Subscribe to Gizbot

ಇಂಟರ್ನೆಟ್ ಇಲ್ಲದೆಯೇ ಫೋನ್‌ನಲ್ಲಿ ವಾಟ್ಸಾಪ್ ಬಳಕೆ ಹೇಗೆ?

Written By:

ಅತ್ಯುತ್ತಮ ಮೆಸೇಜಿಂಗ್ ಅಪ್ಲಿಕೇಶನ್ ಎಂದೇ ಹೆಸರು ಗಳಿಸಿರುವ ವಾಟ್ಸಾಪ್ ಹೆಚ್ಚಿನ ಬಳಕೆದಾರರ ಅಚ್ಚುಮೆಚ್ಚಿನ ತಾಣವಾಗಿದೆ. ಮೆಸೇಜಿಂಗ್, ಕರೆ, ವೀಡಿಯೊ ಚಾಟ್ ಹೀಗೆ ಬೇರೆ ಬೇರೆ ಫೀಚರ್‌ಗಳ ಅತ್ಯಮೂಲ್ಯ ಕೊಡುಗೆಗಳನ್ನು ನೀಡುತ್ತಿರುವ ವಾಟ್ಸಾಪ್ ಇಂದು ಎಲ್ಲಾ ರೀತಿಯಲ್ಲೂ ಬಳಕೆದಾರರ ಬೆಸ್ಟ್ ತಾಣ ಎಂದೆನಿಸಿದೆ. ಇಂದು ಇದರ ಅತ್ಯುತ್ತಮ ಫೀಚರ್ ಒಂದನ್ನು ನಾವು ತಿಳಿಸಿಕೊಡಲಿದ್ದು ನಿಮ್ಮ ಫೋನ್‌ನಲ್ಲಿ ಈ ತಾಣವನ್ನು ಇಂಟರ್ನೆಟ್ ಇಲ್ಲದೆಯೇ ಬಳಸದಬಹುದಾಗಿದೆ.

ಓದಿರಿ: ಫೋನ್ ಚಾರ್ಜಿಂಗ್: ಬೆನ್ನು ಬಿಡದ ತಪ್ಪು ತಿಳುವಳಿಕೆಗಳು

ಬನ್ನಿ ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ. ದುರ್ಬಲ ಇಂಟರ್ನೆಟ್ ಕನೆಕ್ಶನ್ ಇದ್ದಂತಹ ಸಂದರ್ಭದಲ್ಲಿ ಕೂಡ ವಾಟ್ಸಾಪ್ ಅನ್ನು ನಿಮಗೆ ಬಳಸಬಹುದಾಗಿದೆ.

ಓದಿರಿ: ಏರ್‌ಸೆಲ್ V/S ಬಿಎಸ್‌ಎನ್‌ಎಲ್ V/S ಟಾಟಾ ಡೊಕೊಮೊ ಟಾರಿಫ್ ಸ್ಪರ್ಧೆ: ಯಾವುದು ಉತ್ತಮ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಾಟ್‌ಸಿಮ್

ಚಾಟ್‌ಸಿಮ್

ಚಾಟ್‌ಸಿಮ್ ಒಂದು ಗ್ಲೋಬಲ್ ಸಿಮ್ ಕಾರ್ಡ್ ಎಂದೆನಿಸಿದ್ದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಸಿಮ್ ಕಾರ್ಡ್ ಅನ್ನು ಬಳಸಬಹುದಾಗಿದೆ. ಇದು ವಿಭಿನ್ನವಾಗಿದ್ದು, ಇದರದ್ದೇ ನೆಟ್‌ವರ್ಕ್‌ನಲ್ಲಿ ಬಳಸುವುದರ ಬದಲಿಗೆ, ಇದು ಬೇರೆಯದೇ ನೆಟ್‌ವರ್ಕ್ ಅನ್ನು ಬಳಸಿಕೊಳ್ಳುತ್ತದೆ.

ಇದನ್ನು ಬಳಸುವುದು ಹೇಗೆ?

ಇದನ್ನು ಬಳಸುವುದು ಹೇಗೆ?

ಇದು ಹೆಚ್ಚು ಸರಳ ಟಾಸ್ಕ್ ಎಂದೆನಿಸಿದೆ. ನಿಮ್ಮ ಫೋನ್‌ಗೆ ಚಾಟ್‌ಸಿಮ್ ಅನ್ನು ಅಳವಡಿಸಿಕೊಳ್ಳಿ. ನಿಮ್ಮ ಸ್ನೇಹಿತರಿಗೆ ಸಂದೇಶ ರವಾನೆ ಮಾಡಲು ಆರಂಭಿಸಿ.

ಇದನ್ನು ಎಲ್ಲಿ ಪಡೆದುಕೊಳ್ಳಬಹುದು?

ಇದನ್ನು ಎಲ್ಲಿ ಪಡೆದುಕೊಳ್ಳಬಹುದು?

ಕಂಪೆನಿಯ ವೆಬ್‌ಸೈಟ್‌ಗೆ ಹೋಗಿ ನಿಮಗೆ ಮಾಹಿತಿಯನ್ನು ಇಲ್ಲಿ ಕಂಡುಕೊಳ್ಳಬಹುದಾಗಿದೆ. ಇದರಲ್ಲಿ ಕಾರ್ಯನಿರ್ವಹಿಸುವುದು ಹೇಗೆ ಮತ್ತು ಆರಂಭಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಸ್ಪರ್ಧಾತ್ಮಕ ಅಪ್ಲಿಕೇಶನ್‌ಗಳು

ಸ್ಪರ್ಧಾತ್ಮಕ ಅಪ್ಲಿಕೇಶನ್‌ಗಳು

ಇತರ ಎಲ್ಲಾ ಜನಪ್ರಿಯ ಅಪ್ಲಿಕೇಶನ್‌ಗಳಾದ ಹೈಕ್, ಲೈನ್, ವಿಚಾಟ್, ಫೇಸ್‌ಬುಕ್ ಮೆಸೆಂಜರ್, ಬಿಬಿಎಮ್, ಟೆಲಿಗ್ರಾಮ್ ಮತ್ತು ಇನ್ನಷ್ಟರಲ್ಲಿ ಈ ಸಿಮ್ ಅನ್ನು ಬಳಸಿಕೊಳ್ಳಬಹುದಾಗಿದೆ.

ಬೆಲೆ ಮತ್ತು ಯೋಜನೆಗಳು

ಬೆಲೆ ಮತ್ತು ಯೋಜನೆಗಳು

ಚಾಟ್‌ಸಿಮ್ ಉತ್ತಮ ಯೋಜನೆ ಎಂದೆನಿಸಿದ್ದು ರೂ 950 ಕ್ಕೆ ಇದು ದೊರೆಯಲಿದೆ. ಇದರಲ್ಲಿ ನಿಮಗೆ ಅನಿಯಮಿತ ಪಠ್ಯ ಸಂದೇಶಗಳು ಮತ್ತು ಇಮೋಜಿಗಳನ್ನು ಪಡೆದುಕೊಳ್ಳಬಹುದಾಗಿದೆ. ನೀವು ವಿಶ್ವದ ಯಾವ ಮೂಲೆಯಲ್ಲಿದ್ದರೂ ಈ ಸಿಮ್‌ನ ಬಳಕೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ. ವಾಯ್ಸ್ ಅಥವಾ ವೀಡಿಯೊ ಕರೆಗಳ ಉಪಯೋಗವನ್ನು ನಿಮಗೆ ಮಾಡಬೇಕು ಎಂದಾದಲ್ಲಿ ಅಂತೆಯೇ ಮಲ್ಟಿಮೀಡಿಯಾ ಫೈಲ್‌ಗಳ ಶೇರಿಂಗ್ ಮಾಡಬೇಕು ಎಂದಲ್ಲಿ ನೀವು ರೂ 950 ರಿಂದ ರೂ 4,750 ರೊಳಗಿನ ಶುಲ್ಕವನ್ನು ಪಾವತಿಸಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
If you were in a similar situation or if you think you'll ever be, this post is for you. Well, all you need is a ChatSim.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot