2019 ರಲ್ಲಿ ಬಿಡುಗಡೆಗೊಳ್ಳಲಿರುವ ಸ್ಮಾರ್ಟ್ ಫೋನ್ ಗಳು

|

2018 ರಲ್ಲಿ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಹಲವು ರೀತಿಯ ವಿಭಿನ್ನವಾಗಿರುವ ಮತ್ತು ಆಕರ್ಷಕ ಡಿಸೈನ್ ಗಳಿರುವ, ಫೀಚರ್ ಗಳಿರುವ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಆದರೆ 2019 ಕ್ಕೆ ಒಂದು ಹೆಜ್ಜೆ ಮುಂದೆ ಹೋಗಿರುವ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಗ್ರಾಹಕರ ಬೇಡಿಕೆಯನ್ನು ಇನ್ನಷ್ಟು ಪೂರೈಸುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ.

2019 ರಲ್ಲಿ ಬಿಡುಗಡೆಗೊಳ್ಳಲಿರುವ  ಸ್ಮಾರ್ಟ್ ಫೋನ್ ಗಳು

ಹೆಚ್ಚೆಚ್ಚು ಕ್ಯಾಮರಾಗಳು, ಪವರ್ ಫುಲ್ ಆಗಿರುವ ಪ್ರೊಸೆಸರ್ ಗಳು, ಉತ್ತಮ ಎಐ ಇಂಟಿಗ್ರೇಷನ್ ಮತ್ತು ಒಟ್ಟಾರೆ ಅಧ್ಬುತ ಅನುಭವ ನೀಡುವ ಸ್ಮಾರ್ಟ್ ಫೋನ್ ನ್ನು ಆಪಲ್, ಗೂಗಲ್, ಸ್ಯಾಮ್ ಸಂಗ್ ಮತ್ತು ಇತರೆ ಸಂಸ್ಥೆಗಳು ತಯಾರಿಸುವುದಕ್ಕೆ ಮುಂದಾಗಿವೆ.

ಹೊಸ ಆಪಲ್ ಐಫೋನ್

ಹೊಸ ಆಪಲ್ ಐಫೋನ್

ಪ್ರತಿ ವರ್ಷದಂತೆ ಕ್ಯೂಪರ್ಟಿನೋ ಮೂಲದ ಟೆಕ್ ಸಂಸ್ಥೆ ಹೊಸದಾಗಿರುವ ಐಫೋನ್ ನ್ನು 2019ರಲ್ಲೂ ಕೂಡ ಬಿಡುಗಡೆಗೊಳಿಸಲಿದೆ. ಮುಂದಿನ ವರ್ಷ ಯಾವ ರೀತಿಯ ಐಫೋನ್ ಬಿಡುಗಡೆಗೊಳ್ಳಲಿದೆ ಎಂಬ ಬಗೆಗಿನ ಗಾಸಿಪ್ ಗಳಿಗೇನೂ ಕೊರತೆ ಇಲ್ಲ.ಇನ್ನೂ ಉತ್ತಮ ಕ್ಯಾಮರಾವಿರುವ ಮತ್ತು ನಾಚ್ ಲೆಸ್ ಐಫೋನ್ ಗಳನ್ನು ಬಿಡುಗಡೆಗೊಳಿಸಲು ತಯಾರಿಗಳು ನಡೆಯುತ್ತಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10,ಎಸ್10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10,ಎಸ್10 ಪ್ಲಸ್

2019 ರ ಮೊದಲ ಫ್ಲ್ಯಾಗ್ ಶಿಪ್ ಫೋನ್ ನಿರೀಕ್ಷೆಯಲ್ಲಿರುವುದು ಸ್ಯಾಮ್ ಸಂಗ್ ಕಂಪೆನಿಯದ್ದೇ ಆಗಿದೆ. ಪ್ರತಿ ವರ್ಷವೂ ಸ್ಯಾಮ್ ಸಂಗ್ ಹೊಸ ಗ್ಯಾಲಕ್ಸಿ ಎಸ್ ಸರಣಿಯನ್ನು ಬಿಡುಗಡೆಗೊಳಿಸಲಿದ್ದು ಈ ವರ್ಷವೂ ಫೆಬ್ರವರಿಯಲ್ಲಿ ಮೊಬೈಲ್ ವಿಶ್ವ ಕಾಂಗ್ರೆಸ್ ನಲ್ಲಿ ಬಿಡುಗಡೆಗೊಳಿಸಲಾಗಿತ್ತದೆ.ಎಸ್10 ಮತ್ತು ಎಸ್ 10 ಪ್ಲಸ್ ನಲ್ಲಿ ಇನ್ನೂ ಉತ್ತಮವಾಗಿರುವ ಡಿಸ್ಪ್ಲೇ ಅನುಭವ ಮತ್ತು ಕೆಲವು ಆಕರ್ಷಕ ಫೀಚರ್ ಗಳು ಇದರಲ್ಲಿ ಇರಲಿವೆ.

ಹೊಸ ಒನ್ ಪ್ಲಸ್ ಸ್ಮಾರ್ಟ್ ಫೋನ್

ಹೊಸ ಒನ್ ಪ್ಲಸ್ ಸ್ಮಾರ್ಟ್ ಫೋನ್

ಹೊಸ ಒನ್ ಪ್ಲಸ್ ಸ್ಮಾರ್ಟ್ ಫೋನ್ ನ್ನು ಏನೆಂದು ಹೆಸರಿಸಲಾಗುತ್ತದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ 2019 ರ ಮೊದಲಾರ್ಧದಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ತಿಳಿದಿದೆ. 2019 ರಲ್ಲಿ 5ಜಿ ಬೆಂಬಲಿತ ಒನ್ ಪ್ಲಸ್ ಫೋನ್ ಬಿಡುಗಡೆಗೊಳಿಸಲಿದೆ.

ನೋಕಿಯಾ 9

ನೋಕಿಯಾ 9

ಹೆಚ್ಎಂಡಿ ಗ್ಲೋಬಲ್ 2018 ರಲ್ಲಿ ಅಂದಾಜು 12 ಹೊಸ ನೋಕಿಯಾ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ. 2019 ರಲ್ಲೂ ಕೂಡ ಹೆಚ್ಚೇನು ವ್ಯತ್ಯಾಸವಿರುವುದಿಲ್ಲ ಮತ್ತು ಪೆಂಟಾ ಕ್ಯಾಮರಾವಿರುವ ಫೋನ್ ನ್ನು ಬಿಡುಗಡೆಗೊಳಿಸಲಿದೆ. ಬಹುಶ್ಯಃ 5 ಕ್ಯಾಮರಾವಿರುವ ಮೊದಲ ಫೋನ್ ಇದಾಗಿರಲಿದೆ.

ಶಿಯೋಮಿ ರೆಡ್ಮಿ ಪ್ರೋ 2

ಶಿಯೋಮಿ ರೆಡ್ಮಿ ಪ್ರೋ 2

ಶಿಯೋಮಿ ರೆಡ್ಮಿ ಪ್ರೋ 2 ನಲ್ಲಿ 48ಎಂಪಿ ಕ್ಯಾಮರಾವು ಹಿಂಭಾಗದಲ್ಲಿ ಇರಲಿದೆ ಎಂದು ತಿಳಿದುಬಂದಿದೆ. ವರದಿಯೊಂದು ಹೇಳುವ ಪ್ರಕಾರ ಮುಂಭಾಗದಲ್ಲಿ ಹೋಲ್ ಕೂಡ ಇರಲಿದ್ದು ಇದು ಸೆಲ್ಫೀ ಕ್ಯಾಮರಾಕ್ಕೆ ನೆರವು ನೀಡುತ್ತದೆ ಎಂದು ಹೇಳಲಾಗಿದೆ. ಒಟ್ಟಾರೆ ಶಿಯೋಮಿ ಕೂಡ ವರ್ಷದ ಆರಂಭದಲ್ಲೇ ಒಂದು ಫೋನ್ ನ್ನು 2019 ರಲ್ಲಿ ಬಿಡುಗಡೆಗೊಲಿಸಲಿದೆ.

ಗೂಗಲ್ ಪಿಕ್ಸಲ್ ಸ್ಮಾರ್ಟ್ ಫೋನ್

ಗೂಗಲ್ ಪಿಕ್ಸಲ್ ಸ್ಮಾರ್ಟ್ ಫೋನ್

2019 ರ ದ್ವಿತೀಯಾರ್ಧದಲ್ಲಿ ನಾವು ಗೂಗಲ್ ನಿಂದ ಹೊಸ ಸರಣಿಯ ಗೂಗಲ್ ಪಿಕ್ಸಲ್ ಫೋನ್ ನ್ನು ನಿರೀಕ್ಷಿಸಬಹುದು. ಇದುವರೆಗೂ ಕೆಲವೇ ಕೆಲವು ಮಾಹಿತಿಗಳು ಈ ಬಗ್ಗೆ ಲಭ್ಯವಿದೆ.

Best Mobiles in India

Read more about:
English summary
5 upcoming smartphones of 2019 from Apple, Samsung, Nokia and others

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X