ಸ್ವಯಂ ಚಾಲಿತ ವಾಹನಗಳ ಬಗ್ಗೆ ನಿಮಗೇನು ಅನ್ನಿಸುತ್ತೆ?

|

ಕಾರಲ್ಲಿ ನೀವು ಮೊಬೈಲ್ ನೋಡ್ತಾ ಕುಳಿತಿದ್ದರೂ ಟ್ರಾಫಿಕ್ ನಲ್ಲಿ ಕಾರು ತನ್ನಷ್ಟಕ್ಕೆ ತಾನೇ ಚಾಲನೆ ಮಾಡಿ ಮುಂದೆ ಸಾಗುತ್ತಿರುತ್ತದೆ. ಪಾರ್ಕಿಂಗ್ ಜಾಗದಲ್ಲಿ ತನ್ನಷ್ಟಕ್ಕೆ ತಾನೇ ನಿಲ್ಲುತ್ತದೆ. ನೀವು ಕಾರೊಳಗೆ ನಿದ್ದೆ ಮಾಡಿದ್ದರು ಸರಿ ನಿಮ್ಮನ್ನ ತಲುಪಬೇಕಾದ ಸ್ಥಳಕ್ಕೆ ಕಾರು ತಲುಪಿಸುತ್ತದೆ.

ಸ್ವಯಂ ಚಾಲಿತ ವಾಹನಗಳ ಬಗ್ಗೆ ನಿಮಗೇನು ಅನ್ನಿಸುತ್ತೆ?

ಕಾರಲ್ಲಿ ಯಾರೂ ಇಲ್ಲದೆ ಕಾರೊಂದು ತನ್ನಷ್ಟಕ್ಕೆ ತಾನೇ ಓಡುವುದು ಎಂದರೆ ಯಾವುದೋ ದೆವ್ವವೋ, ಭೂತವೋ ಓಡಿಸುತ್ತಿರಬೇಕು ಎಂಬ ಹಳೆಯ ಕಾಲದ ಚಲನಚಿತ್ರದ ವೀಡಿಯೋವನ್ನು ಕಣ್ಣ ಮುಂದೆ ತಂದುಕೊಳ್ಳಬೇಡಿ. ಇದು ಭವಿಷ್ಯದ ಕಲ್ಪನೆ. ಮುಂದೊಂದು ದಿನ ಇಂತಹದ್ದೊಂದು ಸಾಧ್ಯತೆಯನ್ನು ನೀವು ರಸ್ತೆಯಲ್ಲಿ ಕಾಣಲಿದ್ದೀರಿ. ಅದಕ್ಕೆ ಸಾಕಾರವೆಂಬಂತ ಆವಿಷ್ಕಾರಗಳು ಈಗಾಗಲೇ ನಡೆದಿದೆ. ಆದರೆ ಇದರ ಪರ ಮತ್ತು ವಿರುದ್ಧವಾಗಿ ಸಾಕಷ್ಟು ಬಲವಾದ ಚರ್ಚೆಗಳು ನಡೆಯುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಚರ್ಚೆಯ ಪ್ರಮುಖ ಅಂಶಗಳ ವಿವರಣೆಯೊಂದಿಗೆ ನಿರ್ಧರಿಸಲು ಈ ಲೇಖನ ನಿಮ್ಮ ನೆರವಿಗೆ ಬರುತ್ತದೆ.

ಸುರಕ್ಷತೆ – ಮೊದಲ ಪ್ರಮುಖ ಚರ್ಚೆ

ಸುರಕ್ಷತೆ – ಮೊದಲ ಪ್ರಮುಖ ಚರ್ಚೆ

ಸುರಕ್ಷತೆ- ರಸ್ತೆ ಅಪಘಾತಗಳು ಹೆಚ್ಚಿನವರು ನಡೆಯುವುದು ಮನುಷ್ಯನ ಅಜಾಗರೂಕತೆಯಿಂದಲೇ ಆಗಿರುತ್ತದೆ. ಆಟೋನಮಸ್ ಕಾರ್ ಗಳು ಇದನ್ನು ತಡೆಯುತ್ತದೆ ಎಂಬುದೊಂದು ಬಲವಾದ ವಾದವಿದೆ. ಹೌದು ನೀವೇ ಊಹಿಸಿಕೊಳ್ಳಿ. ವೇಗದ ವೆಹಿಕಲ್ ಚಾಲನೆ, ಟ್ರಾಫಿಕ್ ನಲ್ಲಿ ಕಿರಿಕಿರಿ ಮಾಡಿಕೊಳ್ಳುವುದು, ಟ್ರಾಫಿಕ್ ನಲ್ಲಿ ತಾಳ್ಮೆ ಇಲ್ಲದೆ ಮುನ್ನುಗ್ಗುವುದು, ಫೋನ್ ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದು, ಮಧ್ಯಪಾನ ಮಾಡಿ ಚಾಲನೆ ಮಾಡುವುದು, ಸೀಟ್ ಬೆಲ್ಟ್ ಧರಿಸದೇ ಚಾಲನೆ ಮಾಡುವುದು, 20 ಘಂಟೆಗಳ ಕಾಲ ನಿರಂತರವಾಗಿ ಡ್ರೈವಿಂಗ್ ಮಾಡುವ ವಿರಾಮವಿಲ್ಲದ ಟ್ರಕ್ ಡ್ರೈವರ್ ಗಳು, ಹೀಗೆ ಯಾವುದೇ ರೀತಿಯ ಸಮಸ್ಯೆಯೂ ಕೂಡ ತನ್ನಷ್ಟಕ್ಕೆ ತಾನೇ ಓಡುವ ಕಾರಿನಲ್ಲಿ ಇರುವುದಿಲ್ಲ. ಹಾಗಾಗಿ ರಸ್ತೆ ಅಪಘಾತಗಳು ತಡೆಯುಲ್ಪಡುತ್ತದೆ ಎಂಬುದು ವಾದ.

ಅಮೇರಿಕಾದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಅಟೋನಮಸ್ ವೆಹಿಕಲ್ ಗಳು 90% ರಸ್ತೆ ಅಪಘಾತಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಇದರ ಉಳಿತಾಯ ಅಂದರೆ ಆರೋಗ್ಯದ ವೆಚ್ಚ ಮತ್ತು ವೆಹಿಕಲ್ ಡ್ಯಾಮೇಜ್ ನ ವೆಚ್ಚ ಎಲ್ಲವೂ ಸೇರಿ ಹೆಚ್ಚು ಕಡಿಮೆ 190 ಬಿಲಿಯನ್ ಡಾಲರ್ ಆಗಿರುತ್ತದೆ ಮತ್ತು ಸಾವಿರಕ್ಕೂ ಅಧಿಕ ಮಂದಿ ಪ್ರತಿ ವರ್ಷ ರಸ್ತೆ ಅಪಘಾತದಿಂದ ಸಾಯುವುದು ತಪ್ಪುತ್ತದೆ.

ಪ್ರತಿವಾದ:

ಪ್ರತಿವಾದ:

ಸುರಕ್ಷತೆಯ ವಿಚಾರವು ಮುಂದಿನ ದಿನಗಳಲ್ಲಿ ಸಾಫ್ಟ್ ವೇರ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆಯ ಸುತ್ತ ಸುತ್ತಲಾರಂಭಿಸುತ್ತದೆ. ಅಟೋನಮಸ್ ವೆಹಿಕಲ್ ಗಳು 100% ನಿಖರವಾಗಿರಬಹುದು ಮತ್ತು ವಿಶ್ವಾಸಾರ್ಹವೂ ಆಗಿರಬಹುದು. ಆದರೆ ಮಾಲ್ವೇರ್ ಗಳು ಮತ್ತು ಬಗ್ಸ್ ಗಳು ಮತ್ತು ಹ್ಯಾಕರ್ ಗಳ ಬಗ್ಗೆ ನಂಬುವುದಕ್ಕೆ ಸಾಧ್ಯವಿಲ್ಲ ಅಲ್ಲವೇ? ಹಾಗಾಗಿ ಇವುಗಳಿಂದ ತೊಂದರೆಯಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಅಧಿಕವಾಗಿಯೇ ಇರುತ್ತದೆ.

ಕಡಿಮೆ ಸಂಚಾರ ದಟ್ಟಣೆ- ಸಾಮಾನ್ಯ ಜನರಿಗೆ ಮಾರುವುದಕ್ಕೆ ಸುಲಭ

ಕಡಿಮೆ ಸಂಚಾರ ದಟ್ಟಣೆ- ಸಾಮಾನ್ಯ ಜನರಿಗೆ ಮಾರುವುದಕ್ಕೆ ಸುಲಭ

ಯಾವುದೇ ಪ್ರಮುಖ ದೇಶದ ಡ್ರೈವರ್ ಗಳನ್ನು ಸಂಪರ್ಕಿಸಿ ಸರ್ವೇ ನಡೆಸಿದಲ್ಲಿ ಅವರ ಮೊದಲ ಸಮಸ್ಯೆಯ ಪಟ್ಟಿಯಲ್ಲಿ ಟ್ರಾಫಿಕ್ ಸಮಸ್ಯೆ ಉತ್ತುಂಗದಲ್ಲಿರುತ್ತದೆ. ವಾದವೇನೆಂದರೆ ಈ ಸ್ವಯಂಚಾಲಿತ ವೆಹಿಕಲ್ ಗಳು ವಿಧೇಯಕನಾಗಿರುತ್ತದೆ ಮತ್ತು ನೀತಿನಿಯಮಗಳನ್ನು ಸರಿಯಾಗಿ ಅನುಸರಿಸುತ್ತದೆ. ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶದಲ್ಲಿಯೂ ಕೂಡ ಹೇಗೆ ವರ್ತಿಸಬೇಕು ಎಂಬ ಪರಿಕಲ್ಪನೆ ಇದಕ್ಕೆ ಇರುವುದರ ಕಾರಣದಿಂದಾಗಿ ರಸ್ತೆಯಲ್ಲಿನ ವಾತಾವರಣ ಚೆನ್ನಾಗಿರುತ್ತದೆ.

ಸುರಕ್ಷತೆ ಅಧಿಕವಿರುವುದರಿಂದಾಗಿ ಇದರಲ್ಲಿ ವೇಗಮಿತಿಗಳು ಅಧಿಕವಾಗಿರುತ್ತದೆ. ವೆಹಿಕಲ್ ಗಳನ್ನು ಹೆಚ್ಚು ಹತ್ತಿರದಲ್ಲಿ ಓಡಿಸುವುದಕ್ಕೆ ಸಾಧ್ಯವಿರುತ್ತದೆ ಯಾಕೆಂದರೆ ಪ್ರತಿಕ್ರಿಯೆಯ ಸಮಯ ಮತ್ತು ಬ್ರೇಕಿಂಗ್ ಅಂತರಗಳು ಹೆಚ್ಚು ಹತ್ತಿರವಾಗಿರುತ್ತದೆ. ಎಲೆಕ್ಟ್ರಾನಿಕ್ ರಸ್ತೆಯ ಚಿಹ್ನೆಗಳು ಬೇಕಾಗುತ್ತದೆ ಮತ್ತು ಕಡಿಮೆ ಟ್ರಾಫಿಕ್ ಅಧಿಕಾರಿಗಳು ಸಾಕಾಗುತ್ತಾರೆ. ಸ್ಥಳದ ಉಳಿತಾಯ ಮತ್ತು ದಕ್ಷತೆಯ ಲಾಭ ಇದರಲ್ಲಿ ಅಧಿಕವಾಗಿರುತ್ತದೆ.

ಪ್ರತಿವಾದ:: ತಂತ್ರಜ್ಞಾನದ ವಿಶ್ವಾಸಾರ್ಹತೆಯ ದೃಷ್ಟಿಕೋನದಲ್ಲಿ ಇದು ಅಸಾಧ್ಯವಾಗುತ್ತದೆ ಎಂಬ ವಾದವನ್ನು ಮಂಡಿಸಲಾಗುತ್ತದೆ.

ಉತ್ಪಾದನೆಯ ಲಾಭ ಹೆಚ್ಚು- ಬಂಡವಾಳಶಾಹಿ ಕಾಳಜಿ ತೆಗೆದುಕೊಳ್ಳತ್ತದೆ.

ಉತ್ಪಾದನೆಯ ಲಾಭ ಹೆಚ್ಚು- ಬಂಡವಾಳಶಾಹಿ ಕಾಳಜಿ ತೆಗೆದುಕೊಳ್ಳತ್ತದೆ.

ಇದು ಉತ್ಪಾದನೆಯನ್ನು ಅಧಿಕಗೊಳಿಸುತ್ತದೆ ಮತ್ತು ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂಬ ವಾದವಿದೆ. ಟ್ರಕ್ ಡ್ರೈರ್ ಗಳು, ಟ್ಯಾಕ್ಸಿ ಡ್ರೈವರ್ ಗಳು, ಬಸ್ ಡ್ರೈವರ್ ಗಳ ಅಗತ್ಯವೇ ಇರುವುದಿಲ್ಲ. ಇವರೆಲ್ಲರೂ ಕೆಲಸ ಕಳೆದುಕೊಳ್ಳುತ್ತಾರೆ. ಖಾಸಗಿ ಸಂಸ್ಥೆ ಅಥವಾ ಸರ್ಕಾರ ಇವರಿಗಾಗಿ ಪಾವತಿ ಮಾಡುವ ಹಣದ ಉಳಿತಾಯವಾಗುತ್ತದೆ. ಆದರೆ ಇದೊಂದು ದೊಡ್ಡ ಪ್ರತಿಭಟನೆಗೆ ಕಾರಣವಾಗಬಹುದು. ಭವಿಷ್ಯ ಬಲ್ಲವರ್ಯಾರು?

ಪ್ರತಿವಾದ: ಮಾನವನ ಉದ್ಯೋಗವನ್ನು ಕಸಿದುಕೊಳ್ಳುವ ಯಂತ್ರಗಳು ಎಷ್ಟರಮಟ್ಟಿಗೆ ಯಶಸ್ಸು ಗಳಿಸಬಲ್ಲವು ಮತ್ತು ಅದಕ್ಕಾಗಿ ಮಾನವ ಮತದಾರ ಒಪ್ಪಿಕೊಳ್ಳಲು ಇಚ್ಛಿಸುವುದಿಲ್ಲ. ಈಗಾಗಲೇ ಮೇಲೆ ತಿಳಿಸಿರುವಂತೆ ಡ್ರೈವರ್ ಉದ್ಯೋಗ ನಿರತರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಲಿದ್ದಾರೆ. ಅವರ ತುತ್ತಿನ ಚೀಲದ ಪ್ರಶ್ನೆಯಾಗಿದೆ.

ದೈನಂದಿನ ಗ್ರಾಹಕರಿಗೆ ಕಡಿಮೆ ವೆಚ್ಚ :

ದೈನಂದಿನ ಗ್ರಾಹಕರಿಗೆ ಕಡಿಮೆ ವೆಚ್ಚ :

ನೀವು ಪ್ರತಿದಿನದ ಡ್ರೈವರ್ ವೆಚ್ಚವನ್ನು ಲೆಕ್ಕಾಚಾರ ಹಾಕಿದಾಗ, ಒಂದು ನಿರ್ಧಿಷ್ಟ ಪ್ರದೇಶದಲ್ಲಿ ಅಟೋನಮಸ್ ಡ್ರೈವಿಂಗ್ ನಿಮಗೆ ದೀರ್ಘಾವಧಿಯಲ್ಲಿ ಹೆಚ್ಚು ಉಳಿತಾಯ ಮಾಡುವುದಕ್ಕೆ ನೆರವು ನೀಡುತ್ತದೆ.ಸುರಕ್ಷತೆಯ ದೃಷ್ಟಿಯನ್ನು ಹೆಚ್ಚಿಸಿದಾಗ ವಿಮಾ ಪಾಲಿಸಿದಾರರ ಸಂಖ್ಯೆ ಇಳಿಮುಖವಾಗುತ್ತದೆ. ಅಪಘಾತ ವಿಮೆಗಳ ಅಗತ್ಯತೆಯನ್ನು ವ್ಯಕ್ತಿಯೊಬ್ಬ ಬಯಸುವುದಿಲ್ಲ. ಹಾಗಾಗಿ ವಯಕ್ತಿಕವಾಗಿ ಆತನಿಗೆ ಇದು ದೊಡ್ಡ ಉಳಿತಾಯ ಮಾಡುತ್ತದೆ.

ಅದಕ್ಕಿಂತ ಮುಖ್ಯವಾಗಿ ಇಂಧನ ಉಳಿತಾಯವನ್ನು ಇದು ಮಾಡುತ್ತದೆ ಎಂಬ ದೊಡ್ಡ ವಾದವೊಂದು ಕೇಳಿಬರುತ್ತಿದೆ. ಅದು ಸಾಂಪ್ರದಾಯಿಕ ಇಂಧನ ಬಳಕೆಯೂ ಇರಬಹುದು ಅಥವಾ ಎಲೆಕ್ಟ್ರಾನಿಕ್ ಅಥವಾ ಮರುಬಳಕೆ ಇಂಧನ ವ್ಯವಸ್ಥೆ ಕೂಡ ಆಗಿರಬಹುದು.

ಅಂದರೆ ಪರ್ಸನಲ್ ವೆಹಿಕಲ್ ಮಾಲೀಕರು ತಮ್ಮ ಉಳಿತಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇದು ನೆರವು ನೀಡುತ್ತದೆ. ಒಂದು ವೇಳೆ ಸ್ವಯಂಚಾಲಿತ ಡ್ರೈವಿಂಗ್ ಭವಿಷ್ಯಕ್ಕೆ ಸಾಕಾರ ರೂಪ ಸಿಕ್ಕಿದ್ದೇ ಆದಲ್ಲಿ ಸ್ವಂತ ಕಾರ್ ಖರೀದಿಸುವ ಬಯಕೆಯು ಕಡಿಮೆಯಾಗಿ, ಖಾಸಗಿ ವಾಹನಗಳ ಬಳಕೆ ಅಧಿಕಗೊಳ್ಳಬಹುದು. ಖರೀದಿ ಮತ್ತು ನಿರ್ವಹಣಾ ವೆಚ್ಚವನ್ನು ಒಬ್ಬ ಮಾಲೀಕನಿಗೆ ಕಡಿಮೆಯಾಗುತ್ತದೆ.

ಪ್ರತಿವಾದ: ಈಗಾಗಲೇ ಇದಕ್ಕಿಂತ ಉತ್ತಮ ಪರ್ಯಾಯ ವಿಧಾನಗಳು ಲಭ್ಯವಿದೆ. ಸ್ವಾಯತ್ತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪರಿಕಲ್ಪನೆ ಇನ್ನೂ ಕೂಡ ಚರ್ಚಾತ್ಮಕವಾಗಿದೆ. ಬಸ್ ಗಿಂತ ಇದು ಅಗ್ಗವಾಗಿರುತ್ತದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಕೊಡುವಲ್ಲಿ ವಿಫಲತೆ ಇದೆ.

ಪರಿಸರದ ಅನುಕೂಲತೆಗಳು ಮತ್ತು ಪಾರ್ಕಿಂಗ್ ವ್ಯವಸ್ಥೆ- ದೀರ್ಘಾವಧಿಯ ಕನಸಿಗೆ ಸಾಕಾರ ರೂಪ

ಪರಿಸರದ ಅನುಕೂಲತೆಗಳು ಮತ್ತು ಪಾರ್ಕಿಂಗ್ ವ್ಯವಸ್ಥೆ- ದೀರ್ಘಾವಧಿಯ ಕನಸಿಗೆ ಸಾಕಾರ ರೂಪ

ಕಾರು ಮಾಲೀಕತ್ವದ ಇಂದು ಇರುವುದಕ್ಕಿಂತ ಕಡಿಮೆ ಪರಿಣಾಮಕಾರಿಯಾಗಿದೆ.ಈಗ ನಾವು ಹೊಂದಿರುವ ಒಟ್ಟು ಕಾರುಗಳಲ್ಲಿ ಕೇವಲ 5% ಸಮಯದಲ್ಲಿ ಮಾತ್ರ ಬಳಸಲಾಗುತ್ತಿದೆ ಎಂಬ ಅಂದಾಜಿದೆ. ಅಂದರೆ ಇದರ ಪ್ರತಿವಾದಕರು ಹೇಳುವ ಪ್ರಕಾರ 95% ಸಮಯದಲ್ಲಿ ವೆಹಿಕಲ್ ಗಳು ಸ್ಥಿರವಾಗಿರುತ್ತದೆ ಅಥವಾ ವ್ಯರ್ಥವಾಗಿರುತ್ತದೆ. ಅಂದರೆ ನೈಸರ್ಗಿಕವಾಗಿ ಯಾವುದೋ ರೂಪದಲ್ಲಿ ಇರಬೇಕಿದ್ದ ಲೋಹವು ಮತ್ತೊಂದು ರೂಪವನ್ನು ಪಡೆದು ವ್ಯರ್ಥವಾಗಿ ಸ್ಥಿರ ಅವಸ್ಥೆಯಲ್ಲಿ ನಿಂತಿರುತ್ತದೆ. ಅದಕ್ಕೆ ಪರಿಸರ ವ್ಯವಸ್ಥೆಯ ನೈಜ ರೂಪದಲ್ಲಿ ಇದ್ದದ್ದಕ್ಕಿಂತಲೂ ಹೆಚ್ಚಿನ ಸ್ಥಳಾವಕಾಶವನ್ನು ಬೇಡುತ್ತದೆ. ಕೇವಲ ಲಾಸ್ ಏಂಜಲೀಸ್ ಸಿಟಿಯೊಂದರಲ್ಲೇ ಸುಮಾರು 14% ಅಂದರೆ 17 ಮಿಲಿಯನ್ ಸ್ಕ್ಯಾರ್ ಮೀಟರ್ ನಷ್ಟು ಜಾಗವು ಕೇವಲ ಪಾರ್ಕಿಂಗ್ ಗಾಗಿ ವ್ಯಯಿಸಲಾಗುತ್ತಿದೆ.

ಸ್ವಯಂಚಾಲಿತ ಕಾರುಗಳು ಒಟ್ಟಾರೆ ಕಾರುಗಳ ಸಂಗ್ರಹಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಆ ಮೂಲಕ ರಸ್ತಯಲ್ಲಿನ ದಟ್ಟಣೆ ನಿರ್ವಹಣೆ ಜೊತೆಗೆ ಜಾಗದ ಉಳಿತಾಯ ಎರಡೂ ಕೂಡ ಸಾಧ್ಯವಾಗುತ್ತದೆ.ಹಾಗಾಗಿ ವಾಹನಗಳ ಹಂಚಿಕೆ ಮತ್ತು ಖಾಸಗಿ ವಾಹನಗಳ ಬಳಕೆ ಇದನ್ನು ಪ್ರಯೋಗಾತ್ಮಕವಾಗಿ ರೂಪಗೊಳ್ಳಲು ಅವಕಾಶ ನೀಡುತ್ತದೆ.

ಪ್ರತಿವಾದ: ಜನರು ತಮ್ಮ ಸ್ವಂತ ಕಾರು ಮಾಲೀಕತ್ವ ಪಡೆಯುವುದು ಮತ್ತು ಅದರೊಂದಿಗೆ ಅವರಿಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಆಲೋಚಿಸುತ್ತಾರೆ. ಕಾರುಗಳು ಪ್ರತಿಷ್ಟೆಯ ಪ್ರಶ್ನೆಯಾಗಿದೆ.ಇಂತಹ ಸಮಾಜವೊಂದರ ಮನಸ್ಥಿತಿಯನ್ನು ಬದಲಾಯಿಸುವುದು ಸುಲಭವಲ್ಲ. ಇದೊಂದು ದೊಡ್ಡ ಸವಾಲು.

ಇದಕ್ಕೆ ನಿಮ್ಮ ಅಭಿಪ್ರಾಯ ವೇನು ಎಂಬುದನ್ನು ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.

Most Read Articles
Best Mobiles in India

Read more about:
English summary
The 5 strongest arguments for a self-driving future

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more