತಾಸು ಬಳಕೆ ಮಾಡಬಹುದಾಗಿದೆ. ಇದರ ತೂಕವು ಬಹಳ ಕಡಿಮೆ ಕೇವಲ 163 ಗ್ರಾಮ್ ನಷ್ಟಿದೆ.

11. ಮೋಟೋರೋಲಾ ಪ್ಲಸ್ ಮ್ಯಾಕ್ಸ್

11. ಮೋಟೋರೋಲಾ ಪ್ಲಸ್ ಮ್ಯಾಕ್ಸ್

ಮೋಟೋರೋಲಾ ಪ್ಲಸ್ ಮ್ಯಾಕ್ಸ್ ಒಂದು ವಯರ್ಡ್ ಹೆಡ್ ಫೋನ್ ಆಗಿದ್ದು ನಾಯ್ಸ್ ಕ್ಯಾನ್ಸಲೇಷನ್ ತಂತ್ರಜ್ಞಾನವನ್ನು ಹೊಂದಿದೆ. ಇದರ ಫ್ರೀಕ್ವೆನ್ಸಿ ರೇಂಜ್ 20 - 20,000 Hz ಮತ್ತು ಮಡಚಲು ಸಾಧ್ಯವಾಗುವಂತ ಡಿಸೈನ್ ಹೊಂದಿದೆ. ಇದು 40ಎಂಎಂ Neodymium ಡ್ರೈವರ್ ಗಳನ್ನುಹೊಂದಿದೆ.

12. ಲಾಜಿಟೆಕ್ H111

12. ಲಾಜಿಟೆಕ್ H111

ಲಾಜಿಟೆಕ್ H111 ಬೇಸಿಕ್ ಹೆಡ್ ಫೋನ್ ಆಗಿದ್ದು, ಲ್ಯಾಪ್ ಟಾಪ್ ಮತ್ತು ಸ್ಮಾರ್ಟ್ ಫೋನ್ ಎರಡರಲ್ಲೂ ಕೂಡ ಇದನ್ನು ಬಳಕೆ ಮಾಡಲಾಗುತ್ತದೆ. ಇದರ ತೂಕ 136 ಗ್ರಾಮ್ಸ್ ಮತ್ತು ಪಾಪುಲರ್ ಕಾಲಿಂಗ್ ಆಪ್ ಗಳಲ್ಲಿ ಇದು ಭಾರೀ ಕಂಪಾಟಿಬಲ್ ಆಗಿದೆ. ಇದರಲ್ಲಿ ಫುಲ್ ಸ್ಟೀರಿಯೋ ಸೌಂಡ್ ಮತ್ತು ಮಡಚಲು ಸಾಧ್ಯವಾಗುವಂತೆಯೂ ಕೂಡ ಇರುತ್ತದೆ.

13. ಐಬಾಲ್ RK25

13. ಐಬಾಲ್ RK25

ಐಬಾಲ್ RK25 ನಲ್ಲಿ ಸ್ಪೀಕರ್ ಡ್ರೈವರ್ ಇದ್ದು ಅದು 4cm ನಷ್ಟಿದೆ ಮತ್ತು ಫ್ರೀಕ್ವೆನ್ಸಿ ಪ್ರತಿಕ್ರಿಯೆಯ ರೇಂಜ್ 20Hz to 20kHz ಆಗಿದೆ..ಇಯರ್ ಕಪ್ ಗಳು ಹೊಂದಾಣಿಕೆ ಮಾಡಿಕೊಳ್ಳುವಂತಿದ್ದು,ಇಂಪೆಡೆನ್ಸ್ 32Ohms ಆಗಿದೆ. ಇದರ ಒಟ್ಟಾರೆ ತೂಕವು 259 ಗ್ರಾಂ ಆಗಿದೆ.

14. ಸೋನಿ MDR-ZX110A – 700 ರುಪಾಯಿ ಒಳಗೆ

14. ಸೋನಿ MDR-ZX110A – 700 ರುಪಾಯಿ ಒಳಗೆ

ಸೋನಿ MDR-ZX110A ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ 700 ರುಪಾಯಿ ಒಳಗೆ ಖರೀದಿಸಬಹುದಾದ ಹೆಡ್ ಫೋನ್ ಗಳಲ್ಲಿ ಇದೂ ಒಂದಾಗಿದೆ. ಇದು ಪೋರ್ಟೆಬಲ್ ಮತ್ತು ಕಡಿಮೆ ತೂಕವನ್ನು ಹೊಂದಿದೆ. ಇದರಲ್ಲಿ 30 mm neodymium ಡೈನಾಮಿಕ್ ಡ್ರೈವರ್ ಇದೆ ಮತ್ತು ಇದರ ಫ್ರೀಕ್ವೆನ್ಸಿ ರೇಂಜ್ 12Hz ನಿಂದ 22KHz ಆಗಿದೆ.

15. ಜೆಬಿಎಲ್ ಸಿ300ಎಸ್ ಐ

15. ಜೆಬಿಎಲ್ ಸಿ300ಎಸ್ ಐ

ಜೆಬಿಎಲ್ ಸಿ300ಎಸ್ ಐ ,ಸೋನಿ MDR-ZX110A ಗೆ ಸ್ಪರ್ಧೆ ನೀಡುವ ಹೆಡ್ ಫೋನ್ ಆಗಿದ್ದು ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ 900 ರುಪಾಯಿ ಒಳಗೆ ಖರೀದಿ ಮಾಡಬಹುದು.ಈ ಹೆಡ್ ಫೋನ್ ನ ಡ್ರೈವರ್ ಸೈಜ್ 40mm ಮತ್ತು ಫ್ರೀಕ್ವೆನ್ಸಿ ಮಟ್ಟ 20Hz-20kHz. ಈ ವಯರ್ ಹೆಡ್ ಫೋನ್ ಸೆಲ್ಫ್-ಅಡ್ಜೆಸ್ಟೇಬಲ್ ಇಯರ್ ಕಪ್ಸ್ ಗಳನ್ನುಹೊಂದಿದೆ ಮತ್ತು ಕಪ್ಪು ವರ್ಣದಲ್ಲಿ ಲಭ್ಯವಾಗುತ್ತದೆ.

16. ಬೋಟ್ BassHeads

16. ಬೋಟ್ BassHeads

ಬೋಟ್ ಒಂದು ಕಡಿಮೆ ಬೆಲೆಯ ಬ್ರಾಂಡ್ ನ ಹೆಡ್ ಫೋನ್ ಆಗಿದ್ದು ಶಿಸ್ತುಬದ್ಧವಾಗಿರುವ 1000 ರೂಪಾಯಿ ಒಳಗಿನ ಬೆಲೆಯನ್ನು ಹೊಂದಿರುವ ಹೆಡ್ ಫೋನ್ ಆಗಿದೆ. BassHeads 900 ನ್ನು 800 ರುಪಾಯಿ ಬೆಲೆಗೂ ಖರೀದಿಸಬಹುದು. ಈ ಡಿವೈಸ್ ನಲ್ಲಿ ಮಡಚುವ ತಂತ್ರಜ್ಞಾನಗ ಇಯರ್ ಕಪ್ಸ್ ಗಳಿದೆ ಮತ್ತು ಇದರ ಫ್ರೀಕ್ವೆನ್ಸಿ ರೇಂಜ್ 20 - 20kHz. ಉತ್ತಮ ಆಡಿಯೋ ಮಟ್ಟವನ್ನು ಇದು ನೀಡುತ್ತದೆ.

17. ಮೋಟೋರೋಲಾ ಪ್ಲಸ್ 2

17. ಮೋಟೋರೋಲಾ ಪ್ಲಸ್ 2

ನೀವು ಮಿನಿಮಲಿಸ್ಟಿಕ್ ಅಂದರೆ ಚಿಕ್ಕ ಹೆಡ್ ಫೋನ್ ಗಳನ್ನು ಬಳಸಲು ಇಚ್ಛಿಸುವವರಾದರೆ ನಿಮ್ಮ ಆಯ್ಕೆ ಮೋಟೋರೋಲಾ ಪ್ಲಸ್ 2 ಆಗಿರಬಹುದು. ಈ ಹೆಡ್ ಫೋನ್ ನ್ನು ಸುಮಾರು 800 ರುಪಾಯಿ ಒಳಗೆ ಖರೀದಿಸಬಹುದಾಗಿದೆ.ಮಡಚುವ ಇಯರ್ ಕಪ್ಸ್ ಗಳಿರುತ್ತವೆ ಮತ್ತು ಬಿಳಿ, ಕಪ್ಪು ಎರಡು ವರ್ಣಗಳಲ್ಲಿ ಈ ಹೆಡ್ ಫೋನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಆಡಿಯೋ ಫ್ರೀಕ್ವೆನ್ಸಿ ಮಟ್ಟವು 18Hz-23kHz ಆಗಿದೆ ಜೊತೆಗೆ 32Ohm ಇಂಪೆಡೆನ್ಸ್ ಇದೆ.

18. ಸ್ಕಲ್ ಕ್ಯಾಂಡಿ S5LHZ-J576

18. ಸ್ಕಲ್ ಕ್ಯಾಂಡಿ S5LHZ-J576

ಬ್ರಾಂಡ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಗ್ರಾಹಕರು ಸ್ಕಲ್ ಕ್ಯಾಂಡಿ Skullcandy S5LHZ-J576ನ್ನು ಆಯ್ಕೆ ಮಾಡಿಕೊಳ್ಳಬಹುದು.ಇದು ಕೇವಲ 1000 ರುಪಾಯಿ ಒಳಗೆ ಲಭ್ಯವಿದೆ ಮತ್ತು ನಾಲ್ಕು ವಿವಿಧ ಬಣ್ಣಗಳಲ್ಲಿ ಸಿಗುತ್ತದೆ - ಬರ್ಗೆಂಡಿ ರೆಡ್, ಕೋರಲ್ ಬ್ಲಾಕ್, ರಾಯಲ್ ನೇವಿ ಮತ್ತು ಬಿಳಿ.

19. ಫಿಲಿಪ್ಸ್ SHP1900/97

19. ಫಿಲಿಪ್ಸ್ SHP1900/97

ಫಿಲಿಪ್ಸ್ SHP1900/97 ಒಂದೇ ವರ್ಷದಲ್ಲಿ ಇ- ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಭಾರೀ ಮಾರಾಟ ಕಂಡ 500 ರುಪಾಯಿ ಒಳಗಿನ ಹೆಡ್ ಫೋನ್ ಗಳಲ್ಲಿ ಇದೂ ಕೂಡ ಒಂದಾಗಿದೆ. ಇದರ ಆಡಿಯೋ ಫ್ರೀಕ್ವೆನ್ಸಿ ಮಟ್ಟ 20Hz-20kHz ಮತ್ತು ಅತೀ ಹೆಚ್ಚಿನ ಪವರ್ ಇನ್ ಪುಟ್ ಸಾಮರ್ಥ್ಯ 500Mw ಆಗಿದೆ.ಇದರ ತೂಕ ಹೆಚ್ಚೆಂದರೆ 500ಗ್ರಾಂನಷ್ಟಿದೆ.

20. ಫಿಲಿಪ್ಸ್ ಇಂಡೋರ್ SHP2000

20. ಫಿಲಿಪ್ಸ್ ಇಂಡೋರ್ SHP2000

ಫಿಲಿಪ್ಸ್ ಇಂಡೋರ್ SHP2000 ಕಪ್ಪು ವರ್ಣದಲ್ಲಿ ಲಭ್ಯವಿರುತ್ತದೆ ಮತ್ತು ಇದರ ಬೆಲೆ 650 ರುಪಾಯಿ ಒಳಗೆ ಇದೆ.. ಇದರಲ್ಲಿ 2 ಮೀಟರ್ ಉದ್ದನೆಯ ಕೇಬಲ್ ಜೊತೆಗೆ ನಿಮ್ಮ ಕಿವಿಯನ್ನು ಪೂರ್ತಿಯಾಗಿ ಮುಚ್ಚುವಂತಿರುವ ಇಯರ್ ಕಫ್ ಗಳು ಇದರಲ್ಲ ಇರುತ್ತದೆ. ಆ ಮೂಲಕ ಹೊರಗಿನ ಶಬ್ದ ಕಡಿಮೆ ಕೇಳುತ್ತದೆ. ಇದು ಕಡಿಮೆ ತೂಕವಿರುತ್ತೆ ಮತ್ತು ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ.

Most Read Articles
Best Mobiles in India

English summary
20 value-for-money headphones under Rs 1,000. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more