ಮತ್ತೆ ಶಾಕ್‌ ನೀಡಿದ ಅಂಬಾನಿ...LYF ಮೊಬೈಲ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!!

Written By:

ಅಂಬಾನಿ ನೀಡುತ್ತಿರುವ ಆಫರ್‌ಗಳೇನೋ ಚೆನ್ನಾಗಿವೆ. ಆದರೆ, 125 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರವ ಭಾರತದಲ್ಲಿ ಅಂಬಾನಿಯ ಜಿಯೋ ಸೇವೆಯನ್ನು ಬಳಕೆ ಮಾಡುತ್ತಿರುವವರ ಸಂಖ್ಯೆ ಮಾತ್ರ ಕೇವಲ 12 ಕೊಟಿ ಜನಸಂಖ್ಯೆ! ಹಾಗಾಗಿ, ಅಂಬಾನಿ ಹೊಸದೊಂದು ಯೋಜನೆ ಕೈಗೆತ್ತಿಕೊಂಡಿದ್ದಾರೆ.!!

ಜಿಯೋಗೆ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಹೊಸ ಹೊಸ ಪ್ಲಾನ್‌ಗಳನ್ನು ನೀಡುತ್ತರುವ ಅಂಬಾನಿಗೆ ಬಹುದೊಡ್ಡ ಸಮಸ್ಯೆಯಾಗಿರುವುದು 4G ಸ್ಮಾರ್ಟ್‌ಫೋನ್‌ಗಳು. ಹಾಗಾಗಿ, ಅಂಬಾನಿ ತನ್ನದೇ LYF ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಲು ತಯಾರಾಗಿದ್ದಾರೆ.!!

ಓದಿರಿ: ಜಿಯೋಗೆ ಈವರೆಗೂ ಆಗಿರುವ ನಷ್ಟ ಎಷ್ಟು? ಓದಿದ್ಮೇಲೆ ನಗಾಡ್‌ಬೇಡಿ ಪ್ಲೀಸ್!!

ಹಾಗಾದರೆ, ಅಂಬಾನಿ ತನ್ನದೇ LYF ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಲು ಕಾರಣವೇನು? ಡಿಸ್ಕೌಂಟ್ಸ್‌ನಿಂದ ಟೆಲಿಕಾಂ ಮೇಲೆ ಬೀರುವ ಪ್ರಭಾವವೇನು? LYF ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು ಕಡಿಮೆಯಾಗಿದೆ ಎಂದು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
60 ರಿಂದ 70 ಪರ್ಸೆಂಟ್ ಡಿಸ್ಕೌಂಟ್!!

60 ರಿಂದ 70 ಪರ್ಸೆಂಟ್ ಡಿಸ್ಕೌಂಟ್!!

ಬಹುತೇಕ ಜನರಿಗೆ ಸಾರಿರಾರು ರೂಪಾಯಿ ಹಣತೆತ್ತು 4G ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಜಿಯೋ ಬಳಕೆದಾರರ ಸಂಖ್ಯೆ ಕಡಿಮೆಯಿದ್ದು, 4G ಬಳಕೆದಾರರನ್ನು ಹೆಚ್ಚಿಸಲು LYF ಸ್ಮಾರ್ಟ್‌ಫೋನ್‌ಗಳ ಮೇಲೆ‌ 60 ರಿಂದ 70 ಪರ್ಸೆಂಟ್ ಭಾರಿ ಡಿಸ್ಕೌಂಟ್ ನೀಡಲು ಅಂಬಾನಿ ಚಿಂತಿಸಿದ್ದಾರೆ.!!

ಡಿಸ್ಕೌಂಟ್ ನೀಡುತ್ತಿರುವ ಗುರಿಯೇನು?

ಡಿಸ್ಕೌಂಟ್ ನೀಡುತ್ತಿರುವ ಗುರಿಯೇನು?

LYF ಸ್ಮಾರ್ಟ್‌ಫೋನ್‌ಗಳ ಮೇಲೆ‌ ಭಾರಿ ಡಿಸ್ಕೌಂಟ್ ನೀಡುತ್ತಿರುವ ಅಂಬಾನಿ ಇನ್ನೊಂದು ವರ್ಷದಲ್ಲಿ 25 ಕೊಟಿಗೂ ಹೆಚ್ಚು ಗ್ರಾಹಕರನ್ನು ಸೆಳೆಯುವ ಗುರಿಯನ್ನು ಹಾಕಿಕೊಂಡಿದ್ದಾರೆ. ಹಾಗಾಗಿಯೇ, ಅತ್ಯಂತ ಕಡಿಮೆ ಬೆಲೆಯಲ್ಲಿ, ಅಂದರೆ ಪ್ರತಿ LYF ಸ್ಮಾರ್ಟ್‌ಫೋನ್‌ ಮೆಲೆ 60 ರಿಂದ 70 ಪರ್ಸೆಂಟ್ ಡಿಸ್ಕೌಂಟ್ಸ್ ನಿಡುತ್ತಿದ್ದಾರೆ.!!

ಭಾರಿ ಡಿಸ್ಕೌಂಟ್ ಪರಿಣಾಮವೇನಾಗಬಹುದು?

ಭಾರಿ ಡಿಸ್ಕೌಂಟ್ ಪರಿಣಾಮವೇನಾಗಬಹುದು?

ಒಂದು 4G ಸ್ಮಾರ್ಟ್‌ಫೋನ್ ಖರೀದಿಸಲು ಕಡಿಮೆ ಎಂದರೂ 5000 ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿದೆ. ಆದರೆ, ಭಾರಿ ಡಿಸ್ಕೌಂಟ್ ಪರಿಣಾಮದಿಂದಾಗಿ LYF ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ಎಲ್ಲರೂ 4G ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ.!!

LYF ಸ್ಮಾರ್ಟ್‌ಫೋನ್‌ ಇದ್ದರೆ ಜಿಯೋ ಯೂಸ್‌ ಮಾಡ್ಲೇಬೇಕು!!

LYF ಸ್ಮಾರ್ಟ್‌ಫೋನ್‌ ಇದ್ದರೆ ಜಿಯೋ ಯೂಸ್‌ ಮಾಡ್ಲೇಬೇಕು!!

ಹೌದು, LYF ಸ್ಮಾರ್ಟ್‌ಫೋನ್‌ ಖರೀದಿಸಿದರೆ ಜಿಯೋ ಸಿಮ್ ಉಪಯೋಗ ಮಾಡಲೇಬೇಕಾಗುತ್ತದೆ. ಇದರಿಂದ ಸ್ಮಾರ್ಟ್‌ಫೋನ್ ಮಾರಾಟ ಸಹ ಹೆಚ್ಚಾಗುವುದಲ್ಲದೇ, ಜಿಯೋಗೆ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತದೆ.!!

ಒಂದು ವರ್ಷ ಉಚಿತ ಸೇವೆ ರದ್ದು.!!

ಒಂದು ವರ್ಷ ಉಚಿತ ಸೇವೆ ರದ್ದು.!!

LYF ಸ್ಮಾರ್ಟ್‌ಫೋನ್‌ ಖರೀದಿಸಿದರೆ ಈ ಮೊದಲು ಇದ್ದ ಒಂದು ವರ್ಷದ ಉಚಿತ ಸೇವೆಯನ್ನು ರದ್ದುಗೊಳಿಸಲು ಅಂಬಾನಿ ಚಿಂತಿಸಿದ್ದಾರೆ ಎನ್ನಲಾಗಿದೆ. ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ನಿಡುತ್ತಿರುವುದರಿಂದ ಅಂಬಾನಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.!!

ಟೆಲಿಕಾಂ ಗಢಗಢ!!

ಟೆಲಿಕಾಂ ಗಢಗಢ!!

ಈಗಾಗಲೇ ಜಿಯೋಯಿಂದ ಕಂಗೆಟ್ಟಿರುವ ಎಲ್ಲಾ ಟೆಲಿಕಾಂ ಸಂಸ್ಥೆಗಳು ಅಂಬಾನಿಯ ಈ ಹೊಸ ನಿರ್ಧರಕ್ಕೆ ಗಢಗಢ ನಡುಗುತ್ತಿವೆ.! ಈಗಾಗಲೇ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿರುವ ಏರ್‌ಟೆಲ್‌, ವೊಡಾಫೋನ್‌ಗಳಿಗೆ ಇದೀಗ ಮತ್ತೆ ಶಕ್ ನೀಡಿದಂತಾಗಿದೆ.!!

ಮೊಬೈಲ್ ಮಾರುಕಟ್ಟೆ ಸಹ ತಲ್ಲಣ.!!

ಮೊಬೈಲ್ ಮಾರುಕಟ್ಟೆ ಸಹ ತಲ್ಲಣ.!!

ಅತ್ಯಂತ ಕಡಿಮೆ ಬೆಲೆಯಲ್ಲಿ 4G ಸ್ಮಾರ್ಟ್‌ಫೋನ್ ನೀಸುವ ನಿರ್ಧಾರ ಮೊಬೈಲ್ ಮಾರುಕಟ್ಟೆಯಲ್ಲಿಯೂ ಸಹ ತಲ್ಲಣ ಮೂಡಿಸಿದೆ.! ಕಡಿಮೆ ದರಕ್ಕೆ ಸ್ಮಾರ್ಟ್‌ಫೋನ್ ಸಿಕ್ಕಿದರೆ ಇತರ ಕಂಪೆನಿಯ ಮೊಬೈಲ್ ಖರೀದಿಸಲು ಜನರು ಹಿಂದೇಟು ಹಾಕುತ್ತಾರೆ ಎಂದು ಮೊಬೈಲ್‌ ಕಂಪೆನಿಗಳ ಆಂಬೋಣ!!

ಓದಿರಿ:ಕಂಪ್ಯೂಟರ್‌ನಲ್ಲಿ ವೈರಸ್ ಡಿಲೀಟ್ ಮಾಡುವುದು ಹೇಗೆ? ಯಾರು ಹೇಳ್ಕೊಡೊಲ್ಲಾ ಈ ಟ್ರಿಕ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Even as Reliance Jio crosses the 100 million subscriber mark, Mukesh Ambani offers several goodies. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot