ಭಾರತದಲ್ಲಿ ಲಾಂಚ್‌ ಆಯ್ತು ಮೈಕ್ರೊಸಾಫ್ಟ್‌ ಲ್ಯಾಪ್‌ಟಾಪ್, ಸರ್ಫೇಸ್ ಬುಕ್ 2..!

|

ಮೈಕ್ರೋಸಾಫ್ಟ್ ಸಂಸ್ಥೆ ಅಂತಿಮವಾಗಿ ಸರ್ಫೇಸ್ ಲ್ಯಾಪ್ ಟಾಪ್ ಮತ್ತು ಸರ್ಫೇಸ್ ಬುಕ್ 2 ವನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಹೈ ಎಂಡ್ ಹಾರ್ಡ್ ವೇರ್ ಗಳನ್ನು ಇದು ಒಳಗೊಂಡಿದೆ.ಸರ್ಫೇಸ್ ಲ್ಯಾಪ್ ಟಾಪ್ ನ ಆರಂಭಿಕ ಬೆಲೆ 86,999 ರುಪಾಯಿ ಆಗಿದೆ. ಸರ್ಫೇಸ್ ಬುಕ್ 2 ನ ಆರಂಭಿಕ ಬೆಲೆ 1,37,999. ಎರಡು ಡಿವೈಸ್ ಗಳು ಆನ್ ಲೈನ್ ಫ್ಲಿಪ್ ಕಾರ್ಟ್, ಅಮೇಜಾನ್ ಇಂಡಿಯಾ ಪೇಟಿಎಂ ಗಳಲ್ಲಿ ಖರೀದಿಗೆ ಲಭ್ಯವಿದೆ ಅಷ್ಟೇ ಅಲ್ಲ ಆಫ್ ಲೈನ್ ಮಾರಾಟ ಮಳಿಗೆಗಳಲ್ಲೂ ಕೂಡ ಖರೀದಿಸುವ ಅವಕಾಶ ಗ್ರಾಹಕರಿಗಿದೆ.

ಸರ್ಫೇಸ್ ಬುಕ್ 2 ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಿತ್ತು ಅದರ ಜೊತೆಗೆ ವಿಂಡೋಸ್ 10 ಕ್ರಿಯೇಟರ್ ಅಪ್ ಡೇಟ್ ಕೂಡ ಆಗಿತ್ತು. ಇದರಲ್ಲಿ 8ನೇ ಜನರೇಷನ್ ನ ಇಂಟೆಲ್ ಕೋರ್ ಪ್ರೊಸೆಸರ್ ಮತ್ತು NVIDIA ಗೀಫೋರ್ಸ್ GTX 1050 ಮತ್ತು 1060 ಡಿಸ್ಕ್ರಿಯೇಟ್ ಗ್ರಾಫಿಕ್ ನ್ನು ಒಳಗೊಂಡಿದೆ. ಓರಿಜಿನಲ್ ಸರ್ಫೇಸ್ ಬುಕ್ 2 ಗಿಂತ ಸುಮಾರು 5 ಪಟ್ಟು ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪೆನಿಯು ಹೇಳುತ್ತಿದೆ. ಆಪಲ್ ಮ್ಯಾಕ್ ಬುಕ್ ಪ್ರೋ ಗಿಂತ ಎರಡು ಪಟ್ಟು ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಲಾಂಚ್‌ ಆಯ್ತು ಮೈಕ್ರೊಸಾಫ್ಟ್‌  ಲ್ಯಾಪ್‌ಟಾಪ್, ಸರ್ಫೇಸ್ ಬುಕ್ 2..!

ಸರ್ಫೇಸ್ ಬುಕ್ 2 ಎರಡು ಸೈಜ್ ನಲ್ಲಿ ಆಫರ್ ಮಾಡಲಾಗಿತ್ತು. 13.5-ಇಂಚಿನ ವೇರಿಯಂಟ್ ಜೊತೆಗೆ 3000x2000 ಪಿಕ್ಸಲ್ ರೆಸಲ್ಯೂಷನ್ ಮತ್ತು 15-ಇಂಚಿನ ಆಯ್ಕೆಯೊಂದಿಗೆ 3240x2160 ಪಿಕ್ಸಲ್ ರೆಸಲ್ಯೂಷನ್ ನ್ನು ಇದು ಹೊಂದಿತ್ತು. ಸ್ಕ್ರೀನ್ ಡಿಟ್ಯಾಚೇಬಲ್ ಆಗಿದ್ದು ಟ್ಯಾಬ್ಲೆಟ್ ರೀತಿಯಲ್ಲೂ ನೀವು ಇದನ್ನು ಬಳಕೆ ಮಾಡಬಹುದು. ಎರಡೂ ವೇರಿಯಂಟ್ ನ ಅನುಪಾತವು 3:2 ಆಗಿದೆ ಮತ್ತು ಮೈಕ್ರೋಸಾಫ್ಟ್ ಹೇಳುವ ಪ್ರಕಾರ 17 ತಾಸುಗಳ ವೀಡಿಯೋ ಪ್ಲೇಬ್ಯಾಕ್ ಕೇಳುವ ಸಾಮರ್ಥ್ಯ ಇದಕ್ಕಿದೆ. ಆಪಲ್ ಮ್ಯಾಕ್ ಬುಕ್ ಪ್ರೋ ಗಿಂತ ಶೇಕಡಾ 70 ರಷ್ಟು ಹೆಚ್ಚಿನ ಸಾಮರ್ಥ್ಯ ಇದಾಗಿದೆ. ಟ್ಯಾಬ್ಲೆಟ್ ಮಾತ್ರವೇ ಮಾಕ್ರೋಸಾಫ್ಟ್ ಹೇಳುವಂತೆ 5 ಘಂಟೆಗಳ ಬ್ಯಾಟರಿ ಲೈಫ್ ನ್ನು ಸರ್ಫೇಸ್ ಬುಕ್ 2 ನೀಡುತ್ತದೆ.

ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಯುಎಸ್ ಬಿ 3.0 ಟೈಪ್ –ಎ ಪೋರ್ಟ್, ಫುಲ್ ಸೈಜ್ ಎಸ್ ಡಿ ಕಾರ್ಡ್ ರೀಡರ್ ಮತ್ತು 3.5 ಎಂಎಂ ಹೆಡ್ ಫೋನ್ ಜ್ಯಾಕ್ ನ್ನು ಇದು ಹೊಂದಿದೆ. Wi-Fi 802.11ac ಮತ್ತು ಬ್ಲೂಟೂತ್ 4.1 ಎಲ್ ಇ ಯನ್ನು ಒಳಗೊಂಡಿದೆ. 8 ಮೆಗಾ ಪಿಕ್ಸಲ್ ನ ಹಿಂಭಾಗದ ಕ್ಯಾಮರಾ ಮತ್ತು 5-ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾವನ್ನು ಇದು ಹೊಂದಿದೆ.

ಸರ್ಫೇಸ್ ಲ್ಯಾಪ್ ಟಾಪ್ ಕಳೆದ ವರ್ಷ ಮೇ ನಲ್ಲಿ ಬಿಡುಗಡೆಯಾಗಿತ್ತು ಮತ್ತು ಇದು 13.5 ಇಂಚಿನ ಪಿಕ್ಸಲ್ ಸೆನ್ಸ್ ಡಿಸ್ಪ್ಲೇ ಜೊತೆಗೆ 3:2 ಅನುಪಾತವನ್ನು ಹೊಂದಿದೆ. ಮತ್ತು 16ಜಿಬಿ ಮೆಮೊರಿ ಜೊತೆಗೆ 512 ಜಿಬಿ ಎಸ್ಎಸ್ ಡಿ ಯನ್ನು ಹೊಂದಿದೆ.

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್ ಟಾಪ್, ಸರ್ಫೇಸ್ ಬುಕ್ 2: ಬೆಲೆ

ಸರ್ಫೇಸ್ ಲ್ಯಾಪ್ ಟಾಪ್ :

ಭಾರತದಲ್ಲಿ ಲಾಂಚ್‌ ಆಯ್ತು ಮೈಕ್ರೊಸಾಫ್ಟ್‌  ಲ್ಯಾಪ್‌ಟಾಪ್, ಸರ್ಫೇಸ್ ಬುಕ್ 2..!

ಇಂಟೆಲ್ ಕೋರ್ i5, 128ಜಿಬಿ ಎಸ್ಎಸ್ ಡಿ, 8ಜಿಬಿ ಮೆಮೊರಿ, ಇಂಟೆಲ್ ಹೆಚ್ ಡಿ ಗ್ರಾಫಿಕ್ಸ್ 620: ರುಪಾಯಿ 86,999

ಇಂಟೆಲ್ ಕೋರ್ i5, 256ಜಿಬಿ ಎಸ್ಎಸ್ ಡಿ, 8ಜಿಬಿ ಮೆಮೊರಿ, ಇಂಟೆಲ್ ಹೆಚ್ ಡಿ ಗ್ರಾಫಿಕ್ಸ್ 620: ರುಪಾಯಿ 1,14,999

ಇಂಟೆಲ್ ಕೋರ್ i7, 256ಜಿಬಿ ಎಸ್ಎಸ್ ಡಿ, 8ಜಿಬಿ ಮೆಮೊರಿ, ಇಂಟೆಲ್ ಐರಿಸ್ ಪ್ಲಸ್ ಗ್ರಾಫಿಕ್ಸ್ 640: ರುಪಾಯಿ 1,44,999

ಇಂಟೆಲ್ ಕೋರ್ i7, 512ಜಿಬಿ ಎಸ್ಎಸ್ ಡಿ, 16ಜಿಬಿ ಮೆಮೊರಿ, ಇಂಟೆಲ್ ಐರಿಸ್ ಪ್ಲಸ್ ಗ್ರಾಫಿಕ್ಸ್ 640: ರುಪಾಯಿ 1,96,999

ಇಂಟೆಲ್ ಕೋರ್ i7, 1ಟಿಬಿ ಎಸ್ಎಸ್ ಡಿ, 16ಜಿಬಿ ಮೆಮೊರಿ, ಇಂಟೆಲ್ ಐರಿಸ್ ಪ್ಲಸ್ ಗ್ರಾಫಿಕ್ಸ್ 640: ರುಪಾಯಿ 2,33,999

ಸರ್ಫೇಸ್ ಬುಕ್ 2 :

13.5-ಇಂಚು, 256ಜಿಬಿ ಎಸ್ಎಸ್ ಡಿ, 8ಜಿಬಿ ಮೆಮೊರಿ, ಇಂಟೆಲ್ ಕೋರ್ i5, Intel UHD Graphics 620: ರುಪಾಯಿ 1,37,999

13.5-ಇಂಚು, 256ಜಿಬಿ ಎಸ್ಎಸ್ ಡಿ, 8ಜಿಬಿ ಮೆಮೊರಿ, ಇಂಟೆಲ್ ಕೋರ್ i7, Nvidia GeForce GTX 1050: ರುಪಾಯಿ 1,85,999

13.5-ಇಂಚು, 512ಜಿಬಿ ಎಸ್ಎಸ್ ಡಿ, 16ಜಿಬಿ ಮೆಮೊರಿ, ಇಂಟೆಲ್ ಕೋರ್ i7, Nvidia GeForce GTX 1050: ರುಪಾಯಿ 2,22,999

15-ಇಂಚು, 256ಜಿಬಿ ಎಸ್ಎಸ್ ಡಿ, 16ಜಿಬಿ ಮೆಮೊರಿ, ಇಂಟೆಲ್ ಕೋರ್ i7, Nvidia GeForce GTX 1060: ರುಪಾಯಿ 2,22,499

13.5-ಇಂಚು display, 1ಟಿಬಿ ಎಸ್ಎಸ್ ಡಿ, 16ಜಿಬಿ ಮೆಮೊರಿ, ಇಂಟೆಲ್ ಕೋರ್ i7, Nvidia GeForce GTX 1050: ರುಪಾಯಿ 2,57,999

15-ಇಂಚು, 512ಜಿಬಿ ಎಸ್ಎಸ್ ಡಿ, 16ಜಿಬಿ ಮೆಮೊರಿ, ಇಂಟೆಲ್ ಕೋರ್ i7, Nvidia GeForce GTX 1060: ರುಪಾಯಿ 2,58,999

15-ಇಂಚು, 1ಟಿಬಿ ಎಸ್ಎಸ್ ಡಿ, 16ಜಿಬಿ ಮೆಮೊರಿ, ಇಂಟೆಲ್ ಕೋರ್ i7, Nvidia GeForce GTX 1060: ರುಪಾಯಿ 2,95,999

Best Mobiles in India

English summary
Microsoft Surface Laptop, Surface Book 2 finally land in India, price starts from RS. 86,999. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X