"ಫೇಸ್‌ಬುಕ್‌ ಡೈರೆಕ್ಟ್" ಆಯ್ಕೆ ಬಳಸಿದ್ದೀರಾ? ಏನಿದು ಹೊಸ ಆಯ್ಕೆ? ಉಪಯೋಗ ಹೇಗೆ?

ಫೇಸ್‌ಬುಕ್‌ ಡೈರೆಕ್ಟ್ ಆಯ್ಕೆಯು ಈಗಾಗಲೇ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಅಲಂಕರಿಸಿದ್ದು, ಫೆಸ್‌ಬುಕ್‌ನಲ್ಲಿ ಆಪ್‌ನಲ್ಲಿ ಟ್ರೆಂಡ್ ಆಗುತ್ತಿದೆ.!!

|

200 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಪ್ರಪಂಚದ ದಿಗ್ಗಜ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಆಗಾಗ ತನ್ನ ಆಪ್‌ ಅನ್ನು ಅಪ್‌ಡೇಟ್‌ ಮಾಡುತ್ತಲೇ ಇರುತ್ತದೆ. ಪ್ರತಿ ಅಪ್‌ಡೇಟ್‌ ಜತೆಯಲ್ಲಿಯೂ ಒಂದೊಂದು ಹೊಸತನವನ್ನು ಪರಿಚಯಿಸುತ್ತದೆ. ಇದಕ್ಕೆ ಇತ್ತೀಚೆಗೆ ಸೇರ್ಪಡೆ "ಫೇಸ್‌ಬುಕ್‌ ಡೈರೆಕ್ಟ್"!!

70GB ಅನ್‌ಲಿಮಿಟೆಡ್ ಏರ್‌ಟೆಲ್‌ ಡೇಟಾ ಪಡೆಯುವುದು ಹೇಗೆ?

ಹೌದು, ಫೇಸ್‌ಬುಕ್‌ ತಂದಿರುವ ಹೊಸ ಫೇಸ್‌ಬುಕ್‌ ಡೈರೆಕ್ಟ್ ಆಯ್ಕೆಯು ಈಗಾಗಲೇ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಅಲಂಕರಿಸಿದ್ದು, ಫೆಸ್‌ಬುಕ್‌ನಲ್ಲಿ ಆಪ್‌ನಲ್ಲಿ ಟ್ರೆಂಡ್ ಆಗುತ್ತಿದೆ.!! ಹಾಗಾಗಿ, ಹೊಸದಾಗಿ ಸೇರ್ಪಡೆಯಾಗಿರುವ ಈ ಫೇಸ್‌ಬುಕ್‌ ಡೈರೆಕ್ಟ್ ಆಯ್ಕೆ ಏಕೆ? ಏನಿದರ ವಿಶೇಷ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.

 ಏನಿದು ಡೈರೆಕ್ಟ್ ಆಯ್ಕೆ.!!

ಏನಿದು ಡೈರೆಕ್ಟ್ ಆಯ್ಕೆ.!!

ಹೆಸರಿನಲ್ಲಿಯೇ ಸೂಚಿಸಿರುವಂತೆ ಫೇಸ್‌ಬುಕ್‌ ಡೈರೆಕ್ಟ್ ಆಯ್ಕೆಯ ಮೂಲಕ ನೀವು ತೆಗೆದ ಫೋಟೊ ಅಥವಾ ವಿಡಿಯೊ ಫೈಲ್‌ ಅನ್ನು ನಿಮ್ಮ ಗೆಳೆಯರಿಗೆ ಕಳಿಸಬಹುದಾಗಿದ್ದು, ಒಂದು ಫೋಟೊ ಅಥವಾ ವಿಡಿಯೊ ಅನ್ನು ಒಂದೇ ಬಾರಿಗೆ ಹಲವು ಗೆಳೆಯರಿಗೆ ಕಳಿಸಬಹುದಾಗಿದೆ.

ಆಕ್ಟಿವಿಟಿ ತೋರಿಸಿ.!!

ಆಕ್ಟಿವಿಟಿ ತೋರಿಸಿ.!!

ಫೇಸ್‌ಬುಕ್‌ ಡೈರೆಕ್ಟ್ ಆಯ್ಕೆಯಲ್ಲಿ Your Story ಎಂಬಲ್ಲಿ ಒತ್ತುವುದರ ಮೂಲಕ ನಿಮ್ಮ ಆಕ್ಟಿವಿಟಿಯನ್ನು ನಿಮ್ಮ ಗೆಳೆಯರಿಗೆಲ್ಲಾ ತೋರಿಸಬಹುದು. ಜೊತೆಗೆ ನೀವು ಫೋಟೊ ಅಥವಾ ವಿಡಿಯೊ ಫೈಲ್‌ಗಳನ್ನು ನಿಮ್ಮ ಫೇಸ್‌ಬುಕ್‌ ವಾಲ್‌ಗೆ ಪೋಸ್ಟ್ ಕೂಡ ಮಾಡಬಹುದಾಗಿದೆ.!

ವಿಡಿಯೋಗಳ ಮೇಲೆ ಟೆಕ್ಸ್ಟ್ ಟೈಪ್‌ ಮಾಡಿ.!!

ವಿಡಿಯೋಗಳ ಮೇಲೆ ಟೆಕ್ಸ್ಟ್ ಟೈಪ್‌ ಮಾಡಿ.!!

ಫೇಸ್‌ಬುಕ್‌ ಡೈರೆಕ್ಟ್‌ ಆಯ್ಕೆ ಮೂಲಕ ನೇರವಾಗಿ ಫೇಸ್‌ಬುಕ್‌ ಕ್ಯಾಮೆರಾದಿಂದಲೇ ಫೋಟೊ ಅಥವಾ ವಿಡಿಯೊ ರೆಕಾರ್ಡ್‌ ಮಾಡಬಹುದು. ಕ್ಲಿಕ್ ಐಕಾನ್‌ ಮೇಲೆಯೇ ಲಾಂಗ್‌ಪ್ರೆಸ್‌ ಮಾಡಿದರೆ ವಿಡಿಯೊ ರೆಕಾರ್ಡ್‌ ಆಗುತ್ತದೆ. ಹೀಗೆ ರೆಕಾರ್ಡ್‌ ಆದ ಫೋಟೊ ಮತ್ತು ವಿಡಿಯೋ ಮೇಲೆ ಟೆಕ್ಸ್ಟ್ ಟೈಪ್‌ ಮಾಡುವ ಅವಕಾಶವೂ ಇಲ್ಲಿದೆ.

ಡೌನ್‌ಲೋಡ್ ಮಾಡಬಹದು.!!

ಡೌನ್‌ಲೋಡ್ ಮಾಡಬಹದು.!!

ಫೇಸ್‌ಬುಕ್‌ ಡೈರೆಕ್ಟ್ ಆಯ್ಕೆಯ ಮೂಲ ತೆಗೆಯಲಾದ ಫೋಟೊ ವಿಡಿಯೊಗಳನ್ನು ಸೆಂಡ್, ಪೋಸ್ಟ್‌ ಮಾಡುವ ಜತೆಯಲ್ಲಿಯೇ, ಇವುಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳುವ ಆಯ್ಕೆಯೂ ಇಲ್ಲಿದೆ. ಹಾಗಾಗಿ, ಫೇಸ್‌ಬುಕ್‌ ಡೈರೆಕ್ಟ್ ಆಯ್ಕೆ ಒಂತರಾ ವಿಶೇಷವಾಗಿದೆ.!!

Best Mobiles in India

English summary
Facebook Stories, Direct and Camera are simple to use. However, they are short-lived unless you post them on your timeline.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X