4ಜಿ ತರುತ್ತಿರುವ ಮೊಬೈಲ್ ಗಳು ಯಾವುವು?

Posted By: Staff
4ಜಿ ತರುತ್ತಿರುವ ಮೊಬೈಲ್ ಗಳು ಯಾವುವು?

ಇದೀಗ ಮೊಬೈಲ್ ತಯಾರಕರು 4ಜಿ ಹ್ಯಾಂಡ್ ಸೆಟ್ ಗಳನ್ನು ಹೊರತರಲು ಹೆಚ್ಚು ಪೈಪೋಟಿ ನಡೆಸುತ್ತಿದ್ದಾರೆ. ಹೆಚ್ಚು ಬೇಡಿಕೆಯಲ್ಲಿರುವ 4ಜಿ LTE ಸಾಮರ್ಥ್ಯ ಹೊಂದಿರುವ ಮೊಬೈಲ್ ಗಳ ತಯಾರಿಕೆಯಲ್ಲಿ ಹೆಚ್ಚು ಸ್ಪರ್ಧೆ ಏರ್ಪಟ್ಟಿದೆ.

ಇದೀಗ 4ಜಿ ಸಾಮರ್ಥ್ಯದೊಂದಿಗೆ ಕಾಣಿಸಿಕೊಳ್ಳುವ ಸುದ್ದಿಯಿರುವ ಮೊಬೈಲ್ ಗಳೆಂದರೆ ಎಚ್ ಟಿಸಿ ರೇಡಿಯಂಟ್ ಮ್ತತು ಸ್ಯಾಮ್ ಸಂಗ್ ಮ್ಯಾಂಡೆಲ್. ಈ ಫೋನ್ ಗಳನ್ನು ಈ ವರ್ಷದ ಮೊದಲ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿದುಬಂದಿದೆ.

ಜನವರಿಯಲ್ಲಿ ಲಾಸ್ ವೇಗಾಸ್ ನಲ್ಲಿ ನಡೆಯಲಿರುವ ಕಂಸ್ಯೂಮರ್ ಎಲೆಕ್ಟ್ರಾನಿಕ್ ಶೋನಲ್ಲಿ ಈ ಮೊಬೈಲ್ ಗಳು ಬಿಡುಗಡೆಗೊಳ್ಳಲಿದೆ ಎಂಬ ಮಾಹಿತಿಯೂ ಬಂದಿದೆ. ಆದರೆ ಈ ಕುರಿತು ನಿಖರವಾಗಿ ತಿಳಿದುಬಂದಿಲ್ಲ.

ಈ ಎರಡೂ ಮೊಬೈಲ್ ಗಳು 4ಜಿಗೆ ಬೆಂಬಲಿತ ವಿಂಡೋಸ್ ಫೋನ್ 7 ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ನ ಹೊಸ ಆವೃತ್ತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ಸುದ್ದಿ ಇದೆ. ಮೊದಲು HTC ರೇಡಿಯಂಟ್ ಮೊಬೈಲ್ ಮೈಕ್ರೊಸಾಫ್ಟ್ ಟ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಹೊಂದಿದೆ ಎಂಬ ಮಾಹಿತಿ ಇದ್ದು, ಇದೀಗ ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವುದಾಗಿ ತಿಳಿದುಬಂದಿದೆ.

ಸ್ಯಾಮ್ ಸಂಗ್ ಮ್ಯಾಂಡೆಲ್ ಕೂಡ ವಿಂಡೋಸ್ 7 ಬೆಂಬಲಿತವಾಗಿದ್ದು, ಸ್ಯಾಮ್ ಸಂಗ್ ಪೋಕಸ್ S ಗಿಂತಲೂ ಉನ್ನತವಾಗಿದೆ ಎನ್ನಲಾಗಿದೆ.

ಈ ಮೊಬೈಲ್ ಗಳ ಹೆಸರುಗಳು ಕೇವಲ ಕೋಡ್ ರೂಪದ್ದಾಗಿದ್ದು, ಬಿಡುಗಡೆ ಸಮಯದಲ್ಲಿ ಸೂಕ್ತ ಹೆಸರು ಲಭಿಸಲಿದೆ. ಎಚ್ ಟಿಸಿ ಮತ್ತು ಸ್ಯಾಮ್ ಸಂಗ್ ನ ಈ ಎರಡೂ ಮೊಬೈಲ್ ಗಳ ಬಗ್ಗೆ, ಅದರ ಗುಣ ಲಕ್ಷಣಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿಲ್ಲ. ಮೊಬೈಲ್ ಗಳ ಬೆಲೆಯನ್ನೂ ಕಂಪನಿ ತಿಳಿಸಿಲ್ಲ. ಆದರೆ ಕೈಗೆಟುಕುವ ದರದಲ್ಲಿ ಈ ಮೊಬೈಲ್ ಗಳು ದೊರೆಯಲಿದೆ ಎಂದಷ್ಟೇ ತಿಳಿದುಬಂದಿದೆ.

ಈ ಎಲ್ಲಾ ಸುದ್ದಿಗಳ ಹೊರತಾಗಿ ನೋಕಿಯಾ ಕೂಡ ವಿಂಡೋಸ್ ಬೆಂಬಲಿತವಾಗಿರುವ ತಮ್ಮ ಮೊಬೈಲ್ ಗಳಿಗೆ 4ಜಿ ಸೌಲಭ್ಯವನ್ನು ಅಳವಡಿಸುವ ಕುರಿತು ಯೋಚಿಸುತ್ತಿದೆ. ಇದರಿಂದ ಕಂಪನಿಗಳ ಮಧ್ಯೆ ಕಠಿಣ ಸ್ಪರ್ಧೆ ಏರ್ಪಡುವುದಂತೂ ಗ್ಯಾರಂಟಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot