ಜೆಬ್ರಾನಿಕ್ಸ್‌ನಿಂದ ವಾಯ್ಸ್ ಅಸಿಸ್ಟೆಂಟ್ ಇಯರ್‌ಫೋನ್ ಬಿಡುಗಡೆ!!

|

ಭಾರತದಲ್ಲಿ ಪ್ರಮುಖ ಸೌಂಡ್ ಸಿಸ್ಟಂ, ಮೊಬೈಲ್/ಲೈಫ್ ಸ್ಟೈಲ್ ಪರಿಕರಗಳು ಮತ್ತು ಸರ್ವೈಲೆನ್ಸ್ ಉತ್ಪನ್ನಗಳ ಪ್ರಖ್ಯಾತ ಎಲೆಕ್ಟ್ರಾನಿಕ್ ಬ್ರಾಂಡ್ ಕಂಪೆನಿ 'ಜೆಬ್ರಾನಿಕ್ಸ್ ಇಂಡಿಯಾ' ಹೊಸದಾಗಿ 'ಜೆಬ್-ಜರ್ನಿ' ಎನ್ನುವ ಆಕರ್ಷಕ ಇಯರ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ನೂತನ ಇಯರ್‌ಫೋನ್ ನೆಕ್ ಬ್ಯಾಂಡ್ ವಿನ್ಯಾಸದಲ್ಲಿದ್ದು, ವಾಯ್ಸ್ ಅಸಿಸ್ಟೆಂಟ್ ಸಹಾಯದಿಂದ ಕೆಲಸ ನಿರ್ವಹಿಸುವ ಅತ್ಯುತ್ತಮ ಇಯರ್‌ಫೋನ್ ಎಂದು ಕಂಪೆನಿ ಹೇಳಿಕೊಂಡಿದೆ.

ಜೆಬ್ರಾನಿಕ್ಸ್ ಇಂಡಿಯಾ ಕಂಪೆನಿ ನಿರ್ದೇಶಕ ಪ್ರದೀಪ್ ದೋಷಿ ಅವರು ಹೇಳುವಂತೆ, ವೈಯರ್ಲೆಸ್ ಕ್ರಾಂತಿಯಾಗಿರುವುದರ ಜೊತೆಯಲ್ಲಿಯೇ, ಹೊಸದಾಗಿ ಪ್ರಸ್ತುತಪಡಿಸಲಾದ ನಮ್ಮ ಜೆಬ್-ಜರ್ನಿ ಇಯರ್‌ಫೋನಿನಲ್ಲಿ ವಾಯ್ಸ್ ಅಸಿಸ್ಟೆಂಟೆನ್ಸ್ ವ್ಯವಸ್ಥೆ ಇದೆ. ಇದರಿಂದ ನೀವು ಹೆಚ್ಚಿನದನ್ನು ಮಾಡಲು ಸಾಧ್ಯವಾಗುತ್ತದೆ ಹಾಗೂ ಮತ್ತೊಂದೆಡೆ ಅದು 13 ಗಂಟೆಗಳ ಸತತ ಪ್ಲೇ ಟೈಮ್ ನೀಡುತ್ತದೆ, ಹಾಗಾಗಿ ಸಂಗೀತ ರಸಿಕರಿಗೆ ಇದು ಹೇಳಿ ಮಾಡಿಸಿದ ಉತ್ಪನ್ನವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಜೆಬ್ರಾನಿಕ್ಸ್‌ನಿಂದ ವಾಯ್ಸ್ ಅಸಿಸ್ಟೆಂಟ್ ಇಯರ್‌ಫೋನ್ ಬಿಡುಗಡೆ!!

ಜೆಬ್ರಾನಿಕ್ಸ್ ಕಂಪೆನಿ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಂತೆ, ನಿಮಗೆ ಬೇಸರ ಕವಿದಿರವಂತಹ ಒಂದು ದಿನದಲ್ಲಿ, ಈ ಇಯರ್ಫೋನುಗಳ ಒಂದು ಸರಳವಾದ ಜೋಡಿಯು ನಿಮ್ಮ ಆಲಿಕೆಯ ಅನುಭವವನ್ನು ಸಂಪೂರ್ಣವಾಗಿ ಮೌಲ್ಯಯುತವಾಗಿಸುತ್ತಾ ಮಾಂತ್ರಿಕವಾಗಿ ಧ್ವನಿಯನ್ನು ವೃದ್ಧಿಸುತ್ತದೆ. ವೈಯರ್ಲೆಸ್ ಇಯರ್ಫೋನುಗಳು ನಿಮ್ಮ ಜೀವನಕ್ಕೆ ವೇಗವನ್ನು ನೀಡುತ್ತವೆ, ಉದಾಹರಣೆಗೆ ಜೆಬ್-ಜರ್ನಿಯನ್ನೇ ತೆಗೆದುಕೊಳ್ಳಿ ಅದು ನಿಮಗೆ ಮೀಸಲಿಟ್ಟ ಧ್ವನಿ ಅನುಭವವನ್ನು ಒದಗಿಸುತ್ತದೆ ಎಂದು ಹೇಳಿಕೊಂಡಿದೆ.

ಜೆಬ್ ಜರ್ನಿಯಲ್ಲಿ ಹೆಚ್ಚಿನದನ್ನು ಮಾಡಲು ಅವಕಾಶಗಳಿರುತ್ತವೆ. ವೈಯರ್ಲೆಸ್ ಇಯರ್ಫೋನುಗಳಷ್ಟೇ ಅಲ್ಲದೆ, ಇದರಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಉಪಕರಣಗಳಿಗಾಗಿ ವಾಯ್ಸ್ ಅಸಿಸ್ಟೆಂಟೆನ್ಸ್ ಹೊಂದಿರುತ್ತದೆ ಅದರ ಸಹಾಯದಿಂದ ನೀವು ಅಹ್ಲಾದಕರ ಆಡಿಯೋ ಅನುಭವವನ್ನು ಪಡೆಯಬಹುದು. ಪ್ರಶ್ನೆಗಳನ್ನು ಕೇಳಲು, ವಿವಿಧ ಮಾರ್ಗಗಳನ್ನು ಹುಡುಕಲು ಅಥವಾ ಒಂದು ನಿಗದಿತ ಹಾಡನ್ನು ಆಲಿಸಲು, ವಾಯ್ಸ್ ಅಸಿಸ್ಟೆಂಟೆನ್ಸ್ ನ ಸಹಾಯ ಕೇಳಲು ಸಾಧ್ಯವಿದೆ ಎಂದು ತಿಳಿಸಿದೆ.

ಜೆಬ್ರಾನಿಕ್ಸ್‌ನಿಂದ ವಾಯ್ಸ್ ಅಸಿಸ್ಟೆಂಟ್ ಇಯರ್‌ಫೋನ್ ಬಿಡುಗಡೆ!!

ಇನ್ನು ಇಯರ್ಫೋನಿನಲ್ಲಿ ಡುಯಲ್ ಪೇರಿಂಗ್ ವಿಶೇಷತೆ ಇದ್ದು, ಅದರ ಜೊತೆಯಲ್ಲಿ ಕಾಲ್ ಫಂಕ್ಷನ್ ಸಹ ಇದೆ. ಇದರಲ್ಲಿ ವಾಲ್ಯುಮ್/ಮೀಡಿಯ ಕಂಟ್ರೋಲ್ ಇವೆ ಹಾಗೂ ಬಿಲ್ಟ್ ಇನ್ ರೀಚಾರ್ಜಬಲ್ ಬ್ಯಾಟರಿಯೊಂದಿಗೆ ಕರೆಗಳಿಗಾಗಿ ವೈಬ್ರೇಷನ್ ಅಲರ್ಟ್ ಸಹ ಹೊಂದಿರುತ್ತದೆ. ಈ ವೈಯರ್ಲೆಸ್ ಇಯರ್ಫೋನ್ 1,399 ರೂ.ಗಳಿಗೆ ಕಪ್ಪು ಬಣ್ಣದಲ್ಲಿ ಭಾರತದಾದ್ಯಂತ ಎಲ್ಲಾ ಪ್ರಮುಖ ರೀಟೇಲ್ ಸ್ಟೋರುಗಳಲ್ಲಿ ಲಭ್ಯವಿರುತ್ತದೆ ಎಂದು ಕಂಪೆನಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

Best Mobiles in India

Read more about:
English summary
Zebronics India Pvt. Ltd., the leading domestic brand that is involved in making IT peripherals, mobile/lifestyle accessories, sound system and surveillance products has been launching a slew of speakers of late. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X