48ಎಂಪಿ ಕ್ಯಾಮರಾ ಹೊಂದಿರುವ ವಿಶ್ವದ ಮೊದಲ ಫೋನ್ ಹುವಾಯಿ ನೋವಾ4

|

ಸ್ಮಾರ್ಟ್ ಫೋನಿನ ಸ್ಕ್ರೀನಿನ ವಿಚಾರದಲ್ಲಿ ಈ ವರ್ಷ ಹಲವು ವಿಶೇಷ ಪ್ರಯೋಗಗಳು ನಡೆದಿದೆ.ವರ್ಷದ ಆರಂಭದಲ್ಲಿ ನಾಚ್ ಸ್ಕ್ರೀನ್ ಗಳನ್ನು ಪರಿಚಯಿಸಲಾಯಿತು.ನಂತರ ನಾಚ್ ನಲ್ಲಿ ವಾಟರ್ ಡ್ರಾಫ್ ವೈಶಿಷ್ಟ್ಯತೆ ಸೇರಿಸಲಾಯಿತು. ಕಳೆದ ಒಂದು ತಿಂಗಳ ಮುಂಚೆ ಸ್ಯಾಮ್ ಸಂಗ್ ಸಂಸ್ಥೆ ಇನ್ಫಿನಿಟಿ ಸ್ಮಾರ್ಟ್ ಫೋನ್ ಸ್ಕ್ರೀನ್ ಜೊತೆಗೆ ಹೋಲ್ ಪಂಚ್ ನ್ನು ಮೇಲ್ಬಾಗದಲ್ಲಿ ಸೇರಿಸಿ ಹೊಸತನ್ನು ಪರಿಚಯಿಸಿತ್ತು.ಇದೀಗ ಹುವಾಯಿ ಸ್ಯಾಮ್ ಸಂಗ್ ನ ಐಡಿಯಾವನ್ನು ಉಪಯೋಗಿಸಿ ತನ್ನದೇ ಆದ ಹುವಾಯಿ ನೋವಾ 4 ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸಿದೆ.

ಹುವಾಯಿ ನೋವಾ 4 ಬೆಲೆ ಮತ್ತು ಲಭ್ಯತೆ:

ಹುವಾಯಿ ನೋವಾ 4 ಬೆಲೆ ಮತ್ತು ಲಭ್ಯತೆ:

ಚೀನಾದ ಹ್ಯಾಂಡ್ ಸೆಟ್ ತಯಾರಿಕಾ ಸಂಸ್ಥೆ ಹುವಾಯಿ ಮೇಟ್ 20 ಫ್ಯಾಬ್ಲೆಟ್ ನ್ನು ಬಿಡುಗಡೆಗೊಳಿಸಿದ ಕೆಲವೇ ದಿನದಲ್ಲಿ ಹುವಾಯಿ ನೋವಾ 4 ನ್ನು ಸಾಮಾಜಿಕ ಜಾಲತಾಣದಲ್ಲಿ ಟೀಸ್ ಮಾಡಲು ಆರಂಭವಿಸಿದೆ.ಈಗಾಗಲೇ ಇದನ್ನು ಚೀನಾದಲ್ಲಿ ಪರಿಚಯಿಸಲಾಗಿದ್ದು ಟಾಪ್ ಎಂಡ್ ಮಾಡೆಲ್ ನ ಬೆಲೆ 3,399 ಯಾನ್ (ಅಂದಾಜು ರುಪಾಯಿ 35,300) ಮತ್ತು ಕಡಿಮೆ ವರ್ಷನ್ ಗೆ 3,099 ಯಾನ್ (ಅಂದಾಜು ರುಪಾಯಿ 32,000).

 ಚೀನಾ ವೆಬ್ ಸೈಟ್ ನಲ್ಲಿ ವೈಶಿಷ್ಟ್ಯತೆಗಳ ಪಟ್ಟಿ:

ಚೀನಾ ವೆಬ್ ಸೈಟ್ ನಲ್ಲಿ ವೈಶಿಷ್ಟ್ಯತೆಗಳ ಪಟ್ಟಿ:

ಚೀನಾದ ವೆಬ್ ಸೈಟ್ ನಲ್ಲಿ ಫೀಚರ್ ಮತ್ತು ವೈಶಿಷ್ಟ್ಯತೆಗಳ ಕುರಿತು ನಮೂದಿಸಲಾಗಿದೆ. ಇತರೆ ದೇಶಗಳಲ್ಲಿ ಈ ಸ್ಮಾರ್ಟ್ ಫೋನ್ ಯಾವಾಗ ಬಿಡುಗಡೆಗೊಳ್ಳಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ.

ಹುವಾಯಿ ನೋವಾ 4 ವೈಶಿಷ್ಟ್ಯತೆಗಳು:

ಹುವಾಯಿ ನೋವಾ 4 ವೈಶಿಷ್ಟ್ಯತೆಗಳು:

ಹುವಾಯಿ ನೋವಾ 4 ನ ಪ್ರಮುಖ ಹೈಲೆಟ್ ಎಂದರೆ ಸ್ಕ್ರೀನ್ ನಲ್ಲಿ ಹೋಲ್ ಪಂಚ್ ಇರುವುದು, ವಾಟರ್ ಡ್ರಾಪ್ ನಾಚ್ ಮಧ್ಯದಲ್ಲಿ ಇರುವ ಬದಲಾಗಿ ಮೇಲಿನ ಎಡಭಾಗದಲ್ಲಿ ಹೋಲ್ ಇದೆ.ಇದು ಮುಂಭಾಗದ ಕ್ಯಾಮರಾವನ್ನು ಮತ್ತು ಮತ್ತು ರೆಗ್ಯುಲರ್ ಸೆಟ್ ನ ಸೆನ್ಸರ್ ಗಳನ್ನು ಒಳಗೊಂಡಿದೆ. ಸ್ಪೀಕರ್ ಗ್ರಿಲ್ ಮೇಲ್ಬಾಗದ ಮಧ್ಯದಲ್ಲಿದೆ ಮತ್ತು ಸ್ಲೀಕ್ ಚಿನ್ ಕೂಡ ಇದೆ.ನೋಟಿಫಿಕೇಷನ್ ಐಕಾನ್ ಗಳು ಓವರ್ ಲ್ಯಾಪ್ ಆಗುವುದಿಲ್ಲ ಮತ್ತು ಹಿಂಭಾಗದಲ್ಲಿ ಅದನ್ನು ಇರಿಸಲಾಗಿದೆ.ಇದರಲ್ಲಿ 6.4-ಇಂಚಿನ IPS ಸ್ಕ್ರೀನ್ ಜೊತೆಗೆ FHD+ (2310x1080 ಪಿಕ್ಸಲ್ಸ್) ಇದೆ.

ಪ್ರೊಸೆಸರ್:

ಪ್ರೊಸೆಸರ್:

ಹುವಾಯಿ ನೋವಾ 4 ಕಂಪೆನಿಯ ಸ್ವಂತ ಕಿರಿನ್ 970 ಪ್ರೊಸೆಸರ್ ನ್ನು ಹೊಂದಿದೆ.ಇದು ಹುವಾಯಿ ಪಿ20 ಪ್ರೋ ವನ್ನು ಕೂಡ ಪವರ್ ಮಾಡುತ್ತದೆ ಆದರೆ ಮೇಟ್ 20ಯ ಕಿರಿನ್ 980 ಯಷ್ಟು ಶಕ್ತಿಶಾಲಿಯಾಗಿಲ್ಲ. ಸಾಕೆಟ್ 8ಜಿಬಿ ಮೆಮೊರಿ ಮತ್ತು 128ಜಿಬಿ ಇನ್ ಬಿಲ್ಟ್ ಸ್ಟೊರೇಜ್ ವ್ಯವಸ್ಥೆಯನ್ನು ಹೊಂದಿದೆ.

 ಕ್ಯಾಮರಾ ವೈಶಿಷ್ಟ್ಯತೆಗಳು:

ಕ್ಯಾಮರಾ ವೈಶಿಷ್ಟ್ಯತೆಗಳು:

ಹುವಾಯಿ ನೋವಾ 4 ನಲ್ಲಿ ಸ್ಕ್ರೀನ್ ನ್ನು ಹೊರತು ಪಡಿಸಿದರೆ ಮತ್ತೊಂದು ಹೈಲೆಟ್ ಎಂದರೆ ಅದು 48ಎಂಪಿ ಹಿಂಭಾಗದ ಕ್ಯಾಮರಾ ಸೆನ್ಸರ್ ಜೊತೆಗೆ f/1.8 ಅಪರ್ಚರ್ ನ್ನು ಹೊಂದಿದೆ ಜೊತೆಗೆ 16ಎಂಪಿ ಸೂಪರ್ ವೈಡ್ ಆಂಗಲ್ ಲೆನ್ಸ್ ಜೊತೆಗೆ f/2.2 ಮತ್ತು 2ಎಂಪಿ DoF ಸೆನ್ಸರ್ ಜೊತೆಗೆ f/2.4 ಅಪರ್ಚರ್ ಇದೆ. ಇದು ಹೈ ಎಂಡ್ ಮಾಡೆಲ್ ನಲ್ಲಿ ಮಾತ್ರವೇ ಇರುತ್ತದೆ. ಕಡಿಮೆ ಬೆಲೆಯ ವರ್ಷನ್ ನಲ್ಲಿ 48ಎಂಪಿ ಬದಲಿಗೆ ಕೇವಲ 20 ಎಂಪಿ ಸೆನ್ಸರ್ ಇರುತ್ತದೆ.ಮುಂಭಾಗದ ಕ್ಯಾಮರಾವು 25ಎಂಪಿ ಸೆನ್ಸರ್ ಜೊತೆಗೆ f/2 ಅಪರ್ಚರ್ ನ್ನು ಹೊಂದಿರಲಿದೆ.

ಬಣ್ಣಗಳ ಆಯ್ಕೆ:

ಬಣ್ಣಗಳ ಆಯ್ಕೆ:

ಈ ಫೋನಿನ ಬ್ಯಾಟರಿ 3750mAh ನದ್ದಾಗಿದ್ದು ಆಂಡ್ರಾಯ್ಡ್ 9.0 ಆಧಾರಿತ EMUI ನಲ್ಲಿ ರನ್ ಆಗುತ್ತದೆ. ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಈ ಫೋನ್ ಲಭ್ಯವಾಗುತ್ತದೆ. - ಹನಿ ರೆಡ್(ಕೆಂಪು), ಸು ಯಿನ್ಲ್ಯಾನ್(ನೀಲಿ), ಫ್ರಿಟ್ಲ್ಯಾರಿಯಾ( ಬೆಳ್ಳಿ ಬಣ್ಣ) ಮತ್ತು ಕಪ್ಪು.

Best Mobiles in India

Read more about:
English summary
Huawei Nova 4, world's first smartphone with 'hole-punch' screen & 48MP camera launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X