ಮಹಿಳೆಯ ಸುರಕ್ಷತೆಗೆ ಟಾಪ್ ಬೆಸ್ಟ್ ಎಲೆಕ್ಟ್ರಾನಿಕ್ ಉಪಕರಣಗಳಿವು!!

ಮಹಿಳೆಯರ ಸುರಕ್ಷತೆ ಎಂಬುದು ಇಂದಿಗೂ ಕಾಡುತ್ತಿರುವ ಸಮಸ್ಯೆಯಾಗಿರುವುದರಿಂದ ಈ ಆಧುನಿಕ ಯುಗದಲ್ಲಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಬಹುದು.

|

ಮಹಿಳೆಯರ ದಿನಾಚರಣೆ ಎಂದು ಸಂದೇಶಗಳ ಮೇಲೆ ಸಂದೇಶಗಳನ್ನು ಕಳುಹಿಸಿ ಶುಭಾಶಯ ಕೋರುವ ದೇಶದಲ್ಲಿಯೇ ಅತ್ಯಾಚಾರ, ಮಹಿಳೆಯರ ಮೇಲೆ ಕ್ರೂರ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ ಎಂದರೆ ಎಲ್ಲರಿಗೂ ಒಮ್ಮೆ ನಾಚಿಕೆಯಾಗಬೇಕು.! ಏಕೆಂದರೆ, ವರ್ಷದಿಂದ ವರ್ಷಕ್ಕೆ ಅತ್ಯಾಚಾರ ಪ್ರಕರಣಗಳು ಶೇ 12.4 ರಷ್ಟು ಹೆಚ್ಚಾಗುತ್ತಿವೆ ಎನ್ನುತ್ತಿವೆ ವರದಿಗಳು.!!

ಹೌದು, ಮಹಿಳೆಯರ ಸುರಕ್ಷತೆ ಎಂಬುದು ಇಂದಿಗೂ ಕಾಡುತ್ತಿರುವ ಸಮಸ್ಯೆಯಾಗಿರುವುದರಿಂದ ಈ ಆಧುನಿಕ ಯುಗದಲ್ಲಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಬಹುದು. ಆಧುನಿಕ ಯುಗದಲ್ಲಿ ತಂತ್ರಜ್ಞಾನ ಎಂಬುದು ಮಹಿಳೆಯರಿಗೆ ಪರಿಣಾಮಕಾರಿಯಾಗಿ ರಕ್ಷಕನಾಗಿ ನಿಲ್ಲಬಹುದು ಎಂಬುದು ಕೂಡ ನನ್ನ ಅಭಿಪ್ರಾಯ.!!

ಮಹಿಳೆಯ ಸುರಕ್ಷತೆಗೆ ಟಾಪ್ ಬೆಸ್ಟ್ ಎಲೆಕ್ಟ್ರಾನಿಕ್ ಉಪಕರಣಗಳಿವು!!

ಹಾಗಾಗಿ, ಇಂದಿನ ಲೇಖನದಲ್ಲಿ ಮಹಿಳೆಯ ಸುರಕ್ಷತೆಗೆ ತಂತ್ರಜ್ಞಾನ ಬೇಕೆಂಬ ಲೇಖನವನ್ನು ನೀಡುತ್ತಿದ್ದೇವೆ.! ಮಹಿಳೆಯ ಸುರಕ್ಷತೆಗೆ ಸಹಕಾರಿಯಾಗುವ ಎಲೆಕ್ಟ್ರಾನಿಕ್ ಉಪಕರಣಗಳು ಯಾವುವು ಇವೆ? ಆ ಉಪಕರಣಗಳಿಂದ ಮಹಿಳೆಯರಿಗೆ ಹೇಗೆ ರಕ್ಷಣೆ ದೊರೆಯಬಲ್ಲದು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ರಿವೋಲರ್ ( revolar) ನಿಂದ ಸಂದೇಶ ಕಳುಹಿಸಿ!!

ರಿವೋಲರ್ ( revolar) ನಿಂದ ಸಂದೇಶ ಕಳುಹಿಸಿ!!

ರಾತ್ರಿಯವೇಳೆ ಅಥವಾ ತಡವಾಗಿ ಮನೆಗೆ ತೆರಳುವಾಗ ತಾನು ಸುರಕ್ಷಿತ ಎಂದು ಸಂದೇಶ ರವಾನಿಸಲು ರಿವೋಲರ್ ಎಂಬ ಎಲೆಕ್ಟ್ರಾನಿಕ್ ಉಪಕರಣ ಮಹಿಳೆಯರಿಗೆ ಸಹಾಯಕ. ಒಂದು ಬಾರಿ ರಿವೋಲರ್‌ನ ಗುಂಡಿ ಒತ್ತಿದರೆ ತಾನು ಸುರಕ್ಷಿತವೆಂದು, ಎರಡು ಬಾರಿ ಒತ್ತಿದರೆ ಅಪಾಯವೆಂದು ಹಾಗೆ ಮೂರು ಬಾರಿ ಒತ್ತಿದರೆ ಎಮರ್ಜೆನ್ಸಿ ಎಂದು ಸಂದೇಶವನ್ನು ಮೊಬೈಲ್ಗೆ ಕಳುಹಿಸುವ ಸಾಧನ ಇದು!!

ಸೇಫ್ಲೆಟ್ ಬ್ರಾಸ್‌ಲೆಟ್!!

ಸೇಫ್ಲೆಟ್ ಬ್ರಾಸ್‌ಲೆಟ್!!

ಕೈಗೆ ಧರಿಸುವ ಬ್ರಾಸ್‌ಲೆಟ್ ರೀತಿ ಕಾಣುವ ಸೇಫ್ಲೆಟ್ ಎಂಬ ಗ್ಯಾಜೆಟ್ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಮೊಬೈಲ್ ಸಂಖ್ಯೆಗೆ ಎಚ್ಚರಿಕೆ ಸಂದೇಶ ರವಾನಿಸುತ್ತದೆ. ಸೇಫ್ಲೆಟ್‍ನ ಎರಡು ಬದಿಯಲ್ಲಿ ನೀಡಿರುವ ಎರಡು ಬಟನ್‍ಗಳನ್ನು ಒಟ್ಟಿಗೆ ಒತ್ತಿದರೆ ನೀವು ಆಯ್ದುಕೊಂಡಿರುವ ಮೊಬೈಲ್ ಫೋನ್‍ನೊಂದಿಗೂ ಸಂಪರ್ಕ ಸಾಧಿಸಿ ರೆಕಾರ್ಡಿಂಗ್ ಆನ್ ಮಾಡುತ್ತದೆ.!!

‘ವಾಚ್ ಓವರ್ ಮಿ’ ಆಪ್!!

‘ವಾಚ್ ಓವರ್ ಮಿ’ ಆಪ್!!

ಯಾರಾದರೂ ನಿಮ್ಮ ಮೇಲೆ ಅಟ್ಯಾಕ್ ಮಾಡಿದರೆ ಮೊಬೈಲ್ ಲಾಕ್ ಆಗಿದ್ದರೂ ಕೂಡ ಮೊಬೈಲ್ ಅಲುಗಾಡಿಸಿದರೆ ಸಾಕು ಎಚ್ಚರಿಕೆ ಸಂದೇಶವನ್ನು ನಿಮ್ಮ ಹತ್ತಿರದವರಿಗೆ ಕಳುಸಿಸುವ ಮತ್ತು ವಿಡಿಯೊ ಕ್ಯಾಮೆರ ತೆರೆದುಕೊಳ್ಳುವ ಆಯ್ಕೆ ‘ವಾಚ್ ಓವರ್ ಮಿ' ಆಪ್‌ನಲ್ಲಿದೆ. ಈ ಆಪ್‌ನಲ್ಲಿ ಟೈಮರ್ ಅನ್ನು ಕೂಡ ನಿಗದಿ ಮಾಡಬಹುದು.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಅಥೆನಾ ಇದ್ರೆ ಸೇಫ್!!

ಅಥೆನಾ ಇದ್ರೆ ಸೇಫ್!!

ಸಿಲಿಕಾನ್‌ನಿಂದ ತಯಾರಿಸಿರುವ ಚಿಕ್ಕದಾದ ಗ್ಯಾಜೆಟ್ ಅಥೆನಾ ಇದ್ರೆ ಮಹಿಳೆಯರು ಸೇಫ್ ಎನ್ನಬಹುದು. ಅತ್ಯಂತ ಸಣ್ಣ ಡಿವೈಸ್ ಇದಾಗಿದ್ದು, ಕತ್ತಿಗೆ ಹಾಕಿಕೊಳ್ಳುವ ಸರದ ಪದಕದಂತೆ ಈ ಗ್ಯಾಜೆಟ್ ವಿನ್ಯಾಸವಾಗಿದೆ. ಈ ಡಿವೈಸ್‌ನಲ್ಲಿನ ಬಟನ್ ಅನ್ನು 3 ಸೆಕೆಂಡ್ ಒತ್ತಿದ್ದರೆ ಭಾರೀ ಶಬ್ದವನ್ನು ಉಂಟುಮಾಡುವುದಲ್ಲದೆ ಸಂದೇಶವನ್ನು ಕಳುಹಿಸುತ್ತದೆ.!!

ಜೂಮ್ ಪ್ಯಾನಿಕ್ ಬಟನ್!!

ಜೂಮ್ ಪ್ಯಾನಿಕ್ ಬಟನ್!!

ಒಮ್ಮೆ ಬಟನ್ ಒತ್ತಿದರೆ ನಿಮ್ಮ ಮೊಬೈಲ್‌ನಲ್ಲಿ ಸೇರಿಸಿರುವ ಮೊಬೈಲ್ ಸಂಖ್ಯೆಗಳಿಗೆ ನೀವಿರುವ ಸ್ಥಳದ ಜಿಪಿಎಸ್ ಮಾಹಿತಿಯನ್ನು ಕಳುಹಿಸುವ ಗ್ಯಾಜೆಟ್ ಈ ಜೂಮ್ಪ್ಯಾನಿಕ್ ಬಟನ್. ಪರ್ಸ್‌ನಲ್ಲಿ ಬೇಕಾದರೂ ಇಡಬಹುದಾದ ಈ ಪುಟ್ಟ ಗ್ಯಾಜೆಟ್‌ನಲ್ಲಿ ರಿಯಾಕ್ಟ್ ಮೊಬೈಲ್ ಸುರಕ್ಷತಾ ಸೇವೆ ಇದ್ದು, ಎಚ್ಚರಿಕೆ ಸಂದೇಶವನ್ನು ಕಳುಹಿಸುತ್ತದೆ.!!

Best Mobiles in India

English summary
These products prove that personal safety can benefit from technology when the two come together in innovative ways.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X