ವಿಶ್ವವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ರಹಸ್ಯಗಳು

By Shwetha
|

ನಮ್ಮ ಊಹೆಗೂ ನಿಲುಕದ ಹಲವಾರು ಘಟನೆಗಳು ಇದ್ದು ಇದನ್ನು ಇದುವರೆಗೂ ಬಹಿರಂಗಪಡಿಸಲಾಗಿಲ್ಲ. ಕೆಲವೊಂದನ್ನು ಅನ್ವೇಷಿಸಿದಷ್ಟೂ ಅದು ಇನ್ನಷ್ಟು ರಹಸ್ಯಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಅದು ಮರಣವಾಗಿರಬಹುದು, ನಿಗೂಢ ರಹಸ್ಯಗಳಾಗಿರಬಹುದು, ಭೂಮಿಗೆ ಆಗಮಿಸುತ್ತಿರುವ ಆಗಂತುಕ ಜೀವಿಗಳಾಗಿರಬಹುದು ಹೀಗೆ ಕೆಲವೊಂದು ಘಟನೆಗಳು ತಮ್ಮಂತೆಯೇ ಭೂಗತಗೊಂಡಿವೆ. ಇಂತಹುದು ಈ ವಿಶ್ವದಲ್ಲಿ ಸಾಕಷ್ಟಿವೆ. ಅದರಲ್ಲಿ ಕೆಲವೊಂದನ್ನು ನಿಮ್ಮ ಮುಂದೆ ನಾವು ತರುತ್ತಿದ್ದು ಇದು ಮೈನಡುಗಿಸುವುದು ಖಂಡಿತ.

ಓದಿರಿ: ಭೂಮಿಯ ಮೇಲೆ ಏಲಿಯನ್ ದಾಳಿ: ಕಾರಣವಾಗಿರುವ ಅಂಶಗಳು

ಇದು ಗ್ರೇಟ್ ಇಂಡಿಯನ್‌ ಅಮೇಜಾನ್ ಸೇಲ್!!..ಏನೆಲ್ಲಾ ಆಫರ್?

ಹಾಗಿದ್ದರೆ ಬನ್ನಿ ಆ ನಿಗೂಢ ರಹಸ್ಯಗಳು ಮತ್ತು ಅವುಗಳು ರಹಸ್ಯವಾಗಿಯೇ ಏಕೆ ಉಳಿದುಕೊಂಡಿದೆ ಎಂಬುನ್ನು ಕೆಳಗಿನ ಸ್ಲೈಡರ್‌ನಿಂದ ಅರಿತುಕೊಳ್ಳೋಣ.

ಹಿಂಟರ್ ಕೈಫ್‌ಚೆಕ್ ಮರಣ

ಹಿಂಟರ್ ಕೈಫ್‌ಚೆಕ್ ಮರಣ

ಜರ್ಮನಿಯಲ್ಲಿ ನಡೆದ ನಿಗೂಢ ರೀತಿಯ ಮರಣವಾಗಿದೆ. ಒಂದೇ ಕುಟುಂಬದ ಸದಸ್ಯರನ್ನು ಕಗ್ಗೊಲೆ ಮಾಡಲಾಗಿದೆ. ಮಾರ್ಚ್ 31, 1922 ರಂದು ನಡೆದಿರುವ ಈ ಘಟನೆ ಇದುವರೆಗೂ ರಹಸ್ಯಮಯವಾಗಿಯೇ ಇದೆ.

ಗೋಸ್ಟ್ ಶಿಪ್

ಗೋಸ್ಟ್ ಶಿಪ್

ಯಾವುದೇ ಕಾರಣವಿಲ್ಲದೆ ಹಡುಗಗಳು ಕಣ್ಮರೆಯಾಗಿರುವ ಘಟನೆಗಳನ್ನು ನೀವು ಕೇಳಿರುತ್ತೀರಿ. ಇದೇ ರೀತಿ ಎಸ್‌ಎಸ್ ಆರಂಗ್ ಮೇಡನ್ ಹೆಸರಿನ ಶಿಪ್ ಇಂಡೋನೇಷ್ಯಾದಲ್ಲಿ ಮುಳುಗಡೆಯಾಗಿದೆ, ಆದರೆ ಇದು ಮುಳುಗುವ ಮುನ್ನ ಇದರಿಂದ ಆರ್ತನಾದ, ಚೀರಾಟ ಕೇಳಿ ಬಂದಿದೆ ಎಂಬ ಸುದ್ದಿ ಇದೆ.

ಕೂಪರ್ ಕುಟುಂಬ

ಕೂಪರ್ ಕುಟುಂಬ

ಈ ಚಿತ್ರವನ್ನು ನೋಡುವಾಗ ನಿಮಗೆ ಭಯವಾಗುವುದು ನಿಜವಾದರೂ ಇದು ಸತ್ಯ ಘಟನೆಯಾಗಿದೆ. ಟೆಕ್ಸಾಸ್‌ನಲ್ಲಿ 1950 ರಲ್ಲಿ ನಡೆದ ಘಟನೆ ಇದಾಗಿದ್ದು, ಕೋಪರ್ ಕುಟುಂಬವು ತಮ್ಮ ಹಳೆ ನಿವಾಸದಿಂದ ಹೊಸ ನಿವಾಸಕ್ಕೆ ಬಂದು ಕುಟುಂಬ ಸಮೇತ ಫೋಟೋ ತೆಗೆಯುವಾಗ ಈ ವ್ಯಕ್ತಿಯ ಶರೀರ ನೇತಾಡುತ್ತಿರುವಂತಹ ಫೋಟೋ ಕಂಡುಬಂದಿದೆ. ಅವರುಗಳು ಫೋಟೋ ತೆಗೆಯುವಾಗ ಕಾಣದೇ ಇದ್ದ ದೃಶ್ಯ ನಂತರ ಪ್ರಿಂಟ್‌ನಲ್ಲಿ ಮೂಡಿಬಂದಿದೆ.

ಬ್ಲ್ಯಾಕ್ ನೈಟ್ ಸ್ಯಾಟಲೈಟ್

ಬ್ಲ್ಯಾಕ್ ನೈಟ್ ಸ್ಯಾಟಲೈಟ್

ಗಾಢ ಕಪ್ಪು ಬಣ್ಣದ ವಸ್ತುವೊಂದು 13,000 ವರ್ಷಗಳ ಹಿಂದೆ ಹಾರಾಡುತ್ತಿದ್ದು ಕಂಡುಬಂದಿದ್ದು ಇನ್ನೂ ಇದೂ ರಹಸ್ಯವಾಗಿಯೇ ಉಳಿದಿದೆ. ಬ್ಲ್ಯಾಕ್ ನೈಟ್ ಎಂಬುದಾಗಿ ಈ ರಹಸ್ಯವನ್ನು ಕರೆಯಲಾಗಿದೆ. ಇದೊಂದು ಸ್ಯಾಟಲೈಟ್ ಆಗಿತ್ತು ಎಂಬುದು ಊಹಪೋಹಗಳಿಂದ ತಿಳಿದು ಬಂದಿದ್ದು ಇದರ ಮೂಲಗಳು ಈ ವಿಶ್ವದ್ದಲ್ಲ.

ವಿಲಿಸಿಕಾ ಆಕ್ಸೆ ಕಗ್ಗೊಲೆ

ವಿಲಿಸಿಕಾ ಆಕ್ಸೆ ಕಗ್ಗೊಲೆ

ಜೂನ್ 9, 1912 ರಂದು ವಿಲಿಸಿಕಾ ಲೊವಾದಲ್ಲಿ ಕುಟುಂಬದ ಆರು ಸದಸ್ಯರು ಚರ್ಚ್‌ಗೆ ತೆರಳಿದ್ದರು. ತಾವು ಜೊತೆಗೆ ಬರುವಾಗ ಇನ್ನಿಬ್ಬರು ಅತಿಥಿಗಳೊಂದಿಗೆ ಅವರು ಮನೆಗೆ ಹಿಂತಿರುಗುತ್ತಾರೆ. ಇಬ್ಬರು ಹುಡುಗಿಯರು ಆ ಅತಿಥಿಗಳು. ಆದರೆ ಮರುದಿನ ಮುಂಜಾನೆ ಎಷ್ಟೇ ಹೊತ್ತಾದರೂ ಈ ಮನೆಯವರು ಬಾಗಿಲು ತೆರೆಯದೇ ಇದ್ದುದು ನೆರೆಮನೆಯವರ ಆತಂಕಕ್ಕೆ ಕಾರಣವಾಗುತ್ತದೆ. ಬಾಗಿಲು ಮುರಿದು ಒಳಗೆ ನೋಡಿದಾಗ ಅತಿಥಿಗಳು ಸೇರಿದಂತೆ ಮನೆಯ ಎಲ್ಲರೂ ಸತ್ತು ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯ ಕಂಡುಬರುತ್ತದೆ. ಆದರೆ ಇದು ತನಿಖೆಗೂ ನಿಲುಕದ ರಹಸ್ಯ ಕೊಲೆಯಾಗಿದೆ.

ಟಾವೋಸ್ ಹಮ್

ಟಾವೋಸ್ ಹಮ್

ನ್ಯೂ ಮೆಕ್ಸಿಕೊದ ಟಾವೋಸ್ ನಗರವು, ರಹಸ್ಯತೆಯನ್ನು ಪಡೆದುಕೊಂಡಿದೆ. ಈ ನಗರದಲ್ಲಿ ವಿಚಿತ್ರ ಸದ್ದು ಕೇಳಿಬರುತ್ತಿದ್ದು ಇಲ್ಲಿರುವ ಮನೆಗಳೂ ವಿಚಿತ್ರವಾಗಿದೆ ಅಂತೆಯೇ ಜನಸಂಖ್ಯೆಯೂ ಕಡಿಮೆ. ವಿಚಿತ್ರ ಸದ್ದು ಹೇಗೆ ಕೇಳಿಬರುತ್ತಿದೆ ಎಂಬುದು ಇಲ್ಲಿನ ಜನರಿಗೆ ಇನ್ನೂ ತಿಳಿದಿಲ್ಲ.

ವ್ಯೊನಿಚ್ ಹಸ್ತಪ್ರತಿ

ವ್ಯೊನಿಚ್ ಹಸ್ತಪ್ರತಿ

ವಿಚಿತ್ರ ಅಕ್ಷರಗಳನ್ನು ಹೊಂದಿರುವ ಈ ಹಸ್ತಪ್ರತಿ ಯಾವ ಭಾಷೆಯಲ್ಲಿ ಇದನ್ನು ಬರೆಯಲಾಗಿದೆ ಎಂಬುದು ರಹಸ್ಯಮಯವಾಗಿ ಉಳಿದುಕೊಂಡಿದೆ.

ತಮಾಮ್ ಶುದ್ ಕೇಸ್

ತಮಾಮ್ ಶುದ್ ಕೇಸ್

ಡಿಸೆಂಬರ್ 1, 1948 ರಂದು ಗುರುತಿಸಲಾಗದೇ ಇರುವ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಮರಣ ಹೊಂದಿದ್ದು ಬೀಚ್‌ ಪಕ್ಕದಲ್ಲಿ ಈತನ ಮೃತ ಶರೀರ ದೊರೆತಿತ್ತು. ಮೃತ ವ್ಯಕ್ತಿಯ ಪಾಕೆಟ್‌ನಲ್ಲಿ 'ತಮಾನ್ ಶುದ್' ಎಂಬ ಹಸ್ತಪ್ರತಿ ದೊರೆತಿದೆ.

ರಹಸ್ಯಮಯ ಹೈಜಾಕರ್

ರಹಸ್ಯಮಯ ಹೈಜಾಕರ್

ಡಿ.ಬಿ. ಕೂಪರ್ ಈತ ಹೈಜಾಕರ್ ಆಗಿದ್ದು ಬೋಯಿಂಗ್ 727 ವಿಮಾನವನ್ನು ಪೋರ್ಟ್‌ಲ್ಯಾಂಡ್‌ನಲ್ಲಿ ಹೈಜಾಕ್ ಮಾಡಿದ್ದ. ಆದರೆ ಈತ ಹೈಜಾಕ್ ಮಾಡಿದ ವಿಮಾನ ಮತ್ತು ವ್ಯಕ್ತಿ ಇವರಿಬ್ಬರೂ ನಿಗೂಢವಾಗಿ ಕಣ್ಮರೆಯಾಗಿ ಅದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

ಜೊಡಿಕ್ ಕಿಲ್ಲರ್

ಜೊಡಿಕ್ ಕಿಲ್ಲರ್

ಸೀರಿಯಲ್ ಕಿಲ್ಲರ್‌ಗೆ ಈ ಹೆಸರನ್ನು ನೀಡಲಾಗಿದ್ದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕಡಿಮೆ ಎಂದರೆ ಏಳು ಕೊಲೆಯನ್ನು ಈತ ಮಾಡಿದ್ದ. ಯುವ ಜೋಡಿಗಳನ್ನೇ ಈತ ಹೆಚ್ಚು ಕೊಲ್ಲುತ್ತಿದ್ದು ಗನ್ ಮತ್ತು ಮಾರಕಾಯುಧಗಳಿಂದ ಕೊಲೆಗಳನ್ನು ಮಾಡುತ್ತಿದ್ದನಂತೆ. ಆದರೆ ಈತನ ಶೋಧನಾ ಕಾರ್ಯ ನಡೆಸಿದರೂ ಆತನನ್ನು ಹಿಡಿಯಲು ಆಗಲೇ ಇಲ್ಲ.

ಡೇಟ್ಲಾವ್ ಪಾಸ್ ಘಟನೆ

ಡೇಟ್ಲಾವ್ ಪಾಸ್ ಘಟನೆ

ಫೆಬ್ರವರಿ 2, 1959 ರಂದು ಒಂಭತ್ತು ಸ್ಕೈ ಹೈಕರ್‌ಗಳು ಯೂರಲ್ ಮೌಂಟನ್‌ಗಳಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಆದರೆ ಇವರ ಮರಣಕ್ಕೆ ಕಾರಣವಾದರೂ ಏನು ಎಂಬುದು ರಹಸ್ಯವಾಗಿಯೇ ಉಳಿದಿದ್ದು ಅವರ ಮರಣಕ್ಕೆ ಕಾರಣವಾಗುವ ಯಾವುದೇ ಘಟನೆಗಳು ಅಲ್ಲಿ ನಡೆದಿರಲಿಲ್ಲ.

ಹೆಸ್ಲಡನ್ ಲೈಟ್ಸ್

ಹೆಸ್ಲಡನ್ ಲೈಟ್ಸ್

ನಾರ್ವೆಯ ಹೆಸ್ಲಡನ್ ವ್ಯಾಲ್ಲಿಯಲ್ಲಿ, ಅಗೋಚರ ಬೆಳಕೊಂದು ಕಂಡುಬಂದಿದ್ದು ಇದನ್ನು ಹೆಸ್ಲಡನ್ ಲೈಟ್ಸ್ ಎಂದೇ ಕರೆಯಲಾಗಿದೆ. ಡಿಸೆಂಬರ್ 1981 ರಿಂದ 1984 ರವರೆಗೆ ಈ ಬೆಳಕು ಕಂಡುಬರುತ್ತಿದ್ದು ವಾರದಲ್ಲಿ 15-20 ಬಾರಿ ಈ ಬೆಳಕು ಗೋಚರಿಸುತ್ತಿತ್ತು ಎಂಬುದು ವರದಿಯಾದ ಸುದ್ದಿಯಾಗಿದೆ.

 ಅಗೋಚರ ವ್ಯಕ್ತಿ

ಅಗೋಚರ ವ್ಯಕ್ತಿ

ಜಿಮ್ ಹೆಸರಿನ ವ್ಯಕ್ತಿಯು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಹೊರಹೋದ ಸಮಯದಲ್ಲಿ ಮಗಳ ಫೋಟೋ ತೆಗೆದ ದೃಶ್ಯವನ್ನು ಚಿತ್ರದಲ್ಲಿ ಕಾಣುತ್ತೀರಿ. ಅವರು ತಮ್ಮ ಮಗಳ ಫೋಟೋ ತೆಗೆಯುತ್ತಿರುವಾಗ ಕಾಣದೇ ಇದ್ದ ವ್ಯಕ್ತಿ ಫೋಟೋದಲ್ಲಿ ಮಾತ್ರವೇ ಕಂಡುಬಂದಿದ್ದಾನೆ. ಇದು ವ್ಯಕ್ತಿಯೇ, ಜೀವಿಯೇ ಎಂಬುದು ಇನ್ನೂ ರಹಸ್ಯವಾಗಿಯೇ ಇದ್ದು ಸತ್ಯ ಯಾರಿಗೂ ತಿಳಿದು ಬಂದಿಲ್ಲ.

ಜ್ಯಾಕ್ ದ ರಿಪ್ಪರ್

ಜ್ಯಾಕ್ ದ ರಿಪ್ಪರ್

ಜಾಕ್ ದ ರಿಪ್ಪರ್ ವ್ಯಕ್ತಿಯು ಹೆಚ್ಚು ವಿಖ್ಯಾತನಾಗಿದ್ದು 1800 ರಲ್ಲಿ 11 ಮಹಿಳೆಯರನ್ನು ಕೊಲೆಗೈದಿದ್ದಾನೆ. ಇವರಲ್ಲಿ ಮೃತರಾದ ಹೆಚ್ಚಿನವರು ವೇಶ್ಯೆಯರಾಗಿದ್ದು, ಕ್ರೂರವಾಗಿ ಈತ ಅವರುಗಳನ್ನು ಕೊಲೆಗೈದಿದ್ದಾನೆ. ಈ ಕೊಲೆಗಾರನನ್ನು ಇದುವರೆಗೂ ಪತ್ತೆಹಚ್ಚಲಾಗದೇ ಇದ್ದು ಪೋಲೀಸರಿಗೆ ಈತ ಸಿಗಲೇ ಇಲ್ಲ.

ದಹ್ಲಿಯಾ ಕೊಲೆ

ದಹ್ಲಿಯಾ ಕೊಲೆ

ಎಲಿಜಬೆತ್ ಶಾರ್ಟ್‌ಗೆ ಬ್ಲ್ಯಾಕ್ ದಹ್ಲಿಯಾ ಎಂಬ ಹೆಸರನ್ನು ನೀಡಲಾಗಿದ್ದು, 1947 ರಲ್ಲಿ ಕೊಲೆಯಾಗಿ ಇಂದಿಗೂ ಅದು ನಿಗೂಢವಾಗಿಯೇ ಕಂಡುಬಂದಿದೆ.

ಎಲಿಸಾ ಲ್ಯಾಮ್ ಕಗ್ಗೊಲೆ

ಎಲಿಸಾ ಲ್ಯಾಮ್ ಕಗ್ಗೊಲೆ

ಎಲಿಸಾ ಲ್ಯಾಮ್ ಕೊಲೆಯು ಹೆಚ್ಚು ರಹಸ್ಯಮಯವಾಗಿರುವ ಕೊಲೆಯೆಂದೇ ಕಂಡುಬಂದಿದ್ದು 2013 ರಲ್ಲಿ ಈ ಕೃತ್ಯ ನಡೆದಿದೆ. ಸಿಸಿಲ್ ಹೋಟೆಲ್‌ನಲ್ಲಿ ತಂಗಿದ್ದ ಎಲಿಸಾ ಎರಡು ವಾರಗಳಿಂದ ಕಣ್ಮರೆಯಾಗಿ ನಂತರ ಮೃತ ಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಟೈಮ್ ಟ್ರಾವೆಲ್ಲರ್

ಟೈಮ್ ಟ್ರಾವೆಲ್ಲರ್

ರುಡೋಲ್ಫ್ ಫೆಂಡ್ಸ್ ಟೈಮ್ ಟ್ರಾವೆಲ್ಲರ್ ಆಗಿದ್ದರು. ನ್ಯೂಯಾರ್ಕ್ ನಗರದಲ್ಲಿದ್ದ ಈತ ಒಂದು ಭಾನುವಾರದಂದು ಆಕಸ್ಮಿಕವಾಗಿ ಕಣ್ಮರೆಯಾದ. ಅವನಿಗೆ ಸಂಭವಿಸಿದ್ದಾದರೂ ಏನು ಎಂಬುದು ಇನ್ನೂ ಪತ್ತೆಯಾಗದೇ ಉಳಿದ ರಹಸ್ಯವಾಗಿದೆ.

Most Read Articles
Best Mobiles in India

English summary
Bizarre, gruesome murders to accidental time travelers, given below is a list of high profile mysteries that have left the world dumbstruck and confused.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more