ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

By Ashwath
|

ಭಾರತದಲ್ಲಿ ಸ್ಮಾರ್ಟ್‌ಫೋನ್‌ಲ್ಲಿ ಇಂಟರ್‌ನೆಟ್‌ ನೋಡುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಹ್ಯಾಕರ್‌ಗಳು ಸ್ಮಾರ್ಟ್‌ಫೋನ್‌ಗೆ ವೈರಸ್‌ಗಳನ್ನು ಬಿಡುವ ಮೂಲಕ ಮಾಹಿತಿ ಕದಿಯಲು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಿಜ್ಬಾಟ್ ಇಂದು ಸ್ಮಾರ್ಟ್‌ಫೋನ್‌ನ್ನು ಸುರಕ್ಷಿತವಾಗಿ ಹೇಗೆ ಬಳಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಂದಿದೆ. ಮುಂದಿನ ಪುಟದಲ್ಲಿ ಈ ಎಲ್ಲಾ ಮಾಹಿತಿಗಳನ್ನು ವಿವರಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಈ ಮಾಹಿತಿಯನ್ನು ಓದಿಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ನ್ನು ಸುರಕ್ಷಿತವಾಗಿ ಬಳಸಿಕೊಳ್ಳಿ.

ಇದನ್ನೂ ಓದಿ : ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ಮೊಬೈಲ್‌ ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಅತಿ ಹೆಚ್ಚು ಸ್ಪಾಮ್‌ ಮೇಲ್‌ಗಳು ಇಮೇಲ್‌ಗೆ ಬರುತ್ತಿರುತ್ತವೆ. ಹ್ಯಾಕರ್‌ಗಳು ಮಾಹಿತಿ ಕದಿಯಲೆಂದೇ ಸ್ಪಾಮ್‌ ಮೇಲ್‌ಗಳನ್ನು ಕಳುಹಿಸುತ್ತಿರುತ್ತಾರೆ.ಅಮೆರಿಕ, ಚೀನಾದ ನಂತರ, ಪ್ರಪಂಚದಾದ್ಯಂತ ಸ್ಪಾಮ್‌ ವಿತರಿಸುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದಿದೆ ಎನ್ನುವ ವರದಿ ಪ್ರಕಟವಾಗಿದೆ.ಹೀಗಾಗಿ ಇ ಮೇಲ್‌ ಓಪನ್‌ ಮಾಡುವ ಸಂದರ್ಭದಲ್ಲಿ ಎಚ್ಚರವಾಗಿರಿ.

ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವಾಗ ನಂಬಿಕಸ್ತ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಹ್ಯಾಕರ್‌ಗಳು ಈ ಅಪ್ಲಿಕೇಶನ್‌ ಮೂಲಕ ನುಸುಳಿ ಮಾಹಿತಿ ಕದಿಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಡೌನ್‌ಲೋಡ್‌ ಮಾಡುವಾಗಲೇ ಇದುವರಗೆ ಆ ಅಪ್ಲಿಕೇಶನ್‌ನ್ನು ಎಷ್ಟು ಜನ ಡೌನ್‌ಲೋಡ್‌ ಮಾಡಿದ್ದಾರೆ ಮತ್ತು ಜನರು ಬರೆದಿರುವ ಅಭಿಪ್ರಾಯವನ್ನು ಓದಿಕೊಂಡು ಡೌನ್‌ಲೋಡ್‌ ಮಾಡುವುದು ಒಳ್ಳೆಯದು.

ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಮಾರುಕಟ್ಟೆಗೆ ಹೊಸದಾಗಿ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಆಂತರಿಕ ಮೆಮೋರಿಯನ್ನು ಹೊಂದಿರುತ್ತವೆ.ಹೀಗಾಗಿ ಕೆಲವೊಮ್ಮೆ ಡೇಟಾಗಳನ್ನು ಶೇರ್‌ ಮಾಡುವ ಸಂದರ್ಭದಲ್ಲಿ ಆಂತರಿಕ ಮೆಮೋರಿಯಲ್ಲಿ ಜಾಗ ಇದೆ ಎಂಬ ಕಾರಣಕ್ಕೆ ನೇರವಾಗಿ ಡೇಟಾಗಳನ್ನು ಸೇವ್‌ ಮಾಡದಿರಿ. ಡೇಟಾಗಳನ್ನು ಎಸ್‌ಡಿ ಕಾರ್ಡ್‌ನಲ್ಲೇ ಸೇವ್‌ ಮಾಡಿ. ಆಂತರಿಕ ಮೆಮೋರಿಯಲ್ಲಿ ಸೇವ್‌ ಮಾಡಿದರೆ ವೈರಸ್‌ ಬರುವ ಸಾಧ್ಯತೆಗಳಿರುತ್ತವೆ.

ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಬ್ಲೂಟೂತ್‌ ನಿಯಂತ್ರಣದ ಮೂಲಕ ಕೆಲಸ ಮಾಡಬಲ್ಲ ಅನೇಕ ಗ್ಯಾಡ್ಜೆಟ್‌ಗಳು ಮಾರುಕಟ್ಟೆಗೆ ಬಂದಿದೆ.ಹೀಗಾಗಿ ಒಂದು ವೇಳೆ ಈ ಸಾಧನಗಳನ್ನು ನಿಯಂತ್ರಣ ಮಾಡುವ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ಲ್ಲಿರುವ ಬ್ಲೂಟೂತ್‌ ಸೆಟ್ಟಿಂಗ್ಸ್‌ Discoverable mode ಆಯ್ಕೆಯನ್ನು ಆನ್‌ ಮಾಡಿಕೊಳ್ಳದಿರಿ. ಈ ಆಯ್ಕೆಯನ್ನು ಆರಿಸಿದ್ದಲ್ಲಿ ಬೇರೆಯವರು ನಿಮ್ಮ ಸ್ಮಾರ್ಟ್‌ಫೋನ್‌ಗೆ ನಿಮ್ಮ ಅನುಮತಿಯಿಲ್ಲದೇ ಬ್ಲೂಟೂತ್‌ ವೈರಸ್‌ ಕಳುಹಿಸುವ ಸಾಧ್ಯತೆ ಇರುತ್ತದೆ.ಹಾಗಾಗಿ ಅಗತ್ಯವಿರುವಾಗ ಮಾತ್ರ Discoverable mode ಆಯ್ಕೆಯನ್ನು ಆರಿಸಿ ಕೆಲಸ ಆದ ಬಳಿಕ ಆಫ್‌ ಮಾಡಿ.

ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಸುರಕ್ಷಿತವಾಗಿ ಸ್ಮಾರ್ಟ್‌ಫೋನ್‌ ಬಳಸುವುದು ಹೇಗೆ ?

ಸ್ಮಾರ್ಟ್‌ಫೋನ್‌ನ್ನು ಶುಚಿಯಾಗಿ ಇಡುವುದು ಒಂದು ಕಲೆ. ಯಾವಾಗಲೂ ಇದು ನಮ್ಮೊಂದಿಗೆ ಇರುವುದರಿಂದ ಕ್ಲೀನ್‌ ಆಗಿ ಇಟ್ಟುಕೊಳ್ಳಬೇಕಾತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X