Subscribe to Gizbot

ಜಿಯೋ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಅಂಬಾನಿ ಹೊಸ ಪ್ಲಾನ್!! ಏನದು ಸೂಪರ್ ಐಡಿಯಾ?

Written By:

ದೇಶದಾಧ್ಯಂತ ಬಹುತೇಕ 4G ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಂಡಿರುವ ಅಂಬಾನಿ ಅಬ್ಬರ ಇನ್ನು ತಣಗಾಗಿಲ್ಲ. ಈಗಾಗಲೇ ಜಿಯೋ ಸಿಮ್ ಮೂಲಕ ದೇಶಾಧ್ಯಂತ ಹವಾ ಎಬ್ಬಿಸಿದ್ದ ಅಂಬಾನಿ ಈಗ LYF ಮೊಬೈಲ್‌ಗಳ ಮೂಲಕ ಹವಾ ಕ್ರಿಯೇಟ್ ಮಾಡಲು ತಯಾರಾಗಿದ್ದಾರೆ.!!

ಹೌದು, ಜಿಯೋ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಅಂಬಾನಿ ಬಹುದೊಡ್ಡ ಯೋಜನೆಯೊಂದನ್ನು ತಯಾರು ಮಾಡಿಕೊಂಡಿದ್ದು, ಇನ್ನೇನು ಕೆಲವೇ ದಿವಸಗಳಲ್ಲಿ LYF ಸ್ಮಾರ್ಟ್‌ಫೊನ್‌ಗಳನ್ನು ಭಾರಿ ಡಿಸ್ಕೌಂಟ್ಸ್‌ನಲ್ಲಿ ಮಾರಾಟ ಮಾಡಲು ಮುಂದಾಗುತ್ತಾರೆ ಎಂದು ಟೆಲಿಕಾಂ ಪ್ರಪಂಚದಲ್ಲಿ ಗುಲ್ಲೆದ್ದಿದೆ. !!

ಹಾಗಾದರೆ, LYF ಸ್ಮಾರ್ಟ್‌ಫೊನ್‌ಗಳ ಮೇಲೆ ಅಂಬಾನಿ ಭಾರಿ ಡಿಸ್ಕೌಂಟ್ಸ್ ನೀಡುತ್ತಿರುವ ಮುಖ್ಯಕಾರಣವೇನು? ಇದರಿಂದ ಉಂಟಾಗಬಹುದಾಹ ಪರಿಣಾಮಗಳೇನು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
60 ರಿಂದ 70 ಪರ್ಸೆಂಟ್ ಡಿಸ್ಕೌಂಟ್!!

60 ರಿಂದ 70 ಪರ್ಸೆಂಟ್ ಡಿಸ್ಕೌಂಟ್!!

ಬಹುತೇಕ ಜನರಿಗೆ ಸಾರಿರಾರು ರೂಪಾಯಿ ಹಣತೆತ್ತು 4G ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಜಿಯೋ ಬಳಕೆದಾರರ ಸಂಖ್ಯೆ ಕಡಿಮೆಯಿದ್ದು, 4G ಬಳಕೆದಾರರನ್ನು ಹೆಚ್ಚಿಸಲು LYF ಸ್ಮಾರ್ಟ್‌ಫೋನ್‌ಗಳ ಮೇಲೆ‌ 60 ರಿಂದ 70 ಪರ್ಸೆಂಟ್ ಭಾರಿ ಡಿಸ್ಕೌಂಟ್ ನೀಡಲು ಅಂಬಾನಿ ಚಿಂತಿಸಿದ್ದಾರೆ.!!

ಡಿಸ್ಕೌಂಟ್ ನೀಡುತ್ತಿರುವ ಗುರಿಯೇನು?

ಡಿಸ್ಕೌಂಟ್ ನೀಡುತ್ತಿರುವ ಗುರಿಯೇನು?

LYF ಸ್ಮಾರ್ಟ್‌ಫೋನ್‌ಗಳ ಮೇಲೆ‌ ಭಾರಿ ಡಿಸ್ಕೌಂಟ್ ನೀಡುತ್ತಿರುವ ಅಂಬಾನಿ ಇನ್ನೊಂದು ವರ್ಷದಲ್ಲಿ 25 ಕೊಟಿಗೂ ಹೆಚ್ಚು ಗ್ರಾಹಕರನ್ನು ಸೆಳೆಯುವ ಗುರಿಯನ್ನು ಹಾಕಿಕೊಂಡಿದ್ದಾರೆ. ಹಾಗಾಗಿಯೇ, ಅತ್ಯಂತ ಕಡಿಮೆ ಬೆಲೆಯಲ್ಲಿ, ಅಂದರೆ ಪ್ರತಿ LYF ಸ್ಮಾರ್ಟ್‌ಫೋನ್‌ ಮೆಲೆ 60 ರಿಂದ 70 ಪರ್ಸೆಂಟ್ ಡಿಸ್ಕೌಂಟ್ಸ್ ನಿಡುತ್ತಿದ್ದಾರೆ.!!

 ಭಾರಿ ಡಿಸ್ಕೌಂಟ್ ಪರಿಣಾಮವೇನಾಗಬಹುದು?

ಭಾರಿ ಡಿಸ್ಕೌಂಟ್ ಪರಿಣಾಮವೇನಾಗಬಹುದು?

ಒಂದು 4G ಸ್ಮಾರ್ಟ್‌ಫೋನ್ ಖರೀದಿಸಲು ಕಡಿಮೆ ಎಂದರೂ 5000 ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿದೆ. ಆದರೆ, ಭಾರಿ ಡಿಸ್ಕೌಂಟ್ ಪರಿಣಾಮದಿಂದಾಗಿ LYF ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ಎಲ್ಲರೂ 4G ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ.!!

LYF ಸ್ಮಾರ್ಟ್‌ಫೋನ್‌ ಇದ್ದರೆ ಜಿಯೋ ಯೂಸ್‌ ಮಾಡ್ಲೇಬೇಕು!!

LYF ಸ್ಮಾರ್ಟ್‌ಫೋನ್‌ ಇದ್ದರೆ ಜಿಯೋ ಯೂಸ್‌ ಮಾಡ್ಲೇಬೇಕು!!

ಹೌದು, LYF ಸ್ಮಾರ್ಟ್‌ಫೋನ್‌ ಖರೀದಿಸಿದರೆ ಜಿಯೋ ಸಿಮ್ ಉಪಯೋಗ ಮಾಡಲೇಬೇಕಾಗುತ್ತದೆ. ಇದರಿಂದ ಸ್ಮಾರ್ಟ್‌ಫೋನ್ ಮಾರಾಟ ಸಹ ಹೆಚ್ಚಾಗುವುದಲ್ಲದೇ, ಜಿಯೋಗೆ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತದೆ.!!

 ಒಂದು ವರ್ಷ ಉಚಿತ ಸೇವೆ ರದ್ದು.!!

ಒಂದು ವರ್ಷ ಉಚಿತ ಸೇವೆ ರದ್ದು.!!

LYF ಸ್ಮಾರ್ಟ್‌ಫೋನ್‌ ಖರೀದಿಸಿದರೆ ಈ ಮೊದಲು ಇದ್ದ ಒಂದು ವರ್ಷದ ಉಚಿತ ಸೇವೆಯನ್ನು ರದ್ದುಗೊಳಿಸಲು ಅಂಬಾನಿ ಚಿಂತಿಸಿದ್ದಾರೆ ಎನ್ನಲಾಗಿದೆ. ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ನಿಡುತ್ತಿರುವುದರಿಂದ ಅಂಬಾನಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.!!

ಟೆಲಿಕಾಂ ಗಢಗಢ!!

ಟೆಲಿಕಾಂ ಗಢಗಢ!!

ಈಗಾಗಲೇ ಜಿಯೋಯಿಂದ ಕಂಗೆಟ್ಟಿರುವ ಎಲ್ಲಾ ಟೆಲಿಕಾಂ ಸಂಸ್ಥೆಗಳು ಅಂಬಾನಿಯ ಈ ಹೊಸ ನಿರ್ಧರಕ್ಕೆ ಗಢಗಢ ನಡುಗುತ್ತಿವೆ.! ಈಗಾಗಲೇ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿರುವ ಏರ್‌ಟೆಲ್‌, ವೊಡಾಫೋನ್‌ಗಳಿಗೆ ಇದೀಗ ಮತ್ತೆ ಶಕ್ ನೀಡಿದಂತಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
There are 100 crores mobile users in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot