100% ಗ್ಯಾರಂಟಿ: ರಿಲಾಯನ್ಸ್ ಜಿಯೋ 4ಜಿ ಡೌನ್‌ಲೋಡ್ ವರ್ಧನೆಗೆ ಟಿಪ್ಸ್

By Shwetha
|

ತನ್ನ ಆಫರ್‌ಗಳ ಮೂಲಕ ರಿಲಾಯನ್ಸ್ ಜಿಯೋ ಸದ್ಯ ಸುದ್ದಿಯಲ್ಲಿದೆ. ಮೇನಲ್ಲಿ ತನ್ನ ಪ್ರಿವ್ಯೂ ಆಫರ್‌ಗಳ ಮೂಲಕ ಕಂಪೆನಿ ನೆಟ್‌ವರ್ಕ್ ಪರೀಕ್ಷೆಯನ್ನು ಆರಂಭಿಸಿತ್ತು ಅಂತೆಯೇ ಈ ತಿಂಗಳ ಆರಂಭದಲ್ಲಿ ಇದನ್ನೇ ವೆಲ್‌ಕಮ್ ಆಫರ್ ಎಂಬುದಾಗಿ ಪರಿಗಣಿಸಿ ಅದಕ್ಕೆ ಚಾಲನೆಯನ್ನು ನೀಡಿತ್ತು. ಇದುವರೆಗೆ ಕಂಪೆನಿಯ ಆಫರಿಂಗ್ ಯೋಜನೆಯ ಹೆಸರನ್ನು ಬದಲಾಯಿಸಿಲ್ಲ. ಅನಿಯಮಿತ 4ಜಿ ಡೇಟಾ, ವಾಯ್ಸ್ ಕರೆಗಳು, ಅನಿಯಮಿತ ಎಸ್‌ಎಮ್‌ಎಸ್ ಅನ್ನು ತನ್ನ ಬಳಕೆದಾರರಿಗೆ ಇದು ನೀಡಿದೆ.

ಓದಿರಿ: ಜಿಯೋ ಸಿಮ್ ಕುರಿತ ಸಕಲ ಗೊಂದಲಗಳಿಗೆ ಇಲ್ಲಿದೆ ಉತ್ತರ

ಹೆಚ್ಚಿದ ಜನಸಂದಣಿಯಿಂದಾಗಿ ಸಿಮ್ ಖರೀದಿ ಕೊಂಚ ಕಷ್ಟವಾಗಿದೆ. ಸಪ್ಟೆಂಬರ್ 5 ರಿಂದ ಸೇವೆಯನ್ನು ಎಲ್ಲರಿಗಾಗಿ ಲಭ್ಯವಾಗುವಂತೆ ಮಾಡಲಾಗಿದೆ. ಪ್ರಿವ್ಯೂ ಸಮಯದಲ್ಲಿದ್ದ ಸ್ಪೀಡ್ ಈಗ ದೊರೆಯುತ್ತಿಲ್ಲ ಎಂಬುದು ಹೆಚ್ಚಿನ ಬಳಕೆದಾರರ ದೂರಾಗಿದ್ದು, ಇದನ್ನು ಸಾರ್ವಜನಿಕಗೊಳಿಸಿದ ನಂತರ ಡೌನ್‌ಲೋಡ್ ವೇಗದಲ್ಲಿ ಇಳಿಮುಖವನ್ನು ಫೋನ್ ಬಳಕೆದಾರರು ಕಂಡುಕೊಳ್ಳುತ್ತಿದ್ದಾರೆ.

ಓದಿರಿ: 2G, 4G ರೋಮಿಂಗ್‌ ಪ್ಯಾಕ್‌ಗೆ ಬಿಎಸ್‌ಎನ್‌ಎಲ್‌ ಮತ್ತು ರಿಲಾಯನ್ಸ್ ಜಿಯೋ ಒಪ್ಪಂದ

ಇಂದಿನ ಲೇಖನದಲ್ಲಿ ಈ ದೋಷಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದರ ವಿವರ ಮಾಹಿತಿಗಳನ್ನು ನಾವು ತಿಳಿಸುತ್ತಿದ್ದು ಇದು ನಿಮಗೆ ಡೌನ್‌ಲೋಡ್ ವೇಗದಲ್ಲಿರುವ ನಿಧಾನಗತಿಯ ದೋಷವನ್ನು ಸರಿಪಡಿಸುವಲ್ಲಿ ಸಹಕಾರಿಯಾಗಲಿದೆ.

ಮೊಬೈಲ್ ಬ್ಯಾಂಡ್ ಅನ್ನು ಲಾಕ್ ಮಾಡಿ

ಮೊಬೈಲ್ ಬ್ಯಾಂಡ್ ಅನ್ನು ಲಾಕ್ ಮಾಡಿ

ಇತರ ಬ್ಯಾಂಡ್‌ಗಳಿಗಿಂತ ರಿಲಾಯನ್ಸ್ ಜಿಯೋ ಆಫರ್ ಬೇರೆ ಬೇರೆ ವೇಗಗಳನ್ನು ನೀಡುತ್ತಿದ್ದು ನಿಮ್ಮ ಮೊಬೈಲ್‌ನ ಬ್ಯಾಂಡ್ ಅನ್ನು ನೀವು 40 ಕ್ಕೆ ಲಾಕ್ ಮಾಡಬೇಕು. ಕ್ವಾಲ್‌ಕಾಮ್ ಡಿವೈಸ್‌ಗಳಲ್ಲಿ *#*#4636#*#* ಅನ್ನು ನಮೂದಿಸಿ ಮತ್ತು ಎಲ್‌ಟಿಇ ಬ್ಯಾಂಡ್ ಅನ್ನು ಬ್ಯಾಂಡ್ 40 ಗೆ ಬದಲಾಯಿಸಿಕೊಳ್ಳಿ.

ಕ್ವಾಲ್‌ಕಾಮ್ ಚಿಪ್ ಡಿವೈಸ್‌

ಕ್ವಾಲ್‌ಕಾಮ್ ಚಿಪ್ ಡಿವೈಸ್‌

ಕೆಲವೊಂದು ಕ್ವಾಲ್‌ಕಾಮ್ ಚಿಪ್ ಡಿವೈಸ್‌ಗಳಿಗೆ ಈ ಸಲಹೆ ಅನ್ವಯವಾಗುತ್ತದೆ ಮತ್ತು ಮೀಡಿಯಾ ಟೆಕ್ ಚಿಪ್‌ಸೆಟ್ ಡಿವೈಸ್‌ಗಳಾದ ಒನ್ ಪ್ಲಸ್ 3, ಶ್ಯೋಮಿ ಎಮ್ಐ 5, ಮುಂತಾದ ಸೆಟ್‌ಗಳಿಗೆ ಇದು ಅನ್ವಯವಾಗುತ್ತದೆ.

ಮೀಡಿಯಾ ಟೆಕ್ ಡಿವೈಸ್‌ಗಳಿಗಾಗಿ ಎಮ್‌ಟಿಕೆ ಇಂಜಿನಿಯರಿಂಗ್ ಟೂಲ್

ಮೀಡಿಯಾ ಟೆಕ್ ಡಿವೈಸ್‌ಗಳಿಗಾಗಿ ಎಮ್‌ಟಿಕೆ ಇಂಜಿನಿಯರಿಂಗ್ ಟೂಲ್

ಮೀಡಿಯಾ ಟೆಕ್ ಡಿವೈಸ್‌ಗಳನ್ನು ನಾವು ಹೊಂದಿದ್ದೇವೆ. ಇದನ್ನು ಎಲ್‌ಟಿಇ ಬ್ಯಾಂಡ್ ಅನ್ನಾಗಿ ನೀವು ಪರಿವರ್ತಿಸಿಕೊಳ್ಳಬಹುದಾಗಿದೆ ಆದರೆ ಇದು ಕೆಲವು ಸೆಟ್‌ಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಮೀಡಿಯಾ ಟೆಕ್ ಡಿವೈಸ್‌ಗಳಿಗಾಗಿ ಎಮ್‌ಟಿಕೆ ಇಂಜಿನಿಯರಿಂಗ್ ಟೂಲ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಎಲ್‌ಟಿಇ ಬ್ಯಾಂಡ್ ಅನ್ನು ಬ್ಯಾಂಡ್ 40 ಗೆ ಲಾಕ್ ಮಾಡಿ.

ಎಪಿಎನ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು

ಎಪಿಎನ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎಪಿಎನ್ ಬದಲಾಯಿಸುವುದು ಮುಂದಿನ ಹಂತವಾಗಿದೆ. ಸಾಮಾನ್ಯ ಎಪಿಎನ್ ಸೆಟ್ಟಿಂಗ್‌ಗಳು ಸಾಮಾನ್ಯವಾಗಿ ಉತ್ತಮ ಡೇಟಾ ಡೌನ್‌ಲೋಡ್ ವೇಗಗಳನ್ನು ವಿತರಿಸುತ್ತದೆ, ಆದರೆ ಎಪಿಎನ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಡೇಟಾ ವೇಗವನ್ನು ವರ್ಧಿಸುವಲ್ಲಿ ಸಹಕಾರಿಯಾಗಲಿದೆ.

 • Name -RJio
 • APN - Jionet
 • APN Type - Default
 • Proxy - No changes
 • Port - No changes
 • Username - No changes
 • Password - No changes
 • Server - www.google.com
 • MMSC - No changes
 • MMS proxy - No changes
 • MMS port - No changes
 • MCC - 405
 • MNC - 857 or 863 or 874
 • Authentication type - No changes
 • APN Protocol - Ipv4/Ipv6
 • ಅಗತ್ಯ ಬ್ಯಾಕಪ್‌

  ಅಗತ್ಯ ಬ್ಯಾಕಪ್‌

  ಸೆಟ್ಟಿಂಗ್‌ಗಳು ಕೆಲವೊಮ್ಮೆ ಕಾರ್ಯನಿರ್ವಹಿಸುವುದಿಲ್ಲ, ನಿಮ್ಮ ಹಿಂದಿನ ಎಪಿಎನ್‌ನ ಅಗತ್ಯ ಬ್ಯಾಕಪ್‌ಗಳನ್ನು ನೀವು ತೆಗೆದುಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

  ಡೌನ್‌ಲೋಡ್ ಸ್ನ್ಯಾಪ್ ವಿಪಿಎನ್

  ಡೌನ್‌ಲೋಡ್ ಸ್ನ್ಯಾಪ್ ವಿಪಿಎನ್

  ಎಪಿಎನ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿಕೊಂಡ ನಂತರ, ಗೂಗಲ್ ಪ್ಲೇ ಸ್ಟೋರ್‌ನಿಂದ ಸ್ನ್ಯಾಪ್ ವಿಪಿಎನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ, ಇದು ಉಚಿತವಾಗಿ ಲಭ್ಯವಿದೆ.

  ಫ್ರಾನ್ಸ್ / ಸಿಂಗಪೂರ್ ಸರ್ವರ್‌ಗೆ ಸಂಪರ್ಕ ಪಡೆದುಕೊಳ್ಳಿ

  ಫ್ರಾನ್ಸ್ / ಸಿಂಗಪೂರ್ ಸರ್ವರ್‌ಗೆ ಸಂಪರ್ಕ ಪಡೆದುಕೊಳ್ಳಿ

  ಸ್ನ್ಯಾಪ್ ವಿಪಿಎನ್ ಅನ್ನು ಡೌನ್‌ಲೋಡ್ ಮಾಡಿಕೊಂಡ ನಂತರ, ಫ್ರಾನ್ಸ್ ಇಲ್ಲವೇ ಸಿಂಗಪೂರ್‌ನಲ್ಲಿರುವ ಸರ್ವರ್‌ಗಳಿಗೆ ಸಂಪರ್ಕವನ್ನು ಪಡೆದುಕೊಳ್ಳಬೇಕು. ಈ ಟಿಪ್ಸ್ ಕೇವಲ ಡೌನ್‌ಲೋಡ್ ವೇಗವನ್ನು ಸುಧಾರಿಸುತ್ತದೆ ಆದರೆ ಬ್ರೌಸಿಂಗ್ ವೇಗವನ್ನಲ್ಲ.

  ಗಮನಿಸಿ: ಈ ಸಂದರ್ಭದಲ್ಲಿ ಏನಾದರೂ ದೋಷ ಉಂಟಾದಲ್ಲಿ ಗಿಜ್‌ಬಾಟ್ ಇದಕ್ಕೆ ಜವಬ್ದಾರರಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

Best Mobiles in India

English summary
Hereby, we list the proper steps to increase the download speed in Reliance Jio 4G network.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X