Subscribe to Gizbot

ಸ್ಮಾರ್ಟ್‌ಫೋನ್‌ನಲ್ಲಿ 2ಜಿ ಹಾಗೂ ಜಿ3 ನೆಟ್ವರ್ಕ್‌ ಸೆಲೆಕ್ಟ್‌ ಮಾಡುವುದು ಹೇಗೆ?

Posted By: Vijeth
ಸ್ಮಾರ್ಟ್‌ಫೋನ್‌ನಲ್ಲಿ 2ಜಿ ಹಾಗೂ ಜಿ3 ನೆಟ್ವರ್ಕ್‌ ಸೆಲೆಕ್ಟ್‌ ಮಾಡುವುದು ಹೇಗೆ?
ಫಾಸ್ಟರ್‌ ಇಂಟರ್‌ನೆಟ್‌ ಬಳಕೆಯಲ್ಲಿ ಭಾರತ ದೇಶವು ಅಮೇರಿಕಾ ಹಾಗೂ ಚೀನಾ ರಾಷ್ಟ್ರಗಳಿಗಿಂತಲೂ ಹಿಂದೆ ಇದ್ದರೂ ಕೂಡಾ ದಿನೇ ದಿನೇ ಫಾಸ್ಟರ್‌ ಇಂಟರ್‌ನೆಟ್‌ ಅಳವಡಿಸಿಕೊಳ್ಳುವತ್ತ ಮುನ್ನುಗುತ್ತಿದ್ದಿ ಇದೀಗ 3ಜಿ ನೆಟ್ವರ್ಕ್‌ನಿಂದ 4ಜಿ ನೆಟ್ವರ್ಕ್‌ನ ಕಡೆಗೆ ಸಾಗುತ್ತಿದೆ. 4ಜಿ ನೆಟ್ವರ್ಕ್‌ ಸೇವೆ ಪಡೆಯುವುದು ಸಧ್ಯಕ್ಕೆ ದುಬಾರಿ ಎಂದೆನಿಸಬಹುದು ಆದರೆ ಈ ಮೊದಲು ದುಬಾರಿ ಎಂದೆನಿಸುತ್ತಿದ್ದ 3 ಜಿ ಸೇವೆಯು 4 ಜಿ ಸೇವೆ ಬಂದ ನಂತರ ಟೆಲಿಕಾಂ ಸಂಸ್ಥೆಗಳು 3ಜಿ ಸೇವೆಯ ದರದಲ್ಲಿ ಸಾಕಷ್ಟು ಇಳಿಕೆ ಮಾಡಿವೆ.

ಸಧ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ 2ಜಿ, 3ಜಿ ಹಾಗೂ 4ಜಿ ಸೇವೆಗಳು ಲಭ್ಯವಿದೆ ಆದರೆ ಬಹುತೇಕ ಮಂದಿ 2ಜಿ ಹಾಗೂ 3ಜಿ ಸೇವೆಯನ್ನೇ ಬಳಕೆ ಮಾಡುತ್ತಿದ್ದಾರೆ. ಅಂದಹಾಗೆ ನೀವು ಸ್ಮಾರ್ಟ್‌ಫೋನ್‌ ಬಳಕೆದಾರರಾಗಿದ್ದೀರ ಹಾಗಿದ್ದಲ್ಲಿ ನಿಮ್ಮ ಸ್ಮಾರ್ಟ್‌ಪೋನದ್‌ನಲ್ಲಿ 3ಜಿ ಹಾಗೂ 2ಜಿ ಸಂಪರ್ಕ ಸೇವೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬುದು ನಿಮಗೆ ತಿಳಿದಿದೆಯೆ. 2ಜಿ ಇಂದಾ 3ಜಿ ನೆಟ್ವರ್ಕ್‌ ಆಯ್ಕೆ ಮಾಡಿಕೊಳ್ಳಲು ಈ ಕೆಳಗಿನ ವಿಧಾನವನ್ನು ಸನುಸರಿಸಿ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ 2ಜಿ ಹಾಗೂ 3ಜಿ ನೆಟ್ವರ್ಕ್‌ ಆಯ್ಕೆ ಮಾಡಿಕೊಳ್ಳುವುದು ಹೇಗೆ?

  • ಸೆಟ್ಟಿಂಗಸ್‌ ಮೆನ್ಯು ತೆರೆದುಕೊಳ್ಳಿ.

  • ನೋಟ್‌ಬುಕ್‌ ಮೋಡ್‌ಗೆ ತಲುಪಿ.

  • ನಂತರ 2ಜಿಸ ಅಥವಾ 3ಜಿನೆಟ್ವರ್ಕ್‌ ಆಯ್ಕೆ ಮಾಡಿಕೊಳ್ಳಿ.

  • 2ಜಿ ಗಿಂತಲೂ ಉತ್ತಮ ಸ್ಪೀಡ್‌ ನಿಮಗೆ ಬೇಕೆನಿಸಿದಲ್ಲಿ ಮಾತ್ರವಷ್ಟೇ 3ಜಿ ನೆಟ್ವರ್ಕ್‌ ಆಯ್ಕೆ ಮಾಡಿಕೊಳ್ಳಿ.

  • ಅಂದಹಾಗೆ ನಿಮ್ಮ ಸಿಮ್‌ ಕಾರ್ಡ್‌ 3ಜಿ ಬೆಂಬಲಿತವಾಗಿದ್ದಲ್ಲಿ ಮಾತ್ರವಷ್ಟೇ ನೀವು 3 ಜಿ ಸಂಪರ್ಕ್‌ ಪಡೆಯಲು ಸಾಧ್ಯವಾಗುತ್ತದೆ.
3ಜಿ ಹಾಗೂ 4ಜಿ ನಡುವಿನ ವೆತ್ಯಾಸವೇನು?

3ಜಿ ಸೇವೆಯಲ್ಲಿ WCDMA, EV-DO ಹಾಗೂ HSPA ನಂತಹ ಹಲವು ಆಂತರ್ಗತ ತಂತ್ರಜ್ಞಾನಗಳನ್ನು ಹೊಂದಿವೆ. ಅಂದಹಾಗೆ 4ಜಿ ಸೇವೆಯಲ್ಲಿ LTE, WiMax ಹಾಗೂ UMB ನಂತಹ ತಂತ್ರಜ್ಞಾನಗಳು ಲಭ್ಯವಿದೆ. 4ಜಿ ಸಂಪರ್ಕವು 3ಜಿ ಸಂಪರ್ಕಕ್ಕಿಂತಲೂ ಅತ್ಯುತ್ತಮ ವೇಗವನ್ನು ಹೊಂದಿದೆ. ಉದಾಹರಣೆಗೆ 3ಜಿಯಲ್ಲಿ ಬಳಕೆದಾರರಿಗೆ 14Mbps ಡೌನ್ಲೋಡಿಂಗ್‌ ಹಾಗೂ 5.8Mbps ಅಪ್‌ ಲಿಂಕ್‌ ಸ್ಪೀಡ್‌ ದೊರೆತರೆ, ಮತ್ತೊಂದೆಡೆ 4ಜಿ ಸೇವೆಯಲ್ಲಿ 100Mbps ಗಿಂತಲೂ ಅಧಿಕ ಸ್ಪೀಡ್‌ ನಿಮಗೆ ದೊರೆಯುತ್ತದೆ. 3ಜಿ ನೆಟ್ವರ್ಕ್‌ ಸ್ಪೀಡ್‌ ತುಂಬಾ ವೇಗವಾಗಿದೆ ಎನ್ನುವವರಿಗೆ 4ಜಿ ನೆಟ್ವರ್ಕ ಸಂಪೂರ್ಣ ಶಾಕ್ ನೀಡಬಲ್ಲ ಸ್ಪೀಡ್‌ ಹೊಂದಿದೆ. ಒಟ್ಟಾರೆ ಹೇಳುವುದಾದರೆ 4ಜಿ ಸಂಪರ್ಕವು 3ಜಿ ಸಂಪರ್ಕಕ್ಕಿಂತಲೂ 5 ರಿಂದ 6 ಪಟ್ಟು ವೇಗದಲ್ಲಿ ಚಲಿಸಬಲ್ಲದ್ದಾಗಿದೆ.

ಮೊಬೈಲ್‌ ನೆಟ್ವರ್ಕ್‌ನಲ್ಲಿ ಬ್ಯಾಲೆನ್ಸ್‌ ಟ್ರಾನ್ಸಫರ್‌ ಮಾಡುವುದು ಹೇಗೆ?

ಉಚಿತ ಮಿಸ್‌ಕಾಲ್‌ ಅಲರ್ಟ್ ಸೇವೆ ಪಡೆಯುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot