ಫೇಸ್ ಬುಕ್ಕಿನಲ್ಲಿ 360 ಡಿಗ್ರಿ ಫೋಟೋ ಹಾಕುವುದು ಹೇಗೆ?

Written By:

ಕಳೆದ ವರ್ಷ, ಫೇಸ್ ಬುಕ್ ಸಿಇಒ ಮಾರ್ಕ್ ಝುಕೆರ್ ಬರ್ಗ್ 360 ಡಿಗ್ರಿ ವೀಡಿಯೋ ಪರಿಕಲ್ಪನೆಯನ್ನು ಎಫ್ 8 ಫೇಸ್ ಬುಕ್ ಡೆವೆಲಪರ್ ಕಾನ್ಫರೆನ್ಸ್ ನಲ್ಲಿ ಮುಂದಿಟ್ಟಿದ್ದರು. ಈಗ 360 ಡಿಗ್ರಿ ವೀಡಿಯೋಗಳು ಮತ್ತು 360 ಡಿಗ್ರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ.

ಫೇಸ್ ಬುಕ್ಕಿನಲ್ಲಿ 360 ಡಿಗ್ರಿ ಫೋಟೋ ಹಾಕುವುದು ಹೇಗೆ?

ಇತ್ತೀಚೆಗೆ, ಫೇಸ್ ಬುಕ್ ತನ್ನ ಬಳಕೆದಾರರು ಹೆಚ್ಚೆಚ್ಚು 360 ಡಿಗ್ರಿ ಫೋಟೋಗಳನ್ನು ಅಪ್ ಲೋಡ್ ಮಾಡಲು ಪ್ರೋತ್ಸಾಹಿಸುತ್ತಿದೆ. ಜೊತೆಗೆ, ಫೇಸ್ ಬುಕ್ ನಿಮ್ಮ ಫೋಟೋಗಳನ್ನು ವೀಡಿಯೋಗಳನ್ನಾಗಿ ಮಾಡಲು ಸ್ಲೈಡ್ ಶೋ ಆಯ್ಕೆಯನ್ನೂ ನೀಡಿದೆ. ಅದೇ ತಿಂಗಳಿನಲ್ಲಿ, 360 ಡಿಗ್ರಿ ಫೋಟೋಗಳನ್ನು ನಿಮ್ಮ ಟೈಮ್ ಲೈನಿಗೆ ಹಾಕುವ ಸೌಕರ್ಯವನ್ನೂ ನೀಡಿದೆ.

ಓದಿರಿ:100% ಗ್ಯಾರಂಟಿ: ರಿಲಾಯನ್ಸ್ ಜಿಯೋ 4ಜಿ ಡೌನ್‌ಲೋಡ್ ವರ್ಧನೆಗೆ ಟಿಪ್ಸ್

ಸದ್ಯಕ್ಕೆ ನಿಮ್ಮ ಫೇಸ್ ಬುಕ್ ಆ್ಯಪ್ ಮೂಲಕ 360 ಡಿಗ್ರಿ ಫೋಟೋಗಳನ್ನು ತೆಗೆಯುವುದು ಸಾಧ್ಯವಿಲ್ಲ, ಆದರೆ ಅನೇಕ ಥರ್ಡ್ ಪಾರ್ಟಿ ಆ್ಯಪ್ ಗಳು ಇದಕ್ಕಾಗಿ ಲಭ್ಯವಿದೆ ಅಥವಾ ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಪನೋರಮಾ ಆಯ್ಕೆಯನ್ನೂ ಉಪಯೋಗಿಸಹಬುದು.

ಓದಿರಿ: 1 ಆಂಡ್ರಾಯ್ಡ್ ಫೋನ್‌ನಲ್ಲಿ 2 ಫೇಸ್‌ಬುಕ್ ಖಾತೆಗಳ ಬಳಕೆ ಹೇಗೆ?

ಮೊದಲಿಗೆ ಗೂಗಲ್ ಸ್ಟ್ರೀಟ್ ವ್ಯೀವ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ. ಇದು ಆ್ಯಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಐ.ಒ.ಎಸ್ ಆ್ಯಪ್ ಸ್ಟೋರ್ ಗಳಲ್ಲಿ ಲಭ್ಯ.

ಹಂತ 1: ಗೂಗಲ್ ಸ್ಟ್ರೀಟ್ ವ್ಯೀವ್ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿದ ನಂತರ, ಆ್ಯಪ್ ಅನ್ನು ತೆರೆಯಿರಿ, ಬಲ ಮೇಲ್ತುದಿಯಲ್ಲಿರುವ ಹಳದಿ ಬಣ್ಣದ ಕ್ಯಾಮೆರಾ ಬಟನ್ನಿನ ಮೇಲೆ ಕ್ಲಿಕ್ಕಿಸಿ.

ಹಂತ 2: ನಿಮ್ಮ ಕ್ಯಾಮೆರಾ ಮತ್ತು ಲೊಕೇಷನ್ ಅನ್ನು ಉಪಯೋಗಿಸಲು ಆ್ಯಪ್ ಗೆ ಅನುಮತಿ ನೀಡಿ.

ಹಂತ 3: ಒಂದು ಜಾಗದಲ್ಲಿ ಅಲ್ಲಾಡದೆ ನಿಲ್ಲಿ, ನಿಮ್ಮ ಕ್ಯಾಮೆರಾವನ್ನು ಹಳದಿ ವೃತ್ತವು ದೊಡ್ಡದಾದ ಬಿಳಿ ವೃತ್ತದಲ್ಲಿರುವಂತೆಯೇ ಚಲಿಸಿ. ಮುಗಿದ ನಂತರ, ನಿಮ್ಮ ಚಿತ್ರ ತನ್ನಿಂತಾನೇ ಸೇವ್ ಆಗುತ್ತದೆ. ಈಗ ಸ್ವಲ್ಪ ಹಿಂದೆ ಮುಂದೆ ಹೋಗಿ ಇನ್ನೊಂದು ಚಿತ್ರವನ್ನು ಅದೇ ರೀತಿಯಲ್ಲಿ ತೆಗೆಯಿರಿ.

ಹಂತ 4: ಕ್ಯಾಮೆರಾದ ಸೂಚನೆಗಳನ್ನು ಪಾಲಿಸಿ, ನಿಮ್ಮ ಸುತ್ತಲಿರುವದನ್ನೆಲ್ಲಾ ಕ್ಯಾಮೆರಾದಲ್ಲಿ ಸೆರೆ ಹಿಡಿಯಿರಿ.

ಹಂತ 5: 360 ಡಿಗ್ರಿ ಫೋಟೋಗಳನ್ನು ತೆಗೆಯುವಾಗ, ಪ್ರಗತಿಯನ್ನು ತೋರಿಸಲಾಗುತ್ತದೆ, ಹೊರಗಿನ ಬಿಳಿ ವೃತ್ತ ನಿಧಾನಕ್ಕೆ ಹಳದಿ ವೃತ್ತದಿಂದಾವೃತವಾಗುತ್ತದೆ.

ಹಂತ 6: ಚಿತ್ರ ತೆಗೆಯುವುದನ್ನು ಮುಗಿಸಿದ ನಂತರ, ಹಳದಿ ವೃತ್ತವು ಹಸಿರಾಗುತ್ತದೆ, ಪ್ರಕ್ರಿಯೆ ಮುಗಿದುದನ್ನು ಸೂಚಿಸುತ್ತದೆ. ಈಗ ಚಿತ್ರವು ನಿಮ್ಮ ಗ್ಯಾಲರಿ ಆ್ಯಪ್ ನಲ್ಲಿ ಸೇವ್ ಆಗಿರುತ್ತದೆ.

ಈಗ 360 ಡಿಗ್ರಿ ಫೋಟೋಗಳನ್ನು ನಿಮ್ಮ ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿ.

ಓದಿರಿ: 'ಐಓಎಸ್ 10'ರಲ್ಲಿನ ಎಲ್ಲರೂ ತಿಳಿಯಲೇಬೇಕಾದ ರಹಸ್ಯ ಫೀಚರ್‌ಗಳು!

ಅಪ್ ಲೋಡ್ ಮಾಡುವುದು ಇನ್ನಿತರೆ ಚಿತ್ರಗಳನ್ನು ಅಪ್ ಲೋಡ್ ಮಾಡಿದಂತೆಯೇ. ನಿಮ್ಮ ನ್ಯೂಸ್ ಫೀಡಿಗೆ ಹೋಗಿ, ಚಿತ್ರಗಳನ್ನು ಆಯ್ದುಕೊಳ್ಳಿ ಮತ್ತು ಪಬ್ಲಿಷ್ ಮಾಡಿ.

ನಿಮ್ಮ ಚಿತ್ರಕ್ಕೆ ಲೊಕೇಷನ್ ಹಾಕಬಹುದು, ನಿಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Last year, Facebook CEO, Mark Zuckerberg has unveiled the 360-degree video concept at the annual F8 Facebook developer conference.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot