ಸರಳ ಸಮಸ್ಯೆಗೆ ಸರಳ ಪರಿಹಾರ

By Ashwath
|

ಈಗಾಗ್ಲೇ ಮಳೆ ಬರಲು ಆರಂಭವಾಗಿದೆ. ಈ ಸಂದರ್ಭದಲ್ಲಿ ನಮ್ಮಲ್ಲಿರುವ ಮೊಬೈಲ್‌ಗಳು ಮಳೆಗೆ ಒದ್ದೆಯಾಗುವುದು ಸಾಮಾನ್ಯ. ಕೆಲವೊಮ್ಮೆ ನಮ್ಮ ಕೈ ತಪ್ಪಿ ನೀರಿಗೂ ಬೀಳುತ್ತದೆ. ಈ ರೀತಿಯ ಅವಘಡಗಳಾದ್ರೂ ಯಾರು ಭಯಪಡಬೇಕಾಗಿಲ್ಲ. ಮನೆಯಲ್ಲೇ ಕುಳಿತು ಇದಕ್ಕೆ ಪರಿಹಾರ ಮಾಡಬಹುದು. ಇದೇ ರೀತಿಯಲ್ಲಿ ಮೊಬೈಲ್‌ ಸ್ಕ್ರೀನ್‌ ಮೇಲೆ ಸಣ್ಣ ಗೆರೆಗಳಾದ್ರೂ ಸರಿಪಡಿಸಬಹುದು.ಮರಳು ಒಳಗಡೆ ಸೇರಿದ್ರೂ ತೆಗೆಯಬಹುದು. ಈ ಸಮಸ್ಯೆಗಳಿಗೆ ಸರಳ ಪರಿಹಾರವನ್ನು ಗಿಜ್ಬಾಟ್‌ ತಂದಿದೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಸ್ಕ್ರೀನ್‌ ಮೇಲೆ ಗೆರೆಗಳಾದ್ರೆ ಏನು ಮಾಡುವುದು?

ಸ್ಕ್ರೀನ್‌ ಮೇಲೆ ಗೆರೆಗಳಾದ್ರೆ ಏನು ಮಾಡುವುದು?

ಮನೆಯಲ್ಲಿರುವ ಟೂಥ್‌ಪೇಸ್ಟ್‌ನ್ನು ಸ್ವಲ್ಪ ಸ್ಮಾರ್ಟ್‌ಫೋನ್‌ಗೆ ಹಾಕಿ. ನಂತರ ಒಂದು ಹತ್ತಿ ಬಟ್ಟೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಕ್ಲೀನ್‌ ಮಾಡಿ, ನಿಮ್ಮ ಸ್ಕ್ರೀನ್ ಮೊದಲಿನಂತಾಗುತ್ತದೆ.
(ನೀರು ಮತ್ತು ಪೇಸ್ಟ್‌ ಹಾಕುವಾಗ ಜಾಗ್ರತೆಯಿರಲಿ. ಜಾಸ್ತಿ ಹಾಕದಿರಿ)

ಸ್ಕ್ರೀನ್‌ ಪರದೆಯೊಳಗೆ ಗಾಳಿ ತುಂಬಿದರೆ ತೆಗೆಯುವುದು ಹೇಗೆ ?

ಸ್ಕ್ರೀನ್‌ ಪರದೆಯೊಳಗೆ ಗಾಳಿ ತುಂಬಿದರೆ ತೆಗೆಯುವುದು ಹೇಗೆ ?

ಕೆಲವೊಮ್ಮೆ ಸ್ಕ್ರೀನ್‌ಗಾರ್ಡ್ ಹಾಕುವಾಗ ಸರಿಯಾಗಿ ಹಾಕದಿದ್ರೆ ಮೊಬೈಲ್ ಸ್ಕ್ರೀನ್‌ ಒಳಗಡೆ ಸಣ್ಣ ಗಾಳಿ ತುಂಬಿರುತ್ತದೆ. ಹೀಗಾಗಿ ನಿಮ್ಮ ಸ್ಕ್ರೀನ್‌ ಚೆನ್ನಾಗಿ ಕಾಣುವುದಿಲ್ಲ. ಅದಕ್ಕಾಗಿ ಪೆನ್ ಕ್ಯಾಪ್‌ ಅಥವಾ ಸಣ್ಣ ಹತ್ತಿ ಬಟ್ಟೆಯನ್ನು ಗಾಳಿ ಇರುವ ಜಾಗದಲ್ಲಿರಿಸಿ ಅದನ್ನು ನಿಧಾನವಾಗಿ ತಳ್ಳಿ, ಗಾಳಿಯನ್ನು ಸ್ಕ್ರೀನ್‌ನಿಂದ ಹೊರಗೆ ಹಾಕಿದ್ರೆ ನಿಮ್ಮ ಸ್ಕ್ರೀನ್‌ ಚೆನ್ನಾಗಿ ಕಾಣುತ್ತದೆ.

ಹಾಳಾದ ಬ್ಯಾಟರಿಯನ್ನು ಮತ್ತೊಮ್ಮೆ ಬಳಸುವುದು ಹೇಗೆ?

ಹಾಳಾದ ಬ್ಯಾಟರಿಯನ್ನು ಮತ್ತೊಮ್ಮೆ ಬಳಸುವುದು ಹೇಗೆ?

ಬ್ಯಾಟರಿಯಲ್ಲಿ ಚಾರ್ಜ್ ನಿಲ್ಲದಿದ್ದರೆ ಹೊಸ ಬ್ಯಾಟರಿಯನ್ನು ಖರೀದಿಸುವುದು ಸಾಮಾನ್ಯ. ಆದ್ರೆ ಈ ಹಳೇ ಬ್ಯಾಟರಿಯನ್ನು ಮತ್ತೆ ಉಪಯೋಗಿಸಬಹುದು. ಹಳೇ ಬ್ಯಾಟರಿಯನ್ನು ಐಸ್‌ನ ಒಳಗಡೆ 15 ಗಂಟೆಗಳ ಕಾಲ ಇರಿಸಿ ನಂತರ ಅದನ್ನು ಬಳಸಬಹುದು. ಈ ಬಗ್ಗೆ ಅನೇಕ ವೆಬ್‌ಸೈಟ್‌ಗಳಲ್ಲಿ ಮಾಹಿತಿಯಿದ್ದು, ಹಾಳಾದ ಬ್ಯಾಟರಿಯನ್ನು ಈ ರೀತಿ ಓದುಗರು ಪರೀಕ್ಷೆ ಮಾಡಬಹುದು.

ಮೊಬೈಲ್‌ನಲ್ಲಿದ್ದ ಮರಳು,ದೂಳುಗಳನ್ನು ತೆಗೆಯುವುದು ಹೇಗೆ ?

ಮೊಬೈಲ್‌ನಲ್ಲಿದ್ದ ಮರಳು,ದೂಳುಗಳನ್ನು ತೆಗೆಯುವುದು ಹೇಗೆ ?

ಕೆಲವೊಮ್ಮೆ ಮೊಬೈಲ್‌ನ ಸ್ಪೀಕರ್‌ ಒಳಗಡೆ ದೂಳು, ಮರಳು ಸೇರಿ ಬೇರೆ ಕರೆ ಬಂದಾಗ ಸರಿಯಾಗಿ ಧ್ವನಿ ಕೇಳಿಸುವುದಿಲ್ಲ. ಈ ದೂಳುಗಳನ್ನು ನೀವು ಸಾಫ್ಟ್‌ ಆಗಿರುವ ಟೂಥ್‌ಬ್ರಷ್‌ನಿಂದ ತೆಗಯಬಹುದು. ಅದೇ ರೀತಿ ನಿಮ್ಮಲ್ಲಿ ಕಿಪ್ಯಾಡ್‌ ಒಳಗಡೆ ಮರಳು ಸೇರಿದ್ದರೂ ಈ ತಂತ್ರದಿಂದ ಕ್ಲೀನ್‌ ಮಾಡಬಹುದು.

ಮೊಬೈಲ್ ನೀರಿಗೆ ಬಿದ್ರೆ ಏನು ಮಾಡುವುದು ?

ಮೊಬೈಲ್ ನೀರಿಗೆ ಬಿದ್ರೆ ಏನು ಮಾಡುವುದು ?

ಮೊದಲಿಗೆ ನಿಮ್ಮ ಮೊಬೈಲ್‌ ಫೊನ್‌ ಅನ್ನು ಸ್ವಿಚ್‌ ಆಫ್‌ ಮಾಡಿ. ಫೋನ್‌ ಒದ್ದೆಯಾಗಿರುವಾಗ ಎಂದಿಗೂ ಆನ್‌ ಮಾಡಲು ಪ್ರಯತ್ನಿಸಬೇಡಿ ಶಾರ್ಟ್‌ ಸರ್ಕ್ಯೂಟ್‌ ಆಗುವ ಸಾಧ್ಯತೆ ಇರುತ್ತದೆ.ಸ್ವಿಚ್‌ ಆಫ್‌ ಮಾಡಿದ ನಂತರ ಬ್ಯಾಟರಿ, ಸಿಮ್‌ ಕಾರ್ಡ್‌ ಹಾಗು ಮೆಮೊರಿ ಕಾರ್ಡ್‌ ತೆಗೆಯಿರಿ. ನಿಮ್ಮ ಬಳಿ ಟಿಶ್ಶು ಪೇಪರ್‌ ಇದ್ದಲ್ಲಿ ಮೊಬೈಲ್‌ನ ಮೇಲ್ಭಾಗದಲ್ಲಿ ಕಾಣಿಸುತ್ತಿರುವ ನೀರನ್ನು ಒರಿಸಿ.

ಮೊಬೈಲ್ ನೀರಿಗೆ ಬಿದ್ರೆ ಏನು ಮಾಡುವುದು ?

ಮೊಬೈಲ್ ನೀರಿಗೆ ಬಿದ್ರೆ ಏನು ಮಾಡುವುದು ?

ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ತುಂಬಿಕೊಳ್ಳಿ. ನಂತರ ಬಟ್ಟಲಿನಲ್ಲಿ ನಿಮ್ಮ ಬ್ಯಾಟರಿ, ಸಿಮ್‌ ಹಾಗೂ ಮೊಬೈಲ್‌ ಫೋನ್‌ ಇಡಿ. ಅಂದಹಾಗೆ ಫೋನ್‌ನ್ನು ಅಕ್ಕಿಯಿಂದ ಸ್ವಲ್ಪ ಹೊರಭಾಗದಲ್ಲಿಡಿ. ನಿಮ್ಮ ಬಟ್ಟಲ್ಲನ್ನು ಸ್ವಲ್ಪ ಸಮಯ ಬಿಸಿಲಿನಲ್ಲಿಡಿ ಇದರಿಂದ ನಿಮ್ಮ ಫೋನ್‌ ಹಾಳಾಗುವುದನ್ನು ತಡೆಯಬಹುದಾಗಿದೆ. ಅಕ್ಕಿಯು ಬಿಸಿಯಾದಂತೆ ನಿಮ್ಮ ಮೊಬೈಲ್‌ ಹಾಗೂ ಒಳಗೆ ತುಂಬಿರುವ ನೀರು ಒಣಗಿಹೋಗುತ್ತದೆ.
ಸ್ವಲ್ಪ ಸಮಯ ಬಿಸಿಲಿನಲ್ಲಿ ಇಟ್ಟ ಬಳಿಕ ಮೊಬೈಲ್‌ ಹೊರತೆಗೆದು ಸೂಕ್ಷ್ಮವಾಗಿ ಗಮನಿಸಿ ಮೊಬೈಲ್‌ನ ಆಡಿಯೋ ಫೋರ್ಟ್‌ ಹಾಗೂ ಜ್ಯಾಕ್‌ನಲ್ಲಿ ಅಕ್ಕಿಯ ಕಾಳು ಸೇರಿರುವ ಸಾಧ್ಯತೆ ಇರುತ್ತದೆ. ಫೋರ್ಟ್‌ ಹಾಗೂ ಜ್ಯಾಕ್‌ ಪರಿಶೀಲಿಸಿದ ಬಳಿಕ ಸಿಂ ಕಾರ್ಡ್‌ ಹಾಗೂ ಬ್ಯಾಟರಿ ಹಾಕಿ ಮೊಬೈಲ್‌ ಸ್ವಿಚ್‌ ಆನ್‌ ಮಾಡಿ. ನಿಮ್ಮ ಮೊಬೈಲ್‌ ಮೊದಲಿನಂತೆ ಕೆಲಸ ಮಾಡಲು ಆರಂಭಿಸುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X