ಯೂಟ್ಯೂಬ್‌ ವೀಕ್ಷಣೆಯ ವಿಡಿಯೊ ಹಿಸ್ಟರಿ ಕ್ಲಿಯರ್‌ ಮಾಡಲು ಹೀಗೆ ಮಾಡಿ!

|

ಗೂಗಲ್ ಮಾಲೀಕತ್ವದ ಯೂಟ್ಯೂಬ್‌ ಒಂದು ಜನಪ್ರಿಯ ವಿಡಿಯೊ ತಾಣ ಆಗಿದೆ. ಈ ತಾಣದಲ್ಲಿ ಬಳಕೆದಾರರು ಯಾವುದೇ ವಿಷಯದ ಕುರಿತು ವಿಡಿಯೊ ರೂಪದಲ್ಲಿ ಮಾಹಿತಿ ಪಡೆಯಬಹುದಾಗಿದೆ. ಇದರೊಂದಿಗೆ ಬಳಕೆದಾರರು ಲೈವ್‌ ನ್ಯೂಸ್‌, ವಿಡಿಯೊ ಕ್ರಿಯೆಟರ್ಸ್‌ಗಳ ಯೂಟ್ಯೂಬ್ ಚಾನೆಲ್ಸ್, ಸೇರಿದಂತೆ ಹಲವು ಬಗೆಯ ವಿಡಿಯೊಗಳನ್ನು ವೀಕ್ಷಿಸಬಹುದಾಗಿದೆ. ಆದರೆ ಸರ್ಚ್ ಮಾಡಿರುವ ವಿಡಿಯೊ ಮಾಹಿತಿ ಹಾಗೆಯೇ ಉಳಿದಿರುತ್ತದೆ.

ಯೂಟ್ಯೂಬ್‌ನಲ್ಲಿ

ಯೂಟ್ಯೂಬ್‌ನಲ್ಲಿ ಎಲ್ಲ ಬಗೆಯ ವಿಡಿಯೊ ಕಂಟೆಂಟ್ ಸಿಗುತ್ತದೆ. ಈ ನಿಟ್ಟಿನಲ್ಲಿ ಬಳಕೆದಾರರು ತಮಗೆ ಅಗತ್ಯ ವಿರುವ ವಿಷಯಗಳ ಬಗ್ಗೆ ಯೂಟ್ಯೂಬ್‌ನಲ್ಲಿ ಜಾಲಾಡಿರುತ್ತಾರೆ. ಆದರೆ ಏನೆಲ್ಲಾ ಸರ್ಚ್ ಮಾಡಿದ್ದಾರೆ ಎನ್ನುವ ದಾಖಲೆ ಹಾಗೆಯೇ ಉಳಿದಿರುತ್ತದೆ. ಸರ್ಚ್ ಮಾಡಿರುವ ಮಾಹಿತಿ ಹಿಸ್ಟರಿಯಲ್ಲಿ ಉಳಿಯವಾರದೆಂದರೇ ಬಳಕೆದಾರರು incognito ಮೋಡ್ ಅಥವಾ ಸರ್ಚ್ ಹಿಸ್ಟರಿ ಡಿಲೀಟ್ ಈ ಎರಡು ಕ್ರಮಗಳನ್ನು ಅನುಸರಿಸುವುದು ಉತ್ತಮ. ಅವುಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಯೂಟ್ಯೂಬ್ incognito ಮೋಡ್ ಬಳಕೆ

ಯೂಟ್ಯೂಬ್ incognito ಮೋಡ್ ಬಳಕೆ

ಯುಟ್ಯೂಬ್‌ನಲ್ಲಿ incognito ಮೋಡ್ ಆಯ್ಕೆ ಇದೆ. ಬಳಕೆದಾರರು ಸರ್ಚ್ ಮಾಡಿರುವ ಮಾಹಿತಿ ಉಳಿಯಬಾರದೆಂದರೇ incognito ಮೋಡ್ ಬಳಕೆ ಮಾಡುವುದು ಉತ್ತಮ. ಈ ಆಯ್ಕೆ ಬಳಕೆ ಮಾಡಿದಾಗ ಸರ್ಚ್ ಮಾಡಿರುವ ಮಾಹಿತಿ ಉಳಿಯುವುದಿಲ್ಲ.

ಸರ್ಚ್ ಹಿಸ್ಟರಿ ಡಿಲೀಟ್ ಮಾಡಬಹುದು

ಸರ್ಚ್ ಹಿಸ್ಟರಿ ಡಿಲೀಟ್ ಮಾಡಬಹುದು

incognito ಮೋಡ್ ಆಯ್ಕೆ ಇದೆ ಆದರೆ ಬಹುತೇಕರು incognito ಮೋಡ್‌ ಸೌಲಭ್ಯವನ್ನು ಬಳಸುವುದಿಲ್ಲ. ಹೀಗಾಗಿ ಬಳಕೆದಾರರಿಗೆ ಅನುಕೂಲವಾಗಲಿ ಎಂದೇ ಯೂಟ್ಯೂಬ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್‌ ಮಾಡಲು ಅವಕಾಶ ನೀಡಿದೆ. ಬಳಕೆದಾರರು ಮೇಲಿಂದ ಮೇಲೆ ಯೂಟ್ಯೂಬ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡಬಹುದಾಗಿದೆ. ಹಾಗಾದರೇ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಅನುಸರಿಸಬೇಕಾದ ಹಂತಗಳ ಬಗ್ಗೆ ಮುಂದೆ ಓದಿ.

ಯೂಟ್ಯೂಬ್ ಅಪ್ಲಿಕೇಶನಿನಲ್ಲಿ ಈ ಕ್ರಮಗಳನ್ನು ಅನುಸರಿಸಿರಿ:

ಯೂಟ್ಯೂಬ್ ಅಪ್ಲಿಕೇಶನಿನಲ್ಲಿ ಈ ಕ್ರಮಗಳನ್ನು ಅನುಸರಿಸಿರಿ:

* ಯೂಟ್ಯೂಬ್ ಆಪ್ ತೆರೆದು, ಪ್ರೋಫೈಲ್‌ ಇಮೇಜ್‌ ಟಚ್‌ ಮಾಡಿ.

* ನಂತರ ಸೆಟ್ಟಿಂಗ್ ಆಯ್ಕೆಯನ್ನು ಟ್ಯಾಪ್ ಮಾಡಿರಿ.

* ಆನಂತರ ಸ್ಕ್ರಾಲ್ ಡೌನ್ ಮಾಡಿ ಹಿಸ್ಟರಿ ಮತ್ತು ಪ್ರೈವೆಸಿ ಸೆಕ್ಷನ್‌ ಸೆಲೆಕ್ಟ್ ಮಾಡಿ.

* ವಾಚ್ ಹಿಸ್ಟರಿ ಕ್ಲಿಯರ್ ಆಯ್ಕೆಯನ್ನು ಟ್ಯಾಪ್‌ ಮಾಡಿರಿ.

* ಕ್ಲಿಯರ್‌ ಸರ್ಚ್ ಹಿಸ್ಟರಿ ಆಯ್ಕೆ ಒತ್ತಿರಿ.

ವೆಬ್‌ನಲ್ಲಿ ಡಿಲೀಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ

ವೆಬ್‌ನಲ್ಲಿ ಡಿಲೀಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ

* ಯೂಟ್ಯೂಬ್‌ ವೆಬ್ ತೆರೆಯಿರಿ (Youtube.com)

* ಎಡಭಾಗದಲ್ಲಿರುವ ಮೆನುನಲ್ಲಿ ಹಿಸ್ಟರಿ ಆಯ್ಕೆ ಸೆಲೆಕ್ಟ್ ಮಾಡಿರಿ.

* ವಾಚ್‌ ಹಿಸ್ಟರಿ ಕ್ಲಿಯರ್‌ ಆಯ್ಕೆಯನ್ನು ಕ್ಲಿಕ್ಕ್ ಮಾಡಿರಿ.

* ಎಡಭಾಗದಲ್ಲಿನ ಸರ್ಚ್ ಹಿಸ್ಟರಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

* ಕ್ಲಿಯರ್‌ ಆಲ್‌ ಸರ್ಚ್ ಹಿಸ್ಟರಿ ಆಯ್ಕೆ ಒತ್ತಿರಿ.

Most Read Articles
Best Mobiles in India

English summary
YouTube remembers every video you’ve ever watched, assuming you’re signed in with your Google account.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X