Subscribe to Gizbot

ಮಕ್ಕಳಿಗೆ ಸ್ಮಾರ್ಟ್‌ಫೋನ್ ಹೆಚ್ಚು ಉಪಯೋಗಿಸಲು ಕೊಡ್ತೀರಾ? ಹಾಗಿದ್ರೆ ಈ ವರದಿ ನೋಡಿ!!

Written By:

ಸ್ಮಾರ್ಟ್‌ಫೋನ್ ಅತಿಯಾದ ಬಳಕೆಯಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಪೋಷಕರಿಗೆ ಅರಿವಿದೆ. ಆದರೆ ಶೇ 93 ರಷ್ಟು ಪೋಷಕರು ಮಕ್ಕಳಿಗೆ ಬುದ್ಧಿವಾದ ಹೇಳುತ್ತಿದ್ದಾರೆಯೇ ಹೊರತು ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರ ಮಾಡಲು ಪ್ರಯತ್ನಿಸುತ್ತಿಲ್ಲ.!!

ಹೌದು, ಇಷ್ಟು ದಿವಸ ಪೋಷಕರಿಗೆ ಮಕ್ಕಳ ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಪೋಷಕರಿಗೆ ಅರಿವಿಲ್ಲ ಎನ್ನುವ ವರದಿಗಳೇ ಹೆಚ್ಚಾಗಿತ್ತು. ಆದರೆ ಈಗ ಹೊರಬಿದ್ದಿರುವ ವರದಿಯ ಪ್ರಕಾರ ಪೋಷಕರಿಗೆ ಮಕ್ಕಳಿಂದ ಸ್ಮಾರ್ಟ್‌ಫೋನ್ ಬಿಡುಸುವ ಆಸೆಯಷ್ಟೆ ಇದೆ ಆದರೆ ಬಿಡಿಸುವ ಪ್ರಯತ್ನಗಳಿಲ್ಲ ಎಂದು ಹೇಳಲಾಗಿದೆ.!!

ಹಾಗಾದರೆ, ಸ್ಮಾರ್ಟ್‌ಫೋನ್ ಬಳಕೆಯಿದ ಆಗಬಹುದಾದ ತೊಂದರೆಗಳೇನು? ಮಕ್ಕಳು ಸ್ಮಾರ್ಟ್‌ಫೋನ್ ಬಳಕೆ ಕಡಿಮೆ ಏಕೆ ಮಾಡಲೇಬೇಕು ? ಇನ್ನು ಅಧ್ಯಯನ ವರದಿಯ ಸಾರಾಂಶಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿದ್ರೆಗೆ ತೊಂದರೆ!!

ನಿದ್ರೆಗೆ ತೊಂದರೆ!!

ಮಕ್ಕಳು 4 ಗಂಟೆಗೂ ಅಧಿಕ ಸಮಯ ಡಿಜಿಟಲ್‌ ಸ್ಕ್ರೀನ್ ನಿರಂತರವಾಗಿ ನೋಡಿದರೆ ಶೇ 49 ರಷ್ಟು ನಿದ್ರೆಗೆ ತೊಂದರೆಯಾಗುತ್ತದೆ. ಮಲಗುವ ಮೊದಲು ಮೊಬೈಲ್‌, ಟಿ.ವಿ. ಕಂಪ್ಯೂಟರ್‌ಳಿಂದ ಕನಿಷ್ಠ 1 ಗಂಟೆಯಾದರೂ ದೂರ ಇರಬೇಕು. ಇಲ್ಲವಾದರೆ ಮಕ್ಕಳಿಗೆ ಉತ್ತಮ ನಿದ್ದೆಮಾಡಲು ಸಾಧ್ಯವಿಲ್ಲಾ.!!

ಖಿನ್ನತೆ ಮತ್ತು ಆತಂಕದ ಲಕ್ಷಣ!!

ಖಿನ್ನತೆ ಮತ್ತು ಆತಂಕದ ಲಕ್ಷಣ!!

ಮಕ್ಕಳು ಹೆಚ್ಚಾಗಿ ಸ್ಮಾರ್ಟ್‌ಫೋನ್ ಸ್ಕ್ರೀನ್‌ ನೋಡುವುದರಿಂದ ಮಕ್ಕಳಲ್ಲಿ ಖಿನ್ನತೆ ಮತ್ತು ಆತಂಕದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.! ಮಲಗುವ ಸಮಯದಲ್ಲಿ ಮೊಬೈಲ್‌ ನೋಡುವುದರಿಂದ ದೇಹದ ನರವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಇದೇ ಖಿನ್ನತೆ ಮತ್ತು ಆತಂಕಕ್ಕೆ ಕಾರಣವಾಗುತ್ತದೆ.!!

ಹಾರ್ಮೋನ್‌ಗಳ ವ್ಯತ್ಯಾಸ!!

ಹಾರ್ಮೋನ್‌ಗಳ ವ್ಯತ್ಯಾಸ!!

ಮಕ್ಕಳಲ್ಲಿ ಚಯಾಪಚಯ ಕ್ರಿಯೆ ಮತ್ತು ಆರೋಗ್ಯದ ರಕ್ಷಣೆ ಸೂಕ್ಷ್ಮವಾಗಿರುವುದರಿಂದ ಹಾರ್ಮೋನ್‌ಗಳ ವ್ಯತ್ಯಾಸಕ್ಕೂ ಸಹ ಸ್ಮಾರ್ಟ್‌ಫೋನ್‌ಗಳು ಕಾರಣವಾಗಲಬಲ್ಲದು ವರದಿಯಲ್ಲಿ ಹೇಳಲಾಗಿದೆ. ಸ್ಮಾರ್ಟ್‌ಫೋನ್ ಬಳಕೆಯಿಂದ ಹಾರ್ಮೋನ್‌ಗಳೆ ವ್ಯತ್ಯಾಸವಾಗುತ್ತವೆ.

ಸೂಕ್ತವಲ್ಲದ ಅಂತರ್ಜಾಲ ತಾಣ ವೀಕ್ಷಣೆ!!

ಸೂಕ್ತವಲ್ಲದ ಅಂತರ್ಜಾಲ ತಾಣ ವೀಕ್ಷಣೆ!!

54% ಮಕ್ಕಳು ಸೂಕ್ತವಲ್ಲದ ಅಂತರ್ಜಾಲ ತಾಣಗಳನ್ನು ನೋಡಿರುತ್ತಾರೆ ಎಂದು ಈ ಅಧ್ಯಯನದ ವರದಿ ಹೇಳಿದೆ.!! ಹೌದು, ರಾತ್ರಿ ವೇಳೆ ಗ್ಯಾಜೆಟ್ ಬಳಕೆ ಮಾಡುವ ಮಕ್ಕಳು ಹೆಚ್ಚು ಸಮಯ ಬೇಡದ ಅಂತರ್ಜಾಲ ತಾಣಗಳಿಗೆ ಭೇಟಿ ನೀಡಿರುತ್ತಾರೆ. ಇದು 93% ಪೋಷಕರಿಗೂ ಗೊತ್ತಿದೆಯಂತೆ.!!

ಓದಿರಿ:ಚಂದ್ರನ ಮೇಲೆ ರೋವರ್ ಇಳಿಸಲಿದೆ ಬೆಂಗಳೂರಿನ ಟೀಮ್ ಇಂಡಸ್! ಇದು ಖಾಸಾಗಿ ಸ್ಪರ್ಧೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
phone affect causes the brain to stop producing melatonin. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot