Subscribe to Gizbot

ಮನೆ ಮತ್ತು ಕಾರ್ ಗಳಲ್ಲಿ ಬಳಕೆ ಮಾಡಿಕೊಳ್ಳುವ ಸ್ಮಾರ್ಟ್ ಆಪ್ ಗಳು..!

Posted By: Lekhaka

ಮನೆ ಮತ್ತು ಕಾರ್ ಗಳು ಇಂದು ಸ್ಮಾರ್ಟ ಆಗುತ್ತಿದ್ದು, ಹೊಸ ಹೊಸ ಗ್ಯಾಜೆಟ್ ಗಳು ಇಲ್ಲಿ ಬಳಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ನಿಮ್ಮ ಮನೆಯನ್ನು ಮತ್ತು ಕಾರ್ ಅನ್ನು ಸ್ಮಾರ್ಟ್ ಮಾಡುವ ಕೆಲವು ಉತ್ಪನ್ನಗಳ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಿಮಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್ ಇನ್ ಕಾರ್ ಎಂಟರ್ಟೈನ್ ಮೆಂಟ್:

ಆಂಡ್ರಾಯ್ಡ್ ಇನ್ ಕಾರ್ ಎಂಟರ್ಟೈನ್ ಮೆಂಟ್:

ಬೆಲೆ ರೂ.34,900

ಇದೊಂದು ಆಂಡ್ರಾಯ್ಡ್ ಟ್ಯಾಬ್ಲೆಟ್ ಆಗಿದ್ದು, ನಿಮ್ಮ ಕಾರಿನಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಸ್ಮಾರ್ಟ್ ಫೋನ್ ನಲ್ಲಿ ಮಾಡಬಹುದಾದ ಎಲ್ಲಾ ಕಾರ್ಯಗಳನ್ನು ಇದರಲ್ಲಿ ಮಾಡಬಹುದಾಗಿದೆ. ಅಲ್ಲದೇ ಇದರಲ್ಲಿ ಮೈಕ್ರೋ ಎಸ್ ಡಿ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಅಲ್ಲದೇ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಸಿನ್ ಸೇ ರಿಮೋಟ್”

ಸಿನ್ ಸೇ ರಿಮೋಟ್”

ರೂ.1199

ಇದು ಸ್ಮಾರ್ಟ್ ರಿಮೋಟ್ ಆಗಿದ್ದು, ಮನೆಯಲ್ಲಿ ನೋಡುವ ಟಿವಿ ಚಾನಲ್ ಗಳನ್ನು ನಿಯಂತ್ರಿಸಲಿದೆ. ಅಲ್ಲದೇ ನೀವು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನಿಮ್ಮ ಮಕ್ಕಳು ಬೇರೆ ಯಾವ ಚಾನಲ್ ಗಳನ್ನು ನೋಡದಂತೆ ಇದು ಒತ್ತಡವನ್ನು ಹೇರಲಿದ್ದು, ವಾಯ್ಸ್ ಕಂಟ್ರೋಲ್ ಹೊಂದಿದೆ.

ಎಂಐ ರೌಟರ್:

ಎಂಐ ರೌಟರ್:

ರೂ.1199

ಮನೆಯಲ್ಲಿ ಬಳಕೆ ಮಾಡಿಕೊಳ್ಳುವ ರೌಟರ್ ಇದಾಗಿದೆ. ಸ್ಮಾರ್ಟ್ ಆಗಿ ಮತ್ತು ವೇಗವಾಗಿ ಕಾರ್ಯನಿರ್ವಹಿಸಲು ಶಕ್ಯವಾಗಿದೆ. ಅಲ್ಲದೇ ಆಪ್ ಬಳಕೆ ಮಾಡಿಕೊಂಡು ರೌಟರ್ ಅನ್ನು ನಿಯಂತ್ರಿಸುವ ಸಾಧ್ಯತೆಯನ್ನು ಇದು ಮಾಡಿಕೊಟ್ಟಿದೆ ಎನ್ನಲಾಗಿದೆ.

ಸ್ನಾರ್ಟ್ ಮಿರರ್

ಸ್ನಾರ್ಟ್ ಮಿರರ್

ರೂ.39999

ನೋವೋಟೆಕ್ ಕಂಪನಿಯೂ ಈ ಸ್ಮಾರ್ಟ್ ಮೀರರ್ ಅನ್ನು ನಿರ್ಮಾಣ ಮಾಡಿದ್ದು, ಈ ಮಿರರ್ ಅನ್ನು ಸ್ಮಾರ್ಟ್ ಪೋನ್ ಮಾದರಿಯಲ್ಲಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದು ವೈ-ಫೈ ಕನೆಕ್ಟ್ ಸಹ ಆಗಲಿದೆ ಎನ್ನಲಾಗಿದೆ.

ವೈಕಲ್ ಟ್ರಾಕರ್:

ವೈಕಲ್ ಟ್ರಾಕರ್:

ರೂ.5499

ಕಾರ್ ನಾಟ್ ಕಂಪನಿಯೂ ಬಿಡುಗಡೆ ಮಾಡಿರುವ ವೈಕಲ್ ಟ್ರಾಕರ್ ಬಹು ಉಪಯೋಗಿಯಾಗಿದೆ. ಇದು ಆಪ್ ನೊಂದಿಗೆ ಕಾರ್ಯನಿರ್ವಹಿಸಲಿದ್ದು, ನಿಮ್ಮ ಕಾರ್ ಕಳ್ಳತನವಾಗದಂತೆ ರಕ್ಷಿಸಲಿದೆ. ಅಲ್ಲದೇ ಎಲ್ಲಿದ್ದರೂ ನಿಮ್ಮ ಕಾರನ್ನು ಕಂಡು ಹಿಡಿಯಬಹುದಾಗಿದೆ.

How to save WhatsApp Status other than taking screenshots!! Kannada
ಏರ್ ಟೆಲ್ ಡಿಜಿಟಲ್ ಟಿವಿ:

ಏರ್ ಟೆಲ್ ಡಿಜಿಟಲ್ ಟಿವಿ:

ಇದು ನಿಮ್ಮ ಟಿವಿ ನೋಡುವ ವಿಧಾನವನ್ನು ಬದಲಾವಣೆ ಮಾಡಲಿದೆ. ಎಲ್ಲಾ ಸೆಟಪ್ ಬಾಕ್ಸ್ ಗಳು ಕೇಬಲ್ ನೊಂದಿಗೆ ಕಾರ್ಯನಿರ್ವಹಿಸಿದರೆ ಇದು ಇಂಟರ್ನೆಟ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ ಎನ್ನಲಾಗಿದೆ.

ಹಿಂದೊಮ್ಮೆ ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ ವಿಶ್ವದ ನಂ.1 ಶ್ರೀಮಂತನಾದ ಕಥೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Smart capabilities are being incorporated into devices across different categories now. new smart, connected devices and accessories. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot