ಫೇಸ್ ಬುಕ್ ನಿಂದ ಕಿರಿಕಿರಿಯಾಗುತ್ತಿದ್ದರೆ ಹೀಗೆ ಮಾಡುವುದು ಸೂಕ್ತ!

By Gizbot Bureau
|

ಫೇಸ್ ಬುಕ್ ನಲ್ಲಿ ಇರಬೇಕು ಅಥವಾ ಶಾಶ್ವತವಾಗಿ ಫ್ಲ್ಯಾಟ್ ಫಾರ್ಮ್ ನಿಂದ ದೂರವಿರಬೇಕು ಎಂಬುದು ನಿಮ್ಮ ಸ್ವಂತ ಇಚ್ಛೆಯಾಗಿರುತ್ತದೆ. ಒಂದು ವೇಳೆ ನೀವು ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಬೇಕು ಅಥವಾ ಡಿಆಕ್ಟಿವೇಟ್ ಮಾಡಬೇಕು ಎಂದು ನೀವು ಬಯಸಿದರೆ ಈ ಕೆಳಗೆ ತಿಳಿಸಲಾಗುವ ಕೆಲವು ಸರಳವಾದ ಹಂತಗಳನ್ನು ಅನುಸರಿಸಬೇಕು.

ಫೇಸ್ ಬುಕ್ ನಿಂದ ಕಿರಿಕಿರಿಯಾಗುತ್ತಿದ್ದರೆ ಹೀಗೆ ಮಾಡುವುದು ಸೂಕ್ತ!

ಕಳೆದ ವರ್ಷ ಕೇಂಬ್ರಿಡ್ಜ್ ಅನಲಿಟಿಕಾ ಬಹಿರಂಗಪಡಿಸಿದ ಮಾಹಿತಿಯ ನಂತರ ಕಂಪೆನಿಯ ಗೌಪ್ಯತೆ ನೀತಿಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕಳೆದ ವಾರವಷ್ಟೇ ಫೆಡರರ್ ಟ್ರೇಡ್ ಕಮಿಷನ್ ಬಳಕೆದಾರರ ಡಾಟಾವನ್ನು ತಪ್ಪಾಗಿ ನಿರ್ವಹಿಸಿದ ಕಾರಣದಿಂದಾಗಿ ಫೇಸ್ ಬುಕ್ ನೊಂದಿಗೆ 5 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಅನುಮೋದನೆ ನೀಡಿದೆ.

ಸದ್ಯ ಫೇಸ್ ಬುಕ್ ನೊಂದಿಗಿನ ಅತೀ ದೊಡ್ಡ ಸಮಸ್ಯೆಯೇನೆಂದರೆ ನಂಬಿಕೆ. ವಯಕ್ತಿಕ ಮಾಹಿತಿಯ ಬಗ್ಗೆ ಜನರು ಫೇಸ್ ಬುಕ್ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಯಾಕೆಂದರೆ ಕೇಂಬ್ರಿಡ್ಜ್ ಅನಲಿಟಿಕಾ 87 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಡಾಟಾವನ್ನು ಅವರ ಒಪ್ಪಿಗೆ ಇಲ್ಲದೆಯೇ ಆಕ್ಸಿಸ್ ಮಾಡಿದೆ.

ಫೇಸ್ ಬುಕ್ ನಲ್ಲಿ ಇರಬೇಕಾ ಅಥವಾ ಬೇಡವಾ ಎಂಬುದು ನಿಮ್ಮ ಸ್ವಂತ ನಿರ್ಧಾರವಾಗಿರುತ್ತದೆ. ಒಂದು ವೇಳೆ ನೀವು ಫೇಸ್ ಬುಕ್ ನಿಂದ ಹೊರಗೆ ಬರಬೇಕು ಎಂದು ಬಯಸಿದ್ದೇ ಆದಲ್ಲಿ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ ಮತ್ತು ಡಿಆಕ್ಟಿವೇಟ್ ಮಾಡುವುದು ಹೇಗೆ ಎಂಬ ಬಗೆಗಿನ ಕೆಲವು ಸರಳ ಹಂತಗಳನ್ನು ನಾವು ನಿಮಗೆ ತಿಳಿಸುತ್ತೇವೆ.

ಫೇಸ್ ಬುಕ್ ಅಕೌಂಟ್ ನ್ನು ಡೀಆಕ್ಟಿವೇಟ್ ಮಾಡುವುದು ಹೇಗೆ?

ಫೇಸ್ ಬುಕ್ ಅಕೌಂಟ್ ನ್ನು ಡೀಆಕ್ಟಿವೇಟ್ ಮಾಡುವುದು ಹೇಗೆ?

ಇದರಲ್ಲಿ ಎರಡು ಮಾರ್ಗಗಳಿದೆ. ಒಂದು ನೀವು ಫೇಸ್ ಬುಕ್ ನಿಂದ ಎಕ್ಸಿಟ್ ಆಗುವುದು ಅಥವಾ ಶಾಶ್ವತವಾಗಿ ಫೇಸ್ ಬುಕ್ ಖಾತೆಯನ್ನು ತೊರೆಯುವುದು. ನಾವು ಹೇಳುತ್ತಿರುವ ಮೊದನೆಯದ್ದು ನಿಮ್ಮ ಫೇಸ್ ಬುಕ್ ಖಾತೆಯನ್ನು ಡೀಆಕ್ಟಿವೇಟ್ ಮಾಡುವುದು. ಡೀಆಕ್ಟಿವೇಟ್ ಮಾಡುವುದು ಎಂದರೆ ನೀವು ಫೇಸ್ ಬುಕ್ ಖಾತೆಯನ್ನು ಯಾರೂ ಕೂಡ ಆಕ್ಸಿಸ್ ಮಾಡುವುದಕ್ಕೆ ಸಾಧ್ಯವಾಗದೇ ಇರುವುದು ಮತ್ತು ನಿಮ್ಮ ಡಾಟಾ ಯಾವತ್ತೂ ಕೂಡ ಫೇಸ್ ಬುಕ್ ಸರ್ವರ್ ನಿಂದ ಡಿಲೀಟ್ ಆಗದೇ ಇರುವುದು. ಇದು ನಿಮಗೆ ಫೇಸ್ ಬುಕ್ ತೊರೆದು ಇರುವುದಕ್ಕೆ ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತದೆ.

ಹೇಗೆ ಇದು ಕೆಲಸ ಮಾಡುತ್ತದೆ ನೋಡಿ ನಂತರ ನೀವು ಫೇಸ್ ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವ ನಿರ್ಧಾರ ಕೈಗೊಳ್ಳಬಹುದು. ಖಾತೆಯನ್ನು ಡೀಆಕ್ಟಿವೇಟ್ ಮಾಡುವುದರಿಂದಾಗಿ ನೀವು ಫೇಸ್ ಬುಕ್ ಮೆಸೇಂಜರ್ ಮತ್ತು ಫೇಸ್ಬುಕ್ ಲಾಗಿನ್ ಅನ್ನು ಯಾವಾಗ ಬೇಕಿದ್ದರೂ ಬಳಕೆ ಮಾಡುವುದಕ್ಕೆ ಅವಕಾಶವಿರುತ್ತದೆ.

ಫೇಸ್ ಬುಕ್ ಅಕೌಂಟ್ ಡೀಆಕ್ಟಿವೇಟ್ ಮಾಡುವುದಕ್ಕೆ ಈ ಹಂತಗಳನ್ನು ಅನುಸರಿಸಿ :

ಫೇಸ್ ಬುಕ್ ಅಕೌಂಟ್ ಡೀಆಕ್ಟಿವೇಟ್ ಮಾಡುವುದಕ್ಕೆ ಈ ಹಂತಗಳನ್ನು ಅನುಸರಿಸಿ :

• ನಿಮ್ಮ ವೆಬ್ ಬ್ರೌಸರ್ ನ ಫೇಸ್ ಬುಕ್ ಪೇಜಿನ ಮೇಲ್ಬಾಗದ ಬಲಗಡೆ ಇರುವ ಅಕೌಂಟ್ ಮೆನುವಿನ ಕೆಳಭಾಗದ ಬಾಣದ ಗುರುತನ್ನು ಕ್ಲಿಕ್ಕಿಸಿ ಅಥವಾ https://www.facebook.com/deactivate/ ಗೆ ತೆರಳಿ.

• ಸೆಟ್ಟಿಂಗ್ಸ್ ನ್ನು ಸೆಲೆಕ್ಟ್ ಮಾಡಿ..

• ಜನರಲ್ ನ್ನು ಆಯ್ಕೆ ಮಾಡಿ.

• ‘Manage your account'ನ್ನು ನೇವಿಗೇಟ್ ಮಾಡಿ,

• ಇದೀಗ ನೀವು ‘Deactivate your account."ಆಯ್ಕೆಯನ್ನು ನೋಡುತ್ತೀರಿ.

ಒಂದು ವೇಳೆ ನೀವು ಫೇಸ್ ಬುಕ್ ಇಲ್ಲದೆ ಇರುವುದಕ್ಕೆ ಸಾಧ್ಯವಿಲ್ಲ ಅನ್ನಿಸಿದರೆ, ನೀವು ಪುನಃ ನಿಮ್ಮ ಖಾತೆಯನ್ನು ರೀಆಕ್ಟಿವೇಟ್ ಮಾಡುವುದಕ್ಕೆ ಸಾಧ್ಯವಿದೆ ಮತ್ತು ನೀವು ಪುನಃ ಸಾಮಾಜಿಕ ಜಾಲತಾಣಕ್ಕೆ ಬರಬಹುದು. ಆದರೆ ಒಂದು ಸೂಚನೆ ಇರುತ್ತದೆ.ನಿಮ್ಮ ಖಾತೆಯನ್ನು ಡೀಆಕ್ಟಿವೇಟ್ ಮಾಡುವುದು ಸುಲಭವಾಗಿರುತ್ತದೆ. ಆದರೆ ಫೇಸ್ ಬುಕ್ ಸರ್ವರ್ ನಿಂದ ಇದು ನಿಮ್ಮ ಡಾಟಾವನ್ನು ಡಿಲೀಟ್ ಮಾಡಿರುವುದಿಲ್ಲ. ಅದನ್ನು ನೀವು ಯಾವತ್ತೂ ಕೂಡ ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು.

ಫೇಸ್ ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ?

ಫೇಸ್ ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ?

ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಬೇಕು ಎಂದುಕೊಳ್ಳುವುದು ಒಂದು ದೊಡ್ಡ ನಿರ್ಧಾರ. ಫೇಸ್ ಬುಕ್ ನಿಂದ ಸಂಪೂರ್ಣವಾಗಿ ಹಿಂದೆ ಸರಿಯುವ ಮುನ್ನ ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ. ಇದು ಕೇವಲ ನಿಮ್ಮ ಫೇಸ್ ಬುಕ್ ಪ್ರೊಫೈಲ್ ನ್ನು ಮಾತ್ರವೇ ರಿಮೂವ್ ಮಾಡುವುದಿಲ್ಲ ಬದಲಾಗಿ ಪಿಕ್ಚರ್ ಗಳು, ವೀಡಿಯೋಗಳು, ಸ್ಟೇಟಸ್ ಅಪ್ ಡೇಟ್ ಗಳು, ಫ್ರೆಂಡ್ಸ್ ಲಿಸ್ಟ್, ಮೆಸೇಜ್ ಗಳು ಹೀಗೆ ಎಲ್ಲವನ್ನು ಡಿಲೀಟ್ ಮಾಡುತ್ತದೆ. ಈ ಖಾತೆಯನ್ನು ಡಿಲೀಟ್ ಮಾಡುವ ಮುಖಾಂತರ ಫೇಸ್ ಬುಕ್ ಮೆಸೇಂಜರ್ ನ್ನು ನೀವು ಯಾವತ್ತೂ ಕೂಡ ಬಳಕೆ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ಸ್ಪೋಟಿಫೈ ಅಥವಾ ಇತರೆ ಯಾವುದೇ ಫೇಸ್ ಬುಕ್ ಸಂಬಂಧಿ ವೆಬ್ ಸೈಟ್ ಗಳಿಗೆ ಲಾಗಿನ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಫೇಸ್ ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದಕ್ಕಾಗಿ ಈ ಹಂತಗಳನ್ನು ಅನುಸರಿಸಿ:

ಫೇಸ್ ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದಕ್ಕಾಗಿ ಈ ಹಂತಗಳನ್ನು ಅನುಸರಿಸಿ:

• ನಿಮ್ಮ ವೆಬ್ ಬ್ರೌಸರ್ ನ ಫೇಸ್ ಬುಕ್ ಪೇಜಿನ ಮೇಲ್ಬಾಗದ ಬಲಗಡೆ ಇರುವ ಅಕೌಂಟ್ ಮೆನುವಿನ ಕೆಳಭಾಗದ ಬಾಣದ ಗುರುತನ್ನು ಕ್ಲಿಕ್ಕಿಸಿ.

• ಸೆಟ್ಟಿಂಗ್ಸ್ ನ್ನು ಸೆಲೆಕ್ಟ್ ಮಾಡಿ.

• ಎಡಭಾಗದ ಪೆನಲ್ ನಲ್ಲಿ ಫೇಸ್ ಬುಕ್ ಇನ್ಫರ್ಮೇಷನ್ ನ್ನು ಆಯ್ಕೆ ಮಾಡಿ.

• ಡಿಲೀಟ್ ಯುವರ್ ಅಕೌಂಟ್ ಎಂಡ್ ಇನ್ಫರ್ಮೇಷನ್ ಎಂದಿರುವ ಮುಂದಿನ ಬಟನ್ "ವ್ಯೂ" ಬಟನ್ ನ್ನು ಸೆಲೆಕ್ಟ್ ಮಾಡಿ.

• ಡಿಲೀಟ್ ಮೈ ಅಕೌಂಟ್ ನ್ನು ಸೆಲೆಕ್ಟ್ ಮಾಡಿ.

• ನಿಮ್ಮ ಪಾಸ್ ವರ್ಡ್ ನ್ನು ಎಂಟರ್ ಮಾಡಿ ಮತ್ತು ಕಂಟಿನ್ಯೂ> ಡಿಲೀಟ್ ಅಕೌಂಟ್ ನ್ನು ಆಯ್ಕೆ ಮಾಡಿ.

ಒಂದು ವೇಳೆ ಸ್ವಲ್ಪ ಸಮಯದ ನಂತರ ನೀವು ನಿಮ್ಮ ಮನಸ್ಸನ್ನು ಬದಲಾಯಿಸಿ ಡಿಲೀಟ್ ಮಾಡಬಾರದಿತ್ತು ಎಂದುಕೊಂಡರೆ ನಿಮಗೆ 30 ದಿನಗಳ ಕಾಲಾವಕಾಶವಿರುತ್ತದೆ. 30 ದಿನಗಳ ನಂತರ ನಿಮ್ಮ ಮಾಹಿತಿಗಳು ಶಾಶ್ವತವಾಗಿ ಡಿಲೀಟ್ ಆಗುತ್ತದೆ.ಹಾಗಾಗಿ ನಿಮ್ಮ ಫೇಸ್ ಬುಕ್ಕಿನ ಎಲ್ಲಾ ಡಾಟಾಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಒಳ್ಳೆಯದು. ಫೋಟೋಗಳು, ಮೆಸೇಜ್ ಟ್ರಾನ್ಸ್ಕ್ರಿಪ್ಟ್ ಗಳು ಇತ್ಯಾದಿಗಳು. ಫೇಸ್ ಬುಕ್ ಹೇಳುವ ಪ್ರಕಾರ 90 ದಿನಗಳ ಕಾಲವನ್ನು ಕೂಡ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ನೀವು ಪೋಸ್ಟ್ ಮಾಡಿರುವ ಎಲ್ಲಾ ಡಾಟಾವನ್ನು ಡಿಲೀಟ್ ಮಾಡುವದಕ್ಕೆ ಪೇಸ್ ಬುಕ್ 90 ದಿನಗಳನ್ನೂ ಕೂಡ ತೆಗೆದುಕೊಳ್ಳಬಹುದು.

ಫೇಸ್ ಬುಕ್ ಡಾಟಾವನ್ನುಕಾಪಿ ಮಾಡಿಕೊಳ್ಳುವುದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಫೇಸ್ ಬುಕ್ ಡಾಟಾವನ್ನುಕಾಪಿ ಮಾಡಿಕೊಳ್ಳುವುದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ:

• ಫೇಸ್ ಬುಕ್.ಕಾಮ್/ಸೆಟ್ಟಿಂಗ್ಸ್ ಗೆ ತೆರಳಿ

• "Download a copy of your Facebook data."ವನ್ನು ಟ್ಯಾಪ್ ಮಾಡಿ.

• "Download Archive." ವನ್ನು ಟ್ಯಾಪ್ ಮಾಡಿ.

• ಸ್ವಲ್ಪ ಸಮಯದ ನಂತರ, ನಿಮ್ಮ ಆರ್ಕೈವ್ ತಯಾರಾದ ಕೂಡಲೇ ಫೇಸ್ ಬುಕ್ ನಿಮಗೆ ಅಲರ್ಟ್ ನೀಡುತ್ತದೆ.

• ಆಗ "Download Archive" ವನ್ನು ಪುನಃ ಕ್ಲಿಕ್ಕಿಸಿ ಮತ್ತು ನಿಮ್ಮ ಪಿಸಿಗೆ ಡೌನ್ ಲೋಡ್ ಮಾಡುವುದಕ್ಕೆ ರೆಡಿ ಇರುವ ಝಿಪ್ ಫೈಲ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ ಅಷ್ಟೇ.

Best Mobiles in India

English summary
How To Delete Your Facebook Account Permanetly

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X