Just In
- 15 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 17 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 17 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 19 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Movies
Breaking: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಲಿಪ್‌ಕಾರ್ಟ್ ಗ್ರ್ಯಾಂಡ್ ಗ್ಯಾಜೆಟ್ ಡೇಸ್‌ನಲ್ಲಿನ ಭಾರೀ ರಿಯಾಯಿತಿಯ ಗ್ಯಾಜೆಟ್ಸ್ ಲೀಸ್ಟ್!!
ಜನಪ್ರಿಯ ಆನ್‌ಲೈನ್ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್, ಹೊಸ ಗ್ಯಾಜೆಟ್ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗಾಗಿ 'ಗ್ರಾಂಡ್ ಗ್ಯಾಜೆಟ್ ಡೇಸ್' ಮಾರಾಟ ಮೇಳವನ್ನು ಹಮ್ಮಿಕೊಂಡಿರುವ ಬಗ್ಗೆ ನಿಮಗೀಗಾಗಲೇ ತಿಳಿದಿರಬಹುದು. ಇದೇ ಮಂಗಳವಾರದಿಂದ ಆರಂಭವಾಗಿರುವ ಈ ಗ್ಯಾಜೆಟ್ ಸೇಲ್ ಜನವರಿ 10 ಅಂದರೆ ನಾಳೆಯೇ ಕೊನೆಗೊಳ್ಳಲಿದೆ.
ಮೂರು ದಿನಗಳು ಆಯೋಜನೆಯಾಗಿರುವ ಈ ಫ್ಲಿಪ್‌ಕಾರ್ಟ್ ಗ್ರ್ಯಾಂಡ್ ಗ್ಯಾಜೆಟ್ ಡೇಸ್ ಭರ್ಜರಿ ಮಾರಾಟ ಮೇಳದಲ್ಲಿ ಲ್ಯಾಪ್ಟಾಪ್‌ಗಳು, ಗೇಮಿಂಗ್ ಕನ್ಸೋಲ್‌ಗಳು, ಹೆಡ್‌ಫೋನ್‌ಗಳು, ಡಿಎಸ್ಎಲ್ಆರ್ ಕ್ಯಾಮೆರಾಗಳು, ಪವರ್‌ಬ್ಯಾಂಕ್‌ಗಳು ಸೇರಿದಂತೆ ಹೆಚ್ಚಿನ ಗ್ಯಾಜೆಟ್‌ಗಳ ಮೇಲೆ ಉತ್ತಮ ರಿಯಾಯಿತಿ ಜೊತೆಗೆ ಉತ್ತಮ ಇಎಂಐ ಕೊಡುಗೆಗಳನ್ನು ಸಹ ನೀಡಲಾಗಿದೆ.

ಆದ್ದರಿಂದ ನೀವು ರಿಯಾಯಿತಿ ಕೊಡುಗೆಗಳ ಮೂಲಕ ಗ್ಯಾಜೆಟ್‌ಗಳನ್ನು ಖರೀದಿಸಲು ಬಯಸಿದರೆ ಈ ವರ್ಷದ ಅತ್ಯುತ್ತಮ ಸಮಯ ಇದಾಗಿದೆ ಎಂದು ಹೇಳಬಹುದು. ಇನ್ನು ಈ ಮಾರಾಟ ಮೇಳದಲ್ಲಿ ಯಾವ ಗ್ಯಾಜೆಟ್‌ಗಳ ಮೇಲೆ ಎಷ್ಟು ಕೊಡುಗೆ ನೀಡಲಾಗಿದೆ?, ಯಾವ ಗ್ಯಾಜೆಟ್ ಡೀಲ್‌ಗಳು ಬೆಸ್ಟ್ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ನಾವು ನಿಮಗಾಗಿ ಪಟ್ಟಿಮಾಡಿದ್ದೇವೆ.

1. ಹೆಚ್‌ಪಿ 15 ಕೋರ್ ಐ3 7 ಜೆನರೇಷನ್ (HP 15 Core i3 7th Gen 15-da0327TU Laptop)
15.6 ಇಂಚಿನ ಸ್ಕ್ರೀನ್ ಬ್ಯಾಕ್ಲಿಟ್ ಡಿಸ್ಪ್ಲೇಯ ಈ ಲ್ಯಾಪ್‌ಟಾಪ್ 2.18 ಕೆಜಿ ತೂಗುತ್ತದೆ. ಆನ್‌ಬೋರ್ಡಿಂಗ್ ವಿಂಡೋಸ್ 10 ಆಪರೇಟಿಂಗ್ ಕಾರ್ಯನಿರ್ವಹಣೆಯ ಈ ಲ್ಯಾಪ್‌ಟಾಪ್ ಪೂರ್ವ ಲೋಡ್ ಆಗಿರುವ ಎಂಎಸ್ ಆಫೀಸ್ ಹೋಮ್ ಮತ್ತು ವಿದ್ಯಾರ್ಥಿ 2016 ನೊಂದಿಗೆ ಲಭ್ಯವಿದೆ. ಇದರ ವಾಸ್ತವಿಕ ಬೆಲೆ. 37,900 ರೂ.ಗಳಾದರೆ, ಫ್ಲಿಪ್‌ಕಾರ್ಟ್ ಆಫರ್ ಬೆಲೆ ಕೇವಲ 32,490 ರೂ.ಗಳಾಗಿವೆ.

2. ಏಸರ್ ನೈಟ್ರೋ 5 ರೈಸನ್ 5(Acer Nitro 5 Ryzen 5 Quad Core AN515-42 Gaming Laptop)
ಏಸರ್ ಕಂಪೆನಿಯ ಏಸರ್ ನೈಟ್ರೋ 5 ರೈಸನ್ ಕ್ವಾಡ್ ಕೋರ್ ಎಎನ್ 515-42 ಗೇಮಿಂಗ್ ಲ್ಯಾಪ್‌ಟಾಪ್ 15.6 ಇಂಚಿನ ಪೂರ್ಣ ಹೆಚ್‌ಡಿ ಎಲ್ಇಡಿ-ಬ್ಯಾಕ್ಲಿಟ್ ಐಪಿಎಸ್ ಡಿಸ್ಪ್ಲೇನಲ್ಲಿ ಬಂದಿದೆ. ಇದು ಪೂರ್ವ-ಸ್ಥಾಪಿತವಾದ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು 5 ಗಂಟೆಗಳ ಬ್ಯಾಟರಿ ಸಾಮರ್ಥ್ಯದವರೆಗೆ 3220mAh Li-on ಬ್ಯಾಟರಿ ನೀಡುತ್ತದೆ. ಇದರ ವಾಸ್ತವಿಕ ಬೆಲೆ. 79,999 ರೂ.ಗಳಾದರೆ, ಫ್ಲಿಪ್‌ಕಾರ್ಟ್ ಆಫರ್ ಬೆಲೆ ಕೇವಲ 51,990 ರೂ.ಗಳಾಗಿವೆ.

3. ಡಬ್ಲ್ಯೂಡಿ ಎಲಿಮೆಂಟ್ಸ್ 1 ಟಿಬಿ ಹಾರ್ಡ್ ಡಿಸ್ಕ್ (WD Elements 1 TB Wired External Hard Disk Drive)
1 ಟಿಬಿ ಶೇಖರಣಾ ಸಾಮರ್ಥ್ಯವನ್ನು ಒಳಗೊಂಡಿರುವ ಈ ಡಬ್ಲ್ಯೂಡಿ ಎಲಿಮೆಂಟ್ಸ್ 1 ಟಿಬಿ ಹಾರ್ಡ್ ಡಿಸ್ಕ್ ಅತ್ಯಂತ ಹಗುರವಾದ ತೂಕದ್ದಾಗಿದೆ. ಯುಎಸ್‌ಬಿ 2.0 ಮತ್ತು ಯುಎಸ್‌ಬಿ 3.0 ನೊಂದಿಗೆ ಸಂಪರ್ಕ ಸಾಧಿಸಬಹುದಾದ ಇದರ ವಾಸ್ತವಿಕ ಬೆಲೆ. 5,298 ರೂ.ಗಳಾದರೆ, ಫ್ಲಿಪ್‌ಕಾರ್ಟ್ ಆಫರ್ ಬೆಲೆ ಕೇವಲ 3,799 ರೂ.ಗಳಾಗಿವೆ.

4.ಫಿಟ್‌ಬಿಟ್ ಚಾರ್ಜ್ 2 ಲಾರ್ಜ್ (Fitbit Charge 2 Large)
ನಿಮ್ಮ ಹೃದಯದ ಬಡಿತ, ಪ್ರಯಾಣದ ದೂರ, ಕ್ಯಾಲೊರಿ ಬರ್ನ್, ಸಕ್ರಿಯ ನಿಮಿಷಗಳು ಸೇರಿದಂತೆ ಬಹು ಕ್ರೀಡಾ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಈ ಫಿಟ್‌ಬಿಟ್ ಚಾರ್ಜ್ 2 ಲಾರ್ಜ್ ಗ್ಯಾಜೆಟ್ ಫಿಟ್‌ನೆಸ್ ಪ್ರಿಯರ ಅತ್ಯುತ್ತಮ ಗ್ಯಾಜೆಟ್‌ಗಳಲ್ಲಿ ಒಂದು. ಇದರ ವಾಸ್ತವಿಕ ಬೆಲೆ.14,999 ರೂ.ಗಳಾದರೆ, ಫ್ಲಿಪ್‌ಕಾರ್ಟ್ ಆಫರ್ ಬೆಲೆ ಕೇವಲ 7,499 ರೂ.ಗಳಾಗಿವೆ.

5. ನಿಕಾನ್ ಡಿ 3400 ಡಿಎಸ್ಎಲ್ಆರ್ (Nikon D3400 DSLR Camera)
ಸಿಎಮ್ಓಎಸ್ ಸಂವೇದಕಗಳೊಂದಿಗೆ 24.2 ಮೆಗಾಪಿಕ್ಸೆಲ್ ಲೆನ್ಸ್ ಹೊಂದಿರುವ ನಿಕಾನ್ ಡಿ 3400 ಡಿಎಸ್ಎಲ್ಆರ್ ಕ್ಯಾಮೆರಾ ಮೇಲೆ ಭಾರೀ ಆಫರ್ ನಿಡಲಾಗಿದೆ. ಇದರ ವಾಸ್ತವಿಕ ಬೆಲೆ.47,450 ರೂ.ಗಳಾದರೆ, ಫ್ಲಿಪ್‌ಕಾರ್ಟ್ ಆಫರ್ ಬೆಲೆ ಕೇವಲ 38,990ರೂ.ಗಳಾಗಿವೆ. ಡಿಎಸ್ಎಲ್ಆರ್ ಕ್ಯಾಮೆರಾ ಪ್ರಿಯರಿಗೆ ಇದು ಕೂಡ ಬೆಸ್ಟ್ ಡೀಲ್ ಎಂದು ಹೇಳಬಹುದು.

6. ಆಪಲ್ ಐಪ್ಯಾಡ್ 6ನೇ ಜನರೇಷನ್ (Apple iPad 6th Generation)
9.7 ಇಂಚಿನ ಕ್ವಾಡ್ ಹೆಚ್‌ಡಿ ಪ್ರದರ್ಶನದ 6ನೇ ಜನರೇಷನ್ ಆಪಲ್ ಐಪ್ಯಾಡ್ 32 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಎಂ10 ಪ್ರೊಸೆಸರ್, ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಹಾಗೂ 1.2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದ ಈ ಐಪ್ಯಾಡ್ ಈಗ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ.28,000 ರೂ.ಗಳಾದರೆ, ಫ್ಲಿಪ್‌ಕಾರ್ಟ್ ಆಫರ್ ಬೆಲೆ ಕೇವಲ 25,999 ರೂ.ಗಳಾಗಿವೆ.

7. ಸೋನಿ 310AP ವೈರ್ಡ್ ಹೆಡ್‌ಸೆಟ್( Sony 310AP Wired Headset with Mic)
ಮೈಕ್ ಜೊತೆಗೆ ಬಂದಿರುವ ಸೋನಿ 310AP ವೈರ್ಡ್ ಹೆಡ್‌ಸೆಟ್ ಈಗ ನಂಬಲಾರ್ಹವಾದ ಬೆಲೆಯಲ್ಲಿ ಈಗ ಲಭ್ಯವಿದೆ. 3.5mm ಜ್ಯಾಕ್ ಸಪೋರ್ಟ್ 30mm ಡೈನಾಮಿಕ್ ಹೆಡ್‌ಫೋನ್ ಆಗಿರುವ ಸೋನಿ 310AP ವೈರ್ಡ್ ಹೆಡ್‌ಸೆಟ್ ವಾಸ್ತವಿಕ ಬೆಲೆ. 2,190 ರೂ.ಗಳಾದರೆ, ಫ್ಲಿಪ್‌ಕಾರ್ಟ್ ಆಫರ್ ಬೆಲೆ ಕೇವಲ 999 ರೂ.ಗಳಾಗಿವೆ ಎಂದರೆ ನೀವು ನಂಬಲೇಬೇಕು.

8. ಸ್ಕಲ್‌ಕ್ಯಾಂಡಿ ಇಂಕ್ಡ್ ಹೆಡ್‌ಸೆಟ್( Skullcandy Ink'd Headset with Mic)
ಲ್ಯಾಪ್‌ಟಾಪ್, ಆಡಿಯೋ ಪ್ಲೇಯರ್, ಟ್ಯಾಬ್ಲೆಟ್ ಮತ್ತು ಮೊಬೈಲ್ ಫೋನ್‌ಗಳೊಂದಿಗೆ ಹೊಂದಿಕೊಳ್ಳುವ ಈ ಸ್ಕಲ್‌ಕ್ಯಾಂಡಿ ಇಂಕ್ಡ್ ಹೆಡ್‌ಸೆಟ್ ಮೈಕ್ರೊಫೋನ್‌ನೊಂದಿಗೆ ಬರುತ್ತವೆ. ಇದು ಕೂಡ ಭಾರೀ ಬೆಲೆಯನ್ನು ಕಳೆದುಕೊಂಡಿದ್ದು, ಇದರ ವಾಸ್ತವಿಕ ಬೆಲೆ. 1,699 ರೂ.ಗಳಾದರೆ, ಫ್ಲಿಪ್‌ಕಾರ್ಟ್ ಆಫರ್ ಬೆಲೆ ಕೇವಲ 899 ರೂ.ಗಳಾಗಿವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470