ಸ್ಮಾರ್ಟ್‌ ಭಾರತಕ್ಕಾಗಿ ಸ್ಯಾಮ್‌ಸಂಗ್‌ನಿಂದ ಸ್ಮಾರ್ಟ್‌ಫ್ರಿಡ್ಜ್‌ ಬಿಡುಗಡೆ..!

By GizBot Bureau
|

ನೀವೊಂದು ಮಾರ್ಕೆಟ್ ನಲ್ಲಿ ಇರುತ್ತೀರಿ. ಮನೆಯ ಫ್ರಿಡ್ಜ್ ಲ್ಲಿ ಯಾವೆಲ್ಲ ವಸ್ತುಗಳಿದೆ? ಯಾವೆಲ್ಲ ತರಕಾರಿಗಳಿದೆ. ಇವತ್ತು ಯಾವುದನ್ನು ಮಾರುಕಟ್ಟೆಯಲ್ಲಿ ಖರೀದಿಸಿ ಹೋಗಬೇಕು ಎಂದು ನಿಮಗೆ ನೆನಪು ಮಾಡಿಕೊಳ್ಳೋಕೆ ಸಾಧ್ಯವಾಗದಿದ್ದರೆ ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ.

ಯಾಕೆಂದರೆ ನಿಮ್ಮ ಫ್ರಿಡ್ಜ್ ಒಳಗೆ ಏನೆಲ್ಲಾ ಇಟ್ಟಿದ್ದೀರಿ ಅನ್ನುವುದನ್ನು ಇನ್ನು ಮುಂದೆ ಫ್ರಿಡ್ಜ್ ಬಾಗಿಲು ತೆಗೆದು ನೋಡುವ ಅಗತ್ಯವಿಲ್ಲ. ಜಸ್ಟ್ ನಿಮ್ಮ ಕೈಯಲ್ಲಿರೋ ಮೊಬೈಲ್ ಮೂಲಕವೇ ನೋಡಬಹುದು. ಫ್ರಿಡ್ಜ್ ನಲ್ಲಿರೋ ಆಹಾರ ಪದಾರ್ಥ ಹಾಳಾಗಿದ್ಯಾ ಅಥವಾ ಅವಧಿ ಮುಗಿದ ಆಹಾರ ಪದಾರ್ಥವಾ ಇತ್ಯಾದಿಗಳನ್ನು ಗುರುತಿಸುವ ಪ್ರಿಡ್ಜ್ ವೊಂದು ಮಾರುಕಟ್ಟೆಗೆ ಬಂದಿದೆ.

ಸ್ಮಾರ್ಟ್‌ ಭಾರತಕ್ಕಾಗಿ ಸ್ಯಾಮ್‌ಸಂಗ್‌ನಿಂದ ಸ್ಮಾರ್ಟ್‌ಫ್ರಿಡ್ಜ್‌ ಬಿಡುಗಡೆ..!

ಕುಟುಂಬ ಕೇಂದ್ರೀಕೃತವಾಗಿರುವ ವಸ್ತುಗಳನ್ನು ಸ್ಯಾಮ್ ಸಂಗ್ ಅಭಿವೃದ್ಧಿ ಪಡಿಸಿದ್ದು ಅದನ್ನು ಈ ವರ್ಷದ ಜನವರಿಯಲ್ಲಿಯಲ್ಲಿ ನಡೆದ ಸಿಇಎಸ್ 2018 ನಲ್ಲಿ ಪ್ರಸ್ತುತ ಪಡಿಸಿತ್ತು. ಈಗ ಭಾರತದಲ್ಲೂ ಆ ಬಗ್ಗೆ ಸೌತ್ ಕೊರಿಯಾದ ಸ್ಯಾಮ್ ಸಂಗ್ ಕಂಪೆನಿ ಚರ್ಚೆ ನಡೆಸುತ್ತಿದೆ. ಅದರಲ್ಲಿ ಮುಂದಿನ ಜನರೇಷನ್ನಿನ ರೆಫ್ರಿಜರೇಟರ್ ಕೂಡ ಸೇರಿದೆ.

ಈ ಫ್ರಿಡ್ಜ್ ನಲ್ಲಿ 21 ಇಂಚಿನ ಡಿಸ್ಪ್ಲೇ ಇದ್ದು, ಇದು ತನ್ನದೇ ಸ್ವಂತ ಬಿಕ್ಸ್ ಬಿ ವಾಯ್ಸ್ ಅಸಿಸ್ಟೆಂಟ್ ನ್ನು ಒಳಗೊಂಡಿರುತ್ತದೆ. ಆ ಮೂಲಕ ಒಂದು ಫ್ರಿಡ್ಜ್ ಕೂಡ ಡಿಜಿಟಲೈಜ್ ಆಗಿ ಕೆಲಸ ಮಾಡುತ್ತದೆ.

ಶಾಪಿಂಗ್,ಆಹಾರ ಪದ್ದತಿ ಇತ್ಯಾದಿಗಳ ಮೂಲಕ ಒಂದು ಕುಟುಂಬವನ್ನು ಕೇಂದ್ರೀಕರಿಸಿಕೊಂಡು ಅಗತ್ಯ ನೆರವು ನೀಡುವ ಉದ್ದೇಶ ಕಂಪೆನಿಯದ್ದು. ಫ್ಲೆಕ್ಸ್ ವಾಷಿಂಗ್ ಮಿಷಿನ್, ಸ್ಮಾರ್ಟ್ ಫೋನ್ ಇತ್ಯಾದಿ ಎಲ್ಲಾ ಸ್ಯಾಮ್ ಸಂಗ್ ನ ಡಿವೈಸ್ ಗಳನ್ನು ಫ್ಯಾಮಿಲಿ ಹಬ್ ಮೂಲಕ ಡಿಜಿಟಲಿ ಕಂಟ್ರೋಲ್ ಮಾಡಬಹುದಾದ ಅವಕಾಶವಿರುತ್ತದೆ.

ಸ್ಮಾರ್ಟ್‌ ಭಾರತಕ್ಕಾಗಿ ಸ್ಯಾಮ್‌ಸಂಗ್‌ನಿಂದ ಸ್ಮಾರ್ಟ್‌ಫ್ರಿಡ್ಜ್‌ ಬಿಡುಗಡೆ..!

ಅಂದರೆ ಫಿಡ್ಜ್ ನ ಒಳಗೆ ಒಂದು ಕ್ಯಾಮರಾ ಫಿಕ್ಸ್ ಮಾಡಲಾಗಿರುತ್ತದೆ. ಇದು ಡಿಜಿಟಲಿ ನಿಮ್ಮ ವಸ್ತುಗಳ ಅವಧಿಯನ್ನು ಪರೀಕ್ಷಿಸುತ್ತದೆ. ಒಂದು ವೇಳೆ ಅವಧಿ ಮುಗಿದಿದ್ದರೆ ಅದನ್ನು ಗುರುತಿಸಿ ನಿಮಗೆ ತಿಳಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಫ್ರಿಡ್ಜ್ ಒಳಗೆ ಅಳವಡಿಸಲಾಗಿರುವ ಆಪ್ ಮೂಲಕ ನಿಮ್ಮ ಫ್ರಿಡ್ಜ್ ಒಳಗೆ ಯಾವೆಲ್ಲ ವಸ್ತುಗಳಿವೆ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು.

ಇಂತಹ ಟೆಕ್ನಾಲಜಿಗಳ ಸಹಾಯದಿಂದಾಗಿ ಬಳಕೆದಾರರು ತಮ್ಮ ಮನೆಯೊಳಗಿನ ನೋಟವನ್ನು ಹೊರಗಿದ್ದಾಗಲೂ ನೋಡಲು ಸಾಧ್ಯವಾಗುತ್ತದೆ. ಮುಂದಿನ ಜನರೇಷನ್ನಿಗೆ ಇಂತಹ ಸ್ಮಾರ್ಟ್ ಫ್ರಿಡ್ಜ್ ಗಳ ಅಗತ್ಯ ಬಹಳವಾಗಿದೆ ಎಂದು ಅಭಿಪ್ರಾಯ ಪಡುತ್ತದೆ ಸ್ಯಾಮ್ ಸಂಗ್ ಕಂಪೆನಿ.

ಜುಲೈ 18 ರಿಂದ ಈ ಫ್ಯಾಮಿಲಿ ಹಬ್ ಸ್ಯಾಮ್ ಸಂಗ್ ಶಾಪ್ ಮತ್ತು ಅಮೇಜಾನ್.ಇನ್ ನಲ್ಲಿ ಲಭ್ಯವಾಗುತ್ತಿದೆ ಮತ್ತು ಅದರ ಬೆಲೆ 2,80,000 ರುಪಾಯಿ ಆಗಿರಲಿದೆ. ಇಂತಹ ಮುಂದುವರಿದ ಟೆಕ್ನಾಲಜಿಯ ಖರೀದಿಗೆ ನೀವು ಮುಂದಾಗುತ್ತೀರಾ? ನಿಮಗೂ ಇದು ಬೇಕಾ? ಈ ಫ್ರಿಡ್ಜ್ ನ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.

Best Mobiles in India

English summary
Samsung brings Family Hub to India with a smart fridge. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X