ನಿಮ್ಮಲ್ಲೂ ಹಳೇ ಸ್ಮಾರ್ಟ್‌ಫೋನ್ ಇದೆಯಾ..? ಆಗಿದ್ರೆ ಹಳೇ ಮೊಬೈಲ್ ಏನ್ ಮಾಡ್ತಿರಿ..?

By Avinash
|

ಪ್ರತಿ ದಿನವೂ ವಿಶ್ವದ ಒಂದಲ್ಲ ಒಂದು ಕಡೆ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ. ಬಹಳಷ್ಟು ಜನರ ಹತ್ತಿರ ಒಂದು ಸ್ಮಾರ್ಟ್‌ಫೋನ್ ಜತೆಗೆ ಫೀಚರ್ ಫೋನ್ ಇದ್ದೆ ಇರುತ್ತೆ. ಇನ್ನು ಕೆಲವರ ಕೈಯಲ್ಲಿ ಮೂರರಿಂದ ನಾಲ್ಕು ಸ್ಮಾರ್ಟ್‌ಫೋನ್‌ಗಳು ಇರುತ್ತವೆ. ಹೀಗಂತೂ ಸ್ಮಾರ್ಟ್‌ಫೋನ್ ಸ್ವಲ್ಪ ಹಳೆಯದಾದರೂ ಮೂಲೆಗೆ ಬಿತ್ತು ಎನ್ನುವುದು ಗ್ಯಾರಂಟಿ.

ನಿಮ್ಮಲ್ಲೂ ಹಳೇ ಸ್ಮಾರ್ಟ್‌ಫೋನ್ ಇದೆಯಾ..? ಆಗಿದ್ರೆ ಹಳೇ ಮೊಬೈಲ್ ಏನ್ ಮಾಡ್ತಿರಿ.?

ಹೆಚ್ಚೆಂದರೆ ಸದ್ಯಕ್ಕೆ ಒಂದು ಸ್ಮಾರ್ಟ್‌ಫೋನ್‌ನ್ನು 2 ರಿಂದ 3 ವರ್ಷ ಮಾತ್ರ ಬಳಸಿ ಬೀಸಾಡ್ತಿವಿ. ಎಕ್ಸ್‌ಚೆಂಜ್ ಮಾಡುವವರು ಬಹಳಷ್ಟು ಜನ ಸಿಗಲ್ಲ. ಸ್ಮಾರ್ಟ್‌ಫೋನ್‌ ಅಥವಾ ಮೊಬೈಲ್ ಕೇವಲ ಡೇಟಾ ಸರ್ಫಿಂಗ್, ವಿಡಿಯೋ ನೋಡಲು, ಕರೆ ಮಾಡಲು ಇದೆ ಎಂಬ ನಿಮ್ಮ ಕಲ್ಪನೆ ಬಹಳಷ್ಟು ತಪ್ಪು. ಅದಕ್ಕಾಗಿಯೇ ಹಳೇ ಫೋನ್‌ನ್ನು ಏನು ಮಾಡಬಹುದು ಎಂದು ಯೋಚಿಸುತ್ತಿದ್ದರೆ. ಈ ಸ್ಟೋರಿ ಓದಿ... ಹಳೇ ಸ್ಮಾರ್ಟ್‌ಫೋನ್‌ನ ಮರುಬಳಕೆ ಹೇಗೆ ಮಾಡಬೇಕು ಎಂದು ಹೇಳ್ತಿವಿ.

ಸೆಕ್ಯುರಿಟಿ ಸಾಧನಗಳಾಗಿ ಬಳಸಿ

ಸೆಕ್ಯುರಿಟಿ ಸಾಧನಗಳಾಗಿ ಬಳಸಿ

ಸದ್ಯ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ಕ್ಯಾಮೆರಾಗಳಿರುವುದಂತು ನಿಜ. ಅದಕ್ಕಾಗಿಯೇ ನಿಮ್ಮ ಹಳೇ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ಮನೆ, ಕಚೇರಿ ಅಥವಾ ಕಾರ್‌ಗಳಲ್ಲಿ ಮತ್ತು ನಿಮಗೆ ಬೇಕಾದ ಜಾಗದಲ್ಲಿ ಸಿಸಿ ಕ್ಯಾಮೆರಾ ರೀತಿ ಭದ್ರತಾ ದೃಷ್ಟಿಯಿಂದ ಬಳಸಬಹುದು. ಇದಕ್ಕೆ ಸಹಾಯವಾಗಲಿ ಎಂದು ಐಪಿ ವೆಬ್‌ಕ್ಯಾಮ್ ಅಥವಾ ಟೈನಿಕ್ಯಾಮ್ ಮಾನಿಟರ್‌ಗಳಂತಹ ಆಪ್‌ಗಳು ಲಭ್ಯವಿದ್ದು, ಇದರಿಂದ ಲೈವ್ ವಿಡಿಯೋ ನೋಡಲು, ರೆಕಾರ್ಡ್‌ ಮಾಡಿದ ವಿಡಿಯೋಗಳನ್ನು ಕ್ಲೌಡ್‌ ಸ್ಟೋರೆಜ್‌ಗೆ ಅಪ್‌ಲೋಡ್ ಮಾಡಲು ಈ ಆಪ್‌ಗಳನ್ನು ಬಳಸಬಹುದು.

ವಾಹನದ ಜಿಪಿಎಸ್ ಆಗಿ ಬಳಸಿ

ವಾಹನದ ಜಿಪಿಎಸ್ ಆಗಿ ಬಳಸಿ

ನೀವು ಹೊಸ ನಗರಕ್ಕೆ ಹೋಗುವ ಪ್ಲಾನ್ ಹಾಕಿದ್ದರೆ ಅಥವಾ ಟ್ರಾಫಿಕ್‌ನಲ್ಲಿ ಸಿಲುಕಿದ್ದರೆ ಜಿಪಿಎಸ್‌ ಹೊಂದಿರುವುದು ಈಗ ಅವಶ್ಯಕವಾಗಿದೆ. ಇದಕ್ಕಾಗಿ ನಿಮ್ಮ ಹಳೇ ಸ್ಮಾರ್ಟ್‌ಫೋನ್ ಬಳಸುವುದು ಹೆಚ್ಚು ಸೂಕ್ತ. ಹಿಯರ್ ವಿಗೋ ಅಥವಾ ಗೂಗಲ್ ಮ್ಯಾಪ್‌ನಂತಹ ಮ್ಯಾಪಿಂಗ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿ ಚಾಲನೆ ಮಾಡುವುದು ಉತ್ತಮ. ಟರ್ನ್ ಬೈ ಟರ್ನ್ ಧ್ವನಿ ಮೂಲಕ ದಿಕ್ಸೂಚಿ ನೀಡುವ ವೈಶಿಷ್ಟಯವಿರುತ್ತದೆ. ಅದಲ್ಲದೇ, ಆಫ್‌ಲೈನ್ ಬಳಕೆಗಾಗಿ ಸಂಪೂರ್ಣ ನಗರದ ಮ್ಯಾಪ್ ಡೌನ್‌ಲೋಡ್‌ ಮಾಡಿಕೊಂಡರೆ ಇನ್ನು ಅನುಕೂಲ

ಡಿಜಿಟಲ್ ಫೋಟೋ ಫ್ರೇಮ್

ಡಿಜಿಟಲ್ ಫೋಟೋ ಫ್ರೇಮ್

ಎಲ್ಲರತ್ತಿರ ಈಗ ಸಾಕಷ್ಟು ಪೋಟೋಗಳು ಸಿಗುತ್ತವೆ. ಎಲ್ಲವನ್ನೂ ಪ್ರಿಂಟ್‌ ಮಾಡಿ ಫ್ರೇಮ್ ಹಾಕಿಸುವುದಕ್ಕಿಂತ ನಿಮ್ಮ ಹಳೇ ಸ್ಮಾರ್ಟ್‌ಫೋನ್‌ನ್ನು ಡಿಜಿಟಲ್ ಫ್ರೇಮ್‌ನಂತೆ ಬಳಸುವುದು ಸೂಕ್ತ. ತಾಂತ್ರಿಕವಾಗಿ ಅಪ್‌ಡೇಟ್‌ ಆಗಿರುವ ಜನಕ್ಕೆ ಸ್ಮಾರ್ಟ್‌ ಡಿಜಿಟಲ್ ಫ್ರೇಮ್‌ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಇದರಲ್ಲಿ ನಿಮ್ಮ ನೆಚ್ಚಿನ ಫೋಟೊಗಳ ಸ್ಲೈಡ್ ಶೋ ಪ್ರದರ್ಶಿಸಬಹುದು. ಹಿನ್ನೆಲೆ ಸಂಗೀತ, ಆನಿಮೇಷನ್ ಮುಂತಾದ ಹೊಸ ಎಫೆಕ್ಟ್‌ಗಳನ್ನು ಹಾಕಿ ಡಿಜಿಟಲ್ ಫ್ರೇಮ್ ಮಾಡಲು ಡಿಜಿಟಲ್‌ ಫ್ರೇಮ್‌ನಂತಹ ಆಪ್‌ಗಳು ಲಭ್ಯವಿದ್ದು, ಬಳಸಬಹುದು.

ಮೀಡಿಯಾ ಸರ್ವರ್

ಮೀಡಿಯಾ ಸರ್ವರ್

ನೀವು ಬೇರೆ ಡಿವೈಸ್‌ಗಳಲ್ಲಿ ಬಹುಮಾಧ್ಯಮ ಅಂಶಗಳನ್ನು(ಉದಾ. ಸಂಗೀತ, ವೀಡಿಯೊ)ಸ್ಟ್ರೀಮ್ ಮಾಡಲು ಬಯಸಿದರೆ, ಹಳೇ ಸ್ಮಾರ್ಟ್‌ಫೋನ್‌ನ್ನು ಮೀಡಿಯಾ ಸರ್ವರ್‌ ಆಗಿ ಬದಲಾಯಿಸಿ. ಫ್ಲೆಕ್ಸ್‌ ಅಥವಾ ಬಬಲ್ಅಪ್ಎನ್‌ಪಿ ರೀತಿಯ ಆಪ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನ್ನು ಮೀಡಿಯಾ ಸರ್ವರ್ ಆಗಿ ಮಾಡಲು ಸಹಾಯ ಮಾಡುತ್ತವೆ. ಇದರಿಂದ ಸ್ಟ್ರೀಮಿಂಗ್ ವೈಶಿಷ್ಟ್ಯಗಳನ್ನು DLNA ಹೊಂದಾದಾಣಿಕೆ ಸಾಧನಗಳ ಮೂಲಕ ಪಡೆಯಬಹುದು.

ಯೂನಿವರ್ಸಲ್ ರಿಮೋಟ್‌ ಕಂಟ್ರೋಲ್

ಯೂನಿವರ್ಸಲ್ ರಿಮೋಟ್‌ ಕಂಟ್ರೋಲ್

ಏರ್ ಕಂಡಿಷನರ್‌ಗಳು ಮತ್ತು ಟಿವಿಗಳಂತಹ ಎಲ್ಲಾ ಆಧುನಿಕ ಎಲೆಕ್ಟ್ರಾನಿಕ್ಸ್ ವಸ್ತುಗಳು ತಮ್ಮದೇ ಆದ ರಿಮೋಟ್ ಕಂಟ್ರೋಲ್‌ನೊಂದಿಗೆ ಬರುತ್ತವೆ. ನಿಮ್ಮ ಸ್ಮಾರ್ಟ್‌ಫೋನ್ ಐಆರ್ ಬ್ಲಾಸ್ಟರ್ ಫೀಚರ್ ಹೊಂದಿದ್ದರೆ. ಸಾರ್ವತ್ರಿಕ ರಿಮೋಟ್ ಕಂಟ್ರೋಲರ್‌ನಂತೆ ಎಲ್ಲವನ್ನೂ ನಿಯಂತ್ರಿಸಲು ಬಳಸಬಹುದಾಗಿದೆ. ಯುನಿವರ್ಸಲ್ ಟಿವಿ ರಿಮೋಟ್ ಮತ್ತು ಫೀಲ್ ಸ್ಮಾರ್ಟ್ ರಿಮೋಟ್ ಎಂಬ ಆಪ್‌ಗಳಿದ್ದು, ರಿಮೋಟ್‌ ಕಂಟ್ರೋಲ್ ಮಾಡಲು ಉಪಯುಕ್ತವಾಗಿವೆ. ವಿವಿಧ ಗೃಹಪಯೋಗಿ ವಸ್ತುಗಳಿಗೆ ಈ ಆಪ್‌ಗಳು ಹೊಂದಿಕೊಳ್ಳುತ್ತವೆ.

ಮೀಡಿಯಾ ಪ್ಲೇಯರ್ ಹಾಗೂ ಗೇಮಿಂಗ್ ಸಾಧನ

ಮೀಡಿಯಾ ಪ್ಲೇಯರ್ ಹಾಗೂ ಗೇಮಿಂಗ್ ಸಾಧನ

ಹಾಡು ಕೇಳಲು, ಸಿನಿಮಾ ನೋಡಲು, ಗೇಮ್ ಆಡಲು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತೇವೆ. ಇದನ್ನು ಕೇವಲ ಮೀಡಿಯಾ ಪ್ಲೇಯರ್ ಅಥವಾ ಪೋರ್ಟ್‌ಬಲ್ ಗೇಮಿಂಗ್ ಪೋರ್ಟ್‌ನ್ನಾಗಿ ಪರಿವರ್ತಿಸಬಹುದಾಗಿದೆ. ನಿಮ್ಮ ಹಳೇ ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲಾ ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್ಇನ್‌ಸ್ಟಾಲ್ ಮಾಡಿ, ಉತ್ತಮ ಮೀಡಿಯಾ ಪ್ಲೇಯರ್ ಆಪ್‌ ಇನ್‌ಸ್ಟಾಲ್ ಮಾಡಿಕೊಂಡು, ನಿಮ್ಮ ಮಾಧ್ಯಮ ಸಂಗ್ರಹವನ್ನು ಲೋಡ್ ಮಾಡಿದರೆ ಮೀಡಿಯಾ ಪ್ಲೇಯರ್ ರೆಡಿ. ಇನ್ನು ಗೇಮಿಂಗ್‌ಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ತಕ್ಕಂತೆ ಟೆಂಪಲ್ ರನ್ 2ರಿಂದ ಯಾವುದೇ ಗೇಮ್‌ಗಳನ್ನು ಇನ್‌ಸ್ಟಾಲ್ ಮಾಡಿ ಆನಂದಿಸಿ.

ಇಬುಕ್ ರೀಡರ್

ಇಬುಕ್ ರೀಡರ್

ಡಿಜಿಟಲ್‌ ಬುಕ್‌ ಓದುವ ವಿಷಯಕ್ಕೆ ಬಂದಾಗ ಇ-ಓದುಗರು ಉತ್ತಮ ಎನ್ನುವುದು ಅಮೇಜಾನ್ ಕಿಂಡಲ್‌ನಂತಹ ಡಿವೈಸ್‌ಗಳನ್ನು. ಪ್ರತಿಫಲನವಲ್ಲದ ಇ-ಇಂಕ್ ಡಿಸ್‌ಪ್ಲೇಗಳು ಓದುವಿಕೆಯನ್ನು ಆರಾಮದಾಯಕವಾಗಿಸುವುದಲ್ಲದೇ ವಿಸ್ತರಿಸುತ್ತವೆ. ಆದರೆ, ನೀವು ಈಗಾಗಲೇ ಇ-ರೀಡರ್ ಆಗಿಲ್ಲ ಎಂದರೆ, ನಿಮ್ಮ ಸ್ಮಾರ್ಟ್‌ಫೋನ್ನ್ನು ಇ-ರೀಡರ್ ಡಿವೈಸ್ ಆಗಿ ಬಳಸಬಹುದು. ಅಮೆಜಾನ್, ಬಾರ್ನಸ್ & ನೋಬಲ್ ಮತ್ತು ಕೊಬೊಗಳೆಲ್ಲವೂ ತಮ್ಮದೇ ಆಪ್‌ಗಳನ್ನು ಹೊಂದಿವೆ. ಅವುಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ಓದಬಹುದು.

ವೈರ್‌ಲೆಸ್‌ ಹಾಟ್‌ಸ್ಪಾಟ್‌

ವೈರ್‌ಲೆಸ್‌ ಹಾಟ್‌ಸ್ಪಾಟ್‌

ಪ್ರಸ್ತುತ ದಿನಗಳಲ್ಲಿ ಸಂಪರ್ಕ ಅತಿ ಮುಖ್ಯವಾಗಿದೆ. ಈಗಾಗಲೇ ಅನೇಕ ಮನೆಗಳಲ್ಲಿ ಇಂಟರ್‌ನೆಟ್‌ನ್ನು ಹೊಂದಿರುತ್ತಾರೆ. ಆದರೆ, ನೀವು ಇಂಟರ್‌ನೆಟ್‌ ಸಂಪರ್ಕ ಹೊಂದಿಲ್ಲ ಎಂದರೆ ಪ್ರತ್ಯೇಕ SIM ಕಾರ್ಡ್ ಪಡೆದು 3G ಅಥವಾ 4G ಡೇಟಾ ಪ್ಯಾಕ್ ಹಾಕಿಸಿಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ನ್ನು ವೈರ್‌ಲೆಸ್ ಹಾಟ್‌ಸ್ಪಾಟ್‌ ರೀತಿ ಬಳಸಬಹುದು. ಅದಲ್ಲದೇ ನಿಮ್ಮ ಮನೆಯನ್ನು ಇಂಟರ್‌ನೆಟ್ ಆವರಿಸುವಂತೆ ಮಾಡುತ್ತದೆ. ಮತ್ತು ಹಳೆಯ ಫೋನ್‌ನ್ನು ಮರುಬಳಕೆ ಮಾಡುವಂತೆ ಮಾಡುತ್ತದೆ.

ಟ್ವಿಂಕಿಂಗ್ ಮತ್ತು ಅಭಿವೃದ್ಧಿಗಾಗಿ ಬಳಸಿ

ಟ್ವಿಂಕಿಂಗ್ ಮತ್ತು ಅಭಿವೃದ್ಧಿಗಾಗಿ ಬಳಸಿ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಹಂತ ಸತ್ಯವಾಗಿದೆ. ಆಂಡ್ರಾಯ್ಡ್‌ ಒಎಸ್‌ ಮುಕ್ತ ಸಂಪನ್ಮೂಲವಾಗಿರುವುದರಿಂದ ಗೀಕ್ಸ್ ಮತ್ತು ಟಿಂಕರ್ಸಗಳಿಗೆ ಕನಸನ್ನು ನೀಡುತ್ತದೆ. ಆಂಡ್ರಾಯ್ಡ್ ಸಾಧನಗಳಿಗೆ ಲಭ್ಯವಿರುವ ಅನೇಕ ಆಪ್‌ಗಳು, ಲಾಂಚರ್‌ಗಳು, ಥೀಮ್‌ಗಳನ್ನು ಮತ್ತು ROMಗಳು ಇವೆ. ಆದ್ದರಿಂದ ನೀವು ಪ್ರತ್ಯೇಕ ಆಂಡ್ರಾಯ್ಡ್‌ ಸಾಧನ ಹೊಂದಿದ್ದರೆ, ಕಲಿಕೆ ಮತ್ತು ಆಪ್ ಅಭಿವೃದ್ಧಿಗಾಗಿ ಮತ್ತು ಟ್ವೀಕ್ ಮಾಡಲು ಉಪಯೋಗಿಸಬಹುದು.

ಮಕ್ಕಳಿಗೆ ಮೊದಲ ಸ್ಮಾರ್ಟ್ಫೋನ್

ಮಕ್ಕಳಿಗೆ ಮೊದಲ ಸ್ಮಾರ್ಟ್ಫೋನ್

ಆಟಿಕೆ ಮತ್ತು ಸಿಹಿತಿಂಡಿಗಳು ಪಡೆದು ಮಕ್ಕಳು ಆಟ ಆಡುವ ಸಮಯ ಹೋಗಿದೆ. ಹೀಗೆನಿದ್ದರೂ ಮಕ್ಕಳಿಗೆ ಸ್ಮಾರ್ಟ್‌ಫೋನ್ ಬೇಕಾಗಿರುವುದು ನಿಮಗೆ ಗೊತ್ತೆ ಇದೆ. ನಿಮ್ಮ ಮಗುವಿಗೆ ಹೊಸ ಫೋನ್ ನೀಡಲು ನಿಮಗೆ ಇಷ್ಟವಿಲ್ಲದಿದ್ದರೆ, ನಿಮ್ಮ ಹಳೇ ಸ್ಮಾರ್ಟ್‌ಫೋನ್‌ನ್ನು ನಿಮ್ಮ ಮಗುವಿಗೆ ನೀಡಬಹುದು.

Best Mobiles in India

English summary
10 ways you can reuse your old smartphones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X