ಚೀನೀ ಮೊಬೈಲ್ ಕಂಪೆನಿಗಳಿಗೆ ಸರ್ಕಾರದಿಂದ ಬಿಗ್ ಶಾಕ್!..ಭಾರತದಲ್ಲಿ ಪಾರಮ್ಯಕ್ಕೆ ಬ್ರೇಕ್!!

ದೇಶಿ ತಯಾರಕರ ಹಿತಾಸಕ್ತಿ ರಕ್ಷಿಸಿ ಅವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

|

ಗ್ರಾಹಕರಿಗೆ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರಿ ಕೊಡುಗೆಗಳನ್ನು ನೀಡುತ್ತ ಮಾರುಕಟ್ಟೆ ವಿಸ್ತರಿಸುತ್ತಿರುವ ಚೀನಾ ಸೇರಿ ಎಲ್ಲಾ ವಿದೇಶಿ ಮೊಬೈಲ್‌ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ.! ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದ ಸ್ಮಾರ್ಟ್‌ಫೋನ್‌ಗಳಿಗೆ ಶೇ 15 ರಷ್ಟು ಸುಂಕ ವಿಧಿಸಲಾಗಿದೆ.!!

ದೇಶಿ ತಯಾರಕರ ಹಿತಾಸಕ್ತಿ ರಕ್ಷಿಸಿ ಅವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.ಹಾಗಾಗಿ, ಭಾರತದಲ್ಲಿ ಪಾರಮ್ಯ ಮೆರೆಯುತ್ತಿದ್ದ ಚೀನಾ ಕಂಪೆನಿಗಳ ಆಟಕ್ಕೆ ಬ್ರೇಕ್ ನೀಡಿದಂತಾಗಿದೆ.!

ಚೀನೀ ಮೊಬೈಲ್ ಕಂಪೆನಿಗಳಿಗೆ ಸರ್ಕಾರದಿಂದ ಬಿಗ್ ಶಾಕ್!..ಪಾರಮ್ಯಕ್ಕೆ ಬ್ರೇಕ್!!

ಇದೇ ವೇಳೆಯಲ್ಲಿ ಸ್ಮಾರ್ಟ್‌ಫೋನ್‌, ಟೆಲಿವಿಷನ್‌, ಮೈಕ್ರೊವೇವ್ ಎಲೆಕ್ಟ್ರಾನಿಕ್‌ ಸಲಕರಣೆಗಳ ಆಮದು ಸುಂಕ ಹೆಚ್ಚಿಸಿದ್ದು, ಹಾಗಾದರೆ, ಯಾವುದಕ್ಕೆ ಎಷ್ಟು ಸುಂಕ ಏರಿಕೆ? ಇದರಿಂದ ಆಗಬಹುದಾದ ಪರಿಣಾಮಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಯಾವುದಕ್ಕೆ ಎಷ್ಟು ಸುಂಕ ಏರಿಕೆ?

ಯಾವುದಕ್ಕೆ ಎಷ್ಟು ಸುಂಕ ಏರಿಕೆ?

ಈ ಮೊದಲು ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದ ಸ್ಮಾರ್ಟ್‌ಫೋನ್‌ಗಳಿಗೆ ಯಾವುದೇ ಆಮದು ಸುಂಕ ಇರಲಿಲ್ಲ. ಇದೀಗ ಶೇ ಸ್ಮಾರ್ಟ್‌ಫೋನ್‌ಗಳಿಗೆ ಶೇ 15 ರಷ್ಟು ಸುಂಕ ವಿಧಿಸಲಾಗಿದೆ.!! ಟೆಲಿವಿಷನ್‌ ಮೇಲಿನ ಆಮದು ಸುಂಕ ಶೇ 10 ರಿಂದ ಶೇ 20ಕ್ಕೆ ಏರಿಕೆ ಮಾಡಲಾಗಿದ್ದರೆ, ಎಲ್‌ಇಡಿ ಲ್ಯಾಂಪ್‌ಗಳಿಗೆ ಶೇ 20 ರಷ್ಟು ಸುಂಕ ವಿಧಿಲಾಗಿದೆ. ಕೆಲ ಉತ್ಪನ್ನಗಳ ಮೇಲಿನ ಸುಂಕವು ದುಪ್ಪಟ್ಟಾಗಿದೆ.

ಹೆಚ್ಚುತ್ತಿರುವ ಆಮದು

ಹೆಚ್ಚುತ್ತಿರುವ ಆಮದು

ದೇಶಕ್ಕೆ ವಿದೇಶಿ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತಿದೆ. 2017-18ನೇ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ 4 ಕೋಟಿ ಸ್ಮಾರ್ಟ್‌ಫೋನ್‌ಗಳು ಆಮದಾಗಿದ್ದು, 2016-17ನೇ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಆಮದು ಪ್ರಮಾಣ ಶೇ 21 ರಷ್ಟು ಹೆಚ್ಚಾಗಿದೆ.

ಹೊಸ ನೀತಿಗೆ ಸ್ವಾಗತ!!

ಹೊಸ ನೀತಿಗೆ ಸ್ವಾಗತ!!

ಸ್ಮಾರ್ಟ್‌ಫೋನ್‌, ಟೆಲಿವಿಷನ್‌, ಮೈಕ್ರೊವೇವ್ ಎಲೆಕ್ಟ್ರಾನಿಕ್‌ ಸಲಕರಣೆಗಳ ಆಮದು ಸುಂಕ ಹೆಚ್ಚಿಸಿರುವುದನ್ನು ವಿದ್ಯುತ್‌ ಉಪಕರಣ ತಯಾರಕರು ಸ್ವಾಗತಿಸಿದ್ದಾರೆ.ವಿಡಿಯೊಕಾನ್‌, ಗೊದ್ರೇಜ‌ ಅಪ್ಲಯನ್ಸಸ್‌, ಪ್ಯಾನಸೋನಿಕ್‌ ಇಂಡಿಯಾ ಕಂಪನಿಗಳು ಪ್ರತಿಕ್ರಿಯಿಸಿ, ಇದರಿಂದ ದೇಶಿ ಎಲೆಕ್ಟ್ರಾನಿಕ್‌ ಉತ್ಪನ್ನಗಳ ತಯಾರಿಕೆ ಹೆಚ್ಚಾಗಲಿದ್ದು, ಭಾರತದಲ್ಲಿಯೇ ತಯಾರಿಸಿ ಕಾರ್ಯಕ್ರಮಕ್ಕೆ ಉತ್ತೇಜನ ಸಿಗಲಿದೆ' ಎಂದು ಹೇಳಿವೆ.!!

ದೇಶಿ ಸ್ಮಾರ್ಟ್‌ಫೋನ್‌ಗಳಿಗೆ ಲಾಭ!!

ದೇಶಿ ಸ್ಮಾರ್ಟ್‌ಫೋನ್‌ಗಳಿಗೆ ಲಾಭ!!

ವಿದೇಶಿ ಕಂಪೆನಿಗಳ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್‌ಗಳ ಮುಂದೆ ಮಂಡಿಯೂರಿದ್ದ ದೇಶಿ ಮೊಬೈಲ್ ಕಂಪೆನಿಗಳಿಗೆ ಈ ನೀತಿ ಲಾಭವಾಗಲಿದೆ.ಮೈಕ್ರೊಮ್ಯಾಕ್ಸ್‌, ವಿಡಿಯೊಕಾನ್, ಸೆಲ್ಕಾನ್‌, ಕಾರ್ಬನ್‌ ಮತ್ತು ಲಾವಾ ಕಂಪೆನಿಗಳು ಚೇತರಿಸಲಿಕೊಳ್ಳಲು ಸಹಕಾರಿಯಾಗಿದೆ.!!

ಗ್ರಾಹಕರಿಗೆ ಹೊರೆ!!

ಗ್ರಾಹಕರಿಗೆ ಹೊರೆ!!

ದೇಶದಲ್ಲಿ ಚೀನಾದಿಂದ ಆಮದು ಮಾಡಿಕೊಂಡಿರುವ ಸ್ಮಾರ್ಟ್‌ಫೋನ್‌ಗಳ ಬಳಕೆಯೇ ಹೆಚ್ಚಿಗೆ ಇದೆ. ಶಿಯೋಮಿ, ವಿವೊ, ಒಪ್ಪೊ, ಒನ್‌ಪ್ಲಸ್‌, ಆಪಲ, ಜಿವೋನಿ, ಸ್ಯಾಮ್ಸಂಗ್‌, ಸೋನಿ, ಹೀಗೆ ವಿದೇಶಿ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿಯೂ ಏರಿಕೆ ಕಾಣಲಿದೆ.! ಹಾಗಾಗಿ, ಈ ನೀತಿ ಗ್ರಾಹಕರಿಗೆ ಹೊರೆಯಾಗಲಿದೆ!!

ಶಿಯೋಮಿ 'ರೆಡ್‌ಮಿ ನೋಟ್ 5' ಫೋನ್ ಸುದ್ದಿಗೆ ಬೆಚ್ಚಿಬಿತ್ತು ಮೊಬೈಲ್ ಲೋಕ!!ಶಿಯೋಮಿ 'ರೆಡ್‌ಮಿ ನೋಟ್ 5' ಫೋನ್ ಸುದ್ದಿಗೆ ಬೆಚ್ಚಿಬಿತ್ತು ಮೊಬೈಲ್ ಲೋಕ!!

Best Mobiles in India

English summary
Import tax rise likely to make mobile phones more expensive.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X