ನೈಟ್ರೊ ಬೇಕಾ ಸ್ಪೆಕ್ಟ್ರಂ ಬೇಕಾ? ಆಯ್ಕೆ ನಿಮ್ಮದು

Posted By: Staff
ನೈಟ್ರೊ ಬೇಕಾ ಸ್ಪೆಕ್ಟ್ರಂ ಬೇಕಾ? ಆಯ್ಕೆ ನಿಮ್ಮದು

ಸ್ಮಾರ್ಟ್ ಫೋನ್ ಗಳ ಮಾರಾಟ ದಿನೇ ದಿನೇ ಹೆಚ್ಚುತ್ತಲೇ ಇದೆ. ವಿನೂತನ ಮಾದರಿಯ ಸ್ಮಾರ್ಟ್ ಫೋನ್ ಗಳು ಹೊಸತಾಗಿ ಕಾಣಿಸಿಕೊಳ್ಳುತ್ತಲೇ ಇವೆ. ಇದೇ ಕಾರಣಕ್ಕೆ ಎಲ್ ಜಿ ಕಂಪನಿಯೂ ತನ್ನ ಎರಡು ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಿದೆ.

ಎಲ್ ಜಿ ನೈಟ್ರೊ ಮತ್ತು ಎಲ್ ಜಿ ಸ್ಪೆಕ್ಟ್ರಂ ಎಂಬ ಎರಡು ಸ್ಮಾರ್ಟ್ ಫೋನ್ ಗಳು ಭಾರೀ ಮಾರಾಟವಾಗುವ ನಿರೀಕ್ಷೆಯಿದೆ. ಎಲ್ ಜಿ ನೈಟ್ರೊ ಮೊಬೈಲನ್ನು LG P930 ಎಂದೂ ಕರೆಯಲಾಗುತ್ತೆ. ಇದು ಜಿಎಸ್ ಎಂ ಹ್ಯಾಂಡ್ ಸೆಟ್ ಆಗಿದೆ. ಎಲ್ ಜಿ ಸ್ಪೆಕ್ಟ್ರಂ ಮೊಬೈಲ್ ಜಿಎಸ್ ಎಂ ಬೆಂಬಲಿತವಾಗಿಲ್ಲ.

ಎಲ್ ಜಿ ನೈಟ್ರೊ ಮೊಬೈಲ್ ಡ್ಯೂಯಲ್ ಕೋರ್ 1.5 GHz ಸ್ಕಾರ್ಪಿಯನ್ ಪ್ರೊಸೆಸರ್ ಮತ್ತು ಅಡೆರ್ನೊ 220 ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್ ನಿಂದ ಕಾರ್ಯ ನಿರ್ವಹಿಸುತ್ತದೆ ಮತ್ತು ಗೂಗಲ್ ಆಂಡ್ರಾಯ್ಡ್ v2.3.5 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಇದು ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಗೆ ಪರಿಷ್ಕ್ರತಗೊಳ್ಳುವ ಸುದ್ದಿಯೂ ಇದೆ.

ಎಲ್ ಜಿ ಸ್ಪೆಕ್ಟ್ರಂ ಮೊಬೈಲ್ ಡ್ಯೂಯಲ್ ಕೋರ್ 1.5 GHz ಸ್ಕಾರ್ಪಿಯನ್ ಪ್ರೊಸೆಸರ್ ಮತ್ತು ಕ್ವಾಲ್ಕಂ ಸ್ನಾಪ್ ಡ್ರಾಗನ್ ಚಿಪ್ ಸೆಟ್ ನಲ್ಲಿ ಅಡೆರ್ನೊ 220 ಗ್ರಾಫಿಕ್ ಪ್ರೊಸೆಸಿಂಗ್ ಯುನಿಟ್ ಹೊಂದಿದೆ. ಗೂಗಲ್ ಆಂಡ್ರಾಯ್ಡ್ v2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ.

ಎಲ್ ಜಿ ನೈಟ್ರೊ ವಿಶೇಷತೆ:

* 133.9 x 67.8 x 10.4 ಎಂಎಂ ಸುತ್ತಳತೆ

* 127 ಗ್ರಾಂ ತೂಕ

* AH-IPS 4.5 ಇಂಚಿನ LCD ಡಿಸ್ಪ್ಲೇ

* ಮಲ್ಟಿ ಟಚ್ ಸ್ಕ್ರೀನ್, 720 x 1280 ಪಿಕ್ಸಲ್ ರೆಸೊಲ್ಯೂಷನ್

* GPRS ಮತ್ತು EDGE ಇಂಟರ್ನೆಟ್ ಸಂಪರ್ಕ

* 3ಜಿ ಮತ್ತು LTE 700 4ಜಿ ನೆಟ್ ವರ್ಕ್ ಬೆಂಬಲಿತ

* ಅತಿ ವೇಗದ ವೈ-ಫೈ ಸಂಪರ್ಕ

* RDS ಜೊತೆ ಸ್ಟಿರಿಯೋ ಎಫ್ ಎಂ

* V3.0 ಬ್ಲೂಟೂಥ್, A2DP, ಮೈಕ್ರೊ USB 2.0

ಎಲ್ ಜಿ ಸ್ಪೆಕ್ಟ್ರಂ ಮೊಬೈಲ್:

* HD-IPS 4.5 ಇಂಚಿನ LCD ಡಿಸ್ಪ್ಲೇ

* ಮಲ್ಟಿ ಟಚ್ ಸ್ಕ್ರೀನ್, 720 x 1280 ಪಿಕ್ಸಲ್ ರೆಸೊಲ್ಯೂಷನ್

* TrueHD ಗ್ರಾಫಿಕ್ ಎಂಜಿನ್

* ಡಾಬ್ಲಿ ಮೊಬೈಲ್ sound enhancer

* Rev.A up to 3.1 Mbps 3G and LTE 700 4G ನೆಟ್ ವರ್ಕ್ ಬೆಂಬಲಿತ

* 802.11 b/g/n ವೇಗದ ವೈ-ಫೈ ಜೊತೆ DLNA ಮತ್ತು ವೈ-ಫೈ ಹಾಟ್ ಸ್ಪಾಟ್

* NFC

* A2DP ಜೊತೆ V3.0 ಬ್ಲೂಟೂಥ್

* ಮೈಕ್ರೊ USB 2.0

ಎರಡೂ ಮೊಬೈಲ್ ಗಳಲ್ಲಿ 1 ಜಿಬಿ RAM ಮತ್ತು 4 ಜಿಬಿ ಆಂತರಿಕ ಮೆಮೊರಿ ಇದ್ದು, 16 ಜಿಬಿ ಮೈಕ್ರೊ SD ಮೆಮೊರಿ ಕಾರ್ಡ್, 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ ಇದೆ. ಅಷ್ಟೇ ಅಲ್ಲ, ಎರಡರಲ್ಲೂ ಅಕ್ಸೆಲೆರೊಮೀಟರ್, ಗೈರೊ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅಳವಡಿಸಲಾಗಿದೆ. A-GPS ಜೊತೆ GPS ಸೌಲಭ್ಯ ಎರಡೂ ಮೊಬೈಲ್ ಗಳಲ್ಲಿದೆ.

ನೈಟ್ರೊ ಮತ್ತು ಸ್ಪೆಕ್ಟ್ರಂ ಎರಡೂ ಮೊಬೈಲ್ ಗಳಲ್ಲಿ 8 ಮೆಗಾ ಪಿಕ್ಸಲ್ ಕ್ಯಾಮೆರಾ ಇದ್ದು, 3264 x 2448 ಪಿಕ್ಸಲ್ ರೆಸೊಲ್ಯೂಷನ್ ಹೊಂದಿದೆ. ಕ್ಯಾಮೆರಾ ಜೊತೆ LED ಫ್ಲಾಶ್, ಆಟೊಫೋಕಸ್ ಇದೆ. ಎರಡೂ ಮೊಬೈಲ್ ಗಳಲ್ಲಿ ಸೆಕೆಂಡರಿ ಕ್ಯಾಮೆರಾ ಇದ್ದು, ಸ್ಪೆಕ್ಟ್ರಂ ಮೊಬೈಲ್ ಸೆಕೆಂಡರಿ ಕ್ಯಾಮೆರಾ 1.3 ಮೆಗಾ ಪಿಕ್ಸಲ್ ರೆಸೊಲ್ಯೂಷನ್ ಪಡೆದುಕೊಂಡಿದೆ.

ಎರಡು ಮೊಬೈಲ್ ಗಳು WAP 2.0/HTML/xHTML ಬೆಂಬಲಿತವಾಗಿವೆ

1830 mAh Li ion ಬ್ಯಾಟರಿ ಹೊಂದಿರುವ ನೈಟ್ರೊ ಮೊಬೈಲ್ 3ಜಿಯಲ್ಲಿ 3 ಗಂಟೆ ಟಾಕ್ ಟೈಂ ಮತ್ತು 252 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಸ್ಪೆಕ್ಟ್ರಂ ಮೊಬೈಲ್ ಬ್ಯಾಟರಿ ಕೂಡ 1830 mAh Li ion ಬ್ಯಾಟರಿ ಪಡೆದುಕೊಂಡಿದೆ

ವಿನ್ಯಾಸದ ವಿಷಯಕ್ಕೆ ಬಂದರೆ ಎಲ್ ಜಿ ನೈಟ್ರೊ ಮತ್ತು ಸ್ಪೆಕ್ಟ್ರಂ ಎರಡೂ ಕೂಡ ಅತ್ಯುತ್ತಮವಾಗಿದೆ. ಆದರೆ ಈ ಎಲ್ ಜಿ ನೈಟ್ರೊ ಮತ್ತು ಎಲ್ ಜಿ ಸ್ಪೆಕ್ಟ್ರಂ ಮೊಬೈಲ್ ಗಳ ಇನ್ನಿತರ ವಿವರಗಳನ್ನು ಮತ್ತು ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot