ಬರ್ತಿದೆ ವಿಶ್ವದ ಮೊದಲ ಧರಿಸಬಹುದಾದ ಸ್ಮಾರ್ಟ್‌ಫೋನ್..!

By GizBot Bureau
|

ZTE ನ ಸಬ್ ಬ್ರ್ಯಾಂಡ್ ಆಗಿರುವ ನೂಬಿಯಾ ಬರ್ಲಿನ್ ನ ಐಎಫ್ಎ 2018 ನಲ್ಲಿ ವಿಶ್ವದ ಮೊದಲ ವಯರೇಬಲ್ ಸ್ಮಾರ್ಟ್ ಫೋನಿನ ಟೀಸರ್ ಬಿಡುಗಡೆಗೊಳಿಸಿದೆ. ಇದನ್ನು ನೂಬಿಯಾ -α (ಆಲ್ಫಾ) ಎಂದು ಹೆಸರಿಸಲಾಗಿದೆ.ಅದನ್ನು ಸೊಂಟಕ್ಕೆ ಅಳವಡಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.

ಫ್ಲೆಕ್ಸ್ ಬಳಸಿರುವಂತಹ ದೊಡ್ಡದಾದ ಕರ್ವ್ ಆಗಿರುವ OLED ಟಚ್ ಸ್ಕ್ರೀನ್ ಡಿಸ್ಪ್ಲೇಯನ್ನು ಬಳಸಲಾಗಿದ್ದು,ಇದರ ಪ್ರಮುಖ ಮಹತ್ವವೇ ಫ್ಲೆಕ್ಸಿಬಲ್ ಡಿಸ್ಪ್ಲೇ ತಂತ್ರಜ್ಞಾನವನ್ನು ಒಳಗೊಂಡಿರುವುದಾಗಿದೆ. ಡಿವೈಸ್ ನಲ್ಲಿ ಕ್ಯಾಮರಾವು ಮುಂಭಾಗದಲ್ಲಿದ್ದು ಮೈಕ್ರೋಫೋನ್ ನೊಂದಿಗೆ ಬರುತ್ತದೆ ಅಷ್ಟೇ ಅಲ್ಲ ಎರಡೂ ಬದಿಗಳಲ್ಲಿ ಬಟನ್ ಗಳಿರುತ್ತದೆ.

ಬರ್ತಿದೆ ವಿಶ್ವದ ಮೊದಲ ಧರಿಸಬಹುದಾದ ಸ್ಮಾರ್ಟ್‌ಫೋನ್..!

ಡಿವೈಸ್ ನ ಹಿಂಭಾಗದಲ್ಲಿ ಚಾರ್ಜಿಂಗ್ ಪಿನ್ ಇರಲಿದೆ ಮತ್ತು ಹಾರ್ಟ್ ರೇಟ್ ಸೆನ್ಸರ್ ಕೂಡ ಇರುತ್ತದೆ. ವಿಯರೇಬಲ್ ಸ್ಮಾರ್ಟ್ ಫೋನ್ ತಲೆಗೆ ಅಳವಡಿಸಿಕೊಳ್ಳಬಹುದಾದ ಲೋಹದ ಪಟ್ಟಿಗಳನ್ನು ಹೊಂದಿದ್ದು ಕಪ್ಪು ಮತ್ತು ಚಿನ್ನದ ಬಣ್ಣಗಳ ವೇರಿಯಂಟ್ ನಲ್ಲಿ ಲಭ್ಯವಿರುತ್ತದೆ.ಸದ್ಯ ಕಂಪೆನಿಯು ಇದರ ವೈಶಿಷ್ಟ್ಯತೆಗಳ ಬಗ್ಗೆ ಮತ್ತು ಬೆಲೆ ಜೊತೆಗೆ ಯಾವಾಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ನೂಬಿಯಾ ರೆಡ್ ಮ್ಯಾಜಿಕ್ ಕೂಡ ಬಿಡುಗಡೆ:

ಈ ಕಾರ್ಯಕ್ರಮದಲ್ಲಿ ವಿಯರೇಬಲ್ ಸ್ಮಾರ್ಟ್ ಫೋನಿನ ಜೊತೆಗೆ ಚೈನೀಸ್ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ತನ್ನ ಇನ್ನೊಂದು ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸಿದೆ ಅದುವೇ ನೂಬಿಯಾ ರೆಡ್ ಮ್ಯಾಜಿಕ್.. ಭಾರತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ನುಬಿಯಾ ರೆಡ್ ಮ್ಯಾಜಿಕ್ ನ ಬೆಲೆಯು EUR 450 ಆಗಿದ್ದು ಭಾರತೀಯ ಬೆಲೆಯಲ್ಲಿ ಹೆಚ್ಚು ಕಡಿಮೆ 37,200 ರುಪಾಯಿ ಆಗಿರಲಿದೆ..

ನೂಬಿಯಾ ರೆಡ್ ಮ್ಯಾಜಿಕ್ ನ ವೈಶಿಷ್ಟ್ಯತೆಗಳು:

ಈ ಸ್ಮಾರ್ಟ್ ಫೋನ್ 6 ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ 1080x2160 ಪಿಕ್ಸಲ್ ರೆಸಲ್ಯೂಷನ್ ಹೊಂದಿದ್ದು ಅದಹಹರ ಅನುಪಾತ 18:9 ಆಗದೆ. ಇತರೆ ನುಬಿಯಾ ಫೋನ್ ಗಳಂತೆ ಈ ನುಬಿಯಾ ರೆಡ್ ಮ್ಯಾಜಿಕ್ ನಾಚ್ ನ್ನು ಒಳಗೊಂಡಿರುವುದಿಲ್ಲ.

ಈ ಹ್ಯಾಂಡ್ ಸೆಟ್ ರನ್ ಆಗುವುದು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರವಾಗಿದ್ದು ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್ ನ್ನು ಹೊಂದಿದೆ. 6GB/8GB RAM ಮತ್ತು 64GB/128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಈ ಮೊಬೈಲ್ ಒಳಗೊಂಡಿದ್ದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಲು ಗ್ರಾಹಕರಿಗೆ ಅವಕಾಶವಿರುತ್ತದೆ.

ಬರ್ತಿದೆ ವಿಶ್ವದ ಮೊದಲ ಧರಿಸಬಹುದಾದ ಸ್ಮಾರ್ಟ್‌ಫೋನ್..!

ಈ ಡುಯಲ್ ಸಿಮ್ ಸ್ಮಾರ್ಟ್ ಫೋನ್ 24MP ಸಿಂಗಲ್ ಲೆನ್ಸ್ ಹಿಂಭಾಗದ ಕ್ಯಾಮರಾ ಜೊತೆಗೆ 6-piece ಮೋಟಾರ್ ಡ್ರಿವನ್ ಲೆನ್ಸ್,f/1.7 ಅಪರ್ಚರ್ ಮತ್ತು ISOCELL ಇಮೇಜ್ ಸೆನ್ಸರ್ ನ್ನು ಒಳಗೊಂಡಿರುತ್ತದೆ.ಮುಂಭಾಗದ ಕ್ಯಾಮರಾವು 8MP ಶೂಟರ್ ಜೊತೆಗೆ 76-ಡಿಗ್ರಿ ವೈಡ್ ಆಂಗಲ್ ಲೆನ್ಸ್ ಮತ್ತು f/2.0 ಅಪರ್ಚರ್ ನ್ನು ಹೊಂದಿರುತ್ತದೆ.

ಈ ಸ್ಮಾರ್ಟ್ ಫೋನ್ ನ ಬ್ಯಾಟರಿ ಕೆಪಾಸಿಟಿ 3800mAh ಆಗಿದೆ ತಮತ್ತು NeoPower 3.0 ಮತ್ತು ನುಬಿಯಾ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುತ್ತದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ 4G, VoLTE, 3G, ವೈ-ಫೈ, ಬ್ಲೂಟೂತ್ GPS ಮತ್ತು USB ಟೈಪ್ C ಯನ್ನು ಬೆಂಬಲಿಸುತ್ತದೆ.

Best Mobiles in India

English summary
This is the world's first wearable smartphone. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X