ಎಣ್ಣೆ ಹೊಡಿಯೋರು ಈ ಸುದ್ದಿ ಓದಲೇ ಬೇಕು!

By Gizbot Bureau
|

ನೀವು ಎಣ್ಣೆ ಹೊಡಿತೀರಾ, ಪಾರ್ಟಿ ಫಂಕ್ಷನ್ ಅಂತ ಮಧ್ಯದ ಬಾಟಲಿ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಕುಡುಕರು ಈ ಸ್ಟೋರಿಯನ್ನು ತಪ್ಪದೇ ಓದಲೇ ಬೇಕು. ನೀವು ಖರೀದಿಸಿದ ಎಣ್ಣೆ ಎಷ್ಟು ನೈಜವಾದದ್ದು ಎಂದು ಪರೀಕ್ಷಿಸುವುದಕ್ಕೆ ಆಪ್ ಬಂದಿದೆ. ಮಧ್ಯದ ನಷೆಯಲ್ಲಿದ್ದರೂ ಮೋಸ ಹೋಗುವ ಮಾತೇ ಇಲ್ಲ!

ಎಣ್ಣೆ ಹೊಡಿಯೋರು ಈ ಸುದ್ದಿ ಓದಲೇ ಬೇಕು!

ಆಮದು ಮಾಡಿಕೊಳ್ಳುವ ಮಧ್ಯದ ಬೇಡಿಕೆಯು ಅಧಿಕಗೊಂಡ ಹಿನ್ನೆಲೆಯಲ್ಲಿ ಮೋಸದ ಮಧ್ಯವನ್ನು ನೈಜ ಕಂಪೆನಿಯ ಮಧ್ಯವೆಂಬಂತೆ ಬಾಟಲಿಗಳಲ್ಲಿ ಮಾರಾಟ ಮಾಡುವ ಪ್ರಕ್ರಿಯೆಯು ಅಧಿಕಗೊಂಡಿದೆ. ನೀವು ಜಾನಿ ವಾಕರ್ ಅಥವಾ ಚಿವಾಸ್ ರೀಗಲ್ಗೆ ಪಾವತಿ ಮಾಡಿರಬಹುದು ಆದರೆ ನಿಮ್ಮ ಸ್ಥಳೀಯ ವಿತರಕರು ಅಗ್ಗದ ಬಾಟಲಿಗಳಲ್ಲಿ ಕಡಿಮೆ ಬೆಲೆಯ ವಿಸ್ಕಿಯನ್ನು ನಿಮಗೆ ಮಾರಿರಬಹುದು.

ಕೇವಲ ಅಂಗಡಿಯಲ್ಲಿ ನೋಡುವ ಮೂಲಕ ಸುಳ್ಳು ಮತ್ತು ಅಧಿಕೃತ ಆಲ್ಕೋಹಾಲ್ ನ್ನು ಪರೀಕ್ಷಿಸುವುದು ಕೆಲವರಿಗೆ ಕಷ್ಟವಾಗಿರಬಹುದು.ಬೇರೆಬೇರೆ ಆಲ್ಕೋಹಾಲ್ ಗಳನ್ನು ಬ್ಲೆಂಡ್ ಮಾಡಿ ಒರಿಜಿನಲ್ ಟೇಸ್ಟ್ ಬರುವಂತೆ ಮಾಡುವುದರಲ್ಲಿ ಮೋಸಗಾರರು ಚಾಣಾಕ್ಷರಾಗಿರುತ್ತಾರೆ ಅಷ್ಟೇ ಅಲ್ಲ ನೈಜ ಬಾಟಲಿಯಂತೆ ಫೇಕ್ ಬಾಟಲಿಗಳನ್ನು ಮಿಮಿಕ್ ಮಾಡುವುದರಲ್ಲೂ ಕೂಡ ಅವರು ನಿಪುಣರಾಗಿರುತ್ತಾರೆ.

ನೀವು ಖರೀದಿಸಿದ ಲಿಕ್ಕರ್ ಸರಿಯಾದುದ್ದಾ ಎಂಬುದನ್ನು ಪರೀಕ್ಷಿಸುವುದಕ್ಕೆ ನಿರ್ಧಿಷ್ಟ ಸರ್ಕಾರಿ ವೆಬ್ ಸೈಟ್ ಕೂಡ ಲಭ್ಯವಿದೆ. ದೆಹಲಿಯ ಸರ್ಕಾರಿ ಅಬಕಾರಿ ಇಲಾಖೆಯು ಪರಿಚಯಿಸಿರುವ ಆನ್ ಲೈನ್ ಸೇವೆಯು ಕಳೆದ ಒಂದು ತಿಂಗಳಲ್ಲಿ ಖರೀದಿಸಿದ ಮಧ್ಯದ ಪ್ರಾಮಾಣಿಕತೆಯನ್ನು ಬಾರ್ ಕೋಡ್ ಅಥವಾ ಸೀರಿಯಲ್ ಸಂಖ್ಯೆಯ ಮೂಲಕ ಪರೀಕ್ಷಿಸುತ್ತದೆ.

ಅದಕ್ಕಾಗಿಯೇ ನಿರ್ಧಿಷ್ಟ ಆಪ್ ಕೂಡ ಆಂಡ್ರಾಯ್ಡ್ ನಲ್ಲಿ ಲಭ್ಯವಿದೆ ಅದುವೇ “mLiquorSaleCheck”. ಇದನ್ನು ನೀವು ಖರೀದಿಸಿದ ಲಿಕ್ಕರ್ ನ ಪ್ರಾಮಾಣಿಕತೆಯ ಪರೀಕ್ಷೆಗೆ ಬಳಸಬಹುದು.ಆಪ್ ಗೆ ನೀವು ಕೇವಲ ಬಾರ್ ಕೋಡ್ ಸ್ಕ್ಯಾನರ್ ಅಥವಾ ಸೀರಿಯಲ್ ನಂಬರ್ ನ್ನು ಟೈಪ್ ಮಾಡಿದರೆ ಸಾಕಾಗುತ್ತದೆ. ನಿಮಗೆ ಬೇಕಾಗುವ ಮಾಹಿತಿ ಲಭ್ಯವಾಗುತ್ತದೆ.

ಸೀರಿಯಲ್ ನಂಬರ್ ಅಥವಾ ಬಾರ್ ಕೋಡ್ ಎಲ್ಲಿರುತ್ತದೆ?

ಸೀರಿಯಲ್ ನಂಬರ್ ಅಥವಾ ಬಾರ್ ಕೋಡ್ ಎಲ್ಲಿರುತ್ತದೆ?

ದೆಹಲಿಯಿಂದ ಮಾರಾಟವಾಗುವ ಪ್ರತಿಯೊಂದು ಆಲ್ಕೋಹಾಲ್ ಬಾಟಲ್ ನಲ್ಲೂ ಕೂಡ ಕ್ಯೂಆರ್/ಸೀರಿಯಲ್ ನಂಬರ್ ಇರುವ ಸ್ಟಿಕ್ಕರ್ ಇದ್ ಇರುತ್ತದೆ. ಅದನ್ನು ಬಾಟಲಿಯ ಕ್ಯಾಪ್ ನಲ್ಲಿ ಅಳವಡಿಸಲಾಗಿರುತ್ತದೆ. ಈ ಸ್ಟಿಕ್ಕರ್ ಬಾಟಲಿಯ ಕ್ಯಾಪ್ ಮತ್ತು ಬಾಡಿಯ ನಡುವಿರುವ ಸೀಲ್ ನಂತೆ ಕಾರ್ಯ ನಿರ್ವಹಿಸುತ್ತದೆ. ಈ ಸೀರಿಯಲ್ ನಂಬರ್ ಆಲ್ಕೋಹಾಲಿನ ಪರಿಶುದ್ಧತೆ ಮತ್ತು ನೈಜತೆಯ ಪರೀಕ್ಷೆಗೆ ನೆರವು ನೀಡುತ್ತದೆ. ಸ್ಟಿಕ್ಕರ್ ಇಲ್ಲದೆ ಯಾವುದೇ ದೆಹಲಿ ನಿರ್ಮಿತ ಆಲ್ಕೋಹಾಲ್ ನ್ನು ಎಂದಿಗೂ ಖರೀದಿಸಬೇಡಿ.

ವೆಬ್ ಸೈಟ್ ನಲ್ಲಿ ಪರೀಕ್ಷಿಸುವುದು ಹೇಗೆ? ಆಲ್ಕೋಹಾಲಿನ ನೈಜ ಬೆಲೆ ಮತ್ತು ಪರಿಶುದ್ಧತೆ ತಿಳಿಯುವುದು ಹೇಗೆ?

ವೆಬ್ ಸೈಟ್ ನಲ್ಲಿ ಪರೀಕ್ಷಿಸುವುದು ಹೇಗೆ? ಆಲ್ಕೋಹಾಲಿನ ನೈಜ ಬೆಲೆ ಮತ್ತು ಪರಿಶುದ್ಧತೆ ತಿಳಿಯುವುದು ಹೇಗೆ?

https://delhiexcise.gov.in/Portal/liquorsalecheck ಈ ವೆಬ್ ಸೈಟ್ ಗೆ ತೆರಳಿ.

-ಸ್ಟಿಕ್ಕರ್ ನಲ್ಲಿ ನೀವು ನೋಡುವ ಸೀರಿಯಲ್ ನಂಬರ್ ನ್ನು ಎಂಟರ್ ಮಾಡಿ. ಇದು 28 ಡಿಜಿಟ್ ಗಿಂತ ಕಡಿಮೆಯದ್ದಾಗಿರುತ್ತದೆ. ಸ್ಟಿಕ್ಕರ್ ನಲ್ಲಿ ನಮೂದಿಸಲಾಗಿರುವ ಯಾವುದೇ ಸ್ಪೆಷಲ್ ಕ್ಯಾರೆಕ್ಟರ್(ವಿಶೇಷ ಅಕ್ಷರ) ಅಥವಾ ಬ್ರ್ಯಾಕೆಟ್(ಆವರಣ ಚಿಹ್ನೆ)ಯನ್ನು ನಮೂದಿಸಬೇಡಿ.

- ಸರಿಯಾಗಿ ಸೀರಿಯಲ್ ಸಂಖ್ಯೆಯನ್ನು ಬರೆದ ನಂತರ ಸಬ್ಮಿಟ್ ಬಟನ್ ನ್ನು ಕ್ಲಿಕ್ಕಿಸಿ.

-ವೆಬ್ ಸೈಟ್ ನಿಮಗೆ ಸ್ಟೇಟಸ್ ನ್ನು ತಿಳಿಸುತ್ತದೆ. ಒಂದು ವೇಳೆ ಇದು ಒರಿಜಿನಲ್ ಸೀರಿಯಲ್ ನಂಬರ್ ಆಗಿದ್ದರೆ ಸ್ಟೇಟಸ್ ನಲ್ಲಿ ಹೀಗೆ ಇರುತ್ತದೆ "ಈ ಲಿಕ್ಕರ್ ಅಧಿಕೃತ ಜಾಗದಿಂದಲೇ ನೀಡಲಾಗಿದೆ" ಜೊತೆಗೆ ಬ್ರಾಂಡ್ ಹೆಸರು, ಸೈಜ್, ಬೆಲೆ ಮತ್ತು ನೀವು ಎಲ್ಲಿ ಖರೀದಿಸಿದ್ದೀರಿ ಎಂಬ ಅಂಗಡಿಯ ಹೆಸರು ನಮೂದಿಸಲ್ಪಟ್ಟಿರುತ್ತದೆ. ಇದನ್ನು ನೀವು ಸರಿಯಾದ ಮಾರಾಟದ ಬೆಲೆಯನ್ನು ತಿಳಿಯುವುದಕ್ಕಾಗಿಯೂ ಬಳಸಬಹುದು.

“mLiquorSaleCheck”ಆಪ್ ನಿಂದ ಚೆಕ್ ಮಾಡುವುದು ಹೇಗೆ?

“mLiquorSaleCheck”ಆಪ್ ನಿಂದ ಚೆಕ್ ಮಾಡುವುದು ಹೇಗೆ?

ಗೂಗಲ್ ಪ್ಲೇ ನಲ್ಲಿ ಈ ಆಪ್ ನ್ನು ಹುಡುಕುವುದು ಸ್ವಲ್ಪ ಕಷ್ಟದ ಕೆಲಸ. ನಾವು ಸರ್ಚ್ ಬಾಕ್ಸ್ ನಲ್ಲಿ "Delhi Excise" ಎಂದು ಹುಡುಕಾಡುವುದಕ್ಕೆ ಸಲಹೆ ನೀಡುತ್ತೇವೆ. ಈ ಆಪ್ ನ್ನು "The DPT of Excise, Entertainment & Luxury Tax" ನಿಂದ ಆಫರ್ ಮಾಡಲಾಗಿದೆ. ನೀವು ಸರಿಯಾದ ಆಪ್ ನ್ನೇ ಇನ್ಸ್ಟಾಲ್ ಮಾಡಿಕೊಳ್ಳುತ್ತಿದ್ದೀರಿ ಎಂಬುದನ್ನು ಮೊದಲು ಖಾತ್ರಿ ಮಾಡಿಕೊಳ್ಳಿ..

- "mLiquorSaleCheck" ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.

-ಸ್ಕ್ಯಾನ್ ಬಾರ್ ಕೋಡ್ ಆಯ್ಕೆಯನ್ನು ಟ್ಯಾಪ್ ಮಾಡಿ. ಕ್ಯಾಮರಾ ವಿಂಡೋ ತೆರೆದುಕೊಳ್ಳುತ್ತದೆ. ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿ. ಈಗಾಗಲೇ ತಿಳಿಸಿರುವಂತೆ ಇದು ಬಾಟಲಿಯ ಕ್ಯಾಪ್ ನಲ್ಲಿ ಇದು ಅಟ್ಯಾಚ್ ಆಗಿರುತ್ತದೆ.

-ಒಂದು ವೇಳೆ ಬಾರ್ ಕೋಡ್ ಸ್ಕ್ಯಾನರ್ ಓದುವುದಕ್ಕೆ ಫೇಲ್ ಆದರೆ ನೀವು ಸೀರಿಯಲ್ ನಂಬರ್ ನ್ನು ಟೈಪ್ ಮಾಡಬೇಕಾಗುತ್ತದೆ. ಇದು 28 ಡಿಜಿಟ್ಟಿಗಿಂತ ಕಡಿಮೆಯದ್ದಾಗಿರುತ್ತದೆ. ಸ್ಟಿಕ್ಕರ್ ನಲ್ಲಿ ಇರುವ ಯಾವುದೇ ವಿಶೇಷ ಅಕ್ಷರ ಅಥಾ ಆವರಣ ಚಿಹ್ನೆಯನ್ನು ನಮೂದಿಸಬೇಡಿ.

-ಸರಿಯಾಗಿ ಸೀರಿಯಲ್ ನಂಬರ್ ಬರೆದ ನಂತರ ಸಬ್ಮಿಟ್ ಬಟನ್ ನ್ನು ಕ್ಲಿಕ್ಕಿಸಿ.

-ಆಪ್ ನಿಮಗೆ ಸರಿಯಾದ ಸ್ಟೇಟಸ್ ನ್ನು ನೀಡುತ್ತದೆ. ಒಂದು ವೇಳೆ ನೈಜ ಮಾಲೇ ಆಗಿದ್ದಲ್ಲಿ" ನೀವು ಖರೀದಿಸಿದ ಲಿಕ್ಕರ್ ಅಧಿಕೃತ ಜಾಗದಿಂದ ಬಂದಿದೆ ಎಂದು ತಿಳಿಸುತ್ತದೆ" ಜೊತೆಗೆ ಬ್ರ್ಯಾಂಡ್ ಹೆಸರು, ಸೈಜ್, ಬೆಲೆ ಮತ್ತು ನೀವು ಎಲ್ಲಿ ಖರೀದಿಸಿದ್ದೀರಿ ಎಂಬ ಅಂಗಡಿಯ ವಿಳಾಸವನ್ನೂ ನೀಡುತ್ತದೆ.

ಒಂದು ವೇಳೆ ಬಾಟಲಿಯನ್ನು ವೆಬ್ ಸೈಟ್/ಆಪ್ ಗುರುತಿಸದೇ ಇದ್ದಲ್ಲಿ ಏನು ಮಾಡಬೇಕು?

ಒಂದು ವೇಳೆ ಬಾಟಲಿಯನ್ನು ವೆಬ್ ಸೈಟ್/ಆಪ್ ಗುರುತಿಸದೇ ಇದ್ದಲ್ಲಿ ಏನು ಮಾಡಬೇಕು?

ಒಂದು ವೇಳೆ ಸೀರಿಯಲ್ ನಂಬರ್ ಅಥವಾ ಬಾರ್ ಕೋಡ್ ಮೇಲೆ ತಿಳಿಸಿದ ಸ್ಟೇಟಸ್ ನ್ನು ನೀಡದೇ ಇದ್ದಲ್ಲಿ ನೀವು ಖರೀದಿಸುತ್ತಿರುವ ಆಲ್ಕೋಹಾಲ್ ದೆಹಲಿ ಸರ್ಕಾರದಿಂದ ವೆರಿಫೈ ಆಗಿರುವ ಸೋರ್ಸ್ ನಿಂದ ಲಭ್ಯವಾಗಿಲ್ಲ ಎಂಬುದು ತಿಳಿದಂತಾಗುತ್ತದೆ. ಇತರೆ ರಾಜ್ಯದಿಂದ ಬಂದಿರುವ ಅಥವಾ ಯುಟಿ ಅಥವಾ ಡಿಸ್ಟ್ರಿಬ್ಯೂಟರ್ ಸರಿಯಾಗಿ ತೆರಿಗೆ ಪಾವತಿಸದೇ ಖರೀದಿಸಿರುವ ಬಾಟಲ್ ಆಗಿರುವ ಸಾಧ್ಯತೆ ಇದೆ. ನೆನಪಿಡಿ ಇದು ಕೇವಲ ದೆಹಲಿಯಿಂದ ಖರೀದಿಸಲಾಗಿರುವ ಆಲ್ಕೋಹಾಲ್ ನ್ನು ಮಾತ್ರವೇ ಪರೀಕ್ಷಿಸುವ ಆಪ್ ಅಥವಾ ವೆಬ್ ಸೈಟ್ ಆಗಿದೆ. ಇತರೆ ರಾಜ್ಯಕ್ಕೆ ಅಥವಾ ಯುಟಿಗೆ ಅಥವಾ ಲೋಕಲ್ ಪ್ರೊಡಕ್ಟ್ ಗಳಿಗೆ ಅನ್ವಯಿಸುವುದಿಲ್ಲ.

Best Mobiles in India

Read more about:
English summary
How to check online the liquor you bought is authentic and know the actual price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X