ಕಣಕ್ಕಿಳಿದಿದೆ ಆಪ್ಟಿಮಸ್ ಮತ್ತು ಥಂಡರ್ ಬೋಲ್ಟ್

Posted By: Staff

ಕಣಕ್ಕಿಳಿದಿದೆ ಆಪ್ಟಿಮಸ್ ಮತ್ತು ಥಂಡರ್ ಬೋಲ್ಟ್
ಪ್ರತಿಷ್ಠಿತ ಎಲ್ ಜಿ ಮತ್ತು ಎಚ್ ಟಿಸಿ ಕಂಪನಿ ಇದೀಗ ತಮ್ಮ ವಿನೂತನ ಮೊಬೈಲ್ ಗಳೊಂದಿಗೆ ಸ್ಪರ್ಧೆಗಿಳಿದಿವೆ. ಎಲ್ ಜಿ ಆಪ್ಟಿಮಸ್ LTE ಮತ್ತು ಎಚ್ ಟಿಸಿ ಥಂಡರ್ ಬೋಲ್ಟ್ ಮೊಬೈಲ್ ಗಳು ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಕಣಕ್ಕಿಳಿದಿವೆ.

ಆಪ್ಟಿಮಸ್ ಮತ್ತು ಥಂಡರ್ ಬೋಲ್ಟ್ ತಮ್ಮದೆ ವಿಭಿನ್ನ ಶೈಲಿ ಹೊಂದಿದ್ದು, ಎರಡು ಸ್ಮಾರ್ಟ್ ಫೋನ್ ಗಳೂ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. 4G-LTE ಸ್ಪೀಡ್ ಹೊಂದಿರುವ ಮೊದಲ ಮೊಬೈಲ್ ಎಂಬ ಹೆಗ್ಗಳಿಕೆ ಥಂಟರ್ ಬೋಲ್ಟ್ ದಾದರೆ, ಗ್ಲಾಸ್ ಫ್ರೀ 3D ಆಯ್ಕೆ ಹೊಂದಿರುವುದು ಎಲ್ ಜಿ ವಿಶೇಷತೆ ಎನಿಸಿದೆ.

ಎರಡೂ ಮೊಬೈಲ್ ಗಳ ಹೋಲಿಕೆ:
* 4.3 ಇಂಚು 800*480 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಷನ್
* ಪ್ರಾಕ್ಸಿಮಿಟಿ ಮತ್ತು ಅಕ್ಸೆಲೆರೋಮೀಟರ್ ಸೆನ್ಸಾರ್ ಇದೆ. ಥಂಡರ್ ಬೋಲ್ಟ್ ನಲ್ಲಿ ಲೈಟ್ ಸೆನ್ಸಾರ್, ಎಲ್ ಜಿ ನಲ್ಲಿ ಗೈರೋ ಸೆನ್ಸಾರ್ ಇದೆ.
* 2.2 ಫ್ರೊಯೊ ಆಪರೇಟಿಂಗ್ ಸಿಸ್ಟಮ್
* ಥಂಡರ್ ಬೋಲ್ಟ್ ಸ್ಮಾರ್ಟ್ ಫೋನ್ 1 ಗಿಗಾ ಹಟ್ಸ್ Qualcomm MSM 8655 ಸ್ನಾಪ್ ಡ್ರಾಗನ್ ಬಳಸಿದರೆ, ಎಲ್ ಜಿ ಯಲ್ಲಿರುವ 3ಡಿ ಡ್ಯೂಯಲ್ ಕೋರ್ OMAP4 ಪ್ರೊಸೆಸರ್ ಹೊಂದಿದೆ.
* 768 MB RAM ಥಂಡರ್ ಬೋಲ್ಟ್ ನಲ್ಲಿದ್ದರೆ ಎಲ್ ಜಿ ಯಲ್ಲಿ 512MB ಡ್ಯೂಯಲ್ RAM ಇದೆ.
* 8 ಜಿಬಿ ಮೊಮರಿಯೊಂದಿಗೆ 32 ಜಿಬಿ ಮೈಕ್ರೊ SD ಕಾರ್ಡ್ ನೀಡಲಾಗಿದೆ.
* ಥಂಡರ್ ಬೋಲ್ಟ್ ನಲ್ಲಿ 8 ಮೆಗಾ ಪಿಕ್ಸಲ್ ಫ್ರಂಟ್ ಕ್ಯಾಮೆರಾ ರೆಸೊಲ್ಯೂಷನ್, LED ಫ್ಲಾಶ್, ಆಟೊ ಝೂಮ್, ಡಿಜಿಟರ್ ಝೂಂ ಮತ್ತು 720 ಪಿಕ್ಸಲ್ ವಿಡಿಯೊ ರೆಕಾರ್ಡಿಂಗ್ ಆಯ್ಕೆ ಹೊಂದಿದೆ.
* ಆಪ್ಟಿಮಸ್ ನ 3ಡಿಯಲ್ಲಿ ಡ್ಯೂಯಲ್ 5 ಮೆಗಾ ಪಿಕ್ಸಲ್ ಕ್ಯಾಮೆರಾ, LED ಫ್ಲಾಶ್, ಆಟೊ ಫೋಕಸ್ ತಂತ್ರಜ್ಞಾನ ಒದಗಿಸಲಾಗಿದೆ.
* ಎಚ್ ಟಿಸಿ ನಲ್ಲಿ ಡಾಲ್ಬಿ ಡಿಜಿಟಲ್ ಸರೌಂಡ್ ತಂತ್ರಜ್ಞಾನವಿದ್ದು, ಎಲ್ ಜಿ ನಲ್ಲಿ ಇದು ಇಲ್ಲ.

ಥಂಡರ್ ಬೋಲ್ಟ್ ನಲ್ಲಿ ಎಫ್.ಎಂ ರೆಡಿಯೋ ಇದ್ದು, ಎಲ್ ಜಿ ನಲ್ಲಿ ಎಫ್ ಎಂ ಜೊತೆ RDS ಕೂಡ ಇದೆ. ಎರಡರಲ್ಲೂ ಬ್ಲೂಟೂಥ್, ವೈ-ಫೈ ಮತ್ತು USB 2.0 ಪೋರ್ಟ್ ಇದೆ. GPS ನೇವಿಗೇಶನ್ ನೊಂದಿಗೆ 2ಜಿ/3ಜಿ ಮತ್ತು 4ಜಿ ತಂತ್ರಜ್ಞಾನ ಎರಡರಲ್ಲೂ ಇದೆ.

ಥಂಡರ್ ಬೋಲ್ಟ್ ನಲ್ಲಿ ಫೇಸ್ ಬುಕ್ ಆಯ್ಕೆ ಮಾತ್ರ ಇದ್ದರೆ ಆಪ್ಟಿಮಸ್ ನಲ್ಲಿ ಫೇಸ್ ಬುಕ್ ಟ್ವಿಟ್ಟರ್ ಮತ್ತು ಮೈಸ್ಪೇಸ್ ಕೂಡ ಇದೆ. ಥಂಡರ್ ಬೋಲ್ಟ್ ಮೊಬೈಲ್ ದರದ ಬಗ್ಗೆ ಇನ್ನೂ ತಿಳಿದುಬಂದಿಲ್ಲ, ಆದರೆ ಆಪ್ಟಿಮಸ್ ದರ 37,000 ಎಂದು ಕಂಪನಿ ತಿಳಿಸಿದೆ.

Please Wait while comments are loading...
Opinion Poll

Social Counting