ಗೂಗಲ್ ಹೋಮ್ ಬ್ಲೂಟೂತ್ ಸಫೋರ್ಟ್ ಮಾಡಲಿದೆ: ನೀವು ಕೇಳಿದ ಪ್ರಶ್ನೆಗಳಿಗೆ ಉತ್ತರಸಲಿದೆ

By: Precilla Dias

ಗೂಗಲ್ ಬಿಡುಗಡೆ ಮಾಡಿರುವ ವಾಯ್ಸ್ ಅಸಿಸ್ಟೆಂಟ್ 'ಗೂಗಲ್ ಹೋಮ್’ ಸದ್ಯ ಬ್ಲೂಟೂತ್ ಗೆ ಸಫೋರ್ಟ್ ಮಾಡಲಿದೆ. ಸದ್ಯ ಹೊಸದಾಗಿ ಲಭ್ಯವಿರುವ ಅಪ್ಡೇಟ್ ನಲ್ಲಿ ಈ ಆಯ್ಕೆಯನ್ನು ನೀಡಲಾಗಿ ಎನ್ನಲಾಗಿದೆ. ಗೂಗಲ್ ಹೋಮ್ ಇನ್ನು ಮುಂದೆ ಬ್ಲೂಟೂತ್ ಆಡಿಯೋ ಡಿವೈಸ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಗೂಗಲ್ ಹೋಮ್ ಬ್ಲೂಟೂತ್ ಸಫೋರ್ಟ್ ಮಾಡಲಿದೆ

ಬಳಕೆದಾರರು ಈ ಹೊಸ ಆಪ್ಡೇಟ್ ಅನ್ನು ಮ್ಯಾನುವಲಿ ತಿಳಿಯಬಹುದಾಗಿದ್ದು, ಸೆಟ್ಟಿಂಗ್ಸ್ ಮೆನುವಿನಲ್ಲಿ ಹೊಸ ಆಯ್ಕೆ 'ಪೇರ್ಡ್ ಬ್ಲೂಟೂತ್ ಡಿವೈಸ್’ ಸೆಲೆಕ್ಷನ್ ಅನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ಗಳನ್ನು ಗೂಗಲ್ ಹೋಮ್ ನೊಂದಿಗೆ ಪೇರ್ ಮಾಡಿಕೊಳ್ಳಬಹುದಾಗಿದೆ. ಹೋಮ್ ಅನ್ನು ಸ್ಮಾರ್ಟ್ ಸ್ಪೀಕರ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಬಹುದು.

ಇದಲ್ಲದೇ ಗೂಗಲ್ ನೀಡಿರುವ ಹೊಸ ಆಪ್ಡೇಟ್ ನಲ್ಲಿ ಹೊಸ ಹೊಸ ಆಯ್ಕೆಗಳನ್ನು ಬಿಡುಗಡೆ ಮಾಡಲಿದೆ. ಮಲ್ಟಿ ಯೂಸರ್ ಗಳು ಒಮ್ಮೆಗೆ ಗೂಗಲ್ ಹೋಮ್ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಗೂಗಲ್ ಹೋಮ್ ಒಟ್ಟು 6 ವಾಯ್ಸ್ ಗಳನ್ನು ಕಂಡುಹಿಡಿಯಲು ಶಕ್ತವಾಗಿದೆ. ಇದು ಮನೆಮಂದಿಯ ವಾಯ್ಸ್ ಗಳನ್ನು ಗುರುತು ಇಟ್ಟುಕೊಳ್ಳಲಿದೆ.

ಗೂಗಲ್ ಹೋಮ್ ಒಂದು ಲೋಟದ ಗಾತ್ರದಲ್ಲಿ ಇರಲಿದ್ದು, ಇದು ನೀವು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಬುದ್ದಿವಂತಿಕೆಯನ್ನು ಹೊಂದಿದೆ ಎನ್ನಲಾಗಿದೆ. ಇದು ನಿಮ್ಮ ಧ್ವನಿಯನ್ನು ಕೇಳಿಕೊಂಡು ನೀವು ಯಾರು ಎಂಬುದನ್ನು ಗುರುತಿಸಿ ಉತ್ತರವನ್ನು ನೀಡಲಿದೆ.

ಇದೇ ಗೂಗಲ್ ಹೋಮ್ ವರ್ಚುವಲ್ ಅಸಿಸ್ಟೆಂಟ್ ಸಾಫ್ಟ್ ವೇರ್ ಅನ್ನು ಗೂಗಲ್ ಅಸಿಸ್ಟೆಂಟ್ ಎಂದು ನೀಡಲಾಗಿದ್ದು, ಇದನ್ನು ಗೂಗಲ್ ಪಿಕ್ಸಲ್ ನಲ್ಲಿ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದೆ.

ಗೂಗಲ್ ಹೋಮ್ ಕೇವಲ ನೀವು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡುವುದಲ್ಲದೇ ಹವಾಮಾನದ ಮಾಹಿತಿ, ಟ್ರಾಫಿಕ್ ಬಗ್ಗೆ ಮಾಹಿತಿ, ಅಲ್ಲದೇ ನ್ಯೂಸ್ ಸೇರಿದಂತೆ ಹಲವು ಮಾಹಿತಿಗಳನ್ನು ನಿಮಗೆ ನೀಡಲಿದೆ. ಅಲ್ಲದೇ ನೀವು ಅಡುಗೆ ಮಾಡುವ ಸಂದರ್ಭದಲ್ಲಿ ನಿಮಗೆ ಬೇಕಾದ ರೆಸಿಪಿಯನ್ನು ಇದು ನೀಡಲಿದೆ. ಒಟ್ಟಿನಲ್ಲಿ ಇಂದಿನ ತಲೆ ಮಾರಿಗೆ ಇದು ಹೇಳಿ ಮಾಡಿಸಿದಂತೆ ಇದು ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

Read more about:
English summary
Google's voice-activated assistant, Google Home now carries support for Bluetooth streaming.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot