ಮಂದಗತಿಯ ಫೋನ್‌ನ ವೇಗ ವರ್ಧಿಸುವುದು ಹೇಗೆ?
ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ದುಬಾರಿ ಫೋನ್‌ಗಳಿಂದ ಹಿಡಿದು ಬಜೆಟ್ ಫೋನ್‌ಗಳ ಶ್ರೇಣಿಯನ್ನೇ ನಿಮಗೆ ಕಾಣಬಹುದು. ಆದರೂ ಫೋನ್ ನಿಧಾನವಾಗುವ ಸಮಸ್ಯೆ ಎಲ್ಲರನ್ನೂ ಕಾಡುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಈ ಸಮಸ್ಯೆ ಅಷ್ಟು ದೊಡ್ಡದೇನೂ ಅಲ್ಲ ಎಂಬುದು ಈ ಲೇಖನಗಳಿಂದ ನಿಮಗೆ ತಿಳಿಯಲು ಸಾಧ್ಯ.
ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು
ಹೌದು ಇಂದಿನ ಲೇಖನದಲ್ಲಿ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ವೇಗಗೊಳಿಸುವ ಕೆಲವೊಂದು ಸಲಹೆಗಳ ಮೂಲಕ ನಾವು ಬಂದಿದ್ದು ಇವುಗಳು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

ಸಮಸ್ಯೆ ಅರಿತುಕೊಳ್ಳಿ
ಮೊದಲು ನಿಮ್ಮ ಫೋನ್‌ನಲ್ಲಿನ ಸಮಸ್ಯೆಯನ್ನು ಅರಿತುಕೊಳ್ಳಿ. ವೈಫೈ ಬಳಕೆ, RAM, ಇಂಟರ್ನೆಟ್ ಮೊದಲಾದವುಗಳ ಮಾಹಿತಿಯನ್ನು ಅರಿತುಕೊಳ್ಳಿ.

ಸ್ಥಳಾವಕಾಶ ಕೊರತೆ
ನೀವು ಫೋನ್‌ನಲ್ಲಿ ತೆಗೆದಿರುವ ಫೋಟೋಗಳು ಮತ್ತು ಅಪ್ಲಿಕೇಶನ್‌ಗಳ ಕುರಿತ ಮಾಹಿತಿಯನ್ನು ಪಡೆದುಕೊಳ್ಳಿ. ಹೆಚ್ಚುವರಿ ಸ್ಥಳಾವಕಾಶವನ್ನು ಫೋನ್ ತೆಗೆದುಕೊಂಡಿದೆ ಎಂದಾದಲ್ಲಿ ಫೋನ್ ನಿಧಾನವಾಗುತ್ತದೆ.

ಕಪ್ಪು ವಿಜೆಟ್ ತೆಗೆದುಹಾಕಿ
ನಿಮ್ಮ ಫೋನ್‌ನಲ್ಲಿ ನೀವು ರನ್ ಮಾಡುತ್ತಿರುವ ಎಲ್ಲಾ ವಿಜೆಟ್‌ಗಳು ಉಪಯೋಗಕಾರಿಯಾಗಿರಬೇಕು ಎಂದೇನಿಲ್ಲ. ಇವುಗಳು ಕೂಡ ನಿಮ್ಮ ಅಪ್ಲಿಕೇಶನ್ ಸ್ಥಳಾವಕಾಶವನ್ನು ತೆಗೆದುಕೊಳ್ಳಬಹುದು.

ಅನಿಮೇಶನ್‌ಗಳು
ನಿಮ್ಮ ಫೋನ್‌ನಲ್ಲಿ ಅನಗತ್ಯ ಅನಿಮೇಶನ್‌ಗಳು ಫೋನ್‌ನ ನಿಧಾನಗತಿಗೆ ಕಾರಣವಾಗಿರಬಹುದು.

ಅಪ್ಲಿಕೇಶನ್‌ಗಳನ್ನು ಮುಚ್ಚಿ ಮತ್ತು RAM ಮುಕ್ತಗೊಳಿಸಿ
ನಿಮ್ಮ ಫೋನ್‌ನಲ್ಲಿ ಹೆಚ್ಚುವರಿ ಅಪ್ಲಿಕೇಶನ್‌ಗಳು ಚಾಲನೆಯಾಗುತ್ತಿವೆ ಎಂದಾದಲ್ಲಿ ಅವುಗಳನ್ನು ಮುಚ್ಚಿರಿ ಮತ್ತು RAM ಸ್ಥಳಾವಕಾಶವನ್ನು ಮುಕ್ತಗೊಳಿಸಿ.

ಡಿವೈಸ್ ಮರುಪ್ರಾರಂಭಿಸಿ
ಡಿವೈಸ್ ಅನ್ನು ಮರುಪ್ರಾರಂಭಿಸುವುದು ಸೂಕ್ತ ಸಲಹೆ ಎಂದೆನಿಸಿದೆ. ಕ್ಯಾಶ್‌ಗಳನ್ನು ತೆರವುಗೊಳಿಸಲು ಫೋನ್ ರೀಸ್ಟಾರ್ಟ್ ಉಪಯೋಗಕಾರಿ ಸಲಹೆಯಾಗಿದೆ.

ಆಳವಾಗಿ ಅಭ್ಯಸಿಸಿ
ನಿಮ್ಮ ಫೋನ್‌ನ ಸಂಪೂರ್ಣ ಪರಿಶೀಲನೆಯನ್ನು ಮಾಡಿಕೊಂಡು ಫೋನ್‌ನ ಸಮಸ್ಯೆಯನ್ನು ನಿವಾರಿಸಿಕೊಳ್ಳಿ.


Click it and Unblock the Notifications








