ಫೋನ್ ಕಳುವಾಗಿದೆಯೇ? ಚಿಂತೆ ಬಿಡಿ ಇಲ್ಲಿದೆ ಸಲಹೆಗಳು

By Shwetha
|

ನಿಮ್ಮ ದುಬಾರಿ ಫೋನ್ ಕಳುವಾಯಿತು ಎಂದಾದಲ್ಲಿ ನಿಮಗೆ ಎಷ್ಟು ಖೇದವುಂಟಾಗಬಹುದು ಅಲ್ಲವೇ? ಫೋನ್ ಕದ್ದು ಹೋಗುವುದರ ಜೊತೆಗೆ ಅದರಲ್ಲಿರುವ ಅತಿಮುಖ್ಯ ಡೇಟಾ ಕೂಡ ಅವರ ವಶವಾಗುತ್ತದೆ ಇದನ್ನು ತಪ್ಪಿಸುವುದು ಹೇಗೆ ಎಂಬುದು ನಿಮ್ಮ ಚಿಂತೆಯಾಗಿದೆ ಎಂದಾದಲ್ಲಿ ನಿಮಗಾಗಿ ಕೆಲವೊಂದು ಟಾಪ್ ಸಲಹೆಗಳೊಂದಿಗೆ ನಾವು ಬಂದಿರುವೆವು.

ಈ ಟಿಪ್ಸ್‌ಗಳು ನಿಮ್ಮ ಫೋನ್ ಕಳುವಾಗಿದ್ದರೂ ಅದರಲ್ಲಿರುವ ಡೇಟಾವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ಕುರಿತು ಮಾಹಿತಿಯನ್ನು ನೀಡಲಿದೆ. ಅದಕ್ಕಾಗಿ ಕೆಳಗಿನ ಮಾಹಿತಿ ಪೂರ್ಣ ಸ್ಲೈಡರ್‌ಗಳನ್ನು ಪರಿಶೀಲಿಸಿಕೊಳ್ಳಿ.

ಆಂಡ್ರಾಯ್ಡ್ ಟ್ರ್ಯಾಕ್ ಮಾಡಿ

ಆಂಡ್ರಾಯ್ಡ್ ಟ್ರ್ಯಾಕ್ ಮಾಡಿ

ಆಂಡ್ರಾಯ್ಡ್ ಡಿವೈಸ್ ಮ್ಯಾನೇಜರ್ ಅನ್ನು ಬಳಸಿ ನಿಮ್ಮ ಕದ್ದು ಹೋದ ಆಂಡ್ರಾಯ್ಡ್ ಅನ್ನು ಟ್ರ್ಯಾಕ್ ಮಾಡಬಹುದಾಗಿದೆ. ನಿಮ್ಮ ಫೋನ್‌ನಲ್ಲಿ ಇದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಪುಟಕ್ಕೆ ಹೋಗಿ ಗೂಗಲ್ ಖಾತೆಯೊಂದಿಗೆ ಸೈನ್ ಇನ್ ಮಾಡಿ. ನಿಮ್ಮ ಡಿವೈಸ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಇದು ನೆರವುಕಾರಿ.

ಖಾತೆಗಳನ್ನು ಭದ್ರಪಡಿಸಿ

ಖಾತೆಗಳನ್ನು ಭದ್ರಪಡಿಸಿ

ನಿಮ್ಮ ಇಮೇಲ್‌ಗಳು, ಸಾಮಾಜಿಕ ನೆಟ್‌ವರ್ಕ್‌ಗಳು, ಸಂದೇಶ ಸಮೂಹಗಳನ್ನು ನಿಮ್ಮ ಡಿವೈಸ್‌ನಲ್ಲಿ ಹೊಂದಿರುತ್ತೀರಿ. ಇನ್ನೊಂದು ಡಿವೈಸ್ ಮೂಲಕ ಪ್ರವೇಶಿಸಿ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ.

ಸಿಮ್ ಕಾರ್ಡ್ ಬ್ಲಾಕ್

ಸಿಮ್ ಕಾರ್ಡ್ ಬ್ಲಾಕ್

ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಮಾಡುವುದು ನಿಮ್ಮ ಅಮೂಲ್ಯ ಡಾಕ್ಯುಮೆಂಟ್‌ನ ರಕ್ಷಣೆಗೆ ಸಹಕಾರಿಯಾಗಲಿದೆ. ಎರಡು ಹಂತದ ದೃಢೀಕರಣಕ್ಕಾಗಿ ನೀವು ಸೈನ್ ಇನ್ ಮಾಡಿದ್ದೀರಿ ಎಂದಾದಲ್ಲಿ ನಿಮ್ಮ ಟೆಲ್‌ಕೊ ಪ್ರೊವೈಡರ್ ನಿಮ್ಮ ಸಂಖ್ಯೆಯನ್ನು ಹಿಂದಕ್ಕೆ ಪಡೆದುಕೊಳ್ಳುವಲ್ಲಿ ಸಹಾಯ ಮಾಡಲಿದೆ.

ಆಂಡ್ರಾಯ್ಡ್‌ನಲ್ಲಿ ಖಾತೆಗಳನ್ನು ಅನ್‌ಲಿಂಕ್ ಮಾಡಿ

ಆಂಡ್ರಾಯ್ಡ್‌ನಲ್ಲಿ ಖಾತೆಗಳನ್ನು ಅನ್‌ಲಿಂಕ್ ಮಾಡಿ

ನಿಮ್ಮ ಕಳೆದು ಹೋದ ಡಿವೈಸ್‌ನಿಂದ ನಿಮ್ಮ ಖಾತೆಗಳನ್ನು ಅನ್‌ಲಿಂಕ್ ಮಾಡಿ ಇದು ಆಂಡ್ರಾಯ್ಡ್‌ನಲ್ಲಿ ಸಿಂಕ್ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ.

ಟ್ರ್ಯಾಕಿಂಗ್ ಲೊಕೇಶನ್ ಸಕ್ರಿಯಗೊಳಿಸಿ

ಟ್ರ್ಯಾಕಿಂಗ್ ಲೊಕೇಶನ್ ಸಕ್ರಿಯಗೊಳಿಸಿ

ನಿಮ್ಮ ಮೊಬೈಲ್ ಫೋನ್ ಇರುವ ಸ್ಥಳವನ್ನು ಡಿವೈಸ್ ಮ್ಯಾನೇಜರ್ ನಿಮಗೆ ತಿಳಿಸುತ್ತದೆ.

ಇಂಟರ್ನೆಟ್ ಡೇಟಾ ಸಕ್ರಿಯಗೊಂಡಿರಲಿ

ಇಂಟರ್ನೆಟ್ ಡೇಟಾ ಸಕ್ರಿಯಗೊಂಡಿರಲಿ

ನಿಮ್ಮ ಫೋನ್ ಇಂಟರ್ನೆಟ್ ಯಾವಾಗಲೂ ಸಕ್ರಿಯವಾಗಿರುವಂತೆ ನೋಡಿಕೊಳ್ಳಿ. ಆದಷ್ಟು ಮೊಬೈಲ್‌ನ ಇಂಟರ್ನೆಟ್ ಆನ್ ಆಗಿರಲಿ.

ಲಾಕ್ ಸ್ಕ್ರೀನ್ ಬಳಸಿ

ಲಾಕ್ ಸ್ಕ್ರೀನ್ ಬಳಸಿ

ನಿಮ್ಮ ಫೋನ್‌ನ ಅನಧಿಕೃತ ಬಳಕೆಯನ್ನು ನಿಲ್ಲಿಸಲು ನಿಮ್ಮ ಲಾಕ್ ಸ್ಕ್ರೀನ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಿ. ಬೇರೆ ಬೇರೆ ಭದ್ರತಾ ವ್ಯವಸ್ಥೆಯುಳ್ಳ ಆಂಡ್ರಾಯ್ಡ್ ಲಾಕ್ ಸ್ಕ್ರೀನ್ ನಿಮಗೆ ದೊರೆಯುತ್ತದೆ. ಇದನ್ನು ಬಳಸಿ ಫೋನ್ ಭದ್ರಪಡಿಸಿ.

ಫಿಸಿಕಲ್ ಪವರ್ ಬಟನ್ ನಿಷ್ಕ್ರಿಯಗೊಳಿಸಿ

ಫಿಸಿಕಲ್ ಪವರ್ ಬಟನ್ ನಿಷ್ಕ್ರಿಯಗೊಳಿಸಿ

ನಿಮ್ಮ ಫೋನ್‌ನ ಫಿಸಿಕಲ್ ಪವರ್ ಬಟನ್ ಅನ್ನು ನಿಷ್ಕ್ರಿಯಗೊಳಿಸುವುದರಿಂದ ಅಪ್ಲಿಕೇಶನ್ ಟ್ರ್ಯಾಕ್ ಮಾಡುವುದನ್ನು ತಡೆಹಿಡಿಯಬಹುದಾಗಿದೆ.

ನಾನ್ ರಿಮೂವೇಬಲ್ ಬ್ಯಾಟರಿಗಳುಳ್ಳ ಫೋನ್ ಬಳಸಿ

ನಾನ್ ರಿಮೂವೇಬಲ್ ಬ್ಯಾಟರಿಗಳುಳ್ಳ ಫೋನ್ ಬಳಸಿ

ನಿಮ್ಮ ಫೋನ್ ಕದ್ದರೂ ಫೋನ್ ಸ್ವಿಚ್ ಆಫ್ ಮಾಡಲು ಸಾಧ್ಯವಾಗುವುದಿಲ್ಲ. ಇನ್ನೊಂದು ಫೋನ್‌ನಿಂದ ಬ್ಯಾಟರಿ ರಿಮೂವ್ ಮಾಡಲು ಆಗುವುದಿಲ್ಲ. ಶ್ಯೋಮಿ ಎಮ್ಐ4ಐ ಮತ್ತು ಮೋಟೋ ಜಿ ಈ ವಿಶೇಷತೆಯನ್ನು ಒಳಗೊಂಡಿದೆ.

ಡೇಟಾ ಬ್ಯಾಕಪ್ ಮಾಡಿ

ಡೇಟಾ ಬ್ಯಾಕಪ್ ಮಾಡಿ

ತಮ್ಮ ಫೋನ್ ಅನ್ನು ಕಳೆದುಕೊಂಡ ಬಹಳಷ್ಟು ಜನರಿಗೆ ಡೇಟಾ ನಷ್ಟವಾಗಿರುವುದು ತುಂಬಿಕೊಳ್ಳಲಾಗದ ಸೋಲಾಗಿದೆ. ಕಾರ್ಯ ಪಟ್ಟಿಗಳು, ಮಖ್ಯವಾದ ಮೀಟಿಂಗ್‌ಗಳು, ಪ್ರಾಜೆಕ್ಟ್ ಡೆಡ್‌ಲೈನ್ಸ್, ಫಿಟ್‌ನೆಸ್ ಪ್ರೊಗ್ರೆಸ್ ಮೊದಲಾದವು ನಷ್ಟವಾಗಿರುವಂಥದ್ದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಪವರ್ ಕಟ್ ಆದಲ್ಲಿ ಫೋನ್ ಚಾರ್ಜ್ ಮಾಡುವುದು ಹೇಗೆ?</a><br />ಓದಿರಿ: <a href=ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣವಾಗಿರುವ ಅಂಶಗಳಿವು
ಓದಿರಿ: ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು
ಓದಿರಿ: ನೀವು ಎಲ್ಲಿದ್ದರೂ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?" title="ಪವರ್ ಕಟ್ ಆದಲ್ಲಿ ಫೋನ್ ಚಾರ್ಜ್ ಮಾಡುವುದು ಹೇಗೆ?
ಓದಿರಿ: ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣವಾಗಿರುವ ಅಂಶಗಳಿವು
ಓದಿರಿ: ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು
ಓದಿರಿ: ನೀವು ಎಲ್ಲಿದ್ದರೂ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?" loading="lazy" width="100" height="56" />ಪವರ್ ಕಟ್ ಆದಲ್ಲಿ ಫೋನ್ ಚಾರ್ಜ್ ಮಾಡುವುದು ಹೇಗೆ?
ಓದಿರಿ: ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣವಾಗಿರುವ ಅಂಶಗಳಿವು
ಓದಿರಿ: ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು
ಓದಿರಿ: ನೀವು ಎಲ್ಲಿದ್ದರೂ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?

Best Mobiles in India

English summary
In this article we are giving some tips on how to protect your mobile from being stolen. These steps are very easy to follow and apply also.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X