ನೀವಿನ್ನು ಈ ಮಾಯಾ ಸ್ಮಾರ್ಟ್‌ ಮಿರರ್‌ಗಳ ಬಗ್ಗೆ ತಿಳಿದಿಲ್ಲವೇ?!

|

ಕನ್ನಡಿ ನೋಡದೆ ದಿನ ಪ್ರಾರಂಭಿಸುವವರು ತೀರಾ ಕಡಿಮೆ. ಪ್ರತಿಯೋರ್ವರ ದಿನಚರಿ ಕನ್ನಡಿ ನೋಡಿಯೇ ಶುರುವಾಗುತ್ತದೆ ಎಂದರೆ ಕನ್ನಡಿಯನ್ನೂ ಸ್ಮಾರ್ಟ್ ಆಗಿಸುವ ಕಾಲ ಇದು ಎಂದರ್ಥ. ಅಷ್ಟಕ್ಕೂ ಗ್ಯಾಜೆಟ್ ವೆಬ್‌ಸೈಟಿನಲ್ಲಿ ಈ ಕನ್ನಡಿ ವಿಷಯವೇಕೆ ಎಂದು ಪ್ರಶ್ನಿಸಬೇಡಿ. ಏಕೆಂದರೆ ಕನ್ನಡಿಯೂ ಈ ಸ್ಮಾರ್ಟ್‌ ಕನ್ನಡಿಯಾಗಿ ಬದಲಾಗಿದೆ.

ಈಗ ಸ್ಮಾರ್ಟ್ ಜಮಾನಾ ,ಆ ಹಳೇ ಕನ್ನಡಿಗಳ ಬದಲಾಗಿ ಮಾರು ಕಟ್ಟೆಗೆ ಸ್ಮಾರ್ಟ್ ಮಿರರ್‌ಗಳು ಲಗ್ಗೆ ಇಟ್ಟಿವೆ. ಸಾಮಾನ್ಯ ಕನ್ನಡಿ ಕೇವಲ ನಮ್ಮ ಮುಖದ ಪ್ರತಿಬಿಂಬ ತೋರಿಸಿದರೆ, ಈ ಸ್ಮಾರ್ಟ್ ಮಿರರ್‌ಗಳು ಕೇವಲ ನಮ್ಮ ಮುಖದ ಪ್ರತಿಬಿಂಬ ತೋರಿಸುವುದಷ್ಟೇ ಅಲ್ಲಾ , ಮುಖಕ್ಕೆ ಯಾವ ಬಣ್ಣದ ಮೇಕಪ್ ಮಾಡಿಕೊಳ್ಳಬೇಕು? ಆ ಮುಖಕ್ಕೆ ಯಾವ ಬಣ್ಣದ ಬಟ್ಟೆ ಸೂಕ್ತ> ಜತೆಗೆ ನಿಮ್ಮ ಆರೋಗ್ಯದ ಸ್ಥಿತಿಗತಿಗಳೇನು ಎಂಬ ಎಲ್ಲ ಅಂಶಗಳನ್ನೂ ವಿವರವಾಗಿ ತಿಳಿಸುತ್ತವೆ.

ನೀವಿನ್ನು ಈ ಮಾಯಾ ಸ್ಮಾರ್ಟ್‌ ಮಿರರ್‌ಗಳ ಬಗ್ಗೆ ತಿಳಿದಿಲ್ಲವೇ?!

ಯಾವ ಹೇರ್‌ ಕಟ್‌ನಲ್ಲಿ ಸುಂದರವಾಗಿ ಕಾಣುತ್ತೀನಿ.? ಮೀಸೆ, ಹೇರ್ ಸ್ಟೈಲ್ ಹೇಗೆ ಬದಲಾದರೆ ಚೆನ್ನ.? ಕಿವಿಯೋಲೆ ಹೇಗಿದ್ರೆ ನನ್ನ ಬ್ಯೂಟಿ ಹೆಚ್ಚುತ್ತದೆ.? ಜತೆಗೆ ಆರೋಗ್ಯದ ಸ್ಥಿತಿಗತಿಗಳೇನು ಎಂಬೆಲ್ಲಾ ಮಾಹಿತಿಗಳನ್ನೂ ನೀಡುತ್ತದೆ. ಹಾಗಾದರೆ, ಯಾವ ಯಾವ ಡಿಜಿಟಲ್ ಕನ್ನಡಿಗಳು ಮಾರುಕಟ್ಟೆಯಲ್ಲಿವೆ? ಅವುಗಳ ವಿಶೇಷವೇನು ಎಂಬುದನ್ನು ಮುಂದೆ ತಿಳಿಯಿರಿ.

 ಸ್ಮಾರ್ಟ್‌ ಮಿರರ್‌ ತಂತ್ರಜ್ಞಾನ!

ಸ್ಮಾರ್ಟ್‌ ಮಿರರ್‌ ತಂತ್ರಜ್ಞಾನ!

ಬಳಕೆದಾರರು ಅಪೇಕ್ಷಿಸುವ ಎಲ್ಲಾ ಆಯ್ಕೆಗಳನ್ನು ಕನ್ನಡಿಯಲ್ಲಿ ಮೂಡಿಸುವಂತೆ ‘ಕೇರ್‌ ಒಎಸ್ (care Os)' ಅನ್ನು ಸ್ಮಾರ್ಟ್‌ ಮಿರರ್‌ನಲ್ಲಿ ಅಳವಡಿಸಲಾಗಿದೆ, ಈ ‘ಕೇರ್‌ ಒಎಸ್ (care Os)' ಸಹಾಯದಿಂದ ಮುಖ ಗುರುತಿಸುವಿಕೆ, ಮುಖ ವಿಶ್ಲೇಷಣೆ ಎಲ್ಲವನ್ನು ಕನ್ನಡಿಯ ಮೂಲಕವೇ ಬಳಕೆದಾರರು ಪಡೆಯಬಹುದಾಗಿದೆ.!

ಹೈಇರ್ ಮ್ಯಾಜಿಕ್‌ ಮಿರರ್!

ಹೈಇರ್ ಮ್ಯಾಜಿಕ್‌ ಮಿರರ್!

ನೋಡಲು ಸಾಮಾನ್ಯ ಕನ್ನಡಿಗಯಂತೆ ಕಂಡರೂ, ವಿವಿಧ ಆಯ್ಕೆಗಳನ್ನು ಬಳಕೆದಾರರಿಗೆ ನೀಡುವ ಹೈಇರ್ ಮ್ಯಾಜಿಕ್‌ ಮಿರರ್‌ ನಿಮ್ಮನ್ನು ಆಶ್ಚರ್ಯ ಚಕಿರನ್ನಾಗಿಸುವುದು ಸುಳ್ಳಲ್ಲ.! ಬೆಳಿಗ್ಗೆ ಎದ್ದೊಡನೇ ಕನ್ನಡಿ ನೋಡಿಕೊಂಡು ಹಲ್ಲುಜ್ಜುವವರಿಗೆ ನ್ಯೂಸ್‌ ಅಪ್‌ಡೇಟ್‌, ಫೇಸ್‌ಬುಕ್‌ ನೋಟಿಫಿಕೇಷನ್‌ಗಳು, ಹವಾಮಾನ ವರದಿ, ಡಿಜಿಟಲ್‌ ಟೈಂಗಳು ಕನ್ನಡಿಯ ಪರದೆ ಮೇಲೆ ಮೂಡುತ್ತವೆ. ದೇಹದ ತೂಕವೆಷ್ಟು, ಆರೋಗ್ಯದ ದೃಷ್ಟಿಯಿಂದ ತೂಕ ಎಷ್ಟು ಹೆಚ್ಚಿಸಿಕೊಳ್ಳಬೇಕು ಅಥವಾ ಇಳಿಸಬೇಕು, ಚರ್ಮದ ಆರೋಗ್ಯ ಹೇಗಿದೆ ಎಂಬ ಮಾಹಿತಿಯನ್ನು ಸಹ ನೀಡುತ್ತದೆ.!

ಹೈಮಿರರ್ ಮಿನಿ!

ಹೈಮಿರರ್ ಮಿನಿ!

ಅಮೆಜಾನ್‌ ಅಲೆಕ್ಸಾದ ಸಹಾಯದಿಂದ ಬಳಕೆದಾರರ ಧ್ವನಿಯನ್ನು ಗ್ರಹಿಸಿ ಕಾರ್ಯನಿರ್ವಹಿಸುವ ಡಿಜಿಟಲ್ ಕನ್ನಡಿ ಈ ‘ಹೈಮಿರರ್ ಮಿನಿ'! ಈ ಕನ್ನಡಿಯಲ್ಲಿ ಪ್ರಲೋಡೆಡ್ ಮೇಕಪ್‌ ವಿಧಾನಗಳನ್ನು ಸೇರಿಸಲಾಗಿರುವುದರಿಂದ ನಿಮ್ಮ ಮುಖಕ್ಕೆ ಯಾವ ರೀತಿಯ ಮೇಕಪ್‌ನಲ್ಲಿ ಹೇಗೆ ಕಾಣುತ್ತೀರಾ ಎಂಬುದನ್ನು ತೋರಿಸುತ್ತದೆ.!

ಕೊಹ್ಲರ್ ವರ್ಡೆರ ಸ್ಮಾರ್ಟ್ ಮಿರರ್!

ಕೊಹ್ಲರ್ ವರ್ಡೆರ ಸ್ಮಾರ್ಟ್ ಮಿರರ್!

‘ಕೊಹ್ಲರ್‌ ವರ್ಡೆರ ಸ್ಮಾರ್ಟ್ ಮಿರರ್‌' ಅನ್ನು ಮುಖ್ಯವಾಗಿ ಬಾತ್‌ ರೂಂಗಳಲ್ಲಿ ಅಳವಡಿಸಲೆಂದೇ ವಿನ್ಯಾಸಿಸಿದ್ದು, ಈ ಕನ್ನಡಿ ಶವರ್, ಬಾತ್‌ ಟಬ್, ನೀರಿನ ಕೊಳಾಯಿಗಳ ಸಂಪರ್ಕವನ್ನು ಸಹ ಈ ಕನ್ನಡಿ ಹೊಂದಿದೆ. ಕೊಹ್ಲರ್ ಆಪ್‌ ಧ್ವನಿಯ ಮೂಲಕ ಅವುಗಳನ್ನು ನಿಯಂತ್ರಿಸಿ ಸ್ನಾನ ಮಾಡುತ್ತಲೇ, ಹವಾಮಾನ ವರದಿ, ಟ್ರಾಫಿಕ್‌ ಅಪ್‌ಡೆಟ್‌ನ ಮಾಹಿತಿ ಪಡೆಯಬಹುದಾಗಿದೆ.!!

ಫಿಲಿಪ್ಸ್ ಬಾತ್‌ ರೂಂ ಮಿರರ್!

ಫಿಲಿಪ್ಸ್ ಬಾತ್‌ ರೂಂ ಮಿರರ್!

ಫಿಲಿಪ್ಸ್‌ ಸ್ಮಾರ್ಟ್‌ ಟೂತ್ ಬ್ರಷ್‌ನಲ್ಲಿ ನೀವು ಹಲ್ಲನ್ನು ಉಜ್ಜುತ್ತಿದ್ದರೆ, ಡಿಜಿಟಲ್ ಕನ್ನಡಿಯಲ್ಲಿ ಹಲ್ಲಿನ ಯಾವ ಭಾಗದಲ್ಲಿ ಉಜ್ಜುತ್ತಿದ್ದೀರಾ, ಅದರ ಒತ್ತಡವೆಷ್ಟು ಎಂಬೆಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ. ಗಡ್ಡವನ್ನು ಶೇವ್ ಮಾಡುತ್ತಿದ್ದರೆ, ನಿಮ್ಮ ಮುಖ ಹೊಂದುವ ಗಡ್ಡದ ಸ್ಟೈಲ್ ಯಾವುದು ಎಂದು ಸಹ ಹೇಳುತ್ತದೆ.!

Best Mobiles in India

English summary
I'm one of the founders of a startup developing smart mirrors, and we are contemplating releasing an open-source version. to know more visit to kannada.gizbot.com. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X