Subscribe to Gizbot

ಮಾರುಕಟ್ಟೆಗೆ ಧಾಳಿ ಇಡಲಿರುವ LG L80

Written By:

ಆಪಲ್, ಸ್ಯಾಮ್‌ಸಂಗ್‌ನಂತೆ ಹೆಚ್ಚು ಪ್ರಚಾರ ಪಡೆಯದಿದ್ದರೂ ಎಲೆಮರೆಯ ಕಾಯಿಯಂತೆ ಎಲ್‌ಜಿ ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಹೌದು ಅಷ್ಟೊಂದು ಹೆಸರು ಮಾಡದ ಈ ಕೊರಿಯಾ ಮೂಲದ ತಂತ್ರಜ್ಞಾನ ಮಹಾರಥಿ ಸ್ಪರ್ಧಾತ್ಮಿಕವಾಗಿ ಮುಂದುವರಿಯುವ ತನ್ನ ಛಲವನ್ನು ಕೈಬಿಟ್ಟಲ್ಲ.

ಇತರ ಮೊಬೈಲ್ ಕಂಪೆನಿಗಳಿಗೆ ಹೋಲಿಸಿದಾಗ LG ಪಡೆದಿರುವ ಮಾರುಕಟ್ಟೆ ಅಷ್ಟೊಂದು ಖ್ಯಾತಿಯನ್ನು ಹೊಂದದಿದ್ದರೂ ಪ್ರಯತ್ನದಲ್ಲಿ ಹಿಂದೆ ಬೀಳದೆ LG ಇನ್ನೊಂದು ದೊಡ್ಡ ಹ್ಯಾಂಡ್‌ಸೆಟ್ ಮೂಲಕ ಮಾರುಕಟ್ಟೆಗೆ ಅಡಿಯಿಟ್ಟಿದೆ.

ವರದಿಗಳ ಪ್ರಕಾರ, LG L80 ಯ ಬ್ರಾಂಡ್ ಹೊಸ ಚಿತ್ರ ಈಗಾಗಲೇ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು ಅದರ ವೈಶಿಷ್ಟ್ಯಗಳನ್ನು ಈಗಾಗಲೇ ತಿಳಿಯಪಡಿಸಲಾಗಿದೆ. ಎಲ್‌ಜಿ ಶ್ರೇಣಿಗಳ ಸ್ಮಾರ್ಟ್‌ಫೋನ್ ಇದಾಗಿದೆ ಎಂಬ ಹೆಗ್ಗಳಿಕೆ ಇದಕ್ಕಿದೆ. L80 ಆವೃತ್ತಿಯ ಡ್ಯುಯೆಲ್ ಸಿಮ್ ಚಿತ್ರಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಹಿಂದಿನ, ಮುಂದಿನ, ಮೆನು ಹಾಗೂ ಬಹು ಕಾರ್ಯವನ್ನು ನಿರ್ವಹಿಸುವ ಟಚ್ ಬಟನ್‌ಗಳು ಮುಂಭಾಗದಲ್ಲಿ ಇದೆ.

800 x 480 ಪಿಕ್ಸೆಲ್‌ ರೆಸಲ್ಯೂಶನ್‌ನ 5 ಇಂಚು ಡಿಸ್‌ಪ್ಲೇಯನ್ನು LG L80 ಹೊಂದಿದ್ದು ಡ್ಯುಯೆಲ್ ಕೋರ್ ಪ್ರೊಸೆಸರ್ ಆದ 1.2 GHz ನೊಂದಿಗೆ 1 ಜಿಬಿ ರ್‌ಯಾಮ್ ಇದರ ವಿಶೇಷತೆಯಾಗಿದೆ. 4 ಜಿಬಿ ಆಂತರಿಕ ಮೆಮೊರಿಯನ್ನು ಈ ಡಿವೈಸ್ ಹೊಂದಿದ್ದು ಮೈಕ್ರೋ SD ಕಾರ್ಡ್ ಮೂಲಕ ಇದನ್ನು ವಿಸ್ತರಿಸಬಹುದಾಗಿದೆ. L80 ಯಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದ್ದು 2,540mAh ಬ್ಯಾಟರಿಯೊಂದಿಗೆ ಇದು ಸಮ್ಮಿಲಿತಗೊಂಡಿದೆ.

ಕಂಪೆನಿಯ ವಿಶೇಷ ಅಂಶವಾಗಿರುವ LG ನಾಕ್ ಕೋಡ್ ವೈಶಿಷ್ಟ್ಯದೊಂದಿಗೆ ಫೋನ್ ಅನಾವರಣಗೊಳ್ಳಲಿದ್ದು ನಿರ್ದಿಷ್ಟ ಪ್ಯಾಟ್ರನ್ ಬಳಸಿಕೊಂಡು ಪರದೆಯನ್ನು ಟ್ಯಾಪ್ ಮಾಡುವ ಮೂಲಕ ಬಳಕೆದಾರರ ಸ್ಮಾರ್ಟ್‌ಫೋನ್ ಅನ್ನು ಅನ್‌ಲಾಕ್ ಮಾಡುವ ವಿಶೇಷತೆ ಈ ಫೋನ್‌ನಲ್ಲಿದೆ. ಇದುವರೆಗೂ ಫೋನ್‌ನ ಬಗ್ಗೆ ತಿಳಿದು ಬಂದಿರುವ ಮಾಹಿತಿ ಇದಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot