ನಿಮ್ಮ ಸ್ವಂತ ಗೂಗಲ್‌ ಅಸಿಸ್ಟೆಂಟ್‌ ಹೋಮ್‌ ರೂಟೀನ್ ಕ್ರಿಯೆಟ್‌ ಮಾಡುವುದು ಹೇಗೆ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್ ತನ್ನ ಸೇವೆಗಳ ಮೂಲಕ ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಇನ್ನು ಗೂಗಲ್‌ ಪರಿಚಯಿಸಿರುವ ಸೇವೆಗಳಲ್ಲಿ ಗೂಗಲ್‌ ಅಸಿಸ್ಟೆಂಟ್‌ ಸೇವೆ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸ್ಮಾರ್ಟ್‌ ಡಿವೈಸ್‌ಗಳ ಬಳಕೆ ಹೆಚ್ಚಾದಂತೆ ಗೂಗಲ್‌ ಅಸಿಸ್ಟೆಂಟ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ನೋಡಬಹುದಾಗಿದೆ. ಸದ್ಯ ಇದೀಗ ಗೂಗಲ್‌ ತನ್ನ ಗೂಗಲ್‌ ಅಸಿಸ್ಟೆಂಟ್‌ನಲ್ಲಿ ಹೊಸ ಫೀಚರ್ಸ್‌ ಅನ್ನು ಹೊರತಂದಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಗೂಗಲ್‌ ಅಸಿಸ್ಟೆಂಟ್‌ ಸೇವೆಯಲ್ಲಿ ಹೊಸ ಫೀಚರ್ಸ್‌ ಪರಿಚಯಿಸಿದೆ. ಈ ಹೊಸ ಫೀಚರ್ಸ್‌ ಬಳಕೆದಾರರಿಗೆ ಜಾಗತಿಕವಾಗಿ ತಮ್ಮದೇ ಆದ ಸೂರ್ಯೋದಯ ಅಥವಾ ಸೂರ್ಯಾಸ್ತದ ದಿನಚರಿಯನ್ನು ಕ್ರಿಯೆಟ್‌ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಇದನ್ನು ಸೆಟ್‌ ಮಾಡುವುದು ಕೂಡ ಸುಲಭ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಗೂಗಲ್ ವಿವರಿಸಿದೆ. ಹಾಗಾದ್ರೆ ಗೂಗಲ್‌ ಅಸಿಸ್ಟೆಂಟ್‌ ಸೇರಿರುವ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಗೂಗಲ್ ಅಸಿಸ್ಟೆಂಟ್ ಈ ಪದವನ್ನು ಇಂದು ಎಲ್ಲರೂ ಕೇಳಿರುತ್ತಾರೆ. ಏಕೆಂದರೆ ನೀವು ಏನೆ ಹೇಳಿದರೂ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಸಾಮರ್ಥ್ಯವನ್ನು ಈ ಅಸಿಸ್ಟೆಂಟ್‌ ಹೊಂದಿದೆ. ಇದೇ ಕಾರಣಕ್ಕೆ ಗೂಗಲ್‌ ಅಸಿಸ್ಟೆಂಟ್‌ ಟಾಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸದ್ಯ ಇದೀಗ ಬಳಕೆದಾರರಿಗೆ ಅವರ ಅಗತ್ಯಗಳಿಗೆ ಅನುಗುಣವಾಗಿ ಮನೆ ದಿನಚರಿಗಳನ್ನು ರಚಿಸಲು ಅನುವು ಮಾಡಿಕೊಡುವ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಈ ಫೀಚರ್ಸ್‌ ಬಳಸಿಕೊಂಡು ಮನೆ ದಿನಚರಿ ಕ್ರಿಯೆಟ್‌ ಮಾಡುವುದಕ್ಕೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ನಿಮ್ಮ ಸ್ವಂತ Google ಅಸಿಸ್ಟೆಂಟ್‌ ಮನೆ ದಿನಚರಿಯನ್ನು ಕ್ರಿಯೆಟ್‌ ಮಾಡುವುದು ಹೇಗೆ?

ನಿಮ್ಮ ಸ್ವಂತ Google ಅಸಿಸ್ಟೆಂಟ್‌ ಮನೆ ದಿನಚರಿಯನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಹಂತ 1: ಗೂಗಲ್ ಹೋಮ್ ಅಪ್ಲಿಕೇಶನ್‌ನಲ್ಲಿ, ವಾಡಿಕೆಯ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ನಂತರ ಪರದೆಯ ಕೆಳಭಾಗದಲ್ಲಿರುವ ಆಡ್ ಬಟನ್ ಟ್ಯಾಪ್ ಮಾಡಿ.

ಹಂತ 2: "When..." ಆಯ್ಕೆಯ ಅಡಿಯಲ್ಲಿ ಕಮಾಂಡ್‌ಗಳನ್ನು ಸೇರಿಸಿ> ಆಡ್‌ ಬಟನ್ ಮೇಲೆ ಟ್ಯಾಪ್ ಮಾಡಿ> ವಾಡಿಕೆಯಂತೆ ಪ್ರಚೋದಿಸಲು ನೀವು ಹೇಳಲು ಬಯಸುವ ನುಡಿಗಟ್ಟು ನಮೂದಿಸಿ.

ಹಂತ 3: ಒಕೆ ಟ್ಯಾಪ್ ಮಾಡಿ ನಂತರ ಸೇವ್ ಟ್ಯಾಪ್ ಮಾಡಿ.

ಹಂತ 4: "ಅಸಿಸ್ಟೆಂಟ್ ವಿಲ್ ..." ವಿಭಾಗದ ಅಡಿಯಲ್ಲಿ, ಆಡ್ ಆಕ್ಷನ್ ಅನ್ನು ಟ್ಯಾಪ್ ಮಾಡಿ ನಂತರ ಸಹಾಯಕ ಏನು ಮಾಡಬೇಕೆಂದು ನಮೂದಿಸಿ. ಬಹು ಕಾರ್ಯಗಳನ್ನು ನಿರ್ವಹಿಸಲು ನೀವು Google ಅಸಿಸ್ಟೆಂಟ್‌ ಅನ್ನು ಕೇಳಬಹುದು.

ಗೂಗಲ್‌

ಈ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ವಂತ ಗೂಗಲ್‌ ಅಸಿಸ್ಟೆಂಟ್‌ ಹೋಮ್‌ ರೂಟೀನ್ ಅನ್ನು ಕ್ರಿಯೆಟ್‌ ಮಾಡಬಹುದು. ಇದರ ಮೂಲಕ ಬಳಕೆದಾರರು ಜಾಗತಿಕವಾಗಿ ತಮ್ಮದೇ ಆದ ಸೂರ್ಯೋದಯ ಅಥವಾ ಸೂರ್ಯಾಸ್ತದ ದಿನಚರಿಯನ್ನು ಕ್ರಿಯೆಟ್‌ ಮಾಡಬಹುದಾಗಿದೆ. ಇನ್ನು ಈ ಫೀಚರ್ಸ್‌ ಅನ್ನು ಸೆಟ್‌ ಮಾಡುವುದು ಕೂಡ ಸುಲಭವಾಗಿರುವುದರಿಂದ ಇದು ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ.

Best Mobiles in India

English summary
Google today rolled out a new feature on Google Assistant that enables Assistant users globally to create their own sunrise or sunset routines.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X