ಒಂದು ಕ್ಷಣ ಕೂಡ ಮೊಬೈಲ್ ಬಿಟ್ಟಿರಲು ಸಾಧ್ಯವಿಲ್ಲವೇ?..ಹಾಗಾದ್ರೆ ನಿಮಗೆ ಈ ರೋಗವಿದೆ!!

Written By:

ನಿಮಗೆ ಒಂದು ಕ್ಷಣ ಮೊಬೈಲ್ ಫೋನ್‌ ಅನ್ನು ಬಿಟ್ಟಿರಲು ಸಾಧ್ಯವಿಲ್ಲವೇ? ಅಥವಾ ಮೊಬೈಲ್ ಫೋನ್‌ ಬಳಕೆ ಮಾಡದಿದ್ದರೆ ಏನೋ ಒಂದು ರೀತಿಯ ಮಾನಸಿಕ ಹಿಂಸೆಯೇ?. ಹಾಗಾದರೆ, ಬೇಜಾರಾಗಬೇಡಿ, ನಿಮಗೆ ಮನೋಕಾಯಿಲೆ ಇದೆ.!! ಹೌದು, ನನಗೂ ಮನೋಕಾಯಿಲೆ ಇದೆ ಎಂದು ಇಂದೇ ನನಗೆ ಗೊತ್ತಾಗಿದೆ.!!

ಮೊಬೈಲ್‌ ಫೋನ್‌ಗಳಿಂದ ದೂರವಿದ್ದಾಗ ಉಂಟಾಗುವ ಆತಂಕವನ್ನು ಸಂಶೋಧಕರು 'ನೊಮೊಫೋಬಿಯಾ' (Nomophobia) ಎಂದು ಕರೆದಿದ್ದಾರೆ. ಸ್ಮಾರ್ಟ್‌ಫೋನ್‌ಗಳನ್ನು ತಮ್ಮ ಅಸ್ತಿತ್ವದ ಸಂಕೇತ ಎಂದು ಜನರು ನೋಡುವುದರಿಂದ, ಅವುಗಳ ಬಳಕೆ ನಿಲ್ಲಿಸಿದರೆ ನೋಮೊಫೋಬಿಯಾ ಉಂಟಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹಾಂಕಾಂಗ್ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದು, ಮೊಬೈಲ್ ಬಳಕೆದಾರರು ಮೊಬೈಲ್ ಬಿಟ್ಟಿರಲು ಸಾಧ್ಯವಾಗದಿದ್ದರೆ ಎಂದು ಹೇಳಿದ್ದಾರೆ.!! ಹಾಗಾದರೆ, ಏನಿದು ರೋಗ? ರೋಗದ ಲಕ್ಷಣಗಳು ಯಾವುವು? ಎಂಬೆಲ್ಲಾ ಮಾಹಿತಿಯನ್ನು ಕೆಳಗಿನ ಸ್ಲಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಮೊಫೋಬಿಯಾ ಎಂದರೆನು?

ನೋಮೊಫೋಬಿಯಾ ಎಂದರೆನು?

ಮೊಬೈಲ್ ಫೋನ್‌ ಬಿಟ್ಟರೆ ನಮ್ಮ ಅಸ್ತಿತ್ವ ನಶಿಸುತ್ತದೆ ಮತ್ತು ತಂತ್ರಜ್ಞಾನದಿಂದ ನಾವು ದೂರ ಇರಬೇಕಾಗುತ್ತದೆ ಎಂಬ ಆತಂಕ ಕಾಡುವುದನ್ನೇ ನೋಮೊಫೋಬಿಯಾ ಎನ್ನಬಹುದು ಎಂದು ಅಮೆರಿಕದ ಇಂಟರ್‌ಯಾಕ್ಟೀವ್ ಮೀಡಿಯಾ ಇನ್ಸ್‌ಟ್ಯೂಟ್‌ನ ಬ್ರೆಂಡ್ ಕೆ. ‘ವೈಡರ್ ಹೋಲ್ಡ್‌' ಅವರು ಹೇಳುತ್ತಾರೆ.

ನೋಮೊಫೋಬಿಯಾ ಚಟವೇಕೆ?

ನೋಮೊಫೋಬಿಯಾ ಚಟವೇಕೆ?

ನಮ್ಮ ಹಲವು ವೈಯಕ್ತಿಕ ನೆನಪುಗಳನ್ನು ಸ್ಮಾರ್ಟ್‌ಫೋನ್‌ಗಳು ಪ್ರಚೋದಿಸುವುದರಿಂದ ಮೊಬೈಲ್ ಬಳಕೆದಾರರು, ತಮ್ಮ ಅಸ್ತಿತ್ವವನ್ನು ಸ್ಮಾರ್ಟ್‌ಫೋನ್‌ಗಳ ಮೂಲಕವೇ ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಸಮಾಜವೂ ಪೂರಕವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ನೋಮೊಫೋಬಿಯಾ ಲಕ್ಷಣಗಳೇನು?

ನೋಮೊಫೋಬಿಯಾ ಲಕ್ಷಣಗಳೇನು?

ಸ್ಮಾರ್ಟ್‌ಫೋನ್‌ಗಳನ್ನು ಅತಿಯಾಗಿ ಅವಲಂಬಿಸಿರುವವರು ಅವುಗಳಿಂದ ದೂರವಾದರೆ ಆತಂಕ ಮತ್ತು ಅಹಿತಕರ ಮನೋಭಾವ, ಹೃದಯ ಬಡಿತ ಹೆಚ್ಚಾಗುವುದು, ರಕ್ತದೊತ್ತಡದಂತಹ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ಲಕ್ಷಣಗಳನ್ನು ಈ ಹಿಂದಿನ ಹಲವಾರು ಅಧ್ಯಯನಗಳೂ ಎಚ್ಚರಿಸಿದ್ದವು.!!

ಅವಲಂಬನೆ ಹೆಚ್ಚಾಗಲು ಕಾರಣವೇನು?

ಅವಲಂಬನೆ ಹೆಚ್ಚಾಗಲು ಕಾರಣವೇನು?

ಹೆಚ್ಚು ಹೆಚ್ಚು ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯ ಮತ್ತು ಅವುಗಳಲ್ಲಿನ ಸೌಲಭ್ಯಗಳು ಹೆಚ್ಚಾಗುತ್ತಿರುವುದು ಸ್ಮಾರ್ಟ್‌ಫೋನ್‌ಗಳ ಮೇಲಿನ ಅವಲಂಬನೆ ಹೆಚ್ಚಾಗಲು ಕಾರಣವಾಗಿದೆ. ಪ್ರತಿಯೊಂದು ಸೇವೆಯು ಫೋನ್‌ಗಳಲ್ಲಿ ದೊರೆಯುವಾಗ ಬಳಕೆದಾರರಿಗೂ ಫೋನ್ ಬಿಟ್ಟು ಬದುಕದಿರಲು ಸಾಧ್ಯವಿಲ್ಲಾ.!!

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಆತಂಕವನ್ನು ದೂರಮಾಡಬಹುದು!!

ಆತಂಕವನ್ನು ದೂರಮಾಡಬಹುದು!!

ನೋಮೊಫೋಬಿಯಾ ಮನೋರೋಗಕ್ಕೆ ಈಗಾಗಲೇ ಹಲವುರು ತುತ್ತಾಗಿದ್ದಾರೆ ಎನ್ನಲಾಗಿದೆ. ತಂತ್ರಜ್ಞಾನದಿಂದ ದೂರವಿರುವುದು ಮತ್ತು ಎಕ್ಸ್‌ಪೋಷರ್ ಥೆರಪಿ ಮೂಲಕ ಈ ಆತಂಕವನ್ನು ದೂರಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.!! ಹಾಗಾಗಿ, ನಿಮಗೂ ನೋಮೊಫೋಬಿಯಾ ಎಂದು ಚೆಕ್ ಮಾಡಿಕೊಳ್ಳಿ.!!

ಓದಿರಿ:ಜಿಯೋ VS ಏರ್‌ಟೆಲ್!!..ಹೊಸ 3 ಆಫರ್ ಮೂಲಕ ಜಿಯೋಗೆ ಏರ್‌ಟೆಲ್ ಸೆಡ್ಡು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
ಮೊಬೈಲ್ ಫೋನ್‌ ಬಳಕೆ ಮಾಡದಿದ್ದರೆ ಏನೋ ಒಂದು ರೀತಿಯ ಮಾನಸಿಕ ಹಿಂಸೆಯೇ?. ಹಾಗಾದರೆ, ಬೇಜಾರಾಗಬೇಡಿ, ನಿಮಗೆ ಮನೋಕಾಯಿಲೆ ಇದೆ.!! ಹೌದು, ನನಗೂ ಮನೋಕಾಯಿಲೆ ಇದೆ ಎಂದು ಇಂದೇ ನನಗೆ ಗೊತ್ತಾಗಿದೆ.!!
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot