Subscribe to Gizbot

ರೆಡ್‌ಮಿ ನೋಟ್ 4ಗೆ ಸೆಡ್ಡು ಹೊಡೆಯುವ ಏಕೈಕ ಫೋನ್ ಇದು!!..ಬೆಲೆ ಕೇವಲ 6,999 ರೂ.!!

Written By:

ಅಮೆರಿಕ ಮೂಲದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಇನ್‌ಫೋಕಸ್ ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್ ಹೊಂದಿರುವ 'ಇನ್‌ಫೋಕಸ್ ವಿಷನ್ 3' ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿರುವುದು ನಿಮಗೆ ಗೊತ್ತಿದೆ.! ಹೊಸ ವಿಷಯ ಏನೆಂದರೆ ನಾವು ನೀಡುವ ಬೆಲೆಗೆ ಈ ಫೋನ್ ರೆಡ್‌ಮಿ ನೋಟ್ 4ಗೆ ಸೆಡ್ಡು ಹೊಡೆಯುವ ಏಕೈಕ ಫೋನ್ ಇದು.!!

ಹೌದು, 4000mAh ಬ್ಯಾಟರಿ, 5.7 ಇಂಚು ಡಿಸ್‌ಪ್ಲೇ ಸೇರಿ ಒಂದು ಬಜೆಟ್ ಸ್ಮಾರ್ಟ್ಫೋನ್ ಹೊಂದಿರಬಹುದಾದ ಎಲ್ಲಾ ಫೀಚರ್ಸ್ಗಳನ್ನು ಕೇವಲ 6,999 ರೂ.ಗಳ ಬೆಲೆಯಲ್ಲಿ 'ಇನ್‌ಫೋಕಸ್ ವಿಷನ್ 3' ಫೋನ್ ಹೊಂದಿದ್ದು, ಈ ಫೋನ್ ರೆಡ್‌ಮಿ ನೋಟ್ 4ಗೆ ಸೆಡ್ಡು ಹೊಡೆಯುತ್ತಿದೆ. ಹಾಗಾದರೆ, ಫೋನ್ ಬೇರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಷನ್ 3 ಡಿಸ್‌ಪ್ಲೇ ಹೇಗಿದೆ?

ವಿಷನ್ 3 ಡಿಸ್‌ಪ್ಲೇ ಹೇಗಿದೆ?

ಮೊದಲೇ ಹೇಳಿದಂತೆ 'ಇನ್‌ಫೋಕಸ್ ವಿಷನ್ 3' ಸ್ಮಾರ್ಟ್‌ಫೋನ್ 5.7 ಇಂಚುಗಳ (1,440x720p ರೆಸೊಲ್ಯೂಷನ್) ಫುಲ್ HD+ ಸ್ಕ್ರೀನ್ ಅನ್ನು ಹೊಂದಿದೆ. 18:9 ಆಕಾರ ಅನುಪಾತದಲ್ಲಿ ಡಿಸ್‌ಪ್ಲೇಯನ್ನು ರೂಪಿಸಲಾಗಿದ್ದು, 2.5D ಕರ್ವ್ಡ್ ಗ್ಲಾಸ್ ಮೂಲಕ ಡಿಸ್‌ಪ್ಲೇ ರಕ್ಷಣಾ ಕವಚ ರೂಪಿಸಲಾಗಿದೆ.!!

ಅದ್ಬುತ ಕ್ಯಾಮೆರಾ ಫೀಚರ್ಸ್!!

ಅದ್ಬುತ ಕ್ಯಾಮೆರಾ ಫೀಚರ್ಸ್!!

13MP ಮತ್ತು 5MP ಸೆನ್ಸಾರ್ ಜತೆ ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 120 ಡಿಗ್ರಿ ವೈಡ್ ಆಂಗಲ್ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ನಲ್ಲಿದೆ.! ಒಂದೇ ಸಮಯಕ್ಕೆ ಫ್ರಂಟ್ ಮತ್ತು ಬ್ಯಾಕ್ ಕ್ಯಾಮೆರಾಗಳಲ್ಲಿ ಚಿತ್ರ ತೆಗೆಯಬಹುದಾದ ವಿಶೇಷತೆ ಈ ಸ್ಮಾರ್ಟ್‌ಫೋನ್‌ನಲ್ಲಿದೆ.!!

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

ರೆಡ್‌ಮಿ ನೋಟ್ 4 ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿದ್ದರೆ, ಇನ್‌ಫೋಕಸ್ ವಿಷನ್ 3 ಫೋನ್ 1.3Ghz ಕ್ವಾಡ್ ಕೋರ್ ಮೀಡಿಯಾಟೆಕ್ M6373 Cortex-A53 ಪ್ರೊಸೆಸರ್ ಹೊಂದಿದೆ.! ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ನಂತೆಯೇ Cortex-A53 ಪ್ರೊಸೆಸರ್ ಉತ್ತಮ ಕಾರ್ಯನಿರ್ವಹಣೆಗೆ ಹೆಸರಾಗಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಇನ್‌ಫೋಕಸ್ ವಿಷನ್ 3 ಫೋನ್ 2GB RAM ಹಾಗೂ 16GB ಇಂಟರ್ನಲ್ ಮೆಮರಿ ಹೊಂದಿದೆ. ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ ಫೋನ್ ಮೆಮೊರಿನ್ನು 64GB ವರೆಗೂ ವರ್ಧಿಸಬಹುಹಾಗಿದ್ದು, ಆಂಡ್ರಾಯ್ಡ್ 7.0 ನೌಗಾಟ್ ಮೂಲಕ ಫೋನ್ ಕಾರ್ಯನಿರ್ವಹಿಸಲಿದೆ.!!

ಬ್ಯಾಟರಿ ಮತ್ತು ಇತರ ಫೀಚರ್ಸ್!!

ಬ್ಯಾಟರಿ ಮತ್ತು ಇತರ ಫೀಚರ್ಸ್!!

ಇನ್‌ಫೋಕಸ್ ವಿಷನ್ 3 ಫೋನ್ ಅದ್ಬುತ 4000mAh ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಬ್ಯಾಟರಿಯಲ್ಲಿ ರೆಡ್‌ಮಿ ನೋಟ್‌ 4 ಗೆ ಸೆಡ್ಡು ಹೊಡೆಯುತ್ತಿದೆ.! ಜೊತೆಗೆ ಬ್ಲೂಟೂತ್4.0 , ಔಐಫೈ ಡೈರೆಕ್ಟ್, ಮೈಕ್ರೋUSB 2.0 ಮತ್ತು OTGಯಂತಹ ಇತರೆ ಫೀಚರ್ಸ್‌ಗಳು ಫೋನ್‌ ಅಲಂಕಾರ ಹೆಚ್ಚಿಸಿವೆ.!!

6,999 ರೂ.ವಿಷನ್ ಸ್ಮಾರ್ಟ್‌ಫೋನ್!!

6,999 ರೂ.ವಿಷನ್ ಸ್ಮಾರ್ಟ್‌ಫೋನ್!!

ಅತ್ಯಂತ ಕಡಿಮೆ ಬೆಲೆಗೆ ಫಿಂಗರ್ ಪ್ರಿಂಟ್ ಸೆನ್ಸಾರ್ 4G LTE ಫೀಚರ್ಸ್ ಹೊಂದಿರುವ ಫೋನ್‌ಗಳ ಸಾಲಿಗೆ ವಿಷನ್ ಸ್ಮಾರ್ಟ್‌ಫೋನ್ ಸೇರ್ಪಡೆಯಾಗಿದ್ದು, 6,999 ರೂ.ಗಳಿಗೆ ವಿಷನ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಮೇಜಾನನ್‌ನಲ್ಲಿ ನೀವು ಈ ಫೋನ್ ಖರೀದಿಸಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
InFocus has launched a new smartphone in India in the form of the Vision 3 . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot