Subscribe to Gizbot

40 ಕೋಟಿಗೆ ಏರಲಿರುವ 3 ಜಿ ಸಿಮ್ ಮೌಲ್ಯ

Posted By:

ಮೊಬೈಲ್ ಬಳಕೆ ಏರುತ್ತಿದ್ದಂತೆ ಅಂತರ್ಜಾಲವನ್ನು ಬಳಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದಾಗಿ 3ಜಿ, 4ಜಿ ಮೌಲ್ಯವೂ ಗಮನಾರ್ಹವಾಗಿ ಅಧಿಕವಾಗುವ ಸಾಧ್ಯತೆ ಹೆಚ್ಚಾಗಿದೆ.

ಎರಿಕ್‌ಸನ್ ಅದಕ್ಕಾಗಿ ತನ್ನ ಡಿವೈಸ್‌ಗಳಲ್ಲಿ 3ಜಿ ಹಾಗೂ 4ಜಿಯನ್ನು ಆರಂಭಿಸಿದ್ದು ಇದು ಗ್ರಾಹಕರಿಗೆ ಉತ್ತಮ ಅಂತರ್ಜಾಲ ಬೆಂಬಲವನ್ನು ನೀಡಲಿದೆ. ಎರಿಕ್‌ಸನ್ ಅಧ್ಯಯನದ ಪ್ರಕಾರ, ಭಾರತದಲ್ಲೇ ಮೊಬೈಲ್‌ನಲ್ಲೇ ಇಂಟರ್ನೆಟ್ ಬಳಸುವವರ ಸಂಖ್ಯೆ ಮುಂದಿನ ಆರು ವರ್ಷಗಳಿಗೆ ಹೆಚ್ಚಾಗುವ ನಿರೀಕ್ಷೆ ಇದೆ.

40 ಕೋಟಿಗೆ ಏರಲಿರುವ 3 ಜಿ ಸಿಮ್ ಮೌಲ್ಯ

ಹೆಚ್ಚಿನ ಅಧ್ಯಯನಗಳು ಇಂಟರ್ನೆಟ್ ಬಳಸುವವರ ಸಂಭಾವ್ಯ ಪಟ್ಟಿಯನ್ನು ಹೊರತಂದಿದ್ದು ಇದರಿಂದ ಅಂತರ್ಜಾಲ ಎಷ್ಟು ಕ್ಷಿಪ್ರಗತಿಯಲ್ಲಿದೆ ಎಂಬುದನ್ನು ನೋಡಬಹುದಾಗಿದೆ. ಮೊಬೈಲ್ ಬಳಸುವ ಜನರು ಹೆಚ್ಚು ವೇಗ ಗತಿಯಲ್ಲಿರುವ ಇಂಟರ್ನೆಟ್ ಬಳಕೆಗೆ ಮಾರುಹೋಗಿದ್ದು ಅದನ್ನೇ ತಮ್ಮ ಮೊಬೈಲ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಹಾಕಿಸುತ್ತಿದ್ದಾರೆ.

2013 ರಲ್ಲಿ 795 ಮಿಲಿಯನ್ ಸಿಮ್‌ಗಳು ಮಾರಾಟವಾಗಿದ್ದು 2020 ರಲ್ಲಿ ಇದು 1,145 ಕ್ಕೆ ಏರುವ ಸಾಧ್ಯತೆ ಇದೆ. ಅದೇ ರೀತಿ ಸ್ಮಾರ್ಟ್‌ಫೋನ್ ಲಭ್ಯತೆಯು 2013 ರಲ್ಲೇ 10 - 45 % ಕ್ಕೆ ಏರಿದ್ದು ಇದರಿಂದ ಇಂಟರ್ನೆಟ್ ಬಳಕೆಯ ವೇಗ ಕೂಡ ಸಂಭಾವ್ಯವಾಗಿ ಹೆಚ್ಚಾಗುತ್ತದೆ. 3 ಜಿ ಬಳಕೆದಾರರು ತಮ್ಮ ಮೊಬೈಲ್‌ನಲ್ಲೇ ಸುಧಾರಿತ ಮತ್ತು ವೇಗವಾಗಿರುವ ಅಂತರ್ಜಾಲ ಬಳಕೆಯ ಸೌಲಭ್ಯ ದೊರೆಯಲಿದ್ದು ಇದನ್ನು ಬಳಸುವ ಬಳಕೆದಾರರು ಹೆಚ್ಚಾಗಲಿದ್ದಾರೆ.

ಅಂತೂ ತಂತ್ರಜ್ಞಾನ ರಂಗದಲ್ಲಿ ಹೊಸ ಅಲೆಯನ್ನು ಬೀಸಲಿರುವ 3ಜಿ ಬಳಕೆದಾರರಲ್ಲಿ ಇಂಟರ್ನೆಟ್ ಉಪಯೋಗವನ್ನು ಸುಧಾರಿಸಲಿದೆ. ಯಾವುದೇ ತೊಡಕಿಲ್ಲದೆ ಎಲ್ಲಿ ಬೇಕೆಂದಲ್ಲಿ ಮಾಹಿತಿಯನ್ನು ಬಳಸುವ ಹೊಸ ಅಲೆ ಏಳಲಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot