ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ: ಇಲ್ಲದಿದ್ರೆ ಜೈಲು ಗ್ಯಾರೆಂಟಿ..!

  |

  ಇದೇ ಮೊದಲ ಬಾರಿಗೆ ಭಾರತ ಸರ್ಕಾರವು ದೇಶಿಯವಾಗಿ ಡ್ರೋನ್ ಹಾರಾಟಕ್ಕೆ ನಿಮಯವನ್ನು ರೂಪಿಸಿದ್ದು, ಈ ಹಿನ್ನಲೆಯಲ್ಲಿ ಯಾರು ಬೇಕಾದರೂ ಡ್ರೋನ್ ಅನ್ನು ಹಾರಿಸುವಂತಿಲ್ಲ ಎನ್ನಲಾಗಿದೆ. ಆಂತರಿಕ ಭದ್ರತೆಯ ದೃಷ್ಟಿಯಿಂದ ಡ್ರೋನ್‌ ಹಾರಾಟ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀತಿ ರೂಪಿಸಿದ್ದು, ಇನ್ನು ಮುಂದೆ ಡ್ರೋನ್ ಹಾರಿಸಲು ಲೈಸನ್ಸ್‌ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

  ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ: ಇಲ್ಲದಿದ್ರೆ ಜೈಲು ಗ್ಯಾರೆಂಟಿ..!

  ಇದೇ ಡಿಸೆಂಬರ್ 1 ರಿಂದ ಈ ಹೊಸ ನಿಮಯವು ಜಾರಿಗೆ ಬರಲಿದ್ದು, ದೇಶದಲ್ಲಿ ಡ್ರೋನ್ ಹಾರಾಟ ಇನ್ನು ಮುಂದೆ ವಾಣಿಜ್ಯ ಚಟುವಟಿಕೆಯಾಗಲಿದೆ. ಕಾರಣ ಡ್ರೋನ್ ಮೂಲಕವೇ ವಸ್ತುಗಳ ಡಿಲಿವರಿ ಸೇರಿದಂತೆ ಸಾಕಷ್ಟು ದೊಡ್ಡ ಪ್ರಮಾಣದ ಸೇವೆಗಳು ಆರಂಭವಾಗಲಿದೆ. ಇದಕ್ಕೆ ಮುನ್ನಡಿಯಾಗಿ ಈ ಹೊಸ ಮಾದರಿಯ ನಿಯಮವನ್ನು ಜಾರಿಗೆ ತರಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹೊಸ ಮಾರ್ಗದರ್ಶಿ:

  ಕೇಂದ್ರ ವಿಮಾನಯಾನ ಸಚಿವಾಲಯವು ಸೋಮವಾರದಂದು ಹೊಸದಾಗಿ ಡ್ರೋನ್ ನೀತಿ ಬಗ್ಗೆ ಮಾರ್ಗದರ್ಶಿ ಸೂತ್ರದ ಬಗ್ಗೆ ಮಾಹಿತಿಯನ್ನು ನೀಡಿದ್ದು. ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ, ಡ್ರೋನ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ನೀಡುವ ಪ್ರಸ್ತಾವ ಮಾಡಿದೆ.

  ದುಡ್ಡು ಎಷ್ಟು:

  ದೇಶದಲ್ಲಿ ಡ್ರೋನ್ ಹಾರಿಸಲು ಪೈಲೆಟ್ ಲೈಸನ್ಸ್ ಪಡೆದುಕೊಳ್ಳಲು ಸರಕಾರವೂ ದೊಡ್ಡ ಮೊತ್ತವನ್ನು ವಿಧಿಸಲು ಮುಂದಾಗಿದೆ. ರೂ.25000 ವನ್ನು ಲೈಸನ್ಸ್ ಪಡೆದುಕೊಳ್ಳಲು ಕಟ್ಟ ಬೇಕಾಗಿದೆ. ಇದಾ ನಂತರದಲ್ಲಿ ಅದನ್ನು ರಿನಿವಲ್ ಮಾಡಿಸಲು ರೂ.10000 ಮತ್ತು ಡ್ರೋನ್ ಅನ್ನು ರಿಜಿಸ್ಟರ್ ಮಾಡಿಸಲು ರೂ.1000 ದರವನ್ನು ನಿಗಧಿ ಮಾಡಿದೆ.

  ಲೈಸನ್ಸ್ ಪಡೆಯಲು:

  ರಿಜಿಸ್ಟರ್ ಆದ ಪ್ರತಿ ಡ್ರೋನ್‌ಗಳಿಗೆ ಯೂನಿಕ್ ಐಡೆಂಟಿಫಿಕೇಷನ್ ನಂಬರ್ (ಯುಐಎನ್) ನೀಡಲಾಗುತ್ತದೆ. ಡ್ರೋನ್ ಗೆ ಪರವಾನಗಿ ಪಡೆದುಕೊಳ್ಳಲು ಹದಿನೆಂಟು ವರ್ಷ ತುಂಬಿರ ಬೇಕು, ಕನಿಷ್ಠ ಹತ್ತನೇ ತರಗತಿ ಪಾಸಾಗಿರ ಬೇಕು, ಇಂಗ್ಲಿಷ್ ಭಾಷಾ ಜ್ಞಾನ ಇರಬೇಕು ಎನ್ನಲಾಗಿದೆ.

  ಹೊಸದಾಗಿ ಐದು ವಿಭಾಗ:

  ದೇಶಿಯವಾಗಿ ಹಾರಾಟ ನಡೆಸುವ ಡ್ರೋನ್‌ಗಳನ್ನು ಐದು ವಿಭಾಗವಾಗಿ ವಿಂಗಡಿಸಲಾಗಿದೆ. ಅದು ಕೂಡ ಅವುಗಳ ತೂಕದ ಆಧಾರದಲ್ಲಿ. ನ್ಯಾನೋ (250 ಗ್ರಾಮ್ ತೂಕ), ಮೈಕ್ರೋ (2 KG ತೂಕ), ಸ್ಮಾಲ್ (25 KG ತೂಕ), ಮೀಡಿಯಮ್ (150 KG ತೂಕದ ಒಳಗೆ), ಲಾರ್ಜ್ (150 KG ತೂಕ) ಎಂದು ವಿಂಗಡಿಸಲಾಗಿದೆ.

  ಯಾವುದಕ್ಕೆ ರಿಜಿಸ್ಟೇಷನ್ ಬೇಡ:

  250 ಗ್ರಾಮ್ ಹಾಗೂ 2 KG ತೂಕದ ಡ್ರೋನ್‌ಗಳನ್ನು ಬಳಕೆ ಮಾಡಿಕೊಳ್ಳಲು ಯಾವುದೇ ರೀತಿಯ ನೋಂದಣಿ ಮಾಡಿಸಬೇಕಾಗಿಲ್ಲ ಎನ್ನಲಾಗಿದೆ. (ಇವೆರಡನ್ನು ಮಕ್ಕಳು ಆಟಿಕೆ ರೀತಿ ಬಳಸಬಹುದು) ಇದನ್ನು ಬಿಟ್ಟು ಉಳಿದವನ್ನು ಬಳಕೆ ಮಾಡಿಕೊಳ್ಳಲು ನೋಂದಣಿ ಮಾಡಿಸಲೇ ಬೇಕು ಎಂದು ನಿಮಯದಲ್ಲಿ ತಿಳಿಸಲಾಗಿದೆ.

  ಯಾವುದಕ್ಕೆ ಬೇಕು..!

  2 KG ಗಿಂತಲೂ ಹೆಚ್ಚಿನ ತೂಕದ ಡ್ರೋನ್‌ಗಳ ಹಾರಾಟ ಮತ್ತು ನಿಯಂತ್ರಣಕ್ಕೆ ಲೈಸನ್ಸ್‌ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದಕ್ಕಾಗಿ ವಯೋಮಿತಿಯನ್ನು ನಿಗಧಿ ಮಾಡಲಾಗಿದ್ದು, 18 ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಲೈಸನ್ಸ್ ಪಡೆಯಲು ಅನುಮತಿಯನ್ನು ನೀಡಲಾಗಿದೆ.

  ಕಣ್ಣಳತೆ ದೂರಕ್ಕೆ ಮಾತ್ರವೇ:

  ಸದ್ಯಕ್ಕೆ ಡ್ರೋನ್ ಅನ್ನು ಕಣ್ಣಿಗೆ ಕಾಣುವಷ್ಟು ದೂರದವರೆಗೆ ಮಾತ್ರ ಬಳಸಲು ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕಾಗಿಯೇ ಕಾರ್ಯಪಡೆಯೊಂದನ್ನು ರಚಿಸಿ, ಅದರ ಮೂಲಕ ದೂರದ ಪ್ರದೇಶಗಳಿಗೂ ಡ್ರೋನ್ ಬಳಕೆ ಮಾಡುವ ಚಿಂತನೆ ನಡೆಸಲಾಗುವುದು ಎನ್ನಲಾಗಿದೆ. ಅಲ್ಲದೇ ಬೆಳಕು ಇರುವ ವೇಳೆಯಲ್ಲಿ ಮಾತ್ರವೇ ಡ್ರೋನ್ ಹಾರಟ ನಡೆಸಬೇಕಾಗಿದೆ.

  ನಿಷೇಧಿತ ಪ್ರದೇಶ:

  ಇದಲ್ಲದೇ ದೇಶದ ಹಲವು ಕಡೆಗಳಲ್ಲಿ ಡ್ರೋನ್ ಹಾರಾಟ ನಿಷೇಧ ಪ್ರದೇಶ ಎಂದು ಗುರುತಿಸಿ, ಅಲ್ಲಿ ಡ್ರೋನ್ ಹಾರಾಟ ನಡೆಸುವಂತಿಲ್ಲ ಎಂಬ ನಿಯಮ ಮಾಡಲಾಗುವುದು. ಇವುಗಳನ್ನು ಪಾಲನೆ ಮಾಡಬೇಕಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Drone Regulations 1.0: How to fly a drone legally in India and more. to know more visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more