ಹುವಾವೆ ಕ್ಲಾಸಿಕ್ ಸ್ಮಾರ್ಟ್ ವಾಚ್: ವಿಶೇಷ ವಿನ್ಯಾಸ ಹೊಂದಿದೆ

Written By: Lekhaka

ಹೊಸ ಮಾದರಿಯ ಸ್ಮಾರ್ಟ್ ವಾಚ್ ಗಳನ್ನು ಹವಾವೆ ಕಂಪನಿಯು ಬಿಡುಗಡೆ ಮಾಡಿದ್ದು, ಹುವಾವೆ ವಾಚ್ 2 ಪ್ರೊ ಚೀನಾದಲ್ಲಿ ಕಾಣಿಸಿಕೊಂಡಿದೆ. ಕ್ಲಾಸಿಕ್ ವಿನ್ಯಾಸದಲ್ಲಿರುವ ಈ ವಾಚ್ ನೋಡಲು ಬಲು ಸುಂದರವಾಗಿದೆ.

ಹುವಾವೆ ಕ್ಲಾಸಿಕ್ ಸ್ಮಾರ್ಟ್ ವಾಚ್: ವಿಶೇಷ ವಿನ್ಯಾಸ ಹೊಂದಿದೆ

ಈ ಹುವಾವೆ ವಾಚ್ 2 ಪ್ರೊ ಸ್ಮಾರ್ಟ್ ಫೋನ್ eSIM ಸಫೋರ್ಟ್ ಮಾಡಲಿದ್ದು, ಆಂಡ್ರಾಯ್ಡ್ ವೆರ್ 2.0 ಸಪೋರ್ಟ್ ಮಾಡಲಿದೆ. ಅಲ್ಲದೇ ಇದು ಆಂಡ್ರಾಯ್ಡ್, iSO ಸೇರಿದಂತೆ ಎಲ್ಲಾ ಮಾದರಿಯ ಫೋನ್ ಜೊತೆ ಕನೆಕ್ಟ್ ಆಗಲಿದೆ.

ಈ ಹುವಾವೆ ವಾಚ್ 2 ಪ್ರೊ 4G/3G/2G ಸಪೋರ್ಟ್ ಮಾಡಲಿದ್ದು, ಬ್ಲೂಟೂತ್, ವೈ-ಫೈ, GPS, NFC ಸೇರಿದಂತೆ ಎಲ್ಲಾ ಮಾದರಿಯ ಕನೆಕ್ಟಿಟಿಗಳನ್ನು ಹೊಂದಿದೆ. ಹುವಾವೆ ಪ್ಲೇ, ಆಲಿ ಪ್ಲೇ, ವಿಚಾಟ್ ಪ್ಲೇ ಸಪೋರ್ಟ್ ಮಾಡಲಿದೆ.

ಹುವಾವೆ ಕ್ಲಾಸಿಕ್ ಸ್ಮಾರ್ಟ್ ವಾಚ್: ವಿಶೇಷ ವಿನ್ಯಾಸ ಹೊಂದಿದೆ

ಹುವಾವೆ ವಾಚ್ 2 ಪ್ರೊ 1.2 ಇಂಚಿನ ಅಮೊಲೈಡ್ ಡಿಸ್ ಪ್ಲೇಯನ್ನು ಹೊಂದಿದೆ. ಗೊರಿಲ್ಲ ಗ್ಲಾಸ್ ಸುರಕ್ಷತೆಯೂ ಇದಕ್ಕಿದೆ. 786 MB RAM ಮತ್ತು 4G ROM ಈ ವಾಚ್ ನಲ್ಲಿ ಕಾಣಬಹುದಾಗಿದ್ದು, ಕ್ವಾಲ್ಕಮ್ ಸ್ನಾಪ್ ಡ್ರಾಗನ್ ಪ್ರೋಸೆಸರ್ ಸಹ ಇದರಲ್ಲಿದೆ.

420mAh ಬ್ಯಾಟರಿ ಅಳವಡಿಸಲಾಗಿದ್ದು, ವಾಟರ್, ಡಸ್ಟ್ ಪ್ರೂಫ್ ಆಗಿದೆ ಎನ್ನಲಾಗಿದೆ. ವಿವಿಧ ಮಾದರಿಯ ಸೆಸ್ಸರ್ ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಇದರ ಬೆಲೆ ಬಂದು ರೂ.25,343 ರೂಗಳಾಗಲಿದೆ.

ಶಿಯೋಮಿ ರೆಡ್ ಮಿ ನೋಟ್ 5 ಶೀಘ್ರವೇ ಲಾಂಚ್: ವಿಶೇಷತೆಗಳೇನು..?

Read more about:
English summary
Huawei has announced a new smartwatch dubbed as Huawei Watch 2 Pro in China.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot