ಈ ಸ್ಪೀಕರ್ ಬೆಲೆ ಕೇಳಿದರೆ ಅಚ್ಚರಿ ಪಡುವುದು ಗ್ಯಾರಂಟಿ..!ಉರುಳಿಸಿ ವಾಲ್ಯೂಮ್ ನಿಯಂತ್ರಿಸಬಹುದು...!

By GizBot Bureau
|

ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್ ಫೋನ್ ಮಾರ್ಕೆಟ್ ನಲ್ಲಿ ಹಲವು ರೀತಿಯ ಡಿಸೈನ್ ಗಳು , ವೆರೈಟಿಗಳು ಬರುತ್ತಲೇ ಇದೆ. ಆದರೆ ಇದಕ್ಕೆ ಹೋಲಿಸಿದರೆ ಇತರೆ ಎಲೆಕ್ಟ್ರಾನಿಕ್ ಡಿವೈಸ್ ಗಳಲ್ಲಿ ಸ್ವಲ್ಪ ಕಡಿಮೆಯೇ ಎಂದು ಹೇಳಬಹುದು. ಆದರೆ ಈಗ ಹಾಗಲ್ಲ. ಬೇರೆ ಡಿವೈಸ್ ಗಳಲ್ಲೂ ಕೂಡ ಡಿಸೈನ್ ಗೆ ಪ್ರಾಮುಖ್ಯತೆ ನೀಡಲು ಕಂಪೆನಿಗಳು ಇಚ್ಛಿಸಿದಂತೆ ಕಾಣುತ್ತಿದೆ. ಹೌದು ಯಾಕೆಂದರೆ ಸದ್ಯದಲ್ಲಿ ಬ್ಯಾಂಗ್ & ಒಲುಫ್ಸೆನ್ನ ಬೀಸೌಂಡ್ ಎಡ್ಜ್ ಸ್ಪೀಕರ್ ಬಿಡುಗಡೆಗೊಳ್ಳುತ್ತಿದೆ.

ಅಂತದ್ದೇನಿದೆ ಈ ಸ್ಪೀಕರ್ ನ ವಿಶೇಷತೆ ಎಂದು ಕೇಳುತ್ತಿದ್ದೀರಾ? ಮೊದಲನೆಯದಾಗಿ ಈ ಸ್ಪೀಕರಿನ ವೃತ್ತಾಕಾರದಲ್ಲಿದ್ದು ಸೆನ್ಸಿಟೀವ್ ಅಲ್ಯೂಮಿನಿಯಂ ಕೇಸ್ ನ್ನು ಹೊಂದಿದೆ. ಯಾರಾದರೂ ಅದರ ಬಳಿ ಹೋದರೆ ಅದರ ಪ್ರಾಕ್ಸಿಮಿಟಿ ಸೆನ್ಸರ್ ನ ಮೂಲಕ ಬೆಳಕು ಹೊರಚಿಮ್ಮುತ್ತದೆ. ಕೇವಲ ಸ್ಪೀಕರ್ ನ ಸರ್ಫೇಸ್ ಮೇಲೆ ಟ್ಯಾಪ್ ಮಾಡುವ ಮುಖಾಂತರ ಸ್ಟಾರ್ಟ್ , ಸ್ಟಾಪ್ ಮತ್ತು ಟ್ರ್ಯಾಕ್ ಗಳನ್ನು ಸ್ಕಿಪ್ ಮಾಡುವ ಕೆಲಸವನ್ನು ಬಳಕೆದಾರರು ಮಾಡಲು ಇದರಲ್ಲಿ ಅವಕಾಶವಿದೆ.

ಈ ಸ್ಪೀಕರ್ ಬೆಲೆ ಕೇಳಿದರೆ ಅಚ್ಚರಿ ಪಡುವುದು ಗ್ಯಾರಂಟಿ..!

ವಾಲ್ಯೂಮ್ ಕಂಟ್ರೋಲ್ ಮಾಡುವುದು ಹೇಗೆ ಗೊತ್ತಾ?

ಈ ಸ್ಪೀಕರ್ ನಲ್ಲಿ ವಾಲ್ಯೂಮ್ ಕಂಟ್ರೋಲ್ ಮಾಡುವುದಕ್ಕೆ ಬಳಕೆದಾರರು ಬೀಸೌಂಡ್ ಬದಿಗಳಲ್ಲಿ ನಿಧಾನವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ರೋಲ್ ಮಾಡಬೇಕು. ಆಗ ಮಾರ್ಡರೇಟ್ ಆಗಿ ವಾಲ್ಯೂಮ್ ಬದಲಾಗುತ್ತದೆ. ನಿಧಾನವಾಗಿ ರೋಲ್ ಮಾಡದೇ ಒಂದು ವೇಳೆ ಬಲವಾಗಿ ಸ್ಪರ್ಷಿಸಿದರೆ ವಾಲ್ಯೂಮ್ ಬದಲಾವಣೆ ಸ್ವಲ್ಪ ಕರ್ಕಷವಾಗಬಹುದು.

ಸ್ಪೀಕರ್ ಡಿಸೈನ್ ಹೇಗಿದೆ?

ಸ್ಪೀಕರ್ ನ ಉದ್ದಗಲವು 50.2cmx13cm ಆಗಿದೆ. ಹಿಂಭಾಗದಲ್ಲಿ ಮತ್ತು ಮೇಲ್ಬಾಗದಲ್ಲಿ ಕಪ್ಪು ಬಣ್ಣದ ಮ್ಯಾಟ್ ಫಿನಿಶ್ ಇರುವ ಫ್ಯಾಬ್ರಿಕ್ ಇದೆ. ಬೇರೆಬೇರೆ ವಾಲ್ಯೂಮ್ ನಲ್ಲಿ ಸ್ಪೀಕರ್ ನಲ್ಲಿ ಧ್ವನಿ ಸರಿಯಾಗಿ ಕೇಳಬೇಕು ಎಂಬ ಉದ್ದೇಶದಿಂದ ವಿಭಿನ್ನ ಬೇಸ್ ಪೋರ್ಟ್ ನ್ನು ಅಳವಡಿಸಲಾಗಿದೆ. ಶಕ್ತಿಯುವ ಬೇಸ್ ಗಾಗಿ 10 ಇಂಚಿನ ವೂಫರ್, ಎರಡು 4-ಇಂಚಿನ ಮಿಂಡ್ ರೇಜ್ ಡ್ರೈವರ್ಸ್, ಎರಡು ಟ್ವೀಟರ್ ಗಳು ಮತ್ತು 6 ಕ್ಲಾ ಡಿ ಆಂಪ್ಲಿಫೈಯರ್ ಗಳನ್ನು ಕಂಟ್ರೋಲ್ ಮತ್ತು ಬ್ಯಾಲೆನ್ಸ್ ಗಾಗಿ ಅಳವಡಿಸಲಾಗಿದೆ.

ಬ್ಲಾಕ್ ಫ್ಯಾಬ್ರಿಕ್ ಅಥವಾ ಬಟ್ಟೆಯನ್ನು ಬದಲಾಯಿಸುವುದಕ್ಕೂ ಅವಕಾಶವಿದ್ದು Bang & Olufsen ಹೊಸದಾದ ಟ್ರೆಂಡಿ ಫ್ಯಾಬ್ರಿಕ್ ಗಳನ್ನು ಮುಂದಿನ ದಿನಗಳಲ್ಲಿ ಪರಿಚಯಿಸಲಿದೆ.

ಸ್ಪೀಕರ್ ನ ಎರಡೂ ಕಡೆಗಳಲ್ಲಿ 360 ಡಿಗ್ರಿಯಲ್ಲಿ ಸೌಂಡ್ ಬರಲು ಅವಕಾಶವಿದೆ. ಡೈರೆಕ್ಷನಲ್ ಸೌಂಡ್ ಕಂಟ್ರೋಲ್ ಇದೆ. Bang & Olufsen ಆಪ್ ಬಳಸಿ ಬಳಕೆದಾರರು ಆಕ್ಟೀವಿ ಲಿಸನಿಂಗ್ ಏರಿಯಾವನ್ನು ಸೃಷ್ಟಿಸಬಹುದು ಮತ್ತು ಹೆಚ್ಚು ಪ್ಯಾಸಿವ್ ಲಿಸನಿಂಗ್ ಏರಿಯಾವನ್ನು ಸ್ಪೀಕರ್ ನ ರೂಮ್ ಗಳಲ್ಲಿ ಸೃಷ್ಟಿಸಲು ಅವಕಾಶವಿರುತ್ತದೆ.

ಈ ಸ್ಪೀಕರ್ ಬೆಲೆ ಕೇಳಿದರೆ ಅಚ್ಚರಿ ಪಡುವುದು ಗ್ಯಾರಂಟಿ..!

ಬೀಸೌಂಡ್ ಎಡ್ಜ್ ಸ್ಪೀಕರ್ ಜಾಗತಿಕವಾಗಿ ಮೆಚ್ಚುಗೆ ಪಡೆದ ಡಿಸೈನರ್ ಮೈಕೆಲ್ ಅನಸ್ತಾಸಿಯಾಡೆಸ್ ಸಹಯೋಗದೊಂದಿಗೆ ರಚಿಸಲಾಗಿದೆ. ಇದನ್ನುನೆಲದ ಮೇಲೆ ಅಥವಾ ಗೋಡೆಯ ಮೇಲೆ ಇಡಲು ಸಾಧ್ಯವಾಗುವಂತೆ ಸೃಷ್ಟಿ ಮಾಡಲಾಗಿದೆ. ಗೋಡೆಗಳಲ್ಲಿ ತೂಗುಹಾಕಿದಾಗಲೂ ಕೂಡ ರೋಲಿಂಗ್ ವಾಲ್ಯೂಮ್ ಕಂಟ್ರೋಲ್ ವ್ಯವಸ್ಥೆಯು ಕೆಲಸ ನಿರ್ವಹಿಸುತ್ತದೆ.

ಬ್ಲೂಟೂತ್ ಗೂ ಇದು ಬೆಂಬಲ ನೀಡುತ್ತದೆ. ಏರ್ ಪ್ಲೇ2 ಮತ್ತು ಕ್ರೋಮ್ ಕಾಸ್ಟ್ 2 ಜೊತೆಗೂ ಕಂಪ್ಯಾಟಿಬಲ್ ಆಗಿದೆ. ಗೂಗಲ್ ಅಸಿಸ್ಟೆಂಟ್ ಅನೇಬಲ್ಡ್ ಆಗಿರುವ ಸ್ಪೀಕರ್ ಗಳಾದ ಬೀಸೌಂಡ್ 1, ಬೀಸೌಂಡ್ 2, ಅಥವಾ ಅಮೇಜಾನ್ ಎಕೋ ಡಿವೈಸ್ ಗಳ ಜೊತೆಗಿನ ವಾಯ್ಸ್ ಇಂಟರ್ಯಾಕ್ಷನ್ ಗೆ ಇದು ಬೆಂಬಲ ನೀಡುತ್ತದೆ.

ಯಾವಾಗ ಬಿಡುಗಡೆ? ಬೆಲೆ ಎಷ್ಟು?

ಇಷ್ಟೆಲ್ಲ ವೈಶಿಷ್ಟ್ಯತೆಗಳನ್ನು ತಿಳಿದ ನಂತರ ಇದು ಯಾವಾಗ ಬಿಡುಗಡೆಗೊಳ್ಳುತ್ತೆ ಎಂಬ ಕುತೂಹಲ ನಿಮ್ಮಲ್ಲಿದ್ದರೆ ಅದಕ್ಕಾಗಿ ನೀವು ನವೆಂಬರ್ ಮಧ್ಯದ ವರೆಗೆ ಕಾಯಲೇ ಬೇಕು. ಸರಿಯಾದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ನವೆಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗಿದೆ. ಈ ಸ್ಪೀಕರ್ ನ ಬೆಲೆ $3,500 ಅಂದಾಜು 2,46,800 ರುಪಾಯಿಗಳು. ಮುಂದಿನದ್ದು ನಿಮಗೆ ಬಿಟ್ಟ ವಿಚಾರ!

Best Mobiles in India

English summary
This Rs 2,00,000-plus speaker can be rolled to adjust its volume. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X