ಇಮೇಲ್‌ನ್ನು ಸುರಕ್ಷಿತವಾಗಿಡಲು 8 ಟಿಪ್ಸ್‌ ಇಲ್ಲಿದೆ ನೋಡಿ.

Posted By:

ಇತ್ತೀಚಿಗೆ ಇಂಟರ್‌ನೆಟ್‌ನಲ್ಲಿ ಹ್ಯಾಕರ್‌ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ನಿಮಗೆ ಗೊತ್ತಿಲ್ಲದ ಹಾಗೇ ನಿಮ್ಮ ಇಮೇಲ್‌ನ್ನು ಹ್ಯಾಕರ್‌ಗಳು ಬಳಸುತ್ತಿದ್ದಾರೆ. ಮನೆಯಿಂದ ಹೊರಗಡೆ ಹೋದಾಗ ಬಾಗಿಲಿಗೆ ಲಾಕ್‌ ಹಾಕದೇ ಹೋದರೆ ಹೇಗೆ ಕಳ್ಳರು ಸುಲಭವಾಗಿ ಒಳನುಗ್ಗುತ್ತಾರೋ ಅದೇ ರೀತಿಯಲ್ಲಿ ಇಮೇಲ್‌ ಬಳಸುವಾಗ ನಾವು ಮಾಡುವ ಯಡವಟ್ಟಿನಿಂದ ಹ್ಯಾಕರ್‌ಗಳು ಸುಲಭವಾಗಿ ನಮ್ಮ ಇಮೇಲ್‌ಗಳನ್ನು ಹ್ಯಾಕ್‌ ಮಾಡುತ್ತಾರೆ.
ಇಮೇಲ್‌ ಒಪನ್‌ ಮಾಡಲು ಗೂಗಲ್‌ ಹೊಸ ರೀತಿಯ ಪಾಸ್‌ವರ್ಡ್ ರೂಪಿಸುವ ಸುದ್ದಿಯನ್ನು ಗಿಜ್ಬಾಟ್‌ ನಿನ್ನೆ ತಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಇಮೇಲ್‌ ಬಳಸುವಾಗ ನಾವು ಯಾವ ರೀತಿ ಎಚ್ಚರದಿಂದರಬೇಕು..? ಇಮೇಲ್‌ನಲ್ಲಿ ನಾವು ಮಾಡುವ ತಪ್ಪುಗಳೇನು..? ಈ ಬಗ್ಗೆ 8 ಟಿಪ್ಸ್‌ಗಳನ್ನು ತಂದಿದೆ . ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನಿಮ್ಮ ಪಾಸ್‌ವರ್ಡ್‌ನ್ನು ಆಗಾಗ ಬದಲಾಯಿಸಿಕೊಳ್ಳಿ :

ನಿಮ್ಮ ಪಾಸ್‌ವರ್ಡ್‌ನ್ನು ಆಗಾಗ ಬದಲಾಯಿಸಿಕೊಳ್ಳಿ :

ನಿಮ್ಮ ಪಾಸ್‌ವರ್ಡ್‌ನ್ನು ಆಗಾಗ ಬದಲಾಯಿಸಿಕೊಳ್ಳಿ :

ಪಾಸ್‌ವರ್ಡ್ ಕ್ರಿಯೆಟ್‌ ಮಾಡುವಾಗ ಶಕ್ತಿಯುತವಾದ ಪಾಸ್‌ವರ್ಡ್ ಕ್ರಿಯೆಟ್‌ ಮಾಡಿ. ಅಲ್ಲದೇ ಒಂದೇ ಪಾಸ್‌ವರ್ಡ್‌ನ್ನು ಎಲ್ಲಾ ಕಡೆ ಉಪಯೋಗಿಸಬೇಡಿ. ವಿಶೇಷವಾಗಿ ಆನ್‌ಲೈನ್‌ ಬ್ಯಾಂಕಿಗ್‌ ಪಾಸ್‌ವರ್ಡ್‌ನ್ನು ಬೇರೆ ಎಲ್ಲಿಯೂ ಉಪಯೋಗಿಸಬೇಡಿ. ಇದರೊಂದಿಗೆ ಪಾಸ್‌ವರ್ಡ್‌ನ್ನು ಆಗಾಗ ಬದಲಾಯಿಸಿಕೊಳ್ಳಿ.

ಪರಿಚಯ ಇಲ್ಲದ ಇಮೇಲ್‌ಗಳ ಆಟ್ಯಾಚ್‌ಮೆಂಟ್‌ ಫೈಲ್‌ಗಳಿದ ದೂರವಿರಿ :

ಪರಿಚಯ ಇಲ್ಲದ ಇಮೇಲ್‌ಗಳ ಆಟ್ಯಾಚ್‌ಮೆಂಟ್‌ ಫೈಲ್‌ಗಳಿದ ದೂರವಿರಿ :

ಪರಿಚಯ ಇಲ್ಲದ ಇಮೇಲ್‌ಗಳ ಆಟ್ಯಾಚ್‌ಮೆಂಟ್‌ ಫೈಲ್‌ಗಳಿದ ದೂರವಿರಿ :

ನಿಮ್ಮ ಮೇಲ್‌ಗೆ ಅನಗತ್ಯವಾದ ಇಮೇಲ್‌ಗಳು ಬರುತ್ತಲೇ ಇರುತ್ತವೆ. ವಿಶೇಷವಾಗಿ ನಿಮ್ಮ ಫ್ರೆಂಡ್ಸ್‌ ಮುಖಾಂತರ ಬರುವ ಸೋಶಿಯಲ್‌ ನೆಟ್‌ವರ್ಕ್ ಸೈಟ್‌ಗಳಿಗೆ ಜಾಯಿನ್‌ ಆಗುವಾಗ ತುಂಬಾ ಜಾಗೃತೆವಹಿಸಿ.ನಿಮ್ಮ ನಂಬಿಕೆಯುಳ್ಳ ಸ್ನೇಹಿತರು ಕಳುಹಿಸಿದ ಮೇಲ್‌ಗಳಿಗೆ ನೀವು ಲಾಗಿನ್‌ ಆಗಿ. ಪರಿಚಯವಿಲ್ಲದ ಇಮೇಲ್ ಜೊತೆ ಬಂದಿರುವಂತಹ ಆಟ್ಯಾಚ್‌ಮೆಂಟ್‌ ಫೈಲ್‌ಗಳನ್ನು ಕ್ಲಿಕ್‌ ಮಾಡಬೇಡಿ.

ಹಣದ ಆಸೆಗೆ ಬಲಿಯಾಗಬೇಡಿ :

ಹಣದ ಆಸೆಗೆ ಬಲಿಯಾಗಬೇಡಿ :

ಹಣದ ಆಸೆಗೆ ಬಲಿಯಾಗಬೇಡಿ :

ನಿಮ್ಮ ಬ್ಯಾಂಕ್‌ ಸೈಟ್‌ ಬಿಟ್ಟು ಬೇರೆ ಯಾವ ಸೈಟ್‌ಗಳು ನಿಮ್ಮ ಬ್ಯಾಂಕ್‌ ಪಾಸ್‌ವರ್ಡ್ ಕೇಳುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.ಬಹುಮಾನ ಬಂದಿದೆ ಎನ್ನುವ ಮೆಸೇಜ್‌ಗಳು ಬರುತ್ತಲೇ ಇರುತ್ತವೆ. ಅವುಗಳನ್ನು ಬಂದ ಕೂಡಲೇ ಡಿಲೀಟ್‌ ಮಾಡಿಬಿಡಿ. ಬಹುಮಾನ ಬಂದಿದೆ ಎಂಬ ಸಂತೋಷಕ್ಕೆ ಆ ಸೈಟ್‌ಗೆ ಲಾಗಿನ್‌ ಆದ್ರೆ ನೀವು ಹಣ ಕಳೆದುಕೊಳ್ಳಬೇಕಾದಿತು.

ಸ್ಪಾಮ್ ಮೇಲ್‌ಗೆ ಗುಡ್‌ಬೈ ಹೇಳಿ:

ಸ್ಪಾಮ್ ಮೇಲ್‌ಗೆ ಗುಡ್‌ಬೈ ಹೇಳಿ:

ಸ್ಪಾಮ್ ಮೇಲ್‌ಗೆ ಗುಡ್‌ಬೈ ಹೇಳಿ:

ನೀವು ಬಯಸದ ಮಾಹಿತಿಯನ್ನು ಕೆಲ ಮೇಲ್‌ಗಳು ಬಲವಂತವಾಗಿ ಹೊತ್ತು ತರುತ್ತವೆ.ಇದಕ್ಕೆ ಸ್ಪಾಮ್‌ ಮೇಲ್‌ ಎಂದು ಕರೆಯುತ್ತಾರೆ. ಹಾಗಾಗಿ ಸ್ಪಾಮ್‌ ಫೋಲ್ಡರ್‌ನಲ್ಲಿರುವ ಮೇಲ್‌ಗಳಿಗೆ ರಿಪ್ಲೈ ಮಾಡಲು ಹೋಗಬೇಡಿ .

ಸೈಬರ್ ಕೇಂದ್ರಗಳಲ್ಲಿಮತ್ತು ಪಬ್ಲಿಕ್‌ ವೈಫೈ ಬಳಸುವಾಗ ಎಚ್ಚರವಾಗಿರಿ :

ಸೈಬರ್ ಕೇಂದ್ರಗಳಲ್ಲಿಮತ್ತು ಪಬ್ಲಿಕ್‌ ವೈಫೈ ಬಳಸುವಾಗ ಎಚ್ಚರವಾಗಿರಿ :

ಸೈಬರ್ ಕೇಂದ್ರಗಳಲ್ಲಿಮತ್ತು ಪಬ್ಲಿಕ್‌ ವೈಫೈ ಬಳಸುವಾಗ ಎಚ್ಚರವಾಗಿರಿ :

ನೀವು ಇಮೇಲ್ ಅನ್ನು ಯಾವುದೇ ಸೈಬರ್ ಕೇಂದ್ರಗಳಲ್ಲಿ ಚೆಕ್ ಮಾಡಿದ ಮೇಲೆ ಲಾಗ್ ಔಟ್ ಮಾಡಿದ್ದೀರಾ ಎಂದು ಪರೀಕ್ಷಿಸಿ. ಇಲ್ಲದಿದ್ದರೆ ನಿಮ್ಮ ಖಾತೆಯನ್ನು, ನಿಮ್ಮ ನಂತರ ಬರುವ ಗ್ರಾಹಕ ದುರುಪಯೋಗಪಡಿಸಿಕೊಳ್ಳಬಹುದು.ಯಾವುದೇ ಕಾರಣಕ್ಕೂ ಸೈಬರ್‌ನಲ್ಲಿ ಕುಳಿತುಕೊಂಡು ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಹಾರಕ್ಕೆ ಮಾಡಬೇಡಿ.ಸೈಬರ್‌ ಕೆಫೆಯಲ್ಲಿ ಎಷ್ಟು ಹುಷಾರಾಗಿರುತ್ತಿರೋ ಅದೇ ರೀತಿಯಲ್ಲಿ ಪಬ್ಲಿಕ್‌ ವೈಫೈ ಬಳಸುವಾಗ ಎಚ್ಚರದಲ್ಲಿರಿ. ಅಗತ್ಯವಾಗಿದ್ದರೇ ಮಾತ್ರ ಪಬ್ಲಿಕ್‌ ವೈಫೈ ಬಳಸಿ.

ಬಲವಾದ ಆಂಟಿವೈರಸ್‌ ಇನ್‌ಸ್ಟಾಲ್‌ ಮಾಡಿ:

ಬಲವಾದ ಆಂಟಿವೈರಸ್‌ ಇನ್‌ಸ್ಟಾಲ್‌ ಮಾಡಿ:

ಬಲವಾದ ಆಂಟಿವೈರಸ್‌ ಇನ್‌ಸ್ಟಾಲ್‌ ಮಾಡಿ:

ಮಾರುಕಟ್ಟೆಯಲ್ಲಿ ಬಹಳಷ್ಟು ಆಂಟಿವೈರಸ್‌ ಮತ್ತು ಆಂಟಿ -ಮಾಲ್‌ವೇರ್‌ಗೂ ದೊರೆಯುತ್ತವೆ. ಹಾಗಾಗಿ ಇನ್‌ಸ್ಟಾಲ್‌ ಮಾಡುವ ಮೊದಲು ಪರಿಚಯದವರ ಮೂಲಕವೇ ಕೇಳಿ ಅದನ್ನು ಇನ್‌ಸ್ಟಾಲ್‌ ಮಾಡಿ.

ನಿಮ್ಮ ಕಂಪ್ಯೂಟರ್ ಲಾಕ್ ಮಾಡಿ :

ನಿಮ್ಮ ಕಂಪ್ಯೂಟರ್ ಲಾಕ್ ಮಾಡಿ :

ನಿಮ್ಮ ಕಂಪ್ಯೂಟರ್ ಲಾಕ್ ಮಾಡಿ :

ಕೆಲಸ ಮಾಡುವ ಜಾಗದಲ್ಲಿ ಹುಷಾರಾಗಿರಬೇಕು. ನೀವು ನಿಮ್ಮ ಆಫೀಸಿನ ಕಂಪ್ಯೂಟರ್ ಎರುರು ಇಲ್ಲದಿದ್ದರೆ ಲಾಕ್ ಮಾಡಿ. ಇಲ್ಲದಿದ್ದರೆ ನಿಮ್ಮ ಸಹ ಕೆಲಸಗಾರರು ನಿಮ್ಮ ಇಮೇಲ್ ಓದಬಹುದು ಇಲ್ಲವೆ ಪಾಸ್ವರ್ಡ್ reset ಮಾಡಿಬಿಡಬಹುದು.

ನಕಲಿ ಮೇಲ್ ಬಗ್ಗೆ ಹುಷಾರಾಗಿರಿ :

ನಕಲಿ ಮೇಲ್ ಬಗ್ಗೆ ಹುಷಾರಾಗಿರಿ :

ನಕಲಿ ಮೇಲ್ ಬಗ್ಗೆ ಹುಷಾರಾಗಿರಿ :

"security ಕಾರಣಗಳಿಗಾಗಿ ಪಾಸ್ವರ್ಡ್ reset ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ" ಅನ್ನೋ ಮೇಲ್ ಗಳನ್ನು, ನೀವು ಎಲ್ಲಿ ಇಮೇಲ್ ಖಾತೆ ಹೊಂದಿದ್ದೀರೋ ಆ ಕಂಪನಿಯ ಹೆಸರಿನಿಂದ ಯಾವುದಾದರೂ ಎಚ್ಚರಿಕೆ ಮೇಲ್ ಬಂದಿದ್ದರೆ ಹುಷಾರಾಗಿರಿ. ಅದನ್ನು ಕ್ಲಿಕ್ ಮಾಡಲೇಬೇಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot