ಬಿಎಸ್‌ಎನ್‌ಎಲ್ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳುವುದು ಹೇಗೆ?

By Shwetha
|

ಬಿಎಸ್‌ಎನ್‌ಎಲ್ ಬಿಬಿ 249 ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪ್ರಸ್ತುತಪಡಿಸಿದ್ದು ಆರು ತಿಂಗಳುಗಳ ಅನಿಯಮಿತ ಡೇಟಾವನ್ನು ಇದು ಒದಗಿಸಲಿದೆ. ಈ ಯೋಜನೆಯ ಪ್ರಮುಖ ಅಂಶವೆಂದರೆ ಭಾನುವಾರಗಳಂದು ಕರೆಮಾಡುವ ವ್ಯವಸ್ಥೆ ಮತ್ತು ಪ್ರತೀ ದಿನ ರಾತ್ರಿ 9 ರಿಂದ ಬೆಳಗ್ಗೆ 7 ರವರೆಗೆ ಉಚಿತ ಕರೆ ಇದೆ.

ಓದಿರಿ: ಜಿಯೋ ವೈಫೈ ಹಾಟ್‌ಸ್ಪಾಟ್‌ಗೆ ಕನೆಕ್ಟ್ ಆಗುವುದು ಹೇಗೆ?

ಬಿಎಸ್‌ಎನ್‌ಎಲ್ ಯೋಜನೆಯ ಪ್ರಕಾರ, ತಿಂಗಳಿಗೆ ರೂ 249 ರಂತೆ ಬಿಎಸ್‌ಎನ್‌ಎಲ್ ಹೊಸ ಬಳಕೆದಾರರು ಈ ಯೋಜನೆಯನ್ನು ಬಳಸಬಹುದಾಗಿದೆ. ಈ ಯೋಜನೆಯು ಅನಿಯಮಿತ ಆಗಿರುವುದರಿಂದ ಈ ಯೋಜನೆಯನ್ನು ಪಡೆದುಕೊಂಡಿರುವ ಬಳಕೆದಾರರು 2 ಎಮ್‌ಬಿಪಿಎಸ್ ವೇಗದಲ್ಲಿ 1ಜಿಬಿ ಡೇಟಾವನ್ನು ಬಳಸಬಹುದಾಗಿದೆ. ನಂತರ ಈ ವೇಗವು 1 ಎಮ್‌ಬಿಪಿಎಸ್‌ಗೆ ಇಳಿಮುಖವಾಗುತ್ತದೆ.

ಓದಿರಿ: ಏರ್‌ಸೆಲ್ V/S ಬಿಎಸ್‌ಎನ್‌ಎಲ್ V/S ಟಾಟಾ ಡೊಕೊಮೊ ಟಾರಿಫ್ ಸ್ಪರ್ಧೆ: ಯಾವುದು ಉತ್ತಮ

ಇಂದಿನ ಲೇಖನದಲ್ಲಿ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಹೆಚ್ಚಿಸುವುದು ಹೇಗೆ ಎಂಬುದರ ಕುರಿತಾಗಿ ಮಾಹಿತಿಗಳನ್ನು ನೀಡುತ್ತಿದ್ದೇವೆ.

ಗೂಗಲ್ ಡಿಎನ್‌ಎಸ್ ಸೆಟ್ಟಿಂಗ್ಸ್

ಗೂಗಲ್ ಡಿಎನ್‌ಎಸ್ ಸೆಟ್ಟಿಂಗ್ಸ್

ನಿಮ್ಮ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಸಂಪರ್ಕ ನಿಧಾನಗತಿಯದ್ದಾಗಿದೆ ಎಂದಾದಲ್ಲಿ, ಡಿಎನ್‌ಎಸ್ ಸೆಟ್ಟಿಂಗ್‌ಗಳನ್ನು ನಿಮಗೆ ಹೊಂದಿಸಬಹುದಾಗಿದೆ. ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ನೆಟ್‌ವರ್ಕ್ ಮತ್ತು ಶೇರಿಂಗ್ ಸೆಟ್ಟಿಂಗ್ ತೆರೆಯಿರಿ. ನಿಮ್ಮ ನೆಟ್‌ವರ್ಕ್ ಮೇಲೆ ಕ್ಲಿಕ್ ಮಾಡಿ. ಪ್ರಾಪರ್ಟೀಸ್‌ಗೆ ಹೋಗಿ ಮತ್ತು TCP IPV4 ಅನ್ನು ಲಿಸ್ಟ್‌ನಿಂದ ಆಯ್ಕೆಮಾಡಿ ಮತ್ತು ಕೆಳಗಿನ ಡಿಎನ್‌ಎಸ್ ಸೆಟ್ಟಿಂಗ್ಸ್ ನಮೂದಿಸಿ.
ಡಿಎನ್‌ಎಸ್ ಸೆಟ್ಟಿಂಗ್ಸ್ - 8.8.4.4 ಇದು ಗೂಗಲ್ ಡಿಎನ್‌ಎಸ್ ಸೆಟ್ಟಿಂಗ್ಸ್ ಆಗಿದ್ದು ಇದು ಉತ್ತಮ ಇಂಟರ್ನೆಟ್ ವೇಗವನ್ನು ಒದಗಿಸುತ್ತದೆ.

ಡಿಎಸ್‌ಎಸ್ ಸೆಟ್ಟಿಂಗ್ಸ್ ತೆರೆಯಿರಿ

ಡಿಎಸ್‌ಎಸ್ ಸೆಟ್ಟಿಂಗ್ಸ್ ತೆರೆಯಿರಿ

ಗೂಗಲ್ ಡಿಎನ್‌ಎಸ್ ಸೆಟ್ಟಿಂಗ್ಸ್ ಹೊರತುಪಡಿಸಿ, ನೀವು ಡಿಎನ್‌ಎಸ್ ಸೆಟ್ಟಿಂಗ್ ಅನ್ನು ಹೊಂದಿಸಿಕೊಳ್ಳಬಹುದಾಗಿದೆ ಮತ್ತು ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅವುಗಳನ್ನು ಸಂಪರ್ಕ ಪಡಿಸಿಕೊಳ್ಳಬಹುದಾಗಿದೆ. ಪ್ರೈಮರಿ ಡಿಎನ್‌ಎಸ್ ಸರ್ವರ್: 208.67.222.222 ಮತ್ತು ಆದ್ಯತೆಯ ಡಿಎನ್‌ಎಸ್ ಸರ್ವರ್: 208.67.220.220.

ಬ್ರೌಸರ್ ಕ್ಯಾಶ್ ಕ್ಲಿಯರ್ ಮಾಡಿಕೊಳ್ಳಿ

ಬ್ರೌಸರ್ ಕ್ಯಾಶ್ ಕ್ಲಿಯರ್ ಮಾಡಿಕೊಳ್ಳಿ

ನಿಮ್ಮ ಡಿವೈಸ್‌ನಲ್ಲಿ ತುಂಬಿಕೊಂಡಿರುವ ಬ್ರೌಸರ್ ಕ್ಯಾಶ್ ಕೂಡ ಇಂಟರ್ನೆಟ್ ಸಂಪರ್ಕವನ್ನು ನಿಧಾನಗೊಳಿಸುತ್ತದೆ. ಗರಿಷ್ಟ ವೇಗವನ್ನು ಪಡೆದುಕೊಳ್ಳಲು ಬ್ರೌಸರ್ ಕ್ಯಾಶ್ ಅನ್ನು ನಿವಾರಿಸಿಕೊಳ್ಳಿ. ಹೀಗೆ ಮಾಡದೇ ಇದ್ದರೆ, ನೀವು ನಿಧಾನಗತಿಯ ಸಂಪರ್ಕ ಮತ್ತು ಬ್ರೌಸರ್ ಕ್ಯಾಶ್‌ಗಳ ಅನುಭವ ಪಡೆದುಕೊಳ್ಳುತ್ತೀರಿ. ಬ್ರೌಸರ್ ಕ್ಯಾಶ್ ಮತ್ತು ಹಿಸ್ಟ್ರಿಯನ್ನು ನಿವಾರಿಸಿಕೊಳ್ಳುವುದು ಬ್ರೌಸರ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಉತ್ತಮ ಎಡಿಎಸ್‌ಎಲ್ ಮಾಡೆಮ್ ಬಳಸಿ

ಉತ್ತಮ ಎಡಿಎಸ್‌ಎಲ್ ಮಾಡೆಮ್ ಬಳಸಿ

ಉತ್ತಮ ಎಡಿಎಸ್‌ಎಲ್ ಮಾಡೆಮ್ ಅನ್ನು ಬಳಸಿಕೊಂಡು ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ವೇಗವನ್ನು ನೀವು ಭದ್ರಪಡಿಸಬಹುದು. ಉತ್ತಮ ಎಡಿಎಸ್‌ಎಲ್ ಮಾಡೆಮ್ ಅನ್ನು ಬಳಸುವುದು ಹೆಚ್ಚು ಉತ್ತಮವಾಗಿದ್ದು, ಇತರ ಮಾಡೆಮ್‌ಗಳಿಗಿಂತ ಇದು ಪೂರಕವಾಗಿರುವ ಬ್ಯಾಂಡ್‌ ವಿಡ್ತ್ ಅನ್ನು ನೀಡುತ್ತದೆ.

ಕಂಪ್ಯೂಟರ್‌ನಿಂದ ವೈರಸ್ ನಿವಾರಿಸಿ

ಕಂಪ್ಯೂಟರ್‌ನಿಂದ ವೈರಸ್ ನಿವಾರಿಸಿ

ಬಿಎಸ್‌ಎನ್‌ಎಲ್ ಬಿಬಿ 249 ಪ್ಲಾನ್‌ನ ವೇಗವನ್ನು ಸುಧಾರಿಸುವುದು ಮಾತ್ರವಲ್ಲದೆ, ಇತರ ನೆಟ್‌ವರ್ಕ್ ಸಂಪರ್ಕಗಳಿಗೂ ಇದು ಅತ್ಯುತ್ತಮ ಎಂದೆನಿಸಿದೆ. ನೀವು ಬಳಸುತ್ತಿರುವ ಡಿವೈಸ್ ಮಾಲ್‌ವೇರ್ ಇಲ್ಲವೇ ವೈರಸ್‌ನಿಂದ ಹಾನಿಗೊಳಪಟ್ಟಿತು ಎಂದಾದಲ್ಲಿ, ನಿಮ್ಮ ಇಂಟರ್ನೆಟ್ ವೇಗ ನಿಧಾನವಾಗಿರುತ್ತದೆ. ನಿಮ್ಮ ಡಿವೈಸ್ ವೈರಸ್‌ನಿಂದ ಮುಕ್ತವಾಗಿದೆ ಮತ್ತು ಅಪ್‌ಟು ಡೇಟ್ ಆಂಟಿವೈರಸ್ ಸಾಫ್ಟ್‌ವೇರ್‌ ಇದರಲ್ಲಿದೆ ಎಂಬುದನ್ನು ಕಂಡುಕೊಳ್ಳಿ.

Best Mobiles in India

English summary
Take a look at the steps over here to increase the speed of your BSNL broadband connection.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X