ಶಿಯೋಮಿ ಸೆಡ್ಡು: ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌TV ಬಿಡುಗಡೆ ಮಾಡಿದ ಸ್ಕೈ ವರ್ಟ್..!

|

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಅಭಿಮಾನಿಗಳನ್ನು ಹೊಂದುವ ಮೂಲಕ ದೊಡ್ಡ ಗಾತ್ರದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿರುವ ಚೀನಾ ಮೂಲದ ಶಿಯೋಮಿ, ಇತ್ತೀಚೆಗೆ ಮಾರುಕಟ್ಟೆಗೆ ಸ್ಮಾರ್ಟ್‌ TVಗಳನ್ನು ಪರಿಚಯ ಮಾಡಿತ್ತು. ಈ ಮೂಲಕ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಶಿಯೋಮಿಗೆ ಸೆಡ್ಡು ಹೊಡೆಯುವವರ ಯಾರು ಇಲ್ಲದಾಗಿತ್ತು.

ಆದರೆ ಈಗ ಪರಿಸ್ಥಿತಿಯೂ ಬದಲಾವಣೆಯಾಗಿದ್ದು, ಶಿಯೋಮಿಗೆ ಬೆಲೆ ಮತ್ತು ಗುಣಮಟ್ಟ ಎರಡರಲ್ಲೂ ಸೆಡ್ಡು ಹೊಡೆಯುವ ಸ್ಮಾರ್ಟ್‌ TV ಬ್ರಾಂಡ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಶಿಯೋಮಿಗೆ ಸೆಡ್ಡು ಹೊಡೆಯಲೇ ಪ್ರವೇಶಿಸಿರುವ ಸ್ಕೈ ವರ್ಟ್‌ ಕಂಪನಿಯೂ ಒಟ್ಟಿಗೆ ಮೂರು ಸ್ಮಾರ್ಟ್‌ TVಗಳನ್ನು ಲಾಂಚ್ ಮಾಡುವ ಮೂಲಕ ಶಿಯೋಮಿಗೆ ಶಾಕ್ ನೀಡಿದೆ ಎನ್ನಲಾಗಿದೆ.

ಒಟ್ಟು ಮೂರು TV ಲಾಂಚ್:

ಒಟ್ಟು ಮೂರು TV ಲಾಂಚ್:

ಸ್ಕೈ ವರ್ಟ್‌ ಕಂಪನಿಯೂ ಒಮ್ಮೆಗೆ ಮಾರುಕಟ್ಟೆಗೆ ಮೂರು ಸ್ಮಾರ್ಟ್‌ TV ಗಳನ್ನು ಲಾಂಚ್ ಮಾಡುವ ಮೂಲಕ ಅಚ್ಚರಿಯನ್ನು ಮೂಡಿಸಿದೆ. 32 ಇಂಚಿನ ಸ್ಮಾರ್ಟ್‌ TV, 43 ಇಂಚಿನ ಸ್ಮಾರ್ಟ್‌ TV ಮತ್ತು 49 ಇಂಚಿನ ಸ್ಮಾರ್ಟ್‌ TVಗಳನ್ನು ಲಾಂಚ್ ಮಾಡಿದ್ದು, ಪ್ರತಿಯೊಂದು ಸ್ಮಾರ್ಟ್‌ TV ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ.

ಸ್ಕೈ ವರ್ಟ್‌ 32 ಇಂಚಿನ ಸ್ಮಾರ್ಟ್‌ TV:

ಸ್ಕೈ ವರ್ಟ್‌ 32 ಇಂಚಿನ ಸ್ಮಾರ್ಟ್‌ TV:

ಸ್ಕೈ ವರ್ಟ್‌ 32 ಇಂಚಿನ ಸ್ಮಾರ್ಟ್‌ TV HD ರೆಡಿ ಗುಣಮಟ್ಟವನ್ನು ಹೊಂದಿದೆ ಮತ್ತು ಬ್ರೈಟ್ ಕಲರ್ ಗಳನ್ನು ತೋರಿಸಲಿದೆ. M20 ಸ್ಮಾರ್ಟ್ LED ಟಿವಿ ಸರಣಿಯ ಪ್ರಾರಂಭಿಕ ಟಿವಿ ಇದಾಗಿದ್ದು, APKಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡುತ್ತಿದೆ. DTS ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. WIFI, HDMI ಮತ್ತು USB ಆಯ್ಕೆಗಳನ್ನು ಹೊಂದಿದೆ.

ಸ್ಕೈ ವರ್ಟ್‌ 43 ಇಂಚಿನ ಸ್ಮಾರ್ಟ್‌ TV

ಸ್ಕೈ ವರ್ಟ್‌ 43 ಇಂಚಿನ ಸ್ಮಾರ್ಟ್‌ TV

ಸ್ಕೈ ವರ್ಟ್‌ 43 ಇಂಚಿನ ಸ್ಮಾರ್ಟ್‌ TV FHD ಗುಣಮಟ್ಟವನ್ನು ಹೊಂದಿದೆ ಮತ್ತು ಬ್ರೈಟ್ ಕಲರ್ ಗಳನ್ನು ತೋರಿಸಲಿದೆ. M20 ಸ್ಮಾರ್ಟ್ LED ಟಿವಿ ಎರಡನೇ ಟಿವಿ ಇದಾಗಿದ್ದು, APKಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡುತ್ತಿದೆ. DTS ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. WIFI, HDMI ಮತ್ತು USB ಆಯ್ಕೆಗಳನ್ನು ಹೊಂದಿದೆ.

ಸ್ಕೈ ವರ್ಟ್‌ 49 ಇಂಚಿನ ಸ್ಮಾರ್ಟ್‌ TV

ಸ್ಕೈ ವರ್ಟ್‌ 49 ಇಂಚಿನ ಸ್ಮಾರ್ಟ್‌ TV

ಸ್ಕೈ ವರ್ಟ್‌ 49 ಇಂಚಿನ ಸ್ಮಾರ್ಟ್‌ TV FHD ಗುಣಮಟ್ಟವನ್ನು ಹೊಂದಿದೆ ಮತ್ತು ಬ್ರೈಟ್ ಕಲರ್ ಗಳನ್ನು ತೋರಿಸಲಿದೆ. ಆಂಡ್ರಾಯ್ಡ್ ಪ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುವ 3500+ ಆಪ್‌ಗಳನ್ನು ಡೌನ್ ಲೋಡ್ ಮಾಡಬಹುದಾಗಿದೆ. M20 ಸ್ಮಾರ್ಟ್ LED ಟಿವಿ ಟಾಪ್ ಎಂಡ್ ಟಿವಿ ಇದಾಗಿದ್ದು, APKಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡುತ್ತಿದೆ. DTS ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ. WIFI, HDMI ಮತ್ತು USB ಆಯ್ಕೆಗಳನ್ನು ಹೊಂದಿದೆ.

ಬೆಲೆಗಳು:

ಬೆಲೆಗಳು:

ಮಾರುಕಟ್ಟೆಯಲ್ಲಿ ಶಿಯೋಮಿಗೆ ಸೆಡ್ಡು ಹೊಡೆಯುವ ಸಲುವಾಗಿವೇ ಸ್ಕೈ ವರ್ಟ್ ಕಂಪನಿಯೂ ಮೂರು ಸ್ಮಾರ್ಟ್‌ TVಗಳ ಬೆಲೆಯನ್ನು ಸ್ಪರ್ಧಾತ್ಮಕವಾಗಿಯೇ ನಿಗಧಿ ಪಡಿಸಿದೆ. ಸ್ಕೈ ವರ್ಟ್‌ 32 ಇಂಚಿನ ಸ್ಮಾರ್ಟ್‌ TV ರೂ.12,999ಕ್ಕೆ ಮಾರಾಟ ಮಾಡುತ್ತಿದೆ. ಇದೇ ಮಾದರಿಯಲ್ಲಿ ಸ್ಕೈ ವರ್ಟ್‌ 43 ಇಂಚಿನ ಸ್ಮಾರ್ಟ್‌ TV ರೂ.22999ಕ್ಕೆ ಹಾಗೂ ಸ್ಕೈ ವರ್ಟ್‌ 49 ಇಂಚಿನ ಸ್ಮಾರ್ಟ್‌ TV ರೂ.29999ಕ್ಕೆ ದೊರೆಯಲಿದೆ.

Best Mobiles in India

English summary
Skyworth launches M20 Smart LED TV series in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X