ಕೇವಲ 3,799 ರೂಗಳಿಗೆ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನು

Written By:
ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ 4G ಸೇವೆಯನ್ನು ಆರಂಭಿಸಿದ ಮೇಲೆ ದೇಶದಲ್ಲಿ 4G ಸಪೋರ್ಟ್‌ ಮಾಡುವ ಸ್ಮಾರ್ಟ್‌ಪೋನುಗಳ ಬೇಡಿಕೆ ಹೆಚ್ಚಾಗಿದೆ. ಕಾರಣ ಜಿಯೋ ಉಚಿತ ಡೇಟಾ ಮತ್ತು ಕರೆ ಸೇವೆಯನ್ನು ನೀಡಲು ಮುಂದಾಗಿದ್ದು, ಅಲ್ಲದೇ ಜಿಯೋ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನುಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಸ್ಮಾರ್ಟ್‌ಪೋನುಗಳಲ್ಲಿಯೂ ಕಾರ್ಯನಿರ್ವಹಿಸುವುದಿಲ್ಲ.

ಕೇವಲ 3,799 ರೂಗಳಿಗೆ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನು

ಈ ಕಾರಣಕ್ಕೆ ಮೊಬೈಲ್ ಮಾರುಕಟ್ಟೆಯಲ್ಲಿ 4G ಸಪೋರ್ಟ್‌ ಮಾಡುವ ಪೋನುಗಳ ಬೇಡಿಕೆ ಅಧಿಕವಾಗಿರುವ ಕಾರಣ ಎಲ್ಲಾ ಮೊಬೈಲ್ ತಯಾರಕ ಕಂಪನಿಗಳು 4G ಮೊಬೈಲ್‌ಗಳನ್ನೇ ಬಿಡುಗಡೆ ಮಾಡುತ್ತಿವೆ ಈ ಹಿನ್ನಲೆಯಲ್ಲಿ ಮಧ್ಯಮವರ್ಗದವರನ್ನು ಗಮನದಲ್ಲಿಟ್ಟುಕೊಂಡ ಸ್ಪೈಪ್ ಮೊಬೈಲ್ ತಯಾರಕ ಕಂಪನಿ ಕೇವಲ 3,799 ರೂಗಳಿಗೆ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ವೈಪ್ ಕನೆಕ್ಟ್ ಸ್ಟಾರ್:

ಸ್ವೈಪ್ ಕನೆಕ್ಟ್ ಸ್ಟಾರ್:

ಸ್ಪೈಪ್ ಮೊಬೈಲ್ ತಯಾರಕ ಕಂಪನಿ ತನ್ನ ಹೊಸ ಪೋನಿಗೆ ಸಸ್ವೈಪ್ ಕನೆಕ್ಟ್ ಸ್ಟಾರ್ ಎಂದು ನಾಮಕರಣ ಮಾಡಿದ್ದು, ಸಿಲ್ವರ್, ಗೋಲ್ಡನ್ ಮತ್ತು ಗ್ರೇ ಬಣ್ಣದಲ್ಲಿ ಈ ಪೋನನ್ನು ಹೊರ ತಂದಿದೆ. ಆದರೆ ಈ ಪೋನು ಕೇವಲ ಆನ್‌ಲೈನ್ ನಲ್ಲಿ ಮಾತ್ರ ಲಭ್ಯವಿದ್ದು, ಅದರಲ್ಲಿಯೂ ಸ್ನಾಪ್‌ಕ್ಲೂಸ್ ನಲ್ಲಿ ಮಾತ್ರ ಸೇಲಿಗಿದೆ.

ಪೋನಿನ ವಿಶೇಷತೆಗಳು:

ಪೋನಿನ ವಿಶೇಷತೆಗಳು:

ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ಪೋನಿನ ವಿಶೇಷತೆಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, 4 ಇಂಚಿನ ಪರದೆ ಈ ಪೋನಿನಲ್ಲಿದ್ದು, 1 GHz ವೇಗದ ಕ್ವಾಡ್‌ಕೋರ್ ಪ್ರೋಸೆಸರ್ ಜೊತೆಗೆ 1GB RAM ಈ ಪೋನಿನಲ್ಲಿದೆ. ಆಂಡ್ರಾಯ್ಡ್ 6 ನಲ್ಲಿ ಕಾರ್ಯನಿರ್ವಹಿಸಲಿದೆ.

5 MP ಕ್ಯಾಮೆರಾ:

5 MP ಕ್ಯಾಮೆರಾ:

ಈ ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ LED ಫ್ಲಾಷ್ ಸಮೇತ 5MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾದಲ್ಲಿ 1.3MP ಕ್ಯಾಮೆರಾ ನೀಡಲಾಗಿದೆ. 1800mAh ಬ್ಯಾಟರಿಯನ್ನು ಈ ಪೋನಿನಲ್ಲಿ ಅಳವಡಿಸಲಾಗಿದೆ. ಈ ಪೋನ್ 4G ಸಪೋರ್ಟ್ ಮಾಡಲಿದೆ. ಡುಯಲ್ ಸಿಮ್ ಹಾಕಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Swipe Technologies has announced the launch of its new affordable smartphone, the Swipe Konnect Star, for Rs 3,799. to konw more visit kannada.gizbot.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot