Subscribe to Gizbot

ರೂ 1,499 ಕ್ಕೆ ಪಿಟ್ರೋನ್ ಸ್ಮಾರ್ಟ್ ವಾಚ್ ಲಾಂಚ್

Written By:

ಭಾರತದ ನಂಬರ್ ಒನ್ ಸ್ಥಾನದಲ್ಲಿರುವ ಟೆಕ್ ಆಕ್ಸೆಸರೀಸ್ ಇ ಟೈಲರ್ PTron Tronite One ಲಾಂಚ್ ಅನ್ನು ತನ್ನ ಸೈಟ್‌ನಲ್ಲಿ ಖಾತ್ರಿಪಡಿಸಿದೆ. ಇದೊಂದು ಮಲ್ಟಿ ಫಂಕ್ಶನಲ್ ಮೊಬೈಲ್ ಡಿವೈಸ್ ಆಗಿದ್ದು ಇದನ್ನು ಮಣಿಗಂಟಿಗೆ ಕಟ್ಟಿಕೊಳ್ಳಬಹುದಾಗಿದೆ. ಹೊಸ ಜನರೇಶನ್ ಸ್ಮಾರ್ಟ್ ವಾಚ್ ಅನ್ನು ಪಿಟ್ರೋನ್ ಪ್ರಸ್ತುತಪಡಿಸಿದ್ದು ಲೇಟೆಸ್ಟ್ ಒನ್ ಡಾಟ್ ಕಾಮ್‌ನಲ್ಲಿ ಇದು ಲಭ್ಯವಿದೆ.

ರೂ 1,499 ಕ್ಕೆ ಪಿಟ್ರೋನ್ ಸ್ಮಾರ್ಟ್ ವಾಚ್ ಲಾಂಚ್

ಪಿಟ್ರೋನ್ ಮೂರು ಬೇರೆ ಬೇರೆ ರೀತಿಯ ವಿನ್ಯಾಸದ ಸ್ಮಾರ್ಟ್ ವಾಚ್‌ಗಳನ್ನು ಪ್ರಸ್ತುತಪಡಿಸಿದ್ದು ಸುಧಾರಿತ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ನಾಲ್ಕನೇ ಸ್ಥಾನವನ್ನು ಕಂಪೆನಿ ಪಡೆದುಕೊಂಡಿದೆ. ಕಂಪೆನಿಯ ಫಿಟ್‌ನೆಸ್ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಒಂದು ಲಕ್ಷ ಗುರುತನ್ನು ಕಂಡುಕೊಂಡಿದೆ. ಗ್ರಾಹಕರ, ಬಳಕೆದಾರರ ಇಚ್ಛೆಯನ್ನು ಅರಿತುಕೊಂಡು ಕಂಪೆನಿ ಡಿವೈಸ್‌ಗಳನ್ನು ಪ್ರಸ್ತುತಪಡಿಸುತ್ತಿದ್ದು ನಿರಂತರ ಅನ್ವೇಷಣೆಯನ್ನು ಮಾಡಿ ನಂತರವಷ್ಟೇ ಡಿವೈಸ್‌ಗಳನ್ನು ಸಿದ್ಧಪಡಿಸುತ್ತದೆ.

ರೂ 1,499 ಕ್ಕೆ ಪಿಟ್ರೋನ್ ಸ್ಮಾರ್ಟ್ ವಾಚ್ ಲಾಂಚ್

ಫೀಚರ್ಸ್:

  • ಮೆಟಲ್ ಕೇಸ್ ಜೊತೆಗೆ ಕ್ವಾಲಿಟಿ ಸಿಲಿಕಾನ್ ಸ್ಟ್ರೇಪ್
  • 1.54 ಇಂಚಿನ ಹೈ ಸೆನ್ಸಿಟಿ ಕ್ಯಾಪಸಿಟೀವ್ ಟಚ್
  • 0.3 ಎಮ್‌ಪಿ ಕ್ಯಾಮೆರಾ ಮತ್ತು ಮೈಕ್ರೋ ಸಿಮ್ ಕಾರ್ಡ್ ಸ್ಲಾಟ್
  • 240*240 ಪಿಕ್ಸೆಲ್ ರೆಸಲ್ಯೂಶನ್
  • ಬ್ಲ್ಯೂಟೂತ್ 3.0
  • 3.7v/ 380 mAh ಲಯಾನ್ ಬ್ಯಾಟರಿ
  • 32 ಜಿಬಿವರೆಗೆ ಬೆಂಬಲ
  • ಕರೆ ಸ್ವೀಕರಿಸುವಿಕೆ, ಪಠ್ಯ ಸಂದೇಶ ಮತ್ತು ಇಮೇಲ್ ಕಳುಹಿಸಬಹುದು
  • ಐಫೋನ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಿಗೆ ಬೆಂಬಲ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
LatestOne.com, India's No.1 Mobile and Tech Accessories e-tailer has announced the launch of PTron Tronite One on their site.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot