ಮಾರುಕಟ್ಟೆಗೆ ಬಂದಿದೆ ರಿಕೊ ಪ್ರೋಜೆಕ್ಟರ್ ಗಳು..!

PJ 52440, PJx2440 ಮತ್ತು PJWX2400 ಎಂಬ ಮೂರು ಮಾದರಿಯ ಪ್ರೋಜೆಕ್ಟರ್ ಗಳನ್ನು ಲಾಂಚ್ ಮಾಡಿದ್ದು, ಇವು ಅತೀ ಕಡಿಮೆ ತೂಕದ ಆರಾಮವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಹುದಾದ ಪ್ರೋಜೆಕ್ಟರ್ ಗಳಾಗಿದೆ.

By Lekhaka
|

ರಿಕೊ ಇಂಡಿಯಾ ಮಾರುಕಟ್ಟೆಗೆ ಹೊಸ ಮಾದರಿಯ ಪ್ರೋಜೆಕ್ಟರ್ ಗಳನ್ನು ಲಾಂಚ್ ಮಾಡಿದೆ. ಇವು ಹೊಸ ಸರಣಿಯ ಪ್ರೋಜೆಕ್ಟರ್ ಗಳಾಗಿದ್ದು, ನೂತನವಾಗಿ ಮತ್ತು ಆಧುನೀಕವಾಗಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ಬಂದಿದೆ ರಿಕೊ ಪ್ರೋಜೆಕ್ಟರ್ ಗಳು..!

PJ 52440, PJx2440 ಮತ್ತು PJWX2400 ಎಂಬ ಮೂರು ಮಾದರಿಯ ಪ್ರೋಜೆಕ್ಟರ್ ಗಳನ್ನು ಲಾಂಚ್ ಮಾಡಿದ್ದು, ಇವು ಅತೀ ಕಡಿಮೆ ತೂಕದ ಆರಾಮವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಹುದಾದ ಪ್ರೋಜೆಕ್ಟರ್ ಗಳಾಗಿದೆ,

ಈ ಪ್ರೋಜೆಕ್ಟರ್ ಗಳನ್ನು ಕಾನ್ಫರೆನ್ಸ್ ರೂಮ್ ಮತ್ತು ಕ್ಲಾಸ್ ರೂಮ್ ಗಳಲ್ಲಿ ಬಳಸಲು ಸುಲಭವಾಗುವಂತೆ ವಿನ್ಯಾಸ ಮಾಡಲಾಗಿದ್ದು, ಉತ್ತಮವಾದ ಕನೆಕ್ಟಿವಿಟಿಯ ಸೌಲಭ್ಯವನ್ನು ಹೊಂದಿವೆ ಎನ್ನಲಾಗಿದೆ. ಇಮೇಜ್ ಗಳು ವಿಡಿಯೋಗಳು ಮತ್ತು ಪ್ರಸಟೆಷನ್ ಗಳನ್ನು ಮಾಡಲು ಉತ್ತಮವಾಗಿದೆ.

ಇದು 30 ಇಂಚಿನಿಂದ 300 ಇಂಚಿನ ಅಗಲದ ವರೆಗೂ ವೈಡ್ ಆಗಲ್ ನಲ್ಲಿ ಪ್ರೋಜೆಕ್ಷನ್ ಮಾಡಲಿದೆ. ಈ ಮೂರು ಮಾಡಲ್ ಗಳು ಉತ್ತಮ ಬಣ್ಣಗಳನ್ನು ಹೊಂದಿದ್ದು, ಶಾರ್ಪ್ ಮತ್ತು ಕ್ಲಿಯರ್ ಆಗಿ ಕಾಣಿಸುವಂತೆ ಮಾಡಲಿದೆ.

ಇವುಗಳನ್ನು ಡಿಜಿಟಲ್ ಲೈಟ್ ಪ್ರೋಸೆಸಿಂಗ್ ಟೆಕ್ನಾಲಜಿಯನ್ನು ಬಳಸಿಕೊಂಡು ನಿರ್ಮಿಸಲಾಗಿದ್ದು, ಲೋ ಲೈಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಆಫೀಸ್, ಕ್ಲಾಸ್ ರೂಮ್ ಮತ್ತು ಕಾನ್ಫರೆನ್ಸ್ ರೂಮ್ ಗಳಲ್ಲಿ ಬಳಕೆ ಮಾಡಿಕೊಳ್ಳಲು ಇದು ಸಹಾಯಕವಾಗಿದೆ.

ಇದರಲ್ಲಿ PJ2440 ವಿವಿಡ್ ಕಲರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಉತ್ತಮವಾಗಿ ಹೆಚ್ಚು ಬ್ರೈಟ್ ಆಗಿ ಇಮೇಜ್ ಗಳನ್ನು ತೋರಿಸಲಿದೆ. ಈ ಸರಣಿಯ ಎಲ್ಲ ಪ್ರೋಜೆಕ್ಟರ್ ಗಳು ಇಂಟರ್ನಲ್ ಸ್ಪೀಕರ್ ಹೊಂದಿದ್ದು, ಅಲ್ಲಿಯೇ ಧ್ವನಿಯನ್ನು ಕೇಳುವಂತೆ ವಿನ್ಯಾಸ ಮಾಡಲಾಗಿದೆ. ಈ ಪ್ರೋಜೆಕ್ಟರ್ ಗಳಲ್ಲಿ ಇರುವ ಲಾಂಪ್ 5000 ಗಂಟೆಗಳಿಂದ 6000 ಗಂಟೆಗಳ ಕಾಲ ಬಾಳಿಕೆ ಬರಲಿದೆ.

ರಿಕೊ 52440:

ರಿಕೊ 52440:

ಇದು ಎಂಟ್ರಿ ಲೆವೆಲ್ ಪ್ರೋಜೆಕ್ಟರ್ ಆಗಿದೆ. ಇಮೇಜ್ ಗಳು ವಿಡಿಯೋಗಳು ಮತ್ತು ಪ್ರಸಟೆಷನ್ ಗಳನ್ನು ಮಾಡಲು ಉತ್ತಮವಾಗಿದೆ. ಇದು 2.5 ಕೆ.ಜಿ ತೂಕವಿದೆ. ಅಲ್ಲದೇ HDMI ಆಯ್ಕೆಯೂ ಇದೆ.

ರಿಕೊ PJX2440 ಮತ್ತು PJWX2440:

ರಿಕೊ PJX2440 ಮತ್ತು PJWX2440:

ಈ ಎರಡು ಮಾದರಿಯ ಪ್ರೋಜೆಕ್ಟರ್ ಗಳು 3D ಮಾದರಿಯಲ್ಲಿಯೂ ಕಾರ್ಯನಿರ್ವಹಿಸಲಿದೆ. ಇದನ್ನು ಡೆಸ್ಕ್ ಟಾಪ್, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಡಿವಿಡಿ ಮತ್ತು ಬ್ಲೂರೇ ಪ್ಲೇಯರ್ ಗಳಿಂದಲೂ ಸಂಪರ್ಕ ಸಾಧಿಸಬಹುದಾಗಿದೆ. ಅಲ್ಲದೇ ಈ ಮಾಡಲ್ ಗಳಲ್ಲಿ ವೈಫೈ ಡಾಂಗಲ್ ಸಹ ಬಳಕೆ ಮಾಡಿಕೊಳ್ಳಬಹುದಾಗಿದೆ.

ಭಾರತದಲ್ಲಿ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಹಾನರ್.!!ಭಾರತದಲ್ಲಿ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಹಾನರ್.!!

ಬೆಲೆಗಳು:

ಬೆಲೆಗಳು:

ರಿಕೊ PJ 52440 ಬೆಲೆ ರೂ. 32,450 ಆಗಿದ್ದು, PJX2440 ಬೆಲೆ ರೂ.37,760 ಮತ್ತು PJWX2440 ಬೆಲೆ ರೂ.45,910 ಆಗಲಿದೆ.

Best Mobiles in India

Read more about:
English summary
Ricoh, a premier provider of Imaging Solutions and IT services today announced the launch of its new series of Innovative projectors in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X