Subscribe to Gizbot

ಮೆಟಲ್-ಕ್ಲಾಡ್ ವಿನ್ಯಾಸದಲ್ಲಿ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಟ್ಯಾಬ್ ಎ' ಬಿಡುಗಡೆ!!..ಹೇಗಿದೆ ಟ್ಯಾಬ್?

Written By:

ಜಗತ್ತಿನಾದ್ಯಂತ ಟ್ಯಾಬ್‌ ಮಾರಾಟದಲ್ಲಿ ಮೊದಲನೇ ಸ್ಥಾನದಲ್ಲಿಯೇ ಮುಂದುವರೆದಿರುವ ಸ್ಯಾಮ್‌ಸಂಗ್ ಕಂಪೆನಿ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಕಡಿಮೆ ಬಜೆಟ್‌ನ ಟ್ಯಾಬ್‌ ಒಂದನ್ನು ಪರಿಚಯಿಸಿದೆ.! 'ಗ್ಯಾಲಕ್ಸಿ ಟ್ಯಾಬ್ ಎ 2017'' ಹೆಸರಿನ ಸ್ಯಾಮ್‌ಸಂಗ್‌ನ ಹೊಸ ಟ್ಯಾಬ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ.!!

ಮೆಟಲ್-ಕ್ಲಾಡ್ ವಿನ್ಯಾಸದಲ್ಲಿ 'ಗ್ಯಾಲಕ್ಸಿ ಟ್ಯಾಬ್ ಎ 2017'' ಟ್ಯಾಬ್ ಹೊರಬಂದಿದ್ದು, 1280x800p ಡಿಸ್‌ಪ್ಲೇ ರೆಸೊಲ್ಯೂಷನ್ ಹೊಂದಿರುವ ಈ ಟ್ಯಾಬ್‌ನ ಬೆಲೆ ಕೇವಲ 17,999 ರೂ.ಗಳಾಗಿವೆ.!! ಹಾಗಾದರೆ, ಸ್ಯಾಮ್‌ಸಂಗ್ ಹೊರತಂದಿರುವ ನೂತನ 'ಗ್ಯಾಲಕ್ಸಿ ಟ್ಯಾಬ್ ಎ 2017'' ಟ್ಯಾಬ್ ಹೇಗಿದೆ? ಟ್ಯಾಬ್‌ನ ಫೀಚರ್ಸ್ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ಪ್ರೊಸೆಸರ್!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!!

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಟ್ಯಾಬ್ ಎ' ಮೆಟಲ್-ಕ್ಲಾಡ್ ವಿನ್ಯಾಸದಲ್ಲಿ ಹೊರಬಂದಿದ್ದು, 1280x800p ರೆಸೊಲ್ಯೂಷನ್ ಇರುವ 8 ಇಂಚಿನ ಡಿಸ್‌ಪ್ಲೇ ಹೊಂದಿದೆ.!! ಇನ್ನು 1.4GHz ಕ್ವಾರ್ ಕೋರ್ ಪ್ರೊಸಸರ್ ಹಾಗೂ ಆಂಡ್ರಾಯ್ಡ್ 7.1 ನೌಗಾಟ್ ಓಪರೇಟಿಂಗ್ ಸಿಸ್ಟಂ ಮೂಲಕ ಟ್ಯಾಬ್ ಕಾರ್ಯ ನಿರ್ವಹಣೆ ನೀಡಲಿದೆ.!!

ಸ್ಯಾಮ್‌ಸಂಗ್‌ ಬಿಗ್ ಬ್ಯಾಟರಿ!!

ಸ್ಯಾಮ್‌ಸಂಗ್‌ ಬಿಗ್ ಬ್ಯಾಟರಿ!!

'ಗ್ಯಾಲಕ್ಸಿ ಟ್ಯಾಬ್ ಎ' ಟ್ಯಾಬ್ ಬಿಗ್‌ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, 5000mAh ಬ್ಯಾಟರಿ ಈ ಟ್ಯಾಬ್‌ನಲ್ಲಿ ಲಭ್ಯವಿದೆ.!! ಟ್ಯಾಬ್ ಖರೀದಿಸುವವರು ಹೆಚ್ಚು ಬ್ಯಾಟರಿ ಬಗ್ಗೆ ಗಮನಹರಿಸುವುದರಿಂದ ಸ್ಯಾಮ್‌ಸಂಗ್ ಹೆಚ್ಚು ಬ್ಯಾಟರಿ ಶಕ್ತಿಯನ್ನು ನೀಡಿದೆ ಎನ್ನಬಹುದು.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

2GB RAM, ಮತ್ತು 16GB ಮೆಮೊರಿಯನ್ನು ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಟ್ಯಾಬ್ ಎ' ಹೊಂದಿದ್ದು, ಆಂತರಿಕ ಮೆಮೊರಿಯಲ್ಲಿ 9.7GB ಮೆಮೊರಿ ಮಾತ್ರ ಬಳಕೆಗೆ ಲಭ್ಯವಿದೆ. ಆದರೆ, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕರ 256GB ವರೆಗೂ ಮೆಮೊರಿ ಹೆಚ್ಚಿಸುವ ಅವಕಾಶವಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಟ್ಯಾಬ್‌ಗಳಲ್ಲಿ ಯಾವಾಗಲೂ ಕ್ಯಾಮೆರಾ ತಂತ್ರಜ್ಞಾನ ಕಡಿಮೆ ಎನ್ನಬಹುದಾಗಿದ್ದು, ಇನ್ನು 'ಗ್ಯಾಲಕ್ಸಿ ಟ್ಯಾಬ್ ಎ' ನಲ್ಲಿಯೂ ಕೂಡ 8MP ರಿಯರ್ ಕ್ಯಾಮೆರಾ ಹಾಗೂ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ ಎಲ್‌ಇಡಿ ಫ್ಲ್ಯಾಶ್, ಆಟೊ ಫೋಕಸಿಂಗ್ ಸೌಲಭ್ಯಗಳು ಕ್ಯಾಮೆರಾಗೆ ಉತ್ತಮ ಸಪೋರ್ಟ್ ನೀಡಲಿವೆ.!!

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ಸಿಂಗಲ್ ಸಿಮ್, 4G, 3G, 2G ಸಪೋರ್ಟೆಡ್, ವೈ-ಫೈ 212.1mm x 124.1mm x 8.9mm ಆಯಾಮ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ಸೌಲಭ್ಯಗಳು 'ಗ್ಯಾಲಕ್ಸಿ ಟ್ಯಾಬ್ ಎ'ನಲ್ಲಿದ್ದು, ಖರೀದಿಸಲು ಉತ್ತಮವಾದ ಟ್ಯಾಬ್ ಎನ್ನಬಹುದು.!! ಆದರೆ, ಇದೇ ಬೆಲೆಗೆ ಇದಕ್ಕಿಂತ ಹೆಚ್ಚು ಫೀಚರ್ಸ್ ಒಂದು ಸ್ಮಾರ್ಟ್‌ಫೋನ್‌ನಲ್ಲಿಯೂ ಲಭ್ಯವಿದೆ ಎನ್ನಬಹುದು.!!

ಓದಿರಿ:ನಾವೆಲ್ಲಾ 5G ಯುಗಕ್ಕೆ ಕಾಲಿಡುವ ಮುನ್ನ!.ನಿಮಗೆಷ್ಟು ಗೊತ್ತು ಈ 'G' ಬಗ್ಗೆ! ಇಲ್ಲಿ ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
While the tablet shipments continue to dip in India,to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot