ಸಾದಾ ಸೀದಾ ಮೊಬೈಲ್ ಬೇಕೆಂದರೆ ಈ ಆಯ್ಕೆಯಿರಲಿ

|
ಸಾದಾ ಸೀದಾ ಮೊಬೈಲ್ ಬೇಕೆಂದರೆ ಈ ಆಯ್ಕೆಯಿರಲಿ

ಇದೀಗ ಆಂಡ್ರಾಯ್ಡ್ ಫೋನ್ ಗಳದ್ದೇ ಕಾರುಬಾರು. ಆದರೆ ಸಿಂಪಲ್ ಮೊಬೈಲ್ ಬಯಸುವವರಿಗೆಂದೇ ಎಲ್ ಜಿ ಕಂಪನಿ ನೂತನ ಮೊಬೈಲ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಎಲ್ ಜಿ A100 ಎಂಬ ಈ ಮೊಬೈಲ್ ಅನೇಕ ಆಯ್ಕೆಗಳೊಂದಿಗೆ ಅತಿ ಕಡಿಮೆ ಬೆಲೆಗೆ ನಿಮಗೆ ಲಭ್ಯವಾಗಲಿದೆ. ಈ ಮೊಬೈಲ್ ವಿಶೇಷತೆಗಳೇನೆಂದು ಮುಂದೆ ತಿಳಿಯಿರಿ.

ಎಲ್ ಜಿ A 100 ಮೊಬೈಲ್ ವಿಶೇಷತೆ:

* 3.9 ಸೆ.ಮೀ ಡಿಸ್ಪ್ಲೇ, 128 x 128 ರೆಸೊಲ್ಯೂಷನ್

* 106.5 x 45 x 13.75 ಎಂಎಂ ಸುತ್ತಳತೆ

* 68 ಗ್ರಾಂ ತೂಕ

* 262 k ಬಣ್ಣ ಬೆಂಬಲಿಸುವ TFT ತಂತ್ರಜ್ಞಾನದ ಸ್ಕ್ರೀನ್

* ಒನ್ ಟಚ್ ಟಾರ್ಚ್, ಮೊಬೈಲ್ ಟ್ರ್ಯಾಕರ್

* USB ಸಂಪರ್ಕ

ಅಷ್ಟೇ ಅಲ್ಲ, ನಿಮ್ಮ ಮನರಂಜನೆಗೆಂದು ಅನೇಕ ಆಯ್ಕೆಗಳೂ ಈ ಮೊಬೈಲ್ ನಲ್ಲಿದೆ. ಎಲ್ ಜಿ A100, 950 mAh ಬ್ಯಾಟರಿ ಹೊಂದಿದ್ದು, 17 ಗಂಟೆ ಟಾಕ್ ಟೈಂ ಮತ್ತು 882 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡಲಿದೆ. ಈ ಮೊಬೈಲ್ ಬೆಲೆ ಭಾರತದಲ್ಲಿ 1,500 ರೂಗೂ ಕಡಿಮೆ ಬೆಲೆಗೆ ದೊರೆಯುತ್ತದೆ ಎನ್ನಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X